ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಮೇಶ್ ಕುಮಾರ್ ಪ್ರಾಯ: 42 ವರ್ಷ ತಂದೆ: ನಾರಾಯಣ ಮೂಲ್ಯ ವಾಸ: #2-128, ನಾದ ನಿಲಯ ಜಾರಬೆಟ್ಟು ಮನೆ, ಕಾಡಬೆಟ್ಟು  ಗ್ರಾಮ ಮತ್ತು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 23-10-2022 ರಂದು ಪಿರ್ಯಾದಿದಾರರ ತಂದೆಗೆ ಅಪಘಾತವಾದ ಬಗ್ಗೆ ಕರೆ ಮಾಡಿ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕಾರಿಂಜ ಕ್ರಾಸ್ ಎಂಬಲ್ಲಿ ಪಿರ್ಯಾದಿದಾರರ ತಂದೆ ರಸ್ತೆ ದಾಟುತ್ತಿದ್ದ ಸಮಯ ಸುಮಾರು 19:00 ಗಂಟೆಗೆ ಬಂಟ್ವಾಳ-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ಕಡೆಯಿಂದ KA-31-M-6536 ನೇ ಕಾರನ್ನು ಅದರ ಸವಾರ ದೂರದಿಂದ ನೋಡಿದರೂ ನಿಧಾನಿಸದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಬಲಭಾಗ ಹಣೆಯಲ್ಲಿ ಗುದ್ದಿದ ಹಾಗೂ ರಕ್ತ ಗಾಯ, ಎಡ ಭಾಗ ಕಿವಿಯಲ್ಲಿ ತರಚಿದ ಗಾಯ, ಬಲಭಾಗ ಪಕ್ಕೆಲುಬು ಬಳಿ ತರಚಿದ ಗಾಯ ಹಾಗೂ ಬಲಕಾಲು ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 126/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಬೀಬ್, ಪ್ರಾಯ: 49 ವರ್ಷ ತಂದೆ: ದಿ|| ಕೆ.ಮೊಹಮ್ಮದ್ವಾಸ: ಮಸೀದಿ ಹತ್ತಿರ, ಹಬೀಬ್ ಮಂಜಿಲ್ ಮನೆ, ತುಂಬೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 23-10-2022 ರಂದು ಬಾಡಿಗೆ ನಿಮಿತ್ತ ಬಿ.ಎ.ಕಾಲೋನಿ ಕಡೆಗೆ ಹೋಗುತ್ತಿರುವ ಸಮಯ ಸುಮಾರು 15:40 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ವಾಮನ್ ಶೆಣೈ ಗೇಟ್ ಎದುರು ಉಜಿರೆ ಪಳ್ಳ ಮಡ್ ರಸ್ತೆ ಕಡೆಯಿಂದ KA-19-AC-9455 ನೇ ಕಾರನ್ನು ಅದರ ಚಾಲಕ ಅಬ್ದುಲ್ ರಹಿಮಾನ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ತುಂಬೆ ಬಿ.ಎ.ಕಾಲೋನಿ ಕಡೆಗೆ ಹೋಗುತ್ತಿದ್ದ KA-19HK-0155 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಎರಡೂ ಕಾಲಿನ ಮೊಣಗಂಟಿಗೆ, ಕೋಲು ಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 128/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಕಾಸ್‌ ವಿ (48) ತಂದೆ: ಗುಡ್ಡಪ್ಪ ಮೂಲ್ಯ ವಾಸ: ಬೊಬ್ಬಕೇರಿ ಕೋಡಿ ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ: 23.10.2022 ರಂದು ತನ್ನ ಬಾಬ್ತು ಕೆಎ-70-ಇ-6206 ನೇ ಸ್ಕೂಟರ್‌ನಲ್ಲಿ  ಪತ್ನಿ ಪಾರ್ವತಿ ಮಗ ಪ್ರತ್ಯೂಷ್‌ ರವರನ್ನು ಸಹ ಸವಾರರನ್ನಾಗಿ ಕುಳ್ಳರಿಸಿಕೊಂಡು ಮಂಜೇಶ್ವರದ ಚೇವಾರಿನಿಂದ ವಿಟ್ಲದಲ್ಲಿರುವ ಮನೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಗ್ಗೆ 10.30 ಗಂಟೆಗೆ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಚ್ಚಿರಪದವು ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಬರುತ್ತಿದ್ದ ಕೆಎ-02-ಪಿ-9896 ನೇ ಕಾರನ್ನು ಅದರ ಚಾಲಕ ಕೃಷ್ಣ ಎಂಬುವವರು ಅಜಾಗರುಕತೆ ನಿರ್ಲಕ್ಷ್ಯತನದಿಂದ ಚಾಲಯಿಸಿಕೊಂಡು ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರ ಎಡ ಭುಜಕ್ಕೆ ಎರಡು ಮೊಣಗಂಟಿಗೆ,ಮಗ ಪ್ರತ್ಯೂಷ್‌ ನ ತುಟಿ ಗಲ್ಲಕ್ಕೆ ಹಾಗೂ ಎರಡು ಕಾಲಿನ  ಮೊಣಗಂಟಿಗೆ ಪತ್ನಿ ಪಾರ್ವತಿ ಯ ಮುಂಗೈಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆತಂದಿದ್ದು ಪಿರ್ಯಾದಿ ಹಾಗೂ ಮಗ ಪ್ರತ್ಯೂಷ್‌ ರಿಗೆ ಒಳರೋಗಿಯಾಗಿ ಪಾರ್ವತಿಯವರಿಗೆ ಹೋರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 163/2022  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್‌ ಕುಮಾರ್‌,  ಪ್ರಾಯ 30 ವರ್ಷ, ತಂದೆ: ಬಾಬು ಪೂಜಾರಿ,  ವಾಸ: ಕಪ್ಪಳಿ ಗ್ರಾಮ, ದೋಣಿಗಲ್‌ ಅಂಚೆ, ಸಕಲೇಶಪುರ  ತಾಲೂಕು , ಹಾಸನ ಜಿಎಂಬವರ ದೂರಿನಂತೆ ದಿನಾಂಕ 23-10-2022 ರಂದು 14-00 ಗಂಟೆಗೆ ಆರೋಪಿ ಕಾರು ಚಾಲಕ ಪ್ರಶಾಂತ ಎಂಬವರು KA-19-MF-8262 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ದರ್ಬೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಏಳ್ಮುಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯನ್ನು ದಾಟುತ್ತಿದ್ದ ಮನ್ಸತಿ(80ವರ್ಷ) ರವರಿಗೆ ಕಾರಿನ ಎಡಭಾಗವು ಅಪಘಾತವಾಗಿ ರಸ್ತೆಗೆ ಬಿದ್ದಾಗ, ಪಿರ್ಯಾದುದಾರರಾದ ಪ್ರಶಾಂತ್‌ ಕುಮಾರ್‌ ರವರು KA-46-K-7668 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಜತ್ತಪ್ಪರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ದರ್ಬೆ ಕಡೆಗೆ  ಕಾರಿನ ಹಿಂಭಾಗದಿಂದ ಹೋಗುತ್ತಿದ್ದವರು  ರಸ್ತೆಗೆ ಬಿದ್ದ ಪಾದಾಚಾರಿಗೆ ಸ್ಕೂಟರ್‌ ಅಪಘಾತವಾಗುವುದನ್ನು ತಪ್ಪಿಸಲು  ಬಲಭಾಗಕ್ಕೆ ಸ್ಕೂಟರನ್ನು ತಿರುಗಿಸಿದಾಗ ಕಾರಿನ ಬಲ ಹಿಂಭಾಗವು ಸ್ಕೂಟರಿಗೆ ತಾಗಿ ವಾಹನಗಳು ಜಖಂಗೊಂಡಿರುತ್ತವೆ. ಗಾಯಾಳುವನ್ನು ಆರೋಪಿ ಕಾರು ಚಾಲಕರು ಅಟೋ ರಿಕ್ಷಾವೊಂದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತದಲ್ಲಿ ಉಳಿದವರಿಗೆ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 162/2022 ಕಲಂ: 279, 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಅನೀಸ್ (22) ವಾಸ: ಬಿ ಮೂಡಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:24-10-2022 ರಂದು ಎಂದಿನಂತೆ ಕೆಲಸಕ್ಕೆ ಹೊರಟು ಅಂಗಡಿ ಬಳಿ ಬೆಳಿಗ್ಗೆ 8.30 ಗಂಟೆಗೆ ತಲುಪಿದಾಗ ರಜಾಕ್ ಎಂಬಾತನು ಏಕಾಏಕಿಯಾಗಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ತಲವಾರನ್ನು ತೋರಿಸಿದನು. ಇದರಿಂದ ಹೆದರಿದ ಪಿರ್ಯಾದಿದಾರರು ಮನೆಗೆ ಓಡಿಹೋದಾಗ ಹಿಂಬಾಲಿಸಿಕೊಂಡು ಬಂದ ರಜಾಕ್, ರಿಜ್ವಾನ್ ಮತ್ತು ಶೌಕತ್ ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ರಜಾಕ್ ನು ಅವ್ಯಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿದಾರರ ಹಣೆಗೆ ಹೊಡೆದನು. ಬೊಬ್ಬೆ ಕೇಳಿ ಅಲ್ಲಿಗೆ ಬಂದ ಪಿರ್ಯಾದಿದಾರರ ಅತ್ತಿಗೆ ಮತ್ತು ತಾಯಿ ಪಿರ್ಯಾದಿದಾರರ ಬಳಿ ಬಂದಾಗ ರಿಜ್ವಾನ್ ಮತ್ತು ಶೌಕತ್ ನು ಪಿರ್ಯಾದಿದಾರರ ಅತ್ತಿಗೆ ಮತ್ತು ತಾಯಿಯನ್ನು ದೂಡಿ ನೆಲಕ್ಕೆ ಹಾಕಿದರು. ಇದೇ ಸಮಯ ರಿಜ್ವಾನ್ ಅವನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರ ಬಲತೋಳಿಗೆ ಹೊಡೆದನು. ನಂತರ ರಿಜ್ವಾನ್ ನು ನಿಮ್ಮೆಲ್ಲರ ಕೈಕಾಲನ್ನು ಮುರಿಯುತ್ತೇನೆ ಎಂದು ಬೆದರಿಕೆ ಹಾಕಿ ಹತ್ಯಾರು ಸಮೇತ ಅಲ್ಲಿಂದ ಹೋಗಿರುತ್ತಾರೆ. ಬಳಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳನಗರ ಠಾಣಾ ಅ.ಕ್ರ:99/2022 ಕಲಂ: 341, 448, 504, 324, 323, 354, 506, 427 ಜೊತೆಗೆ 34 ಐಪಿಸಿ

 

 

ಇತರೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ:24-10-2022ರಂದು ರಾಮಕೃಷ್ಣ, ಪೊಲೀಸ್ ಉಪ-ನಿರೀಕ್ಷಕ(ತನಿಖೆ), ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆರವರಿಗೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿ ಬಳಿಯ ಸಾರ್ವಜನಿಕ ತೆರೆದ ಮೈದಾನದಲ್ಲಿ ಯಾವುದೇ ಅನುಮತಿ ಇಲ್ಲದೇ ಕೆಲವು ಜನರು  ಹಣವನ್ನು ಪಣವಾಗಿಟ್ಟು ತಲೈ-ಪೊಲ್ಲೈ  ಎಂಬ  ಜೂಜಾಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ, ಠಾಣಾ ಸಿಬ್ಬಂದಿಗಳೊಂದಿಗೆ ಸಂಜೆ ಸುಮಾರು  4.15 ಗಂಟೆಗೆ ಪುತ್ತೂರು ತಾಲೂಕು  ಅರಿಯಡ್ಕ   ಗ್ರಾಮದ ಕೌಡಿಚ್ಚಾರಿನ ಸಿ.ಆರ್.ಸಿ. ಕಾಲೊನಿಯ ಬಳಿಯ ಸಾರ್ವಜನಿಕ ತೆರೆದ ಮೈದಾನಕ್ಕೆ ಧಾಳಿ ನಡೆಸಿ ಸದ್ರಿ ಸ್ಥಳದಲ್ಲಿ “ತಲ್ಲೈ-ಪೊಲ್ಲೈ” ಎಂಬ  ಅದೃಷ್ಟದ ಆಟ  ಆಡುತ್ತಿದ್ದ 1.ಜ್ಞಾನ ಪ್ರಕಾಶ್, 2. ಗೋಪಾಲ ಕೃಷ್ಣ, 3. ವನರಾಜ್, 4. ರವೀಂದ್ರ, 5. ಗೋವಿಂದ, 6. ಉದಯ ಕುಮಾರ್   ,7. ಸುಧಾಕರ ರವರನ್ನು ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸಿದ ನಗದು ರೂ. 7222/= ನ್ನು  ಸ್ವಾಧೀನಪಡಿಸಿಕೊಂಡು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 97/2022 ಕಲಂ:87 ಕೆ.ಪಿ. ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ದಿಲೀಪ್ ಜಿ ಆರ್ ರವರು ದಿನಾಂಕ 24.10.2022 ರಂದು ಇಲಾಖಾ ಜೀಪಿನಲ್ಲಿ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳದ ನಿವಾಸಿ ಕೇಶವಪ್ರಭು ಎಂಬವರು ತಮ್ಮ ಮನೆಯಲ್ಲಿ ಪಿಸ್ತೂಲ್ ನಿಂದ ಆತನ ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡವರನ್ನು  ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಗಾಯಾಳುವಿನ ಮನೆಗೆ ಭೇಟಿ ನೀಡಿದಾಗ, ಗಾಯಾಳುವಿನ ಮನೆಯ ಹೊರಬದಿಯ ಸಿಟೌಟ್ ನಲ್ಲಿ ಮೆಲ್ನೋಟಕ್ಕೆ ಪರವಾನಿಗೆ ರಹಿತ ನಾಡ ಪಿಸ್ತೂಲ್ ಬಿದ್ದಿರುವುದು ಕಂಡು ಬಂದಿದ್ದು, ಘಟನೆಯನ್ನು ನೋಡಿದಾಗ ಅಕ್ರಮವಾಗಿ ಪರವಾನಿಗೆ ರಹಿತ ನಾಡ ಪಿಸ್ತೂಲ್ ನ್ನು ಗಾಯಾಳು ತನ್ನ ವೈಯಕ್ತಿಕ ವಿಚಾರವಾಗಿ ನಾಡ ಪಿಸ್ತೂಲ್ ನಿಂದ  ಆತನ ಹಣೆಗೆ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ. ಆದ್ದುದರಿಂದ ಯಾವುದೇ ಪರವಾನಿಗೆ ಇಲ್ಲದೇ ನಾಡ ಪಿಸ್ತೂಲ್ ನ್ನು ತನ್ನ ಬಳಿಯಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿ  ಇಟ್ಟುಕೊಂಡು ತಕ್ಷೀರು ಎಸಗಲು ಕಾರಣನಾದ ಗಾಯಾಳು ಕೇಶವ ಪ್ರಭು ಎಂಬಾತನ ಮೇಲೆ ಸುಳ್ಯ ಅ ಕ್ರ 123/2022 ಕಲಂ:3,25,27 INDIAN ARMS ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-10-2022 11:50 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080