ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೂರ್ತಿ  ಪೊಲೀಸ್ ಉಪ ನಿರೀಕ್ಷಕರು ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಬಂಟ್ವಾಳ ರವರ ದೂರಿನಂತೆ ದಿನಾಂಕ 24-11-2022 ರಂದು ಬಂಟ್ವಾಳ ತಾಲೂಕು ಇರಾಗ್ರಾಮದ ಕೊಡಂಗೆ ಎಂಬಲ್ಲಿಗೆ ಭೇಟಿ ನೀಡಿ ಸ್ಕೂಟರ್ ಸವಾರನು ಸ್ಕಿಡ್ ಆಗಿ ಬಿದ್ದು ಅಪಘಾತವಾದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು ದಿನಾಂಕ 23-11-2022 ರಂದು ಬೆಳಿಗ್ಗೆ ಸಮಯ ಸುಮಾರು 07:30 ಗಂಟೆಗೆ  ಕುಕ್ಕಾಜೆ ಸೈಟ್ ಕಡೆಯಿಂದ ನಾಟೇಕಲ್ ಕಡೆಗೆ ಜಾಫರ್ ಹುಸೈನ್ ರವರು KA-19-HK-7074 ನೇ ಸ್ಕೂಟರ್ನಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗಳಾಗಿರುವುದು ದೃಢ ಪಟ್ಟಿದ್ದು ಇದೊಂದು ಸಂಜ್ಞೇಯ ಅಪರಾಧ ವಾಗಿರುವುದರಿಂದ ಈ ಘಟನೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಿ ಮಾಹಿತಿ ಕಲೆ ಹಾಕಿ ದಿನಾಂಕ 24-11-2022 ರಂದು 15:00 ಗಂಟೆಗೆ ಸ್ವಯಂ ಪ್ರೇರಿತ ಪಿರ್ಯಾಧಿಯನ್ನು ಸಿದ್ದಗೊಳಿಸಿ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ ಕ್ರ 148/2022 ಕಲಂ 279,337 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿರುವುದಾಗಿದೆ

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಭಿಲಾಶ್, ಪ್ರಾಯ 22 ವರ್ಷ,ತಂದೆ:      ಚನನ ಗೌಡ,ವಾಸ: ಕೌಡಂಗೆ ಮನೆ ,ಕಡಿರುದ್ಯಾವರ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 23-11-2022 ರಂದು ಕೆಎ 21 ಕೆ 7690 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಕುಶಾಲಪ್ಪ ರವರು ಸಹ ಸವಾರನನ್ನಾಗಿ ಪ್ರದೀಪ್ ರವರನ್ನು ಕುಳ್ಳಿರಿಸಿಕೊಂಡು ಸೋಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 10.15 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಶಾರದಾ ನಗರ ದೇವಿಗುಡಿ ಎಂಬಲ್ಲಿ ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್ ಸ್ಕಿಡ್ ಆಗಿ ಮೋಟಾರು ಸೈಕಲ್ ಸವಾರ ಮತ್ತು ಸಹ ಸವಾರ ಮೋಟಾರು ಸೈಕಲ್ ನೊಂದಿಗೆ ರಸ್ತೆಯ ಎಡಬದಿ ತಗ್ಗು ಜಾಗಕ್ಕೆ ಬಿದ್ದು ಮೋಟಾರು ಸೈಕಲ್ ಸವಾರ ಕುಶಾಲಪ್ಪ ರವರು ಎದೆಗೆ ಗುದ್ದಿದ ಗಾಯ, ಸಹ ಸವಾರ ಪ್ರದೀಪ್ ರವರು ತಲೆಗೆ, ಸೊಂಟಕ್ಕೆ , ತುಟಿಗೆ ತೀವ್ರ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಗೆ ತಂದು ಈ ಪೈಕಿ ತೀವ್ರ ಗಾಯಗೊಂಡ ಪ್ರದೀಪ್ ನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಗೆ ತಂದಲ್ಲಿ ಇಲ್ಲಿನ ವೈದ್ಯರು ದಿನಾಂಕ: 23-11-2022 ರಂದು ರಾತ್ರಿ ಪರೀಕ್ಷಿಸಿ ಪ್ರದೀಪ್ ನನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 147/2022 ಕಲಂ; 279,  337,304 (A) ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ವಿಟ್ಲ ಪೊಲೀಸ್‌ ಠಾಣೆ ರವರು ಮತ್ತು ಸಿಬ್ಬಂದಿಯವರು ದಿನಾಂಕ:24-11-2022 ರಂದು ಬೆಳಿಗ್ಗೆ ರೌಂಡ್ಸ ಕರ್ತವ್ಯದಲ್ಲಿರುವಾಗ ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಕೆಎ-70.3094 ನೇ ಅಶೋಕ್‌ ಲೈಲಾಂಡ್‌ ವಾಹನದಲ್ಲಿ 04 ಜಾನುವಾರುಗಳನ್ನು ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಯಾವುದೇ ಪರವಾಣಿಗೆ ಹೊಂದದೆ ವಧೆ ಮಾಡಿ ಮಾಂಸಕ್ಕಾಗಿ ಮಾರಾಟ ಮಾಡಲು ಕೇರಳ ಕಡೆಗೆ ಸಾಗಾಟ ಮಾಡುತ್ತಿದ್ದ ವಾಹನವನ್ನು ಪತ್ತೆ ಹಚ್ಚಿದ್ದು. ಅದರಲ್ಲಿದ್ದ 4 ಜಾನುವಾರುಗಳು ಅಂದಾಜು ಮೌಲ್ಯ- 27,000/-ರೂ ಆಗಬಹುದು,  ನೈಲಾನ್‌ ಹಗ್ಗ, ರೂಪಾಯಿ 5000/- ನಗದು  ಹಣ ಹಾಗು ಕೆಎ-70.3094 ನೇ ಅಶೋಕ್‌ ಲೈಲ್ಯಾಂಡ್‌  ಗೊಡ್ಸ್‌ ಟೆಂಪೂ-01, ಅಂದಾಜು ಮೌಲ್ಯ 6,00,000/-ರೂ ಆಗಬಹುದು. ಇಬ್ಬರು  ಆರೋಪಿಗಳಾದ  ಪ್ರದೀಪಕುಮಾರ್‌ ಸಿಕ್ವೇರಾ ಮತ್ತು ಸಾಹೀಬ್‌ ರವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ರಿ ಜಾನುವಾರಗಳನ್ನು ಪುತ್ತೂರಿನಿಂದ ಖರೀದಿಸಿ ಯಾವುದೇ ಪರವಾಣಿಗೆ ಇಲ್ಲದೆ ಸಾಗಾಟ ಮಾಡಲು ತಿಳಿಸಿದ ಹಮೀದ ಎಂಬಾತನು ಪರಾರಿಯಾಗಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ   ಅ.ಕ್ರ:  181/22  ಕಲಂ: 5,6,7,12 KARNATAKA PREVENTION OF COW SLANGHTER & CATTLE PREVENTION ACT 2020, (U/s-11(1) (A),11(1 ) (D) PREVENTION OF CRUELTY TO ANIMALS ACT 1960, U/s-66,192(A) INDIAN MOTOR VEHICLES ACT, 1988ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೃಷ್ಣಪ್ಪ ಗೌಡ ಪ್ರಾಯ 67 ವರ್ಷ ತಂದೆ: ದಿ. ನಾಗಪ್ಪ ಗೌಡ ವಾಸ: ಗಂಡಿ ಮನೆ ವೀರಮಂಗಲ ಶಾಂತಿಗೋಡು ಗ್ರಾಮ ಪುತ್ತೂರು ತಾಲೂಕು ರವರು ಮತ್ತು ಅವರ ಪತ್ನಿ ಅಕ್ಕಮ್ಮ (60ವರ್ಷ) ರವರು ಕೃಷಿ ಕೆಲಸವನ್ನು ಮಾಡಿಕೊಂಡಿದ್ದು , ದಿನಾಂಕ 23.11.2022 ರಂದು ರಾತ್ರಿ ಸುಮಾರು 10.30 ಗಂಟೆಗೆ ಊಟ ಮಾಡಿ ಬೇರೆ ಬೇರೆ ಕೋಣೆಯಲ್ಲಿ ಮಲಗಿರುತ್ತಾರೆ. ಪಿರ್ಯಾದಿದಾರರ ಪತ್ನಿಗೆ ದಿನಾ ಬೆಳಿಗ್ಗೆ ಬೇಗನೆ ಎದ್ದು ತೋಟಕ್ಕೆ ಹೋಗುವ ಅಭ್ಯಾಸ ಇದ್ದು, ದಿನಾಂಕ 24.11.2022 ರಂದು ಬೆಳಿಗ್ಗೆ 6.00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಎದ್ದಾಗ ಒಳಗಿನ ಕೋಣೆಯಲ್ಲಿ ಮಲಗಿದ್ದ ಪತ್ನಿ ಕಾಣದೇ ಇದ್ದು ಮನೆಯ ಎರಡೂ ಬಾಗಿಲುಗಳು ತೆರದುಕೊಂಡಿದ್ದವು. ಪಿರ್ಯಾದಿದಾರರು ಪತ್ನಿ  ತೋಟಕ್ಕೆ ಹೋಗಿರಬಹುದೆಂದು  ಪಿರ್ಯದಿದಾರರು ಭಾವಿಸಿ , ಬಳಿಕ ಸುಮಾರು ಹೊತ್ತಿನವರೆಗೆ ಬಾರದೇ ಇದ್ದುದರಿಂದ ಪಿರ್ಯಾದಿದರರು ಹಾಗೂ ಅಕ್ಕಪಕ್ಕದ  ಇತರರು ತೋಟದಲ್ಲಿ ಹುಡುಕಾಡುತ್ತಿದ್ದಾಗ ತೋಟದ ಬಳಿ ಇದ್ದ ನೀರಿನ ಕೆರೆಯಲ್ಲಿ ಚಪ್ಪಲಿ ತೇಲಿಕೊಂಡು ಇರುವುದನ್ನು ಗಮನಿಸಿ ಅಗ್ನಿಶಾಮಕ ದಳದವರನ್ನು ಕರೆಸಿ, ಕೆರೆಯಲ್ಲಿ ಹುಡುಕಿದಾಗ ಮೃತ ಶರೀರ ಕಂಡು ಬಂದಿದ್ದು, ಪಿರ್ಯಾದಿದಾರರ ಪತ್ನಿ ಅಕ್ಕಮ್ಮರವರು ಎಂದಿನಂತೆ ಬೇಗನೆ ಎದ್ದು ತೋಟಕ್ಕೆ ಹೋದವರು  ದಿನಾಂಕ 24.11.2022 ರಂದು  ಬೆಳಿಗ್ಗೆ 6.00 ಗಂಟೆಗೆ ಪಿರ್ಯಾದುದಾರರ ತೊಟದಲ್ಲಿರುವ ಕೆರೆಗೆ ಆಕ್ಮಸಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 34/2022 ಕಲಂ: 174  ಸಿ .ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 25-11-2022 11:17 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080