ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಡಿ.ಹೆಚ್‌ ಅಬ್ದುಲ್‌ ರಜಾಕ್‌  (45) ಗಂಡ: ಅಹಮದ್‌ ವಾಸ:ದರ್ಕಸ್‌ ಮನೆ, ಮಲೆಬೆಟ್ಟು, ಕೊಯ್ಯೂರು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:24-12-2022 ರಂದು ಮನೆಯಿಂದ  ಅವರ ಬಾಬ್ತು ಮೋಟಾರು ಸೈಕಲ್‌ ನಲ್ಲಿ ಮಲೆಬೆಟ್ಟು ನಲ್ಲಿರುವ ಸಿ. ಎಮ್‌.  ಚಿಕನ್‌ ಸೆಂಟರ್‌ಗೆ ಹೊಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 08.25 ಗಂಟೆಗೆ  ಬೆಳ್ತಂಗಡಿ ತಾಲೂಕು, ಕೊಯ್ಯೂರು ಗ್ರಾಮದ ಮಲೆಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಅಂದರೆ ಮಲೆಬೆಟ್ಟು ಕಡೆಯಿಂದ ಬೆಳ್ತಂಗಡಿ ಕಡೆಗೆ ಕೆ ಎ 70 1619ನೇ SDM ಶಾಲಾ ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಕೊಂಡು ಪಿರ್ಯಾದಿದಾರರ ಮೋಟಾರು ಸೈಕಲ್‌ಅನ್ನು ಓವರಟೇಕ್‌ ಮಾಡಿಕೊಂಡು ಅವರ ವಿರುದ್ದ ದಿಕ್ಕಿನಿಂದ  ಅಂದರೆ ಬೆಳ್ತಂಗಡಿ ಕಡೆಯಿಂದ ಕೊಯ್ಯೂರುಕಡೆಗೆ ಬರುತ್ತಿದ್ದ ಕೆಎ21 ಎ 5264 ನೇ  ಗೂಡ್ಸ್‌ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ಗೂಡ್ಸ್‌ ಆಟೋರಿಕ್ಷಾ ರಸ್ತೆಗೆ ಮಗುಚಿಬಿದ್ದು  ಗೂಡ್ಸ್‌ ಆಟೋ ರಿಕ್ಷಾ ಚಾಲಕ ಹನೀಫ್‌  ರವರಿಗೆ ಬಲ ಕಣ್ಣಿನ ಹುಬ್ಬಿನ ಮೆಲ್ಬಾಗಕ್ಕೆ, ಎಡ ಕಾಲಿನ ಮೊಣಗಂಟಿಗೆ ರಕ್ತಗಾಯ, ಸಹ ಪ್ರಯಾಣಿಕ ಮಹಮ್ಮದ್‌ ರವರಿಗೆ ಕುತ್ತಿಗೆಯ ಹಿಂಬಾಗಕ್ಕೆ ಗುದ್ದಿದಗಾಯ, ಎಡಕಾಲಿನ ಹಿಂಬದಿ ಹಿಮ್ಮಡಿಗೆ ರಕ್ತಗಾಯ, ಬಲಕಾಲಿನ ಕೊಲುಕಾಲಿಗೆ ತರಚಿದ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ, ಮತ್ತೊಬ್ಬ ಸಹ ಪ್ರಯಾಣಿಕ  ಅಬ್ದುಲ್‌ ರಜಾಕ್‌ ರವರಿಗೆ  ತಲೆಗೆ, ಬಲಕೈಗೆ, ತೀವ್ರತರಹದ ಗಾಯಗಳಾಗಿ ಅಬ್ದುಲ್‌ ರಜಾಕ್‌ ರವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿಮಧ್ಯೆ ಮೃತಪಟ್ಟಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 167/2022 ಕಲಂ; 279, 337, 304 (A), ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ಫಾಜಿಲ್  (38) ತಂದೆ: ಇಸ್ಮೈಲ್‌ ವಾಸ:ಮಂಜೊಟ್ಟಿ ಮನೆ, ನಡ, ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:24-12-2022 ರಂದು ತನ್ನ ಬಾಬ್ತು ಕೆಎ21 EC 6530 ನೇ ದ್ವಿಚಕ್ರ ವಾಹನದಲ್ಲಿ ಸಹಸವಾರಳಾಗಿ ತನ್ನ ಪತ್ನಿ ಝರೀನಾ ರವರನ್ನು ಕುಳ್ಳಿರಿಸಿಕೊಂಡು ಗುರುವಾಯನಕೆರೆ-ವೇಣೂರು ಮಾರ್ಗವಾಗಿ ಹೋಗುತ್ತಿರುವ ಸಮಯ ಸುಮಾರು 15:10 ಗಂಟೆಗೆ ಬೆಳ್ತಂಗಡಿ ತಾಲೂಕು ,ಕುವೆಟ್ಟು ಗ್ರಾಮದ,ಶಕ್ತಿನಗರದ ಪೊಟ್ಟುಕೆರೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬರುತ್ತಿದ್ದ ಯಾವುದೋ ಅಪರಿಚಿತ ವಾಹನ ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದು ಪಿರ್ಯಾದಿದಾರರು ಹಾಗೂ ಸಹಸವಾರೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದರು, ಪರಿಣಾಮ  ಪಿರ್ಯಾದಿದಾರರಿಗೆ ಬಲಕೈ ರಟ್ಟೆಗೆ,ಕೋಲು ಕೈ,ಬೆನ್ನಿನ ಬಲಭಾಗಕ್ಕೆ ತರಚಿದ ರಕ್ತಗಾಯ ಹಾಗೂ ಸಹ ಸವಾರೆ ಝರೀನಾ ರವರಿಗೆ ಬಲಕೈಯ ಕೋಲುಕೈಗೆ,ಬಲ ಹಣೆಗೆ,ಎಡ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ರಕ್ತಗಾಯ, ಎದೆಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಉಜಿರೆ SDM ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಅಪಘಾತ ಪಡಿಸಿದ ಅಪರಿಚಿತ ವಾಹನ  ಚಾಲಕನು ವಾಹನವನ್ನು ನಿಲ್ಲಿಸದೇ ಗಾಯಳುಗಳನ್ನು ಉಪಚರಿಸದೇ,ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 168/2022 ಕಲಂ; 279,  337, ಭಾದಂಸಂ.ಕಲಂ:134(A)&(B) ಜೊತೆಗೆ 187 ಮೋ.ವಾ.ಕಾಯಿದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಪ್ರಭಾ, ಪ್ರಾಯ: 52 ವರ್ಷ, ಗಂಡ: ವಿಜಯನ್‌ @ ಬಿಜು ವಾಸ: ಬೊಳಿಯಾರು ಮನೆ, ಧರ್ಮಸ್ಥಳ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ವಿಜಯನ್ @ಬಿಜು ಎಂಬವರು ಕೃಷಿ ಕೆಲಸ ಮಾಡಿಕೊಂಡಿದ್ದು  ವಿಜಯನ್ ರವರು ಮನೆಯ ಬಳಿ ಇರುವ ರಬ್ಬರ್ ತೋಟಕ್ಕೆ ದನಗಳನ್ನು ಮೇಯಿಸಲೆಂದು ದಿನಾಲೂ ಹೋಗುತ್ತಿದ್ದು, ಅದರಂತೆ ನಿನ್ನೆ ದಿನಾಂಕ: 23.12.2022 ರಂದು ಮಧ್ಯಾಹ್ನ ಸಮಯ ಸುಮಾರು 1.30 ಗಂಟೆಗೆ ಪಿರ್ಯಾದಿದಾರರ ಮನೆಯ ಬಳಿ ಇರುವ ರಬ್ಬರ್ ತೋಟದಲ್ಲಿ  ದನಗಳನ್ನು ಮೇಯಲು ಕಟ್ಟಿ ಬರುತ್ತೇನೆಂದು ದನಗಳ ಜೊತೆ ಹೋದವರು ವಾಪಾಸು ಸಂಜೆ 3.00 ಗಂಟೆಯಾದರೂ ಮನೆಗೆ ಊಟಕ್ಕೆ ಬಾರದೇ ಇದ್ದು, ಇನ್ನು ಊಟಕ್ಕೆ ಬರಲಿಲ್ಲವೆಂದು ರಬ್ಬರ್ ತೋಟಕ್ಕೆ ಗಂಡನನ್ನು ಹುಡುಕಿಕೊಂಡು ಹೋದಾಗ ಪಿರ್ಯಾದಿದಾರರ ಗಂಡ ದನಗಳನ್ನು ರಬ್ಬರ್ ಮರಕ್ಕೆ ಮೇಯಲು ಕಟ್ಟಿ ಹಾಕಿರುತ್ತಾರೆ. ಆದರೆ ಪಿರ್ಯಾದಿದಾರರ ಗಂಡ ಎಲ್ಲಿಯೂ ಕಾಣದೇ ಇದ್ದು, ಸುತ್ತಮುತ್ತ ಹುಡುಕಲಾಗಿ ಎಲ್ಲಿಯೂ ಇರದೇ ಇದ್ದು, ಪಿರ್ಯಾದಿದಾರರು ಕೂಡಲೇ ಮನೆಯ ಬಳಿ  ಇರುವ ತಮ್ಮನ ಮನೆಗೆ ಹೋಗಿ ಅವರಲ್ಲಿ ವಿಚಾರವನ್ನು ತಿಳಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಮತ್ತು ಸಂಬಂದಿಕರು  ಸೇರಿ ತೋಟದಲ್ಲಿ ಹಾಗೂ ಅಲ್ಲಿಯೇ ಇರುವ ಅರಣ್ಯ ಪ್ರದೇಶದ ಸುತ್ತಮುತ್ತ ಗಂಡನನ್ನು ಹುಡುಕಲಾಗಿ ಈವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ 92/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸರಸ್ವತಿ .ಪಿ .ಪ್ರಾಯ 28 ವರ್ಷ , ಗಂಡ; ಕುಲದೀಪ ,ಅಮೈ ಮನೆ ,  ಬೆಳಂದೂರು ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 23-12-2022 ರಂದು ತನ್ನ ಅತ್ತೆ ಹಾಗೂ ಮಾವ ನವರೊಂದಿಗೆ ಒಂದೇ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದ ಪ್ರಕರಣದ ಪಿರ್ಯಾದಿದಾರರು ಮನೆಯ ಹಿಂಬದಿಯ ಅಂಗಳದಲ್ಲಿ ನೆಟ್ಟಿದ್ದ ಹೂವಿನ ಗಿಡಗಳನ್ನು ಆಡುಗಳು ಬಂದು ತಿಂದು ಹಾಕುತ್ತಿರುವ ಸಂಬಂಧ ಅಡ್ಡಲಾಗಿ ನೆಟ್ ಹಾಕುತ್ತಿರುವ ಸಮಯ ಸುಮಾರು 10-30 ಗಂಟೆಗೆ ಅಲ್ಲಿಗೆ ಬಂದ ಅತ್ತೆ ಸರಸ್ವತಿ ಯವರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಕೈಯಿಂದ ಗೋಡೆಗೆ ಒತ್ತಿಹಿಡಿದ ಪರಿಣಾಮ ತರಚಿದ ಗಾಯವಾಗಿದ್ದು ಆ ಸಮಯ ಅವರ ಕೈಯಲ್ಲಿದ್ದ ಕತ್ತಿಯನ್ನು ಎಳೆದುಕೊಂಡಿದ್ದು , ಪುನಹ ಅದೇ ಕತ್ತಿಯನ್ನು ಅತ್ತೆಯವರ ಎಳೆದು ನನ್ನ ಎಡಭುಜಕ್ಕೆ ಹಲ್ಲೆ ನಡೆಸಿ  ಗೀರಿದ ಗಾಯವನ್ನುಂಟು ಮಾಡಿರುವುದಲ್ಲದೇ  ಪಿರ್ಯಾದಿದಾರರನ್ನು ಉದ್ದೇಶಿಸಿ “ ಈಗ ನೀನು ಓಡಿ ತಪ್ಪಿಸಿಕೊಂಡಿದ್ದೀಯ , ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಜೀವಬೆರಿಕೆ ಒಟ್ಟಿ ಹೋಗಿದ್ದು ಪಿರ್ಯಾದಿದಾರರು ತನಗಾದ ಗಾಯದ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 103/2022 ಕಲಂ  504,323,324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕಿ ,ಪ್ರಾಯ 66 ವರ್ಷ,ಗಂಡ; ಸುಂದರ ಗೌಡ  ಅಮೈ ಮನೆ ,  ಬೆಳಂದೂರು ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 23-12-2022 ರಂದು ತನ್ನ ಮಗ  ಹಾಗೂ ಸೊಸೆ ರವರೊಂದಿಗೆ ಒಂದೇ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಗಂಡನೊಂದಿಗೆ ವಾಸವಾಗಿದ್ದ ಈ ಪ್ರಕರಣದ ಪಿರ್ಯಾದಿದಾರರು ಮನೆಯ ಹಿಂಬದಿಯ ಅಂಗಳದಲ್ಲಿ ನಿಂತುಕೊಂಡಿದ್ದ ಸಮಯ ಸುಮಾರು 11-00  ಗಂಟೆಗೆ ಅಲ್ಲಿಗೆ ಬಂದ ಪಿರ್ಯಾದಿದಾರರ ಸೊಸೆ ಸರಸ್ವತಿ  ಎಂಬವರು    ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಕೈಯಲ್ಲಿದ್ದ ಕತ್ತಿಯನ್ನು ಎಳೆದುಕೊಂಡು ಪಿರ್ಯಾದಿದಾರರ ಬಲಕೋಲು ಕಾಲಿಗೆ ಕಡಿದು ರಕ್ತಗಾಯವನ್ನುಂಟುಮಾಡಿರುವುದಲ್ಲದೇ ಪಿರ್ಯಾದಿದಾರರನ್ನು ಉದ್ದೇಶಿಸಿ “ ನಿನ್ನನ್ನು ಜೀವಸಹಿತ ಬಿಡುವುದಿಲ್ಲ” ಎಂಬುದಾಗಿ ಜೀವಬೆದರಿಕೆ ಹಾಕಿದ್ದು  ಪಿರ್ಯಾದಿದಾರರು ತನಗಾದ ಗಾಯದ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. CRIME NO; 104/2022  ಕಲಂ  504,324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೀತಾ .ಪಿ ಪ್ರಾಯ: 59 ವರ್ಷ ತಂದೆ: ನಾರಾಯಣ ನಾಯ್ಕ್‌ ವಾಸ: ಹರ್ಷಿತ ವಿಹಾರ್‌ ಮುದ್ದೋಡಿ ಸಾಲ್ಮರ  ಚಿಕ್ಕಮುಡ್ನೂರು ಗ್ರಾಮ  ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಗಂಡ ನಾರಾಯಣ ನಾಯ್ಕ ಪ್ರಾಯ: 64 ವರ್ಷ ರವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವರಾಗಿದ್ದು, ಸುಮಾರು ಎಂಟು ವರ್ಷಗಳ ಹಿಂದೆ ಸಾಲ್ಮರ ಮುದ್ದೋಡಿಯಲ್ಲಿ ಹೊಸ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು,  ದಿನಾಂಕ: 09-01-2021 ರಂದು ಪಿರ್ಯಾದಿದಾರರಿಗೆ ಪಿರ್ಯಾದಿದಾರರ ಗಂಡ ವಿಪರೀತ ಮದ್ಯ ಸೇವನೆ ಮಾಡಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ  ಪಿರ್ಯಾದಿದಾರರು ಸೂತ್ರಬೆಟ್ಟು ಎಂಬಲ್ಲಿ  ಬೇರೆಯೇ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಪಿರ್ಯಾದಿದಾರರ ಗಂಡ ಒಬ್ಬರೇ ಮನೆಯಲ್ಲಿ ವಾಸವಾಗಿದ್ದು, ಹೀಗಿರುತ್ತಾ  ದಿನಾಂಕ: 24-12-2022 ರಂದು  ಪಿರ್ಯಾದಿದಾರರು ಬೆಳಿಗ್ಗೆ 8:11 ಗಂಟೆಯ ಸಮಯ  ಪಿರ್ಯಾದಿದಾರರ ಅಕ್ಕನ ಮಗಳು ಪೋನ್‌ ಕರೆ ಮಾಡಿ ಪಿರ್ಯಾದಿದಾರರ ಗಂಡ ನಾರಾಯಣ ನಾಯ್ಕ ರವರು ವಾಸಿಸುತ್ತಿದ್ದ ಮನೆಯ ಸಮೀಪ ಕವಚಿ ಬಿದ್ದು ಕೊಂಡಿದ್ದು ಮಾತನಾಡುತ್ತಿಲ್ಲ ಎಂಬುದಾಗಿ ತಿಳಿಸಿದಂತೆ  ಪಿರ್ಯಾದಿದಾರರು  ಮನೆಯ ಬಳಿ ಹೋಗಿ ನೋಡಿದಾಗ ಮನೆಯ ಟೇರೆಸಿಗೆ ಹತ್ತುವ ಮೆಟ್ಟಿಲಿನ ಬದಿಯಲ್ಲಿ ಕೆಳಗಡೆ ನೆಲದಲ್ಲಿ ಕವಚಿ ಬಿದ್ದಿದ್ದು  ಕೂಡಲೇ ಪಿರ್ಯಾದಿದಾರರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ಅಲ್ಲಿಯ ವೈದ್ಯರು ಪರೀಕ್ಸಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 37/2022 ಕಲಂ:  174(3)(iv) CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಂದ್ರ  ಪ್ರಾಯ:29 ವರ್ಷ ತಂದೆ: ವೆಂಕಪ್ಪ ನಾಯ್ಕ, ವಾಸ: ಕೊಳಚ್ಚವು ಮನೆ, ಲಾಯಿಲಾ  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ತಾಯಿಯಾದ ಶ್ರೀ ಮತಿ ವನಜ  ಪ್ರಾಯ ಸುಮಾರು 47 ವರ್ಷ ಎಂಬವರು ಬಿಪಿ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಮಾಡುತ್ತಿದ್ದು ಈಗಿರುತ್ತಾ ಶ್ರೀ ಮತಿ ವನಜ ರವರು ವಿಪರೀತ ಅಮಾಲು ಪದಾರ್ಥ ಸೇವಿಸುತ್ತಿದ್ದವರು ಈ ದಿನ ದಿನಾಂಕ: 24.12.2022 ರಂದು ಸಂಜೆ ಸುಮಾರು 5.30 ಗಂಟೆಗೆ ಮನೆಯಲ್ಲಿ ಅಸೌಖ್ಯದಿಂದ ಬಿದ್ದವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಚಿಸಿ ಶ್ರೀಮತಿ ವನಜ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.  .ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್‌ ನಂ:57/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-12-2022 10:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080