ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹುಸೈನ್ ಬ್ಯಾರಿ (34) ತಂದೆ ಸೈಯದ್ ಬ್ಯಾರಿ ವಾಸ:ಬದ್ಯಾರ್ ಮನೆ, ಪಡಂಗಡಿ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 24-01-2023ರಂದು 17-30 ಗಂಟೆಗೆ ಬೆಳ್ತಂಗಡಿ  ತಾಲೂಕು ಪಡಂಗಡಿ ಗ್ರಾಮದ ಬದ್ಯಾರ್‌ ಬಸ್ಸು ನಿಲ್ದಾಣದ ಬಳಿ ದ್ವಿಚಕ್ರ ವಾಹನ ನಂಬ್ರ ಕೆಎ70 ಇ0463ನೇದನ್ನು ಅದರ ಸವಾರ ರಾಮದಾಸ್‌ ಎಂಬವರು ಗುರುವಾಯನಕೆರೆ ಕಡೆಯಿಂದ  ವೇಣೂರು ಕಡೆಗೆ  ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಅದರ  ಹಿಂದಿನಿಂದ  ಅಂಬುಲೆನ್ಸ್‌  ಒಂದನ್ನು ಅದರ ಚಾಲಕ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ದುಡುಕುತನದಿಂದ ಚಲಾಯಿಸಿಕೊಂಡು  ಬರುತ್ತಾ ದ್ಚಿಚಕ್ರ ವಾಹನವನ್ನು ಹಿಂದಿಕ್ಕುವ ರಭಸದಲ್ಲಿ  ಅಂಬುಲೆನ್ಸ್‌ ನ  ಹಿಂಬದಿ ದ್ವಿಚಕ್ರ ವಾಹನದ ಹ್ಯಾಂಡಲ್‌ಗೆ  ಡಿಕ್ಕಿ ಹೊಡೆದುಕೊಂಡು ಹೋದ ಪರಿಣಾಮ ದ್ವಿಚಕ್ರ ವಾಹನ ಸವಾರ ರಾಮದಾಸ್‌ ರವರು  ವಾಹನ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ಮತ್ತು ಬಲಕೈಗೆ ತೀವ್ರ ಸ್ವರೂಪದ ರಕ್ತಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರ ಪಸ್ಟ್‌ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.  ಅಪಘಾತ ಪಡಿಸಿದ ಅಂಬುಲೆನ್ಸ್‌ ಚಾಲಕನು ಗಾಯಾಳುವನ್ನು ಉಪಚರಿಸದೆ  ಅಪಘಾತದ ಬಗ್ಗೆ  ಮಾಹಿತಿ ನೀಡದೆ   ಅಂಬುಲೆನ್ಸ್‌ ನೊಂದಿಗೆ ಅಪಘಾತ ಸ್ಥಳದಿಂದ ಪರಾರಿಯಾಗಿ ರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 07/2023 ಕಲಂ: 279, 338 ಭಾದಂ ಸಂ, ಮತ್ತು ಕಲಂ.134(ಎ) (ಬಿ) ಜೊತೆಗೆ 187ಐಎಂ ವಿ ಆಕ್ಟ್‌  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿಲ್ಪ ಶ್ರೀ (22) ತಂದೆ ಪುರುಷೋತ್ತಮ ನಡಾಯಿ ಮನೆ, ಸರಪಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಮಂಗಳೂರಿನ ಖಾಸಗೀ ಪಿಜಿಯಲ್ಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದುದಾರರ  ತಂದೆಗೆ ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದು ಈ ದಿನ ದಿನಾಂಕ: 25.01.2023 ರಂದು ಸಂಜೆ 4.30 ಗಂಟೆಗೆ ಪಿರ್ಯಾದುದಾರರು ಕೆಲಸದಲ್ಲಿದ್ದ ಸಮಯ ಪಿರ್ಯಾದುದಾರರ ತಂಗಿ ಪಿರ್ಯಾದುದಾರರಿಗೆ ಫೋನ್ ಮಾಡಿ ಈ ದಿನ ತಂದೆ ಕೆಲಸಕ್ಕೆ ಹೋಗದೇ ಮನೆಯಲ್ಲಿ ಮಲಗಿದವರು ಏಳುವುದಿಲ್ಲ ಎಂದು ಹೇಳಿದ್ದು ಕೂಡಲೇ ಪಿರ್ಯಾದುದಾರರು ಮಂಗಳೂರಿನಿಂದ ಹೊರಟು ಬರುತ್ತಿರುವಾಗ ಪಿರ್ಯಾದುದಾರರ ತಂಗಿ ಪುನಃ ಫೋನ್ ಮಾಡಿ ತಂದೆಯನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ಸಮಯ 5.30 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಪಿರ್ಯಾದುದಾರರ ತಂದೆ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದವರು ಈ ದಿನ ಸಂಜೆ 4.30 ರಿಂದ 5.30 ರ ಮದ್ಯೆ ಹೃದಯಾಘಾತವಾಗಿಯೋ ಅಥವಾ ಯಾವುದೋ ಖಾಯಿಲೆಯಿಂದಲೋ ಮೃತಪಟ್ಟಿರುವುದಾಗಿದ್ದು,.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ  04/2023  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಜಿತ್‌  (22), ತಂದೆ:ಚೆಲುವಯ್ಯ, ವಾಸ: ಬನತರಡ್ಡ  ಮನೆ, ಕೊಕ್ರಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿಯಾದಿದಾರರ ತಂದೆ  ಚೆಲುವಯ್ಯ  (48), ರವರು ವಿಪರೀತ ಮಧ್ಯ ಸೇವಿಸುವ ಚಟ ಹೊಂದಿದ್ದು   ದಿನಾಂಕ: 24-01-2023 ರಂದು  ರಾತ್ರಿ  ಊಟ  ಮಾಡಿ   ಮಲಗಿದ್ದವರು ದಿನಾಂಕ: 25-01-2023 ರಂದು  ಬೆಳಿಗ್ಗೆ  ಸುಮಾರು  06:00 ಗಂಟೆಗೆ  ಪಿರ್ಯಾದಿದಾರರು  ಎದ್ದು  ನೋಡಿದಾಗ  ಪಿರ್ಯಾದಿದಾರರ ತಂದೆ ಚೆಲುವಯ್ಯ ರವರು  ಕಾಣೆದೆ ಇದ್ದು ಮನೆಯ   ಸುತ್ತ-ಮುತ್ತಲೂ,  ನೆರೆಕರೆಯವರಲ್ಲಿ   ಹುಡುಕಾಡಿ  ಎಲ್ಲಿಯೋ   ಪತ್ತೆಯಾಗದೇ ಇದ್ದಾಗ ಪಿರ್ಯಾದಿದಾರರು   ತನ್ನ  ಮನೆ  ಸಮೀಪ  ಇರುವ   ಕೈಪ್ಲೋಡಿ  ಎಂಬಲ್ಲಿ  ನದಿಯ   ಬದಿಯಲ್ಲಿ   ಹುಡುಕಾಡಿದಾಗ   ಚೆಲುವಯ್ಯ ರವರು  ನದಿಯ  ನೀರಿನಲ್ಲಿ  ಮುಳುಗಿ ಮೃತಪಟ್ಟಿರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 04-2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಷಷ್ಠಿತಾ ಬಿ ಪ್ರಾಯ 30 ವರ್ಷ ತಂದೆ: ಐತ್ತಪ್ಪ ಬಿ ವಾಸ: ಬಾಜಿನಡ್ಕ ಮನೆ, ಅರಂತೋಡು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಷಷ್ಠಿತಾ.ಬಿ ರವರ ತಂದೆ ಐತ್ತಪ್ಪ. ಬಿ (55 ವರ್ಷ) ರವರು ತೊಡಿಕಾನ ವಲಯದ ಶ್ರೀ ಧರ್ಮಸ್ಥಳ ಸಂಘದಲ್ಲಿ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 25.01.2023 ರಂದು ಬೆಳಿಗ್ಗೆ 7 ಗಂಟೆಗೆ ತೊಡಿಕಾನಕ್ಕೆ ಹೋಗಿ ವಾಪಾಸು ಮನೆಗೆ ಬಂದವರು ತಿಂಡಿ ತಿಂದು ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಾಜಿನಡ್ಕ ಎಂಬಲ್ಲಿ ತಮ್ಮ ಬಾಬ್ತು ತೋಟದಲ್ಲಿ ಪಿರ್ಯಾದಿದಾರರ ತಂದೆ ಮತ್ತು ತಾಯಿಯವರು ಕೃಷಿ ಚಟುವಟಿಕೆ ಕೆಲಸಗಳನ್ನು ಮಾಡಿಕೊಂಡಿದ್ದರು. ಮಧ್ಯಾಹ್ನ ಸಮಯ ಸುಮಾರು 2.00 ಗಂಟೆಗೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಪಿರ್ಯಾದಿದಾರರ ತಂದೆ ಐತ್ತಪ್ಪ ರವರು ಒಮ್ಮೆಲೆ ಕುಸಿದು ಬಿದ್ದಿದ್ದವರನ್ನು ಪಿರ್ಯಾದಿದಾರರು ಮತ್ತು ತಾಯಿ ಉಪಚರಿಸಿ ಒಂದು ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ತಂದೆ ಐತ್ತಪ್ಪ ರವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದು.ಈ ಬಗ್ಗೆ ಸುಳ್ಯ ಠಾಣಾ ಯುಡಿಅರ್ ನಂಬ್ರ 06/23 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-01-2023 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080