ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ರಫೀಕ್ ಪ್ರಾಯ 39 ತಂದೆ ಲೇಟ್ ಇಸ್ಮಾಯಿಲ್ ವಾಸ:ಕಂಬಳಬೆಟ್ಟುನೆಕ್ಕರೆ ಮನೆ ವಿಟ್ಲಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಈ ದಿನ ದಿನಂಕ: 25.02.2020 ವಿಟ್ಲ- ಪುತ್ತೂರು  ರಾ.ಹೆದ್ದಾರಿಯಲ್ಲಿ ವಿಟ್ಲ  ಪೇಟೆಯಿಂದ ತನ್ನ ಮನೆ ಕಡೆಗೆ ಮೋಟಾರು ಸೈಕಲ್‌ ಸವಾರಿ ಮಾಡಿಕೊಂಡು  ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ  ಬದನಾಜೆ ತಿರುವು ಎಂಬಲ್ಲಿಗೆ  ಸಮಯ ಸುಮಾರು 2.15 ಗಂಟೆಗೆ ತಲುಪಿದಾಗ  ಪಿರ್ಯಾದುದಾರರ ಮುಂದೆ ಹೋಗುತ್ತಿದ್ದ  ಈಚಾರ್‌ ವಾಹನದ ಚಾಲಕನು  ಅಜಾಗರುಕತೆ ನಿರ್ಲಕ್ಷತನದಿಂದ  ಈಚಾರ್‌ ವಾಹನವನ್ನು ಚಲಾಯಿಸಿದ ಪರಿಣಾಮ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ  ಬರುತ್ತಿದ್ದ ಮೋಟಾರು ಸೈಕಲ್‌ ಸವಾರನು  ನಿಯಂತ್ರಣ  ತಪ್ಪಿ  ಈಚಾರ್‌ ವಾಹನದ ಡೀಸಿಲ್‌ ಟ್ಯಾಂಕ್‌ನ  ಗಾರ್ಡ್‌ಗೆ ಡಿಕ್ಕಿಪಡಿಸಿ ದ ಪರಿಣಾಮ ಸವಾರ  ಇಸ್ಮಾಯಿಲ್‌ ಸಹ ಸವಾರ ಅಬ್ಬಾಸ್‌ ರವರಿಗೆ ಇಬ್ಬರಿಗೂ  ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು  ಕೂಡಲೇ ಅಲ್ಲಿ ಸೇರಿದವರು ಉಪಚರಿಸಿ  ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ   ವಿಟ್ಲ ಸಮುದಾಯ  ಆರೋಗ್ಯ ಕೇಂದ್ರಕ್ಕೆ   ಗಾಯಾಳು ಇಸ್ಮಾಲಿನ್ನು  ದಾಖಲಿಸಿದ್ದು ಪರೀಕ್ಷಿಸಿದ  ವೈದ್ಯಾಧಿಕಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದು  ಮತ್ತೊಬ್ಬ ಗಾಯಾಳು ಅಬ್ಬಾಸ್‌ನನ್ನು  ಮಂಗಳೂರು ಪಡೀಲ್‌  ಪಸ್ಟ್‌ ನ್ಯೂರೋ ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಿಸಲಾಗಿದೆ, ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 31/2021 ಕಲಂ: 279,337,338.304(A)  ಭಾ.ದಂ.ಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶೋಕ್, ಪ್ರಾಯ 25 ವರ್ಷ,  ತಂದೆ: ದೇವರಾಜು, ವಾಸ: ಹೆರೆಹಳ್ಳಿ ಬೇಲೂರು ರಸ್ತೆ, ಮಣಿಸಿನ ಹಳ್ಳಿ ಅಂಚೆ, ಹಾಸನ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿ ಅಶೋಕ್ ಎಂಬವರು ದಿನಾಂಕ 25.02.2021 ರಂದು ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿರುವ ಕೋಲ್ಪೆ ಮಸೀದಿ ಬಳಿ ಇರುವ ಸಮಯ 02.00 ಗಂಟೆಗೆ ಮಂಗಳೂರು-ಬೆಂಗಳೂರು ರಾ.ಹೆದ್ದಾರಿ 75 ರಲ್ಲಿ ಆರೋಪಿಯು ಆತನ ಬಾಬ್ತು ಲಾರಿ ನಂಬ್ರ KA 25 B 5089 ನೇದನ್ನು ಉಪ್ಪಿನಂಗಡಿ ಕಡೆಯಿಂದ ಬೆಂಗಳೂರು ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿರುವ ಕೋಲ್ಪೆ ಮಸೀದಿ ಎದುರು ತಲುಪುತ್ತಿದ್ದಂತೆ ರಾ.ಹೆದ್ದಾರಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಹಾಸನ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ಗಾಡಿ ನಂಬ್ರ KA 13 C 4725 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ವಾಹನಗಳು ಜಖಂಗೊಂಡಿರುತ್ತದೆ ಅಲ್ಲದೇ ಅಶೋಕ್ ಲೈಲ್ಯಾಂಡ್ ದೋಸ್ತ್ ಗಾಡಿ ನಂಬ್ರ KA 13 C 4725 ನೇದರ ಚಾಲಕ ಚೇತನ್.ಎಂ.ವಿ. ಎಂಬವರು ಗಂಭೀರ ಗಾಯಗೊಂಡಿದ್ದು ಗಾಯಗೊಂಡ ಚೇತನ್.ಎಂ.ವಿ.ನನ್ನು ಪಿರ್ಯಾದಿದಾರರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಸಮಯ 02.30 ಗಂಟೆಗೆ ಪುತ್ತೂರು ಹಾಸ್ಪಿಟಲ್ ಬಳಿ ತಲುಪುತ್ತಿದ್ದಂತೆ ಚೇತನ್.ಎಂ.ವಿ. ಮೃತಪಟ್ಟಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 19/2021 ಕಲಂ: 279,304(ಎ) ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಫೆಲಿಕ್ಸ್‌ ಫೆರ್ನಾಂಡೀಸ್‌, (62), ತಂದೆ: ದಿ| ಚಾರ್ಲಿ ಫೆರ್ನಾಂಡೀಸ್‌, ವಾಸ: ಒಳಬೈಲು ಮನೆ, ಕುಕ್ಕಳ ಗ್ರಾಮ, ಪುಂಜಾಲಕಟ್ಟೆ ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿರವರು ತನ್ನ ತಾಯಿ ಶ್ರೀಮತಿ ಸೆರ್ಪಿನ್‌ ಲೋಬೋ @ ಸೆರ್ಪಿನ್‌ ಫೆರ್ನಾಂಡೀಸ್‌ (81 ವರ್ಷ) ಎಂಬವರೊಂದಿಗೆ ಮಡಂತ್ಯಾರು ಚರ್ಚ್‌ ಗೆ ಹೋಗುವ ಸಲುವಾಗಿ ಮನೆಯಿಂದ ಹೊರಟು ಬೆಳಿಗ್ಗೆ 08:45 ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮದ, ಶಾರದಾ ಮಂಟಪದ ಬಳಿ ಆಟೋ ರಿಕ್ಷಾವೊಂದರಲ್ಲಿ ಮಡಂತ್ಯಾರು ಕಡೆಗೆ ಹೋಗಲು ಸಾರ್ವಜನಿಕ ಡಾಮಾರು ರಸ್ತೆಯನ್ನು ದಾಟುವ ಸಲುವಾಗಿ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಆರೋಪಿ ಸೆಬಾಸ್ಟಿನ್‌ ಕೆ.ಪಿ ಎಂಬಾತನು ಮೋಟಾರ್‌ ಸೈಕಲ್‌ KA21R6407 ನೇದನ್ನು ಮಡಂತ್ಯಾರು ಕಡೆಯಿಂದ ಪುಂಜಾಲಕಟ್ಟೆ ಕಡೆಗೆ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಫಿರ್ಯಾಧಿದಾರರ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧಿದಾರರ ತಾಯಿಯ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದಂತಹ ರಕ್ತಗಾಯ ಹಾಗೂ ಬಲಕೈಯ ತೋಳಿಗೆ ರಕ್ತಗಾಯವಾಗಿದ್ದು, ಗಾಯಾಳು ಮಂಗಳೂರಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 08/2021 ಕಲಂ: 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಮಮ್ತಾಜ್ ಅನ್ಸಾರಿ, ಪ್ರಾಯ: 33 ವರ್ಷ, ತಂದೆ:  ಖುರ್ಷಿದ್ ಶೇಖ್ ತೋಲ, ವಾಸ: ಪಚ್ಚಾರಿ ಬಿರುವ, ರಾಮಪುರ ಅಂಚೆ, ಅರವಿಯಾ, ಪೋರ್ ವೀಸ್ ಗಂಜ್ ಜಿಲ್ಲೆ, ಬಿಹಾರ ಎಂಬವರ ದೂರಿನಂತೆ ದಿನಾಂಕ: 24.02.2021 ರಂದು ಬೆಳಿಗ್ಗೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಡಾಮಾರೀಕರಣ ಕಾಮಗಾರಿಯನ್ನು ಮಾಡುತ್ತಿದ್ದಾಗ ಮದ್ಯಾಹ್ನ ಸುಮಾರು 3:00 ಗಂಟೆ ಸಮಯಕ್ಕೆ ಸುಬ್ರಹ್ಮಣ್ಯ ಕಡೆಯಿಂದ ಗುಂಡ್ಯ ಕಡೆಗೆ AR 20 9009 ನೇ ಟೂರಿಸ್ಟ್ ಕುಕ್ಕೆ ಶ್ರೀ ಎಂಬ ಬಸ್ಸನ್ನು ಅದರ ಚಾಲಕನು ತಿರುವಿನಲ್ಲಿ ಅತೀ ವೇಗ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದಾಗ ಬಸ್ಸಿನ ಎಡಗಡೆಯಲ್ಲಿರುವ ಪ್ರಯಾಣಿಕರ ಲಗೇಜ್ ಕ್ಯಾರೇಜ್ ಬಾಕ್ಸ್ ನ ಮುಚ್ಚುವ ಬಾಗಿಲು ಒಮ್ಮೇಲೆ ಹೊರಗೆ ತೆರೆಯಲ್ಪಟ್ಟು ಪಿರ್ಯಾದಿದಾರರು ರಸ್ತೆಯ ಎಡಗಡೆಯಲ್ಲಿ ವಾಹನಗಳಿಗೆ ಸಂಜ್ಞೆಯನ್ನು ನೀಡುತ್ತಿದ್ದಾಗ ಸದ್ರಿ ಬಸ್ಸಿನ ಲಗೇಜ್ ಬಾಕ್ಸ್ ನ ಬಾಗಿಲು ಪಿರ್ಯಾದಿಯ ಎಡಬೆನ್ನಿಗೆ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿಯ ಬೆನ್ನಿನ ಎಡಭಾಗ, ಎಡಪಕ್ಕೆಲುಬು, ಎಡಗೈ ಭುಜ ಮತ್ತು ಮಣಿಗಂಟಿಗೆ ಗುದ್ದಿದ ಗಾಯವಾಗಿ ಜಖಂಗೊಂಡಿರುತ್ತದೆ. ಕೂಡಲೇ ಅಸ್ವಸ್ಥಗೊಂಡ ಪಿರ್ಯಾದಿದಾರರನ್ನು ಕಾಮಗಾರಿಯ ಮೇಲ್ವಿಚಾರಕರಾದ ಸಲೀಂ ಮತ್ತು ರಮೇಶ್ ರೈ ಯವರು ಚಿಕಿತ್ಸೆ ಬಗ್ಗೆ 108 ಆಂಬುಲೆನ್ಸ್ ವಾಹನದಲ್ಲಿ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ  ಠಾಣಾ ಅ.ಕ್ರ ನಂಬ್ರ : 09-2021 ,ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೋವಿಂದ ನಾಯ್ಕ್ ಪ್ರಾಯ 68 ವರ್ಷ ತಂದೆ: ಕೊರಗು ನಾಯ್ಕ್ ಭರಣ್ಯ ಮನೆ, ಪಾಣಾಜೆ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಗೋವಿಂದ ನಾಯ್ಕ್ ರವರ ಮಗ ಕೇಶವ ಎಂಬವರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟವುಳ್ಳವರಾಗಿದ್ದು, ದಿನಾಂಕ 24.02.2021 ರಂದು ರಾತ್ರಿ 8.00 ಗಂಟೆಗೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದವರು ಬಿಳಿಯೂರುಕಟ್ಟೆಯ ಮುರುಂಗಿಯಲ್ಲಿರುವ ಭಾವನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ದಿನಾಂಕ 25.02.2021 ರಂದು ಬೆಳಿಗ್ಗೆ  ಪಿರ್ಯಾದಿದಾರರ ಮಗ ರವಿಚಂದ್ರ ಎಂಬವರು ಅರ್ಲಪದವು ಪೇಟೆಗೆ ಹೋಗುತ್ತಿರುವಾಗ ರಸ್ತೆ ಪಕ್ಕದಲ್ಲಿರುವ ಕೋಟೆ ಕಿಟ್ಟಣ್ಣ ರೈರವರ ಬಾಬ್ತು ಗುಡ್ಡ ಪ್ರದೇಶದಲ್ಲಿರುವ ಗೇರು ಮರವೊಂದರ ಕೊಂಬೆಗೆ ಕೇಶವನು ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಕಂಡು ಮನೆಗೆ ಬಂದು ವಿಷಯ ತಿಳಿಸಿದ ಕೂಡಲೇ ಪಿರ್ಯಾದಿದಾರರು ಮತ್ತು ಮನೆಯವರು ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ಕೇಶವನು ಕುತ್ತಿಗೆ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಆರ್ ನಂಬ್ರ 07/21 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಬಾರತಿ ಗಂಡ: ಮಧುಸೂದನ ನಾಯಕ್  ವಾಸ: ಕಜೆ ಮನೆ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ  ಮಧುಸೂಧನ್ ನಾಯಕ್ (35)  ಎಂಬವರು  ಮನೆಯಲ್ಲಿ  ಯಾರೂ ಇಲ್ಲದ ಸಮಯ ದಿ: 22-02-2021 ರಂದು ಸಂಜೆ 6-00 ಗಂಟೆಯಿಂದ  ದಿ: 25-02-2021 ರಂದು ಬೆಳಿಗ್ಗೆ 08-30 ಗಂಟೆ ಮಧ್ಯೆ  ಮನೆಯೊಳಗೆ  ಗೋಡೆಯ ಅಡ್ಡಕ್ಕೆ   ಹಳೆಯ ಲುಂಗಿಯಿಂದ ನೇಣುಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯುಡಿಆರ್ 4/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವನಾಥ (25) ತಂದೆ:ಜನಾರ್ಧನ ವಾಸ:ಮುರ ಚನ್ನಳಿಕೆ ಮನೆ, ಕನ್ಯಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ಜನಾರ್ಧನ (50) ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಯಾವುದೋ ಮಾನಸಿಕ ಒತ್ತಡಕ್ಕೆ ಒಳಗಾಗಿ, ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:25.02.2021 ರಂದು ಬೆಳಿಗ್ಗೆ 08-30 ಗಂಟೆಯಿಂದ 09.30 ಗಂಟೆಯ ಮಧ್ಯದ  ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಕನ್ಯಾಡಿ-I ಗ್ರಾಮದ ಮುರ ಚೆನ್ನಳಿಕೆ ಎಂಬಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂ: 09/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-02-2021 10:05 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080