ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦4

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಬಿ ಮಹಮ್ಮದ್ ಪ್ರಾಯ:47 ತಂದೆ: ಬಿ ಹಸನಬ್ಬ ವಾಸ:#2-58 ಬಟ್ಟಾಜಿ ಮನೆ, ಬಡಗಬೆಳ್ಳೂರು ಗ್ರಾಮ ಮತ್ತುಅಂಚೆ ಬಂಟ್ವಾಳತಾಲೂಕು ರವರು ದಿನಾಂಕ 22-02-2023 ರಂದು ಕೆಲಸ ಮುಗಿಸಿ ಮನೆ ಕಡೆಗೆ ಬರುತ್ತಿರುವ ಸಮಯ ಸುಮಾರು ಸಂಜೆ 19:00 ಗಂಟೆಗೆ ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮದ ಕಿರಾಳಗುತ್ತು ಎಂಬಲ್ಲಿ ಪೊಳಲಿ – ಸೊರ್ನಾಡು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪೊಳಲಿ ಕಡೆಯಿಂದ KA-70-1481 ನೇ ಆಟೋರಿಕ್ಷಾವೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಎಸೆಯಲ್ಪಟ್ಟು ರಸ್ತೆಗೆ ಮಗುಚಿ ಬಿದ್ದು ಅಪಘಾತವಾಗಿದ್ದು ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಗ್ರೆಗೋರಿ ಎಂಬವರಿಗೆ ಬಲ ಕೈ  ಮಣಿಗಂಟಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 34/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ತಿರುಮಲೇಶ್ವರ ನಾಯ್ಕ (47) ತಂದೆ; ದಿ||ಚೋಮ ನಾಯ್ಕ ವಾಸ:ಶೇಡಿಗುಳಿ ಮನೆ, ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮ ಜಯಕುಮಾರ್‌ ಪ್ರಾಯ 34 ವರ್ಷ  ಎಂಬಾತನು ದಿನಾಂಕ;23.02.2023 ರಂದು ಕೆಲಸಕ್ಕೆ ಹೋಗದೆ ಪೆರುವಾಯಿಯ ಬದಿಯಾರು ಎಂಬಲ್ಲಿ ನಡೆಯುವ ಪಂಜುರ್ಲಿ ದೈವದ ನೇಮದ ಬಗ್ಗೆ ತನ್ನ ಬಾಬ್ತು ಮೋಟಾರು ಸೈಕಲು ಕೆಎ-21-ವಿ-4262 ನೇಯದನ್ನು ಜಯಕುಮಾರ್‌ ಸವಾರಿ ಮಾಡಿಕೊಂಡು ಹೋಗಿ ,ಮರಕ್ಕಿಣಿಯಲ್ಲಿರುವ ಮನೆಯ ಕಡೆಗೆ ವಾಪಾಸು ಬರುತ್ತಾ  ಪೆರುವಾಯಿ-ಕುದ್ದುಪದವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಮಧ್ಯಾಹ್ನ ಸುಮಾರು 3.00 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ತಲಿಪಿದಾಗ ಆತನ ಚಾಲನಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ತಲೆಯ ಭಾಗಕ್ಕೆ ರಕ್ತಗಾಯವಾದವರನ್ನು ಬಾಲಕೃಷ್ಣ ರವರು ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ಕಳುಹಿಸಿಕೊಟ್ಟಿದ್ದು. ಅಲ್ಲಿನ ವೈದ್ಯರು ಜಯಕುಮಾರ್‌‌ನನ್ನು ಪರಿಕ್ಷೀಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು ಜಯಕುಮಾರ್‌ನ ತಲೆಯ ಭಾಗದಲ್ಲಿ ಗಂಬೀರ ತರಹದ ರಕ್ತಗಾಯವಾಗಿದ್ದರಿಂದ ಚಿಕಿತ್ಸೆಯಲ್ಲಿರುತ್ತಾ ದಿನಾಂಕ;24.08.2023 ರಂದು ವೈಧ್ಯರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 29/2023  ಕಲಂ:279, 304 (ಎ) ಬಾಧಂಸಂ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ   ಅಮೀರ್‌ ಹುಸೈನ್‌ ಪ್ರಾಯ 42 ವರ್ಷ ತಂದೆ ಮೊಯಿದ್ದೀನ್‌  ಸಾಬ್‌ ವಾಸ: ಕೊಡಂಗೆ ಮನೆ, ಮೇಲಂತಬೆಟ್ಟು ಗ್ರಾಮ  ಬೆಳ್ತಂಗಡಿ ತಾಲೂಕು ರವರು  ದಿನಾಂಕ: 25-02-2023ರಂದು ತನ್ನ  ಪತ್ನಿ ಸಾಜನ್‌ಬೀ,  ತನ್ನ ಪತ್ನಿಯ ಅಕ್ಕ ರಮೀಜಾಬಿ ಹಾಗೂ ಅವರ ರಿಯಾಜ್‌ ಎಂಬವರೊಂದಿಗೆ ಅಟೋ ರಿಕ್ಷಾ ಕೆಎ:21ಬಿ5048ನೇದರಲ್ಲಿ ಪ್ರಯಾಣಿಕರಾಗಿ   ಮೇಲಂತಬೆಟ್ಟು ಕಡೆಯಿಂದ ಗುರುವಾಯನಕೆರೆಗೆ ಪ್ರಯಾಣಿಸಿಕೊಂಡು ಹೋಗುತ್ತ  ಸಮಯ ಸುಮಾರು 15-20 ಗಂಟೆಗೆ ಬೆಳ್ತಂಗಡಿ ತಾಲೂಕು  ಮೇಲಂತಬೆಟ್ಟು ಗ್ರಾಮದ ಮಾಪಲಾಡಿ ಎಂಬಲ್ಲಿಗೆ ತಲುಪಿದಾಗ ಅಟೋ ರಿಕ್ಷಾ ಕೆಎ:21ಬಿ5048 ನೇದನ್ನು ಅದರ ಚಾಲಕ ಹಸನಬ್ಬ ಎಂಬವರು ಒಮ್ಮೆಲೆ  ದುಡುಕುತನದಿಂದ ಚಲಾಯಿಸಿದ ಪರಿಣಾಮ ಅಟೋ ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಚರಂಡಿಗೆ  ಬಲಮಗ್ಗುಲಾಗಿ ಬಿದ್ದ  ಪರಿಣಾಮ  ಅಟೋ ರಿಕ್ಷಾದಲ್ಲಿದ್ದ  ಪಿರ್ಯಾದಿದಾರರ ಎಡಕೈ   ಹೆಬ್ಬೆರಳಿಗೆ  ಎಡಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು  ಸಾಜನ್‌ಬೀ ರವರ ತುಟಿಗೆ ಹಣೆಗೆ ಎಡಕಿವಿಗೆ ತರಚಿದ ರಕ್ತಗಾಯವಾಗಿದ್ದು, ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು,  ರಮೀಜಾಬಿ ರವರಿಗೆ  ಎಡಭುಜಕ್ಕೆ ಬೆನ್ನಿಗೆ ಗುದ್ದಿದ ಗಾಯಗೊಂಡವರನ್ನು ಬೆಳ್ತಂಗಡಿ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು ಅಟೋ ರಿಕ್ಷಾ ಚಾಲಕ ಹಸನಬ್ಬರವರ ಹಣೆಗೆ ರಕ್ತಗಾಯಗೊಂಡವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ  ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 15/2023 ಕಲಂ. 279, 337, ಭಾದಸಂ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜಯರಾಮ್ ಕೆ ಎನ್ ಪ್ರಾಯ:39 ವರ್ಷ ತಂದೆ: ದಿಂ| ಪಿ ನರಸಿಂಹ ಭಟ್ ವಾಸ: ಕಲ್ಕ ಮನೆ  ಕುತ್ಕುಂಜ ಗ್ರಾಮ ಸುಳ್ಯ ತಾಲೂಕು ರವರು ದಿನಾಂಕ 24-02-2023 ರಂದು  ಸಂಜೆ 05-30 ಗಂಟೆಗೆ ತನ್ನ ಮನೆಯಿಂದ ಕಡಬಕ್ಕೆ ಹೋಗುವರೇ ಅವರ ಬಾಬ್ತು ಮೋಟಾರು ಸೈಕಲ್ ನಲ್ಲಿ ಹೊರಟು ಪಂಜದಿಂದ ಕಡಬಕ್ಕೆ ಬರುತ್ತಾ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೋಲ್ಪೆ ಕಡೆಗೆ ತಿರುಗಿಕೊಳ್ಳುವ ರಸ್ತೆಯ ಬಳಿ ಹೋಗುತ್ತಿರುವಾಗ ಪಿರ್ಯಾದುದಾರರ ಎದುರುಗಡೆಯಿಂದ ರಸ್ತೆಯಲ್ಲಿ KA21 N9372 ನೇ ನಂಬ್ರನ  ಮಾರುತಿ ಆಲ್ಟೋ ಕಾರು ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸುತ್ತಾ ಅವರ ತಪ್ಪು ಬದಿಯಾದ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗುತ್ತಾ ಕಡಬ ಕಡೆಯಿಂದ ಪಂಜ ಕಡೆಗೆ ಬರುತ್ತಿದ್ದ ಅಂದರೆ ಎದುರಿನಿಂದ ಬರುತ್ತಿದ್ದ ಮೋಟಾರು ಸೈಕಲ್ಲಿಗೆ ಡಿಕ್ಕಿಯನ್ನುಂಟುಮಾಡಿದ ಪರಿಣಾಮ ಮೋಟಾರು ಸೈಕಲ್ ಸವಾರ ಹಾಗೂ ಸಹಸವಾರಿಣಿ ಇಬ್ಬರೂ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದದ್ದನ್ನು ಕಂಡು ಪಿರ್ಯಾದಿದಾರರು ಬೈಕ್ ನಿಲ್ಲಿಸಿ ಅವರ ಬಳಿ ತೆರಳಿದಾಗ ಬೈಕ್ ಸವಾರ ಹಾಗೂ ಸವಾರಿಣಿ ಪರಿಚಯದ ಸುಬ್ಬಣ್ಣ ಬಳ್ಳಕ್ಕ ಹಾಗೂ ಅವರ ಪತ್ನಿ ಹೇಮಾವತಿ ಎಂಬವರಾಗಿದ್ದು ಸುಬ್ಬಣ್ಣನವರಿಗೆ  ಬಲಕಾಲು ಮೊಣಗಂಟಿನಿಂದ ಕೆಳಗೆ ಪಾದದ ತನಕ ಗಾಯವಾಗಿದ್ದು ಅಲ್ಲದೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಹೇಮಾವತಿರವರಿಗೆ ಬಲಕಾಲಿನ ಮೊಣಗಂಟಿನ ಕೆಳಗಿನ ತನಕ ರಕ್ತಗಾಯವಾಗಿರುತ್ತದೆ.  ಅಪಘಾತವನ್ನುಂಟುಮಾಡಿದ ಕಾರು ಚಾಲಕ ಅಲ್ಲಿಗೆ ಬಂದಿದ್ದು ಅವರ ಹೆಸರು ಮಾಯಿಲಪ್ಪ ಎಂಬುದಾಗಿರುತ್ತದೆ.ಅಪಘಾತಕ್ಕೊಳಗಾದ  ಮೋಟಾರ್ ಸೈಕಲ್ ನಂಬ್ರ KA 21X 8181 ಆಗಿರುತ್ತದೆ. ಅಪಘಾತವನ್ನುಂಟುಮಾಡಿದ ಆಲ್ಟೋ ಕಾರು ನಂಬ್ರ KA21 N9372 ಆಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 18/2023 ಕಲಂ:279,337 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕಳವು ಪ್ರಕರಣ: ೦1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕರುಣಾಕರ ಹೆಚ್ ಎಸ್ ಪ್ರಾಯ 55 ವರ್ಷ,  ತಂದೆ: ಸೋಮಯ್ಯ,  ಮುಖ್ಯೋಪಾಧ್ಯಯರು, ಸರಕಾರಿ ಪ್ರೌಢ ಶಾಲೆ ಬುಳೇರಿ, ಮೊಗ್ರು ಗ್ರಾಮ  ಬೆಳ್ತಂಗಡಿ ತಾಲೂಕು ರವರು ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ, ಬುಳೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿದ್ದು, ಎಂದಿನಂತೆ ದಿನಾಂಕ 24-02-2023ರಂದು ಶಾಲಾ ಕರ್ತವ್ಯದಲ್ಲಿದ್ದು, ಸಂಜೆ 4.30 ಗಂಟೆಗೆ ಎಲ್ಲಾ ಶಾಲೆಯ ಕೊಠಡಿಗಳ ಬಾಗಿಲನ್ನು ಮುಚ್ಚಿ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 25-02-2023ರಂದು ಬೆಳಿಗ್ಗೆ 8.45 ಗಂಟೆಗೆ ಸಹ ಶಿಕ್ಷಕರಾದ ಶ್ರೀಮತಿ ರಶ್ಮಿ ಎಂಬವರು ಪೌಢ ಶಾಲೆಗೆ ಹೋಗಿ ನೋಡಿದಾಗ ಮುಖ್ಯೋಪಾದ್ಯಯರ ಕೊಠಡಿಯ ಶಟರ್ ನ ಬೀಗವನ್ನು ತುಂಡಿರಿಸಿ, ಮತ್ತು ಕ್ರೀಡಾ ಕೊಠಡಿಯ ಬಾಗಿಲಿನ ಬೀಗವನ್ನು ಕೂಡಾ ತುಂಡರಿಸಿದ್ದು, ನೋಡಲಾಗಿ  ಮುಖ್ಯೋಪಾದ್ಯರ ಕೊಠಡಿಯಲ್ಲಿದ್ದ ಬ್ಯಾಟರಿಗಳು ಮತ್ತು ಕ್ರೀಡಾ ಕೊಠಡಿಯಲ್ಲಿದ್ದ ಬ್ಯಾಟರಿಗಳು ಕಾಣಿಸದೇ ಇರುವುದನ್ನು ಕಂಡು ಶ್ರೀಮತಿ ರಶ್ಮಿಯವರು ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ತಿಳಿಸಿದಂತೆ,  ಪಿರ್ಯಾದಿದಾರರು ಶಾಲೆಗೆ ಹೋಗಿ ನೋಡಲಾಗಿ ಮುಖ್ಯೋಪಾದ್ಯಯರ ಕೊಠಡಿ ಶಟರ್ ನ ಬೀಗವನ್ನು ತುಂಡರಿಸಿ ಕೊಠಡಿಯಲ್ಲಿದ್ದ 4 ಹಳೆಯ ಬ್ಯಾಟರಿಗಳು ಮತ್ತು ಕ್ರೀಡಾ ಕೊಠಡಿಯ ಬಾಗಿಲಿನ ಬೀಗವನ್ನು ತುಂಡರಿಸಿ ಸದರಿ ಕೊಠಡಿಯಲ್ಲಿದ್ದ 8 ಹಳೆಯ ಬ್ಯಾಟರಿಗಳು ಕಳವಾಗಿರುತ್ತದೆ. ಕಳುವಾದ ಒಟ್ಟು 12 ಬ್ಯಾಟರಿಗಳ ಅಂದಾಜು ಮೌಲ್ಯ 30,000/- ಆಗಬಹುದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ    ಅ.ಕ್ರ 18/2023 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: ೦1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪೊಲೀಸ್‌ ವೃತ್ತ ನಿರೀಕ್ಷಕರು ಪುತ್ತೂರು ಗ್ರಾಮಾಂತರ ವೃತ್ತ, ರವರಿಗೆ ಬಂದ ಮಾಹಿತಿಯಂತೆ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸ್ಬಾ ಗ್ರಾಮದ ಪೃಥ್ವಿ ಕಾಂಪ್ಲೆಕ್ಸ್ ನ 1-11-8ಎ44 ನೇ 4U BEST SERVICE ಮೊಬೈಲ್‌ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್‌ ಎಂಬ ವಸ್ತುವನ್ನು ಮಾರಾಟ ಮಾಡುತ್ತಿದ್ದ ಅಂಗಡಿಗೆ ಸಿಬ್ಬಂದಿಗಳ ಜೊತೆ  ರಾತ್ರಿ 8-05 ಗಂಟೆಗೆ 4U BEST SERVICE ಎಂಬ ಮೊಬೈಲ್ ಅಂಗಡಿಗೆ ಹೋದಾಗ ಅಂಗಡಿಯಲ್ಲಿದ್ದವನ ಹೆಸರು ವಿಳಾಸ ಕೇಳಲಾಗಿ ಶೇಖ್‌ ಶಾಹಿದ್‌ ಪ್ರಾಯ 27 ವರ್ಷ ತಂದೆ: ಶೇಖ್‌ ಹಾರುನ್‌ ವಾಸ: ಶೇಖ್‌ ಮಂಜಿಲ್‌ ಮಣ್ಯ, ಮುಕ್ವೆ, ನರಿಮೊಗರು ಗ್ರಾಮ ಪುತ್ತೂರು ತಾಲೂಕು ಎಂಬುದಾಗಿ ತಿಳಿಸಿದ್ದು,  ಅಂಗಡಿಯ ಡ್ರವರ್‌ನಲ್ಲಿದ್ದ 1)  DYBVAPOUR  350 PUFFS 5% CUCUMBER ICE ಎಂದು ಬರೆದ ಬಾಕ್ಸ್‌-1  ಇದರಲ್ಲಿ CUCUMBER ICE ಎಂದು ಬರೆದಿರುವ ಒಟ್ಟು 10 ಇ-ಸಿಗರೇಟ್‌  ಪೀಸ್ ಗಳು ,2) DYBVAPOUR 350 PUFFS 5% LYCHEE ICE ಎಂದು ಬರೆದ ಬಾಕ್ಸ್‌-2  ಇದರಲ್ಲಿ LYCHEE ICE ಎಂದು ಬರೆದಿರುವ ತಲಾ 10 ರಂತೆ ಒಟ್ಟು 20 ಇ-ಸಿಗರೇಟ್‌ ಪೀಸ್‌ ಗಳು, 3) DYBVAPOUR  350 PUFFS 5% BLUE MINT ಎಂದು ಬರೆದ ಬಾಕ್ಸ್‌-1  ಇದರಲ್ಲಿ BLUE MINT ಎಂದು ಬರೆದಿರುವ ಒಟ್ಟು 8  ಇ-ಸಿಗರೇಟ್‌ ಪೀಸ್‌ ಗಳು, 4) DYBVAPOUR  350 PUFFS 5% BLUE RAZZ  ಎಂದು ಬರೆದ ಅರ್ಧ ತೆರೆದ ಬಾಕ್ಸ್‌-1  ಇದರಲ್ಲಿ BLUE RAZZ  ಎಂದು ಬರೆದಿರುವ ಒಟ್ಟು 5 ,ಇ-ಸಿಗರೇಟ್‌  ಪೀಸ್ ಗಳು, 5) ICED STRAWBERRY  ಎಂದು ಬರೆದಿರುವ ಒಟ್ಟು 3 ಇ-ಸಿಗರೇಟ್‌ ಪೀಸ್ ಗಳು, 6) LUSH ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 7) PEACH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ , 8) LYCHEE ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ ಗಳು, 9) TANGERINE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 10) CUCUMBER ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 11) SOUR APPLE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ ಇದ್ದು, ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿರುವುದನ್ನು ವಶಪಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡ ವಿವಿಧ ಫ್ಲೇವರ್‌‌ನ  ಒಟ್ಟು 52  ನಿಷೇಧಿತ ಇ-ಸಿಗರೇಟ್‌ ಇದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು 26,000/ ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 19/2023 ಕಲಂ: 7,8 Prohibition of Electronic Cigarettes(Production,Manufacture, Import, Export,Transport,Sale, Distribution,Storage and Advertisement) Act 2019. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: ೦2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುರೇಂದ್ರ ಕಾಮಾಜೆ ಪ್ರಾಯ 65 ವರ್ಷ ತಂದೆ: ದಿ. ದೇರಣ್ಣ ಗಟ್ಟಿ ವಾಸ: ಕಾಮಾಜೆ ಮನೆ ಅಮ್ಟಾಡಿ ಗ್ರಾಮ ಬಂಟ್ವಾಳ ತಾಲೂಕು ರವರ ಬಾವನಾದ ಅಶೋಕ ಗಟ್ಟಿ ಪ್ರಾಯ 55 ವರ್ಷ ತಂದೆ: ದಿ ಜತ್ತಿ ಗಟ್ಟಿ ವಾಸ: ಚಿಕ್ಕಯ್ಯ ಮಠ ಗೂಡಿನಬಳಿ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ಇವರು ಮದುವೆಯಾಗದೇ ಒಬ್ಬಂಟಿಯಾಗಿದ್ದರು, ದಿನಾಂಕ 25-02-2023 ರಂದು ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರ ಶ್ರೀ ಶಂಕರನಾರಾಯಣ ದೇವಸ್ಥಾನದ ಸಭಾಭವನಕ್ಕೆ ನೆರೆಕೆರೆಯ ಕೊರಗಪ್ಪ ಮೂಲ್ಯ ಎಂಬುವರ ತಿಥಿ ಕಾರ್ಯಕ್ರಮಕ್ಕೆ ಪಿರ್ಯಾಧಿದಾರರ ಬಾವ ಬಂದಿದ್ದರು. ಮಧ್ಯಾಹ್ನ 02.00 ಗಂಟೆಗೆ ಸಮೀಪದಲ್ಲಿರುವ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಪಿರ್ಯಾಧಿದಾರರ ಬಾವ ನದಿಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಮುಳುಗಿ ಆಳವಾದ ನೀರಿನಲ್ಲಿ ಈಜು ಬಾರದೇ ಇದ್ದುದರಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 09-2023 ಕಲಂ: 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಶಿಕಾಂತ್‌  (23) ತಂದೆ: ಅರ್ಮುಗಂ, ವಾಸ:  ಮಂಜುನಗರ ಮನೆ, ನಾರಾವಿ  ಗ್ರಾಮ  ಬೆಳ್ತಂಗಡಿ  ತಾಲೂಕು ರವರ ತಂದೆ ಅರ್ಮುಗಂ ಎಂಬವರು  ಒಬ್ಬಂಟಿಯಾಗಿ   ಬೆಳ್ತಂಗಡಿ  ತಾಲೂಕು  ನಾರಾವಿ  ಗ್ರಾಮದ  ಮಂಜುನಗರ  ಎಂಬಲ್ಲಿ  ವಾಸವಾಗಿದ್ದುಕೊಂಡು   ದಿನಾಂಕ:  24-02-2023 ರಂದು  ರಾತ್ರಿ  ಸುಮಾರು  8:30  ಗಂಟೆಗೆ   ಪಿರ್ಯಾದಿದಾರರ  ತಂದೆ ತನ್ನ  ಯಾವುದೋ  ವೈಯಕ್ತಿಕ  ಕಾರಣಗಳಿಂದ ಮನನೊಂದು  ಅಮಲು ಪದಾರ್ಥದೊಂದಿಗೆ   ಇಲಿ ಪಾಶಾನ  ವನ್ನು  ಬೆರೆಸಿ  ಸೇವಿಸಿ    ಅಸ್ವಸ್ಥರಾದವರನ್ನು  ನೆರೆಯ  ಬಾಬು  ಮೇಸ್ತ್ರೀ  ರವರು   ಉಪಚರಿಸಿ  ಬೆಳ್ತಂಗಡಿ  ಸರಕಾರಿ ಆಸ್ಪತ್ರೆಗೆ  ದಾಖಲಿಸಿದ್ದು  ತಕ್ಷೀರಿನ  ವಿಚಾರ ತಿಳಿದು  ಬಂದ  ಪಿರ್ಯಾದಿದಾರರರು  ಹೆಚ್ಚಿನ  ಚಿಕಿತ್ಸೆಯ  ಬಗ್ಗೆ  ಮಂಗಳೂರು  ವೆನ್‌ ಲಾಕ್‌ ಆಸ್ಪತ್ರೆಗೆ   ದಾಖಲಿಸಿದ್ದು  ಚಿಕಿತ್ಸೆಯ  ಫಲಕಾರಿಯಾಗದೇ  ಪಿರ್ಯಾದಿದಾರರ ತಂದೆ ಅರ್ಮುಗಂ ದಿನಾಂಕ:  25-02-2023  ಬೆಳಿಗ್ಗೆ  07:30  ಗಂಟೆಗೆ  ಮೃತಪಟ್ಟಿರುವುದಾಗಿದೆ . ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 08-2023 ಕಲಂ:174 ಸಿ ಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-02-2023 11:44 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080