Feedback / Suggestions

ಅಪಘಾತ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಫಿರ್ಯಾದಿದಾರರಾದ ಜೀವನ್ ಯು.ಎನ್ ಪ್ರಾಯ 25 ವರ್ಷ ತಂದೆ: ನಾರಾಯಣ ನಾಯ್ಕ್ ವಾಸ: ಉಪ್ಪಳಿಗೆ ಮನೆ, ಇರ್ದೆ ಗ್ರಾಮ ಪುತ್ತೂರು ತಾಲೂಕು  ರವರು ಹೊಸದಿಗಂತ ಪತ್ರಿಕಾ ವರದಿಗಾರರಾಗಿದ್ದು ದಿನಾಂಕ 24.04.2021 ರಂದು ಇರ್ದೆ ಗ್ರಾಮದ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದ ಕಳವು ಪ್ರಕರಣದ ವರದಿ ಮಾಡುವ ಬಗ್ಗೆ ಹೋಗಿ ವಾಪಾಸು ಮನೆಗೆ ಹೋಗಲು ಇರ್ದೆ ಗ್ರಾಮದ ಬೈಲಾಡಿ ವಿಷ್ಣುಮೂರ್ತಿ ದ್ವಾರದ ಬಳಿ ನಿಂತುಕೊಂಡಿರುವ ಸಮಯ ಸಂಟ್ಯಾರ್ ಕಡೆಯಿಂದ ಬೆಟ್ಟಂಪಾಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-21-ವೈ-5680 ನೇದನ್ನು ಅದರ ಸವಾರ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ರಸ್ತೆಯಲ್ಲಿ ಬಲಬದಿಗೆ ಚಲಾಯಿಸಿ ಬೆಟ್ಟಂಪಾಡಿ ಕಡೆಯಿಂದ ಸಂಟ್ಯಾರ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-19-ಈಎನ್-7371 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ಮತ್ತು ಸಹ ಸವಾರರು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಕೂಡಲೇ ಹೋಗಿ ನೋಡಲಾಗಿ ಪರಿಚಯದ ಪ್ರಮೋದ್ ಪೂಜಾರಿ ಎಂಬವರಾಗಿದ್ದು, ಅವರ ತಲೆಯ ಹಿಂಭಾಗ, ಬಲ ಕೈಗೆ, ಬಲಕಾಲ ಪಾದಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅಪಘಾತ ಉಂಟು ಮಾಡಿದ ಮೋಟಾರ್ ಸೈಕಲ್ ಸವಾರ ಮಂಜುನಾಥ್ ಎಂದು ತಿಳಿದು ಬಂದಿದ್ದು, ಸದ್ರಿಯವರಿಗೆ ಗುದ್ದಿದ ಗಾಯವಾಗಿದ್ದು, ಸಹಸವಾರರಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳನ್ನು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಮಂಜುನಾಥ್‌ರವರನ್ನು ಒಳರೋಗಿಯಾಗಿ ದಾಖಲಿಸಿದ್ದು, ಪ್ರಮೋದ್ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ  ಆ.ಕ್ರ 33/21 ಕಲಂ: 279,337  ಐ.ಪಿ.ಸಿ .ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ    ಗಂಗಾಧರ ಪ್ರಾಯ 45 ವರ್ಷ ತಂದೆ ಲೇ ಲಿಂಗಪ್ಪ ಪೂಜಾರಿ ಪಾದೆ ಮನೆ ಸಜಿಪನಡು ಗ್ರಾಮ ರವರ ಮಗಳು ಧನ್ಯಶ್ರೀ ಪ್ರಾಯ 9 ವರ್ಷ ಎಂಬವಳು ದಿನಾಂಕ 25.4.2021 ರಂದು ಮಧ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದು  ಸಾಯಾಂಕಾಲ 4.30 ಗಂಟೆಗೆ  ಪಿರ್ಯಾದುದಾರರ ಮಗಳು ಕಾಣದೇ  ಇದ್ದು ಪಿರ್ಯಾದುದಾರರು ಮತ್ತು ಮನೆಯವರೆಲ್ಲರು ಹುಡುಕಾಡಿದಲ್ಲಿ ಮನೆ ಬದಿಯ ಜಯರಾಮ ಶೆಟ್ಟಿ ರವರ ಬಾವಿ ಪಕ್ಕ ಚಪ್ಪಲಿ ಕಾಣಿಸಿದ್ದು  ಆ ಸಮಯ ಪಿರ್ಯಾದುದಾರರು ಮತ್ತು ಅವರ ಅಣ್ಣ ಮೋನಪ್ಪ ಹಾಗು ಇತರರ ಸಹಾಯದಿಂದ  ಬಾವಿಗೆ ಇಳಿದು ಬಾವಿಯಿಂದ ಮಗುವನ್ನು ಎತ್ತಿ  ಒಂದು ವಾಹನದಲ್ಲಿ ಬಿಸಿ ರೋಡ್ ಸೋಮಾಯಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು  ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸಂಜೆ 5.30 ಗಂಟೆಗೆ ವೈದ್ಯರು ಪರೀಕ್ಷಿಸಿ  ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ .ಪಿರ್ಯಾದುದಾರರ ಮಗಳು ಯಾವಾಗಲೂ ಅಂಗಳದಲ್ಲಿ ಆಟವಾಡುತ್ತಿದ್ದು ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 19/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 26-04-2021 11:24 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080