ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಫಿರ್ಯಾದಿದಾರರಾದ ಜೀವನ್ ಯು.ಎನ್ ಪ್ರಾಯ 25 ವರ್ಷ ತಂದೆ: ನಾರಾಯಣ ನಾಯ್ಕ್ ವಾಸ: ಉಪ್ಪಳಿಗೆ ಮನೆ, ಇರ್ದೆ ಗ್ರಾಮ ಪುತ್ತೂರು ತಾಲೂಕು  ರವರು ಹೊಸದಿಗಂತ ಪತ್ರಿಕಾ ವರದಿಗಾರರಾಗಿದ್ದು ದಿನಾಂಕ 24.04.2021 ರಂದು ಇರ್ದೆ ಗ್ರಾಮದ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದ ಕಳವು ಪ್ರಕರಣದ ವರದಿ ಮಾಡುವ ಬಗ್ಗೆ ಹೋಗಿ ವಾಪಾಸು ಮನೆಗೆ ಹೋಗಲು ಇರ್ದೆ ಗ್ರಾಮದ ಬೈಲಾಡಿ ವಿಷ್ಣುಮೂರ್ತಿ ದ್ವಾರದ ಬಳಿ ನಿಂತುಕೊಂಡಿರುವ ಸಮಯ ಸಂಟ್ಯಾರ್ ಕಡೆಯಿಂದ ಬೆಟ್ಟಂಪಾಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-21-ವೈ-5680 ನೇದನ್ನು ಅದರ ಸವಾರ ಸಹ ಸವಾರರನ್ನು ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ರಸ್ತೆಯಲ್ಲಿ ಬಲಬದಿಗೆ ಚಲಾಯಿಸಿ ಬೆಟ್ಟಂಪಾಡಿ ಕಡೆಯಿಂದ ಸಂಟ್ಯಾರ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-19-ಈಎನ್-7371 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್ ಸವಾರರು ಮತ್ತು ಸಹ ಸವಾರರು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಕೂಡಲೇ ಹೋಗಿ ನೋಡಲಾಗಿ ಪರಿಚಯದ ಪ್ರಮೋದ್ ಪೂಜಾರಿ ಎಂಬವರಾಗಿದ್ದು, ಅವರ ತಲೆಯ ಹಿಂಭಾಗ, ಬಲ ಕೈಗೆ, ಬಲಕಾಲ ಪಾದಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅಪಘಾತ ಉಂಟು ಮಾಡಿದ ಮೋಟಾರ್ ಸೈಕಲ್ ಸವಾರ ಮಂಜುನಾಥ್ ಎಂದು ತಿಳಿದು ಬಂದಿದ್ದು, ಸದ್ರಿಯವರಿಗೆ ಗುದ್ದಿದ ಗಾಯವಾಗಿದ್ದು, ಸಹಸವಾರರಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳನ್ನು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ ಮಂಜುನಾಥ್‌ರವರನ್ನು ಒಳರೋಗಿಯಾಗಿ ದಾಖಲಿಸಿದ್ದು, ಪ್ರಮೋದ್ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ  ಆ.ಕ್ರ 33/21 ಕಲಂ: 279,337  ಐ.ಪಿ.ಸಿ .ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ    ಗಂಗಾಧರ ಪ್ರಾಯ 45 ವರ್ಷ ತಂದೆ ಲೇ ಲಿಂಗಪ್ಪ ಪೂಜಾರಿ ಪಾದೆ ಮನೆ ಸಜಿಪನಡು ಗ್ರಾಮ ರವರ ಮಗಳು ಧನ್ಯಶ್ರೀ ಪ್ರಾಯ 9 ವರ್ಷ ಎಂಬವಳು ದಿನಾಂಕ 25.4.2021 ರಂದು ಮಧ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದು  ಸಾಯಾಂಕಾಲ 4.30 ಗಂಟೆಗೆ  ಪಿರ್ಯಾದುದಾರರ ಮಗಳು ಕಾಣದೇ  ಇದ್ದು ಪಿರ್ಯಾದುದಾರರು ಮತ್ತು ಮನೆಯವರೆಲ್ಲರು ಹುಡುಕಾಡಿದಲ್ಲಿ ಮನೆ ಬದಿಯ ಜಯರಾಮ ಶೆಟ್ಟಿ ರವರ ಬಾವಿ ಪಕ್ಕ ಚಪ್ಪಲಿ ಕಾಣಿಸಿದ್ದು  ಆ ಸಮಯ ಪಿರ್ಯಾದುದಾರರು ಮತ್ತು ಅವರ ಅಣ್ಣ ಮೋನಪ್ಪ ಹಾಗು ಇತರರ ಸಹಾಯದಿಂದ  ಬಾವಿಗೆ ಇಳಿದು ಬಾವಿಯಿಂದ ಮಗುವನ್ನು ಎತ್ತಿ  ಒಂದು ವಾಹನದಲ್ಲಿ ಬಿಸಿ ರೋಡ್ ಸೋಮಾಯಾಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು  ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸಂಜೆ 5.30 ಗಂಟೆಗೆ ವೈದ್ಯರು ಪರೀಕ್ಷಿಸಿ  ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ .ಪಿರ್ಯಾದುದಾರರ ಮಗಳು ಯಾವಾಗಲೂ ಅಂಗಳದಲ್ಲಿ ಆಟವಾಡುತ್ತಿದ್ದು ಆಟವಾಡುತ್ತಾ ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 19/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-04-2021 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080