ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅನಿತಾ, ಪ್ರಾಯ: 38 ವರ್ಷ, ಗಂಡ; ಕುಂಜು ವಾಸ: ಟೋಲ್ಗೇಟ್ ಬಳಿ ಮನೆ,        ಚಂಪಕ ನಗರ ಗ್ರಾಮ, ಸಕಲೇಶಪುರ ಎಂಬವರ ದೂರಿನಂತೆ ಪಿರ್ಯಾದುದಾರರು ಹಾಗೂ ಅತ್ತೆ, ಪಾಪಾತಿಯಮ್ಮಹಾಗೂ ನಾದಿನಿ ಸುಮಿತ್ರರವರೊಂದಿಗೆ ಪಿರ್ಯಾದುದಾರರ ಮಗಳಿಗೆ ಮಂಗಳೂರಿನ ಶಾಲೆಯಲ್ಲಿ ಸೇರಿಸುವ ಸಲುವಾಗಿ ಶಾಲೆಯಲ್ಲಿ ಕೇಳಿಕೊಂಡು ಬರುವುದಕ್ಕಾಗಿ ದಿನಾಂಕ: 21-04-2022 ರಂದು ಬೆಳಿಗೆ 06.30 ಗಂಟೆಗೆ ಸಕಲೇಶಪುರದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಂಬ್ರ: ಕೆ.ಎ.18-ಎಫ್-1051 ನೇದರಲ್ಲಿ ಹತ್ತಿ ಮಂಗಳೂರಿಗೆ ಬರುತ್ತಾ ಮುಂದೆ ಸೀಟು ಇಲ್ಲದೆ ಇದ್ದುದರಿಂದ ಹಿಂಬದಿ ಸೀಟಿನಲ್ಲಿ ಕುಳಿತು ಬರುತ್ತಾ ಬೆಳಿಗ್ಗೆ ಸುಮಾರು 08.00 ಗಂಟೆಯ ಸಮಯಕ್ಕೆ ಕಡಬ ತಾಲೂಕು, ನೆಲ್ಯಾಡಿ ಗ್ರಾಮದ ನೆಲ್ಯಾಡಿ ಬಳಿ ತಲುಪುತ್ತಿದ್ದಂತೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾಧಿದಾರರ ಅತ್ತೆ ಬಸ್ಸಿನ ಸೀಟಿನಿಂದ ಕೆಳಗೆ ಬಿದ್ದ ಪರಿಣಾಮ ಸೊಂಟಕ್ಕೆ ನೋವು ಉಂಟಾಗಿದ್ದು, ನೆಲ್ಯಾಡಿಯಲ್ಲಿ ಇಳಿದು ಅಶ್ವಿನಿ ಆಸ್ಪತ್ರೆಗೆ ತೋರಿಸಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ವಾಪಾಸು ಊರಿಗೆ ಹೋಗಿದ್ದು ಫಿರ್ಯಾಧಿದಾರರ ಅತ್ತೆಗೆ ವಿಪರೀತ ನೋವು ಕಾಣಿಸಿಕೊಂಡಿದ್ದು, ದಿನಾಂಕ: 22-04-2022 ರಂದು ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 51/2022 ಕಲಂ:279.337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಸತ್ತಾರ್ (26 ವರ್ಷ) ತಂದೆ: ಅಬ್ದುಲ್ ಹಮೀದ್, ವಾಸ: ದೋಳೊಂತ್ತೋಡಿ ಮನೆ ಮಾಡ್ನೂರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಮಹಮ್ಮದ್ ಸತ್ತಾರ್ (26 ವರ್ಷ) ತಂದೆ: ಅಬ್ದುಲ್ ಹಮೀದ್ , ವಾಸ: ದೋಳೊಂತ್ತೋಡಿ ಮನೆ ಮಾಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರು ದಿನಾಂಕ 25.04.2022 ರಂದು ಬೆಳಿಗ್ಗೆ ಸುಳ್ಯದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿ ವಾಪಸು ಪುತ್ತೂರಿನಲ್ಲಿ ಕೆಲಸ ನಿಮಿತ್ತ ಸುಳ್ಯದಿಂದ ಸುಮಾರು  08.15 ಗಂಟೆಗೆ ಬಸ್ಸಿನಲ್ಲಿ ಬಂದಾಗ  ಬಸ್ಸಿನಲ್ಲಿ ಎಡ ಬದಿ ಇಬ್ಬರು ಪ್ರಯಾಣಿಕರು ಕುಳಿತುಕೊಳ್ಳುವ ಸೀಟಿನಲ್ಲಿ ಒಬ್ಬಳು ಯುವತಿ ಕುಳಿತಿದ್ದು , ಪಿರ್ಯಾದಿದಾರರು ಆ ಯುವತಿಯ ಪಕ್ಕದಲ್ಲಿ ಕುಳಿತಿದ್ದು  , ಬಸ್ಸು ಕನಕಮಜಲು ತಲುಪುತ್ತಿದ್ದಂತೆ , ಆ ಯುವತಿಯು ಬಸ್ ನ ಕಂಡಕ್ಟರ್  ಮತ್ತು ಇಬ್ಬರು ಯುವಕರಲ್ಲಿ ಪಿರ್ಯಾದಿದಾರರು ತೊಂದರೆ ನೀಡಿರುವುದಾಗಿ ತಿಳಿಸಿದ್ದು , ನಂತರ ಪಿರ್ಯಾದಿದಾರರು ಸೀಟಿನಿಂದ ಎದ್ದು ನಿಂತುಕೊಂಡಿರುತ್ತಾರೆ. ನಂತರ ಬಸ್ಸ್ 09.15 ಗಂಟೆಗೆ ಪುತ್ತೂರು ಬಸ್ಸು ನಿಲ್ದಾಣಕ್ಕೆ  ಬಂದು ಪಿರ್ಯಾದಿದಾರರು ಬಸ್ಸಿನಿಂದ ಇಳಿದ ಕೂಡಲೇ ನಾಲ್ಕು ಜನ ಅಪರಿಚಿತ ವಿದ್ಯಾರ್ಥಿಗಳು ಪಿರ್ಯಾದಿದಾರರ ಬಳಿಗೆ ಬಂದು ನೀನು ಹುಡುಗಿಗೆ ಯಾಕೆ ತೊಂದರೆ ಕೊಟ್ಟಿದ್ದಿ ಎಂದು ಕೇಳಿದ್ದು , ಸಮಯ ಇತರ ಸಾರ್ವಜನಿಕರು ಅಲ್ಲಿ ಸೇರಿ ಪಿರ್ಯಾದಿದಾರರಿಗೆ ಕೈ ಕಾಲಿನಿಂದ ತಲೆಗೆ ಮುಖಕ್ಕೆ ಹೊಡೆದು ದೂಡಿ ಹಾಕಿರುತ್ತಾರೆ. ಪಿರ್ಯಾದಿದಾರರು  ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಅರೋಪಿಸಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕೈಯಿಂದ ಹಲ್ಲೆ ನಡೆಸಿ ದೂಡಿ ಹಾಕಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ:     23/2022 ಕಲಂ : 143,147,341,323,149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 25.04.2022 ರಂದು ಬೆಳಿಗ್ಗೆ ಪಿರ್ಯಾದಿ ಸಂತ್ರಸ್ಥ ಯುವತಿಯು ಸುಳ್ಯದಿಂದ  ಪುತ್ತೂರು ಕಡೆಗೆ ಬರುವ ಬಸ್ಸಿನಲ್ಲಿ ಬೆಳಿಗ್ಗೆ ಬಂದಿದ್ದು,  ಸುಳ್ಯದಿಂದ ಬಸ್ಸು ಹೊರಟುವ ಸಮಯದಲ್ಲಿ ಒಬ್ಬ ಯುವಕನು ಬಸ್ಸಿಗೆ ಹತ್ತಿ ಪಿರ್ಯಾದಿದಾರರು ಕುಳಿತ ಸೀಟಿನ ಬಲಬದಿಯಲ್ಲಿ ಕುಳಿತು ಪಿರ್ಯಾದಿದಾರರ ಜೊತೆಗೆ ಅನುಚಿತವಾಗಿ ವರ್ತಿಸಿ ದೈಹಿಕ ಕಿರುಕುಳ ನೀಡಿರುವುದಾಗಿದೆ. ಈ ಬಗ್ಗೆ ಸಂತ್ರಸ್ಥ ಯುವತಿ ಬಸ್ಸಿನ ಕಂಡೆಕ್ಟರಲ್ಲಿ ತಿಳಿಸಿದಾಗ ಆತನಲ್ಲಿ ವಿಚಾರಿಸಿ ಆತನನ್ನು ಅಲ್ಲಿಂದ ಎಬ್ಬಿಸಿ ಬೇರೆ ಸೀಟಿನಲ್ಲಿ ಕುಳ್ಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 354(ಎ) ಐಪಿಸಿ  .ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-04-2022 04:47 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080