ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦3

ಪುಂಜಾಲಕಟ್ಟೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಾಜೇಶ್ ಕೆ ಪ್ರಾಯ 29 ವರ್ಷ, ತಂದೆ: ನಾರಾಯಣ ಪೂಜಾರಿ ವಾಸ: ಕೆಳಗಿನಬೆಟ್ಟು ಮನೆ, ನ್ಯಾಯತರ್ಪು ಗ್ರಾಮ ನಾಳ ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 24-06-2022 ರಂದು ರಾತ್ರಿ ಕೆಲಸ ಮುಗಿಸಿ ಲೊರೆಟ್ಟೋಪದವಿನಿಂದ ತನ್ನ ಬಾಬ್ತು  ಸ್ಕೂಟರ್  ನಂಬ್ರ KA70E8402ನೇದರಲ್ಲಿ ತನ್ನ ತಂದೆಯನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ  ರಾತ್ರಿ ಸುಮಾರು 10.45 ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು ತಿರುವು ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಬಂಟ್ವಾಳ ಕಡೆಗೆ KA21W9348ನೇದರ ಸ್ಕೂಟರ್ ಸವಾರ ನವಾಜ್ ಎಂಬತನು ತನ್ನ ಸ್ಕೂಟರನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರು  ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರು ಅವರ ತಂದೆ ಹಾಗೂ ಡಿಕ್ಕಿ ಹೊಡೆಸಿದ ಸ್ಕೂಟರ್ ಸವಾರ ನವಾಜ್  ಸ್ಕೂಟರ್ ಸಮೇತಾ ಡಾಮರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕೈ ಬಳಿ,  ಬಲ ಸೊಂಟದ ಬಳಿ ಗುದ್ದಿದ ಹಾಗೂ ತರಚಿದ ಗಾಯ  ಪಿರ್ಯಾದಿದಾರರ  ತಂದೆಗೆ ಬಲ ಕಾಲಿಗೆ, ಕಣ್ಣಿನ ಬಳಿ ತರಚಿದ ಗಾಯವಾಗಿದ್ದು, ಸ್ಕೂಟರ್ ಸವಾರನಿಗೆ ತಲೆಗೆ ರಕ್ತ ಗಾಯವಾಗಿರುತ್ತದೆ ಬಳಿಕ  ಅಲ್ಲಿ ಸೇರಿದ್ದ ಜನರು ಗಾಯಾಳುಗಳನ್ನು ಎತ್ತಿ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ  ವಾಹನವೊಂದರಲ್ಲಿ ಕಳುಹಿಸಿಕೊಟ್ಟಿದ್ದು, ಚಿಕಿತ್ಸೆಯ ಬಗ್ಗೆ ಬಂಟ್ವಾಳ ತಾಲೂಕು  ಸರಕಾರಿ ಆಸ್ಪತ್ರೆಗೆ ಹೋದಲ್ಲಿ ಪರೀಕ್ಷಿಸಿದ ವೈದ್ಯರು  ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿಯ ತಂದೆಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ,  ಸ್ಕೂಟರ್ ಸವಾರ ನವಾಜ್ ನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಂಗಳೂರಿಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 41/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀಮತಿ ಶಿವಕ್ಕ @ ದೇವಮ್ಮ ಪ್ರಾಯ 55 ವರ್ಷ ಗಂಡ:ತಿರುಕಪ್ಪ ವಾಸ:ಅಂಬೇಡ್ಕರ್‌ ನಿವಾಸ, ರಣತೂರು ಗ್ರಾಮ ಶಿರಹಟ್ಟಿ ತಾಲೂಕು ಗದಗ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ:24-06-2022 ರಂದು ತನ್ನ ಸಂಬಂದಿ ರೇಣುಕಾರವರೊಂದಿಗೆ ನೇರಳಕಟ್ಟೆಗೆ ಹೋಗಿ ಗುಜರಿ ಆಯ್ದ ನಂತರ ಕೆಎ-21-ಎ-9458ನೇ ಟಾಟಾ ಸುಪರ್‌ ಎಸಿಇ ವಾಹನದಲ್ಲಿ ಗುಜರಿಯನ್ನು ತುಂಬಿಸಿ ಸದ್ರಿ ವಾಹನದ ಚಾಲಕನ ಎಡಪಕ್ಕದಲ್ಲಿ ಪಿರ್ಯಾಧಿ ಮತ್ತು ರೇಣುಕಾರವರು ಕುಳಿತುಕೊಂಡು ಸದ್ರಿ ವಾಹನವನ್ನು ಚಾಲಕ ಅನ್ಸಿದ್‌ ಚಲಾಯಿಸಿಕೊಂಡು ನೇರಳಕಟ್ಟೆಯಿಂದ ಕಬಕ ಕಡೆಗೆ ಹೊರಟು ಮದ್ಯಾಹ್ನ 2.30 ಗಂಟೆಗೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ತಲುಪಿದಾಗ ಚಾಲಕ ಟಾಟಾ ಸುಪರ್‌ ಎಸಿಇ ವಾಹನವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್‌ ಹಾಕಿ ಅಪಘಾತ ಉಂಟು ಮಾಡಿದ ಪರಿಣಾಮ ಪಿರ್ಯಾಧಿಯ ತಲೆಯು ಡ್ಯಾಶ್‌ಬೋರ್ಡನ ಮತ್ತು ಎಡಬಾಗದ ಡೋರ್‌ಗೆ ಬಲವಾಗಿ ತಾಗಿದ ಪರಿಣಾಮ ಮುಖಕ್ಕೆ ಗುದ್ದಿದ ರೀತಿಯ ಗಾಯ , ಕಣ್ಣುಗಳ ಪಕ್ಕ ಊದಿದ ಗಾಯ ಮತ್ತು ಬಲ ಮೊಣಕಾಲಿಗೆ ಗುದ್ದಿದ ಗಾಯವಾಗಿರುತ್ತದೆ. ರೇಣುಕಾರವರಿಗೆ ಕೈ,ಕಾಲು, ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ನಂತರ ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಗಾಯಾಳುಗಳನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 104/2022  ಕಲಂ:279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೇಯಸ್‌  ಶೆಟ್ಟಿ   (28), ತಂದೆ: ಸತೀಶ್‌ ಶೆಟ್ಟಿ ವಾಸ: ಅನೆಮಹಲ್‌ ಮನೆ, ಬಡಗಕಾರಂದೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 24.06.2022 ರಂದು ರಾತ್ರಿ  ಸುಮಾರು 10:30  ಗಂಟೆಗೆ  ಬೆಳ್ತಂಗಡಿ  ತಾಲೂಕು  ಬಡಗಕಾರಂದೂರು   ಗ್ರಾಮದ  ಅಳದಂಗಡಿ  ಬಿ ಎಸ್ ಎನ್ ಎಲ್ ಕಛೇರಿಯ ತಿರುವು   ರಸ್ತೆಯ  ಬಳಿ    ನಾರಾವಿ-   ಗುರುವಾಯನಕರೆರೆ ಸಾರ್ವಜನಿಕ  ರಸ್ತೆಯಲ್ಲಿ  ಕಾರು  ನಂ  KA  20 Z 9818   ನೇದನ್ನು   ಅದರ  ಚಾಲಕ ಅದರ  ನಾರಾವಿ  ಕಡೆಯಿಂದ ದುಡುಕುತನ  ಹಾಗೂ   ನಿರ್ಲಕ್ಷತನದಿಂದ   ಬಸ್ಸನ್ನು  ಓವರ್  ಟೇಕ್ ಮಾಡಲು  ಒಮ್ಮಲೇ  ರಸ್ತೆಯ  ಬಲ  ಬದಿಗೆ  ಚಲಾಯಿಸಿ  ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ    ಬೈಕ್  ನಂಬ್ರ  KA 21 K 1954 ನೇ  ದಕ್ಕೆ  ರಭಸದಿಂದ  ಡಿಕ್ಕಿ ಹೊಡೆದ  ಪರಿಣಾಮ ವಾಹನಗಳ  ಜಖಂಗೊಂಡು  ಬೈಕ್  ಸವಾರ  ಬೈಕ್ ನೊಂದಿಗೆ  ರಸ್ತೆಗೆ ಬಿದ್ದು  ಬಲ  ಕಾಲಿಗೆ, ಮೈಕೈಗೆ ಗುದ್ದಿದ ಹಾಗೂ  ತರಚಿದ ರಕ್ತ ಗಾಯಗಳಾಗಿ   ಬೆಳ್ತಂಗಡಿ   ಸರಕಾರಿ ಆಸ್ಪತ್ರೆಯಲ್ಲಿ  ಪ್ರಥಮ  ಚಿಕಿತ್ಸೆ   ಪಡೆದು   ಹೆಚ್ಚಿನ  ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 39-2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: ೦2

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೋಕೇಶ ಸಿ.ಹೆಚ್‌ ಪ್ರಾಯ:43 ವರ್ಷ ತಂದೆ: ದೂಮಣ್ಣ ಗೌಡ.ವಾಸ:ಚಾಕೆತ್ತಡಿ ಮನೆ,ಕನ್ಯಾನ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಮ್ಮ ದಿನೇಶ ಪ್ರಾಯ 37 ವರ್ಷ ಎಂಬವರು ವಿಪರೀತ ಮಧ್ಯ ಸೇವನೆ ಮಾಡಿಕೊಂಡಿದ್ದವನು ಹೃದಯ ಮತ್ತು ಮೂತ್ರ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದವನು ವೈದ್ಯರಿಂದ ಮದ್ದು ಮಾಡುತ್ತಿದ್ದು. ದಿನೇಶನು ಆರೋಗ್ಯದ ವಿಚಾರವಾಗಿ ಬೇಸರದಿಂದ ಇದ್ದವನು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:24.06.2022 ರಂದು ರಾತ್ರಿ 10.30 ಗಂಟೆಯಿಂದ  ದಿನಾಂಕ:25.06.2022 ರಂದು ಬೆಳಿಗ್ಗೆ 7.00 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಚಾಕೆತ್ತಡಿ ಎಂಬಲ್ಲಿರುವ ಮನೆಯ ಬಚ್ಚಲು ಕೋಣೆಯ ಪಕ್ಕಾಸಿಗೆ ನೈಲಾನ್‌ ಹಗ್ಗವನ್ನು ಬಿಗಿದು ಅದರ ಒಂದು ತುದಿಯನ್ನು ಕುತ್ತಿಗೆಗೆ ನೇಣು ಕುಣಿಕೆಯನ್ನಾಗಿಸಿ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 24/2022  ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಚಂದ್ರವತಿ . ಪ್ರಾಯ:55 ವರ್ಷ, ಗಂಡ: ಗಣಪತಿ ಆಚಾರಿ. ಕಾಜರಕುಕ್ಕ ಮನೆ ರಾಮಕುಂಜ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ   ಪಿರ್ಯಾದಿದಾರರ ತಂಗಿಯಾದ ವಸಂತಿರವರು  ಪಿರ್ಯಾದಿದಾರರ ಮನೆಗೆ ಬಂದು ಮನೆಯಲ್ಲಿಯೆ ಇದ್ದು ಒಂದು ತಿಂಗಳ ಹಿಂದೆ ವಸಂತಿಗೆ ಹೃದಯ ಸಂಬಂಧಿ ಕಾಯಿಲೆ ಉಂಟಾಗಿದ್ದು ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪಿರ್ಯಾದಿದಾರರು ಅವರ ಮನೆಗೆ ಕರೆದುಕೊಂಡು ಹೋಗಿದ್ದು ನಂತರ ಗುಣಮುಖರಾಗಿ ಮನೆಯಲ್ಲಿ ಇದ್ದವರು ದಿನಾಂಕ:24-06-2022 ರಂದು ಸಮಯ  ರಾತ್ರಿ ಸುಮಾರು 08.00 ಗಂಟೆಗೆ ಮನೆಯಲ್ಲಿ ಊಟ ಮಾಡುತ್ತಿರುವಾಗ ವಸಂತಿಯು ಒಮ್ಮೆಲೆ ವಾಂತಿ ಮಾಡಿ ಪಿರ್ಯಾದಿದಾರರ ಮೇಲೆ ಕುಸಿದು ಬಿದ್ದಳು ಆ ಸಮಯ ಅವಳಿಗೆ ಪ್ರಜ್ಞೆ ತಪ್ಪಿ ಮಾತನಾಡದೆ ಇದ್ದು ಕೂಡಲೇ ಪಿರ್ಯಾದಿದಾರರು ಮತ್ತು ಗಂಡ ಗಣಪತಿ ಹಾಗೂ ಮಗ ರಾಮಕೃಷ್ಣ ಎಂಬುವರು ಕೂಡಲೇ ಅಂಬುಲೆನ್ಸ್ ಗೆ ಕರೆಮಾಡಿ ಚಿಕಿತ್ಸೆ ಬಗ್ಗೆ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ  ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಅರ್ ನಂಬ್ರ 18/2022 ಕಲಂ:174  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-06-2022 08:50 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080