ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ದಿನಾಂಕ 24-07-2021 ರಂದು ಪಿರ್ಯಾದಿದಾರರಾದ ಫಾತಿಮಾ ಝಾಹಿರಾ (45) ಗಂಡ: ಎನ್.ಹೆಚ್.ಆದಂ ಫೈಝಿ ವಾಸ:ನೆಹರೂ ನಗರ ಮನೆ, ನರಿಕೊಂಬು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ತನ್ನ ತಾಯಿ ಮನೆಯಾದ ಫರಂಗಿಪೇಟೆಗೆ ಹೋಗುವರೇ ಪರಿಚಯದ ಮಹಮ್ಮದ್ ಮುಸ್ತಾಫರವರ ಬಾಬ್ತು  KA-70-2236 ನೇ ಆಟೋರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ಗಂಡ ಎನ್.ಹೆಚ್. ಆದಂ ಫೈಝಿ, ಮಗಳು ಭಿಫಾತಿಮಾ ಝಳ್ವಾ, ಮೊಮ್ಮಗ ಮಹಮ್ಮದ್ ಅಝಿಯಾನ ರವರೊಂದಿಗೆ ಹೋಗಿದ್ದು ಅಲ್ಲಿಂದ ವಾಪಾಸ್ಸು ತನ್ನ ಮನೆಯಾದ ನರಿಕೊಂಬುವಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಾ ಸಮಯ ಸುಮಾರು ಸಂಜೆ 4-30 ಗಂಟೆಗೆ  ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗೀಪೇಟೆ ಎಂಬಲ್ಲಿಗೆ ತಲುಪಿದಾಗ ಆಟೋರಿಕ್ಷಾ ಚಾಲಕ ಮಹಮ್ಮದ್ ಮುಸ್ತಾಫರವರು ಆಟೋರಿಕ್ಷಾವನ್ನು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಆಟೋರಿಕ್ಷಾವು ಸ್ಕಿಡ್ ಆಗಿ ಬಲಬದಿಗೆ ಮಗುಚಿ ಬಿದ್ದು ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರಿಗೆ ,ಪಿರ್ಯಾದಿದಾರರ ಗಂಡ ಎನ್.ಹೆಚ್.ಆದಂ ಫೈಝಿರವರಿಗೆ , ಮಗಳು ಭಿಫಾತಿಮಾ ಝಳ್ವಾರವರಿಗೆ ಹಾಗೂ ಮೊಮ್ಮಗ ಮಹಮ್ಮದ್ ಅಝಿಯಾನಾನಿಗೆ ಗಾಯಗಳಾಗಿದ್ದು. ಗಾಯಾಳುಗಳು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 66/2021  ಕಲಂ 279, 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ದಿನಾಂಕ 25-07-2021 ರಂದು 10-00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಶೇಖರ ಎಂಬವರು KA-21-EA-3524 ನೇ ನೋಂದಣಿ ನಂಬ್ರದ ಸ್ಕೂಟರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ  ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಕಾಂತಪ್ಪ ಗೌಡ, ಪ್ರಾಯ 40 ವರ್ಷ, ತಂದೆ: ಲಿಂಗಪ್ಪ ಗೌಡ, ವಾಸ:  ಅಡ್ಯಾಳ ಮನೆ, ಕುಳ ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-V-1904  ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಸ್ಕೂಟರ್‌ ಹಿಂದಿನಿಂದ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮಣಿಗಂಟಿಗೆ ಗುದ್ದಿದ ನೋವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  99/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ; 25-07-2021  ರಂದು ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣಾ  ಪೊಲೀಸು ಉಪ ನಿರೀಕ್ಷಕ ರವರು    ಠಾಣಾ  ವ್ಯಾಪ್ತಿಯಲ್ಲಿ  ಸಿಬ್ಬಂದಿಗಳೊಂದಿಗಳ ಜೊತೆಯಲ್ಲಿ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿ  ಬೆಂಜನಪದವು ಕಲಾಯಿ, ಅಮ್ಮುಂಜೆ    ಬಡಕಬೈಲ್,  ಬಡಗಬೆಳ್ಳೂರು  ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ  ಸಮಯ  ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು  ಕಂಬಳ ಗದ್ದೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ  ಜುಗಾರಿ ಆಟ ಆಡುತ್ತಿದ್ದಾರೆ ಎಂಬುವುದಾಗಿ ಬಡಗಬೆಳ್ಳೂರು ಜಂಕ್ಷನ್  ನಲ್ಲಿದ್ದ  ಸಮಯ ಖಚಿತ ಮಾಹಿತಿ ಬಂದಿದ್ದು  ಸದ್ರಿ ಸ್ಥಳಕ್ಕೆ ಧಾಳಿ ನಡೆಸಿ    ಬಡಗಬೆಳ್ಳುರು ಜಂಕ್ಷನ್ ನಲ್ಲಿದ್ದ  ಪಂಚರ ಸಮಾಕ್ಷಮದಲ್ಲಿ ಸಮಯ  ಮದ್ಯಾಹ್ನ 12.45 ಗಂಟೆಗೆ  ಬಡಗಬೆಳ್ಳೂರು ಕಂಬಳಗದ್ದೆ   ಬಾಬು ಮೂಲ್ಯರವರ  ಜಾಗದ   ಪಕ್ಕ  ಸಾರ್ವಜನಿಕ ಸ್ಥಳಕ್ಕೆ ದಾಳಿ  ನಡೆಸಿದಾಗ   ಕೆಲವರು ಗುಂಪು ಸೇರಿ ಒಬ್ಬನು ಹಳೆಯ ಪ್ಲಾಸ್ಟಿಕ್ ಕವರಿನ ಮೇಲೆ ಇಸ್ಫೀಟು ಎಲೆಗಳನ್ನು ಹಾಕುತ್ತಾ ಉಳಿದವರು ಸುತ್ತುವರಿದು ನಿಂತುಕೊಂಡು ಹಣವನ್ನು ಪಣವಾಗಿಟ್ಟು ಅದೃಷ್ಟದ ಜೂಜಾಟ ಆಡುತ್ತಿದ್ದವರನ್ನು  ಸುತ್ತುವರಿದು  4 ಜನರನ್ನು ಹಿಡಿದು  ಯಾವುದೇ ಪರವಾನಿಗೆ ಇರುವುದಿಲ್ಲವಾಗಿ ತಿಳಿಸಿದ್ದು  ಆರೋಪಿಗಳು ಸಾರ್ವಜನಿಕ   ಸ್ಥಳದಲ್ಲಿ  ಯಾವುದೇ ಪರವಾನಿಗೆ ಇಲ್ಲದೆ ಹಣವನ್ನು ಪಣವಾಗಿಟ್ಟುಕೊಂಡು  ಜೂಜಾಟ ಆಡುವುದು ಅಪರಾದವಾಗಿದ್ದುದರಿಂದ ಆಟಕ್ಕೆ ಬಳಸಿದ ಎಲ್ಲ ವಸ್ತುಗಳ ಅಂದಾಜು ಒಟ್ಟು ಮೌಲ್ಯ 2010/   ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   82-2021 ಕಲಂ 87 ಕೆ ಪಿ ಆಕ್ಟ್   ನಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-07-2021 01:58 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080