ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮನೋಹರ ಪ್ರಾಯ: 36 ವರ್ಷ, ತಂದೆ: ತ್ಯಾಂಪಣ್ಣ ಗೌಡ,ವಾಸ: ಜೋಗಿ ಮನೆ, ಬಳ್ಪ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 24-07-2022 ರಂದು ರಂದು ರಾತ್ರಿ 08.35 ಗಂಟೆ ಸಮಯಕ್ಕೆ ಪಿರ್ಯದಿರವರು ಅವರ ಮನೆಯಲ್ಲಿದ್ದ ಸಮಯ ನೆರೆ ಮನೆಯ ಪಿರ್ಯಾದಿದಾರರ ಚಿಕ್ಕಪ್ಪನ ಮಗನಾದ ಚಿತ್ತರಂಜನ್ ಎಂಬವರು ಪಿರ್ಯಾದಿದಾರರ ಮನೆಯ ಹತ್ತಿರ ಕತ್ತಲು ಇರುವ ಜಾಗದಲ್ಲಿ ನಿಂತುಕೊಂಡು ಕುಣಿಯುತ್ತಿದ್ದವನನ್ನು ಪಿರ್ಯದಿದಾರರ ಮಗನಾದ ರಿಷಂತ್(4) ನು ನೋಡಿ ಹೆದರಿದ್ದು, ಸದ್ರಿ ವಿಷಯವನ್ನು ಪಿರ್ಯಾದಿದಾರರು ಆರೋಪಿತ ಚಿತ್ತರಂಜನ್‌ ರವರಲ್ಲಿ ಪ್ರಶ್ನಿಸಿದಕ್ಕೆ ಆರೋಪಿತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಎಡ ಕೆನ್ನೆಗೆ ಹಲ್ಲೆ ಮಾಡಿ, ಇದನ್ನು ನೋಡಿ ಅಲ್ಲಿಗೆ ಬಂದ ತಂದೆ ತ್ಯಾಂಪಣ್ಣ ಹಾಗೂ ತಾಯಿ ಇಂದಿರಾವತಿಯವರು ಆಕ್ಷೇಫಣೆ ವ್ಯಕ್ತಪಡಿಸಿದಾಗ ಅವರಿಗೂ ಕೂಡಾ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಪಿರ್ಯಾದಿದಾರರು , ಅವರ ತಂದೆ ತ್ಯಾಂಪಣ್ಣ ಹಾಗೂ ತಾಯಿ ಇಂದಿರಾವತಿಯವರು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾನೆಯಲ್ಲಿ ಅ.ಕ್ರ ನಂಬ್ರ  : 75/2022 ಕಲಂ 341,504,323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಸುಮಾವತಿ ಗಂಡ: ದಿ ಜಯರಾಮ ರೈ, ಪುನರಡ್ಕ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಎದ್ರಿಯವರು ನೆರೆಕರೆಯವರಾಗಿದ್ದು, ಜಮೀನು ತಕರಾರು ವಿಚಾರದಲ್ಲಿ ವಿನಾಕಾರಣ ಪದೇ ಪದೇ ಜಗಳ ಮಾಡುತ್ತಿದ್ದು, ದಿನಾಂಕ 21.07.2022 ರಂದು ರಾತ್ರಿ 12:00 ಗಂಟೆಗೆ ಪಿರ್ಯಾದಿದಾರರು ಅವರ ಮಗನೊಂದಿಗೆ ಮನೆಯಲ್ಲಿ ನಿದ್ರಿಸುತ್ತಿರುವಾಗ ಮನೆಯ ಬಾಗಿಲನ್ನು ಒಡೆದ ಶಬ್ದವಾಗಿ ಎಚ್ಚರಗೊಂಡು  ನೋಡಿದಾಗ ಆರೋಪಿಗಳು ಕೈ ಯಲ್ಲಿ ಕತ್ತಿ ದೊಣ್ಣೆ ಮುಂತಾದ ಮಾರಕಾಯುಧಗಳನ್ನು ಹಿಡಿದು ಮನೆಯ ಬಾಗಿಲನ್ನು  ಕಾಲಿನಿಂದ ಬಲತ್ಕಾರವಾಗಿ ಒದ್ದು, ಮನೆಯ ಒಳಗೆ ಪ್ರವೇಶಿಸಿ ನಿಮ್ಮಿಬ್ಬರನ್ನು ಬದುಕಲು ಬಿಡುವುದಿಲ್ಲ ಇಲ್ಲಿಯೇ ಕಡಿದು ಕೊಲ್ಲುತ್ತೇವೆ ಎಂದಾಗ ಪಿರ್ಯಾದಿದಾರರು ಹಾಗೂ ಅವರ ಮಗ  ಮನೆಯ ಹಿಂಬಾಗಿಲಿನಿಂದ ಓಡಲು ಪ್ರಯತ್ನಿಸಿದಾಗ ಹಿಂಬಾಗಿಲಿನಲ್ಲಿ ಕೂಡ ಆರೋಪಿ ಪೈಕಿ ಕೆಲವರು ಇದ್ದು, ಮನೆಯಿಂದ ಹೊರ ಹೋಗಲು ಬಿಡದೇ ಇದ್ದು,  ಈ ಕೃತ್ಯದ ಬಗ್ಗೆ ಫೋನ್ ಮೂಲಕ ದೂರು ನೀಡಲು ಪ್ರಯತ್ನಿಸಿದಾಗ ಆರೋಪಿಗಳು ಪುನಃ ನಮ್ಮನ್ನು ಉದ್ದೇಶಿಸಿ ಈ ಬಗ್ಗೆ ನಮ್ಮ ವಿರುದ್ಧ ದೂರು ನೀಡಿದರೆ ನಿಮ್ಮನ್ನು ಜೀವಂತ ಬಿಡುವುದಿಲ್ಲ. ಇಲ್ಲಿಯೇ ಕೊಲೆ ಮಾಡುತ್ತೇವೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಠಾಣಾ ಅ.ಕ್ರ:61/2022 ಕಲಂ: 143,147, 148,447,448,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 25.07.2022 ರಂದು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಅ.ಕ್ರ  62/2022 U/s 377, 506 IPC and 8 Pocso Act 2012ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ದಿನಾಂಕ:24-07-2022 ರಂದು ಸಮಯ ಸುಮಾರು 16-30 ಗಂಟೆಗೆ  ಆಂಜನೇಯ ರೆಡ್ಡಿ ಜಿ.ವಿ ಪಿ.ಎಸ್.ಐ ಕಡಬ ಠಾಣೆರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನ ಕೊಯಿಲ ಎಂಬಲ್ಲಿ ಸರಕಾರಿ ಗುಡ್ಡೆಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಉಳಾಯಿ-ಪಿದಾಯಿ ಎಂಬ ಜೂಜಾಟವನ್ನು ಆಡುತ್ತಿರುವಾಗ ಧಾಳಿ ನಡೆಸಿದಾಗ ವೃತ್ತಾಕಾರದಲ್ಲಿ ಸುತ್ತುವರಿದು ಕುಳಿತುಕೊಂಡು ಇಸ್ಪೀಟು ಎಲೆಯನ್ನು ಬಳಸುತ್ತಾ ಹಣವನ್ನು ಪಣವಾಗಿಟ್ಟುಕೊಂಡು ಉಳಾಯಿ-ಪಿದಾಯಿ ಎಂದು ಜುಗಾರಿ ಆಟವನ್ನು ಆಡುತ್ತಿದ್ದ ಆರೋಪಿತರು ಓಡಲು ಯತ್ನಿಸಿದ್ದು ಅವರ ಪೈಕಿ ಮೂರು ಜನರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದಿದ್ದು ಉಳಿದ ನಾಲ್ಕು ಜನರು ಓಡಿ ತಪ್ಪಿಸಿಕೊಂಡಿರುತ್ತಾರೆ. ಆರೋಪಿತರು ಇಸ್ಪೀಟ್ ಆಟವಾಡಲು ಬಳಸಿದ 52 ಇಸ್ಪೀಟು ಎಲೆಗಳು ಹಾಗೂ ಆಟಕ್ಕೆ ಬಳಸಿದ್ದ ರೂ 2,400/- ರೂಪಾಯಿಯನ್ನು ಹಾಗೂ ನೆಲಕ್ಕೆ ಹಾಸಲು ಉಪಯೋಗಿಸಿದ ನೀಲಿ ಬಣ್ಣದ ಟಾರ್ಪಲ್ ಅಲ್ಲದೆ ಆರೋಪಿಗಳು ಬಂದ 5 ಮೊಟಾರ್ ಸೈಕಲ್‌ ಹಾಗೂ ಒಂದು ಆಟೋರಿಕ್ಷಾ ವಾಹನಗಳನ್ನು ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡು,ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 66/2022 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ-1963.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-07-2022 10:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080