ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪವನ್‌ರಾಜ್‌ ಎ, , ಪ್ರಾಯ 25 ವರ್ಷ, ತಂದೆ: ಯುವರಾಜ ಅನಾರು, ವಾಸ: ಕರಾಯ ಕೊಲ್ಲಿ ಮನೆ, ಕರಾಯ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 25-09-2022 ರಂದು 10:45 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಮೋನಪ್ಪ ಗೌಡ ಎಂಬವರು  KA-21-E-6029 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲ್‌ನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಉಪ್ಪಿನಂಗಡಿ  ಗ್ರಾಮದ ಕೂಟೇಲು ಬ್ರೀಡ್ಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ ವಳಾಲು ಕಡೆಯಿಂದ ಕರಾಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ kA-20-M-9805 ನೇ  ನೋಂದಣಿ ನಂಬ್ರದ ಓಮ್ನಿ ಕಾರಿಗೆ ಅಪಘಾತವಾಗಿ, ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌  ಸಮೇತ ರಸ್ತೆಗೆ ಬಿದ್ದು, ಅವರ ಮುಖಕ್ಕೆ ಹಣೆಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ ಒಂದರಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ  ಕಳುಹಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 148/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅರುಣ್ ಕುಮಾರ್ ಎಸ್ (21) ತಂದೆ: ಸೆಲ್ವಕುಮಾರ್ ವಾಸ: ಕೊಲೆಂಜಿಕೋಡಿ ಮನೆ, ದುಗ್ಗಲಡ್ಕ, ಸುಳ್ಯ ಕಸಬಾ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯದಲ್ಲಿರುವ ಪ್ಲೀಪ್ ಕಾರ್ಡ್ ಕಛೇರಿಯಲ್ಲಿ ಕೆಲಸಮಾಡಿಕೊಂಡಿದ್ದು, ದಿನಾಂಕ 25.09.2022 ರಂದು ತಮ್ಮ ಬಾಬ್ತು ಕೆಎ 21 ಇಬಿ 3459 ನೇ ಸ್ಕೂಟರ್ ನಲ್ಲಿ ಜಾಲ್ಸೂರು, ಕನಕಮಜಲು ಕಡೆಗಳಲ್ಲಿ ಡೆಲವರಿ ಐಟಂಗಳನ್ನು ಅರ್ಡರ್ ಮಾಡಿದರಿಗೆ ಕೊಡಲು ತೆರಳುತ್ತಿರುವರೇ, ಸಮಯ ಸುಮಾರು 10:30 ಗಂಟೆಗೆ ಸುಳ್ಯ ತಾಲೂಕು ಕನಕಮಜಲು ಗ್ರಾಮದ ಕನಕಮಜಲು ಜಂಕ್ಷನ್ ತಲುಪಿ ತನ್ನ ಬಲಬದಿಗೆ ಸ್ಕೂಟರ್ ತಿರುಗಿಸುತ್ತಿರುವರೇ, ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಕೆಎ 02 ಎಂಡಿ 4963 ನೇದರ ಕಾರು ಚಾಲಕ ಸಮೀರ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು,ಬಲಕಾಲಿನ ಮೊಣಕಾಲು,ಎಬ್ಬೆರಳಿಗೆ ಹಾಗೂ ಎಡಭುಜಕ್ಕೆ, ಬಲಭುಜಕ್ಕೆ ರಕ್ತಗಾಯವಾಗಿದ್ದವನನ್ನು, ಅಲ್ಲೇ ಇದ್ದ ಸ್ಥಳಿಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರಿಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 107/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಅನುಸೂಯ (25) ಗಂಡ: ರವಿ ವಾಸ: ವಿರೇಂದ್ರ ಭಟ್ ರವರ ಬಾಡಿಗೆ ಮನೆ, ಕಾಂತಮಂಗಲ, ಅಜ್ಜಾವರ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 25.09.2022 ರಂದು ಧರ್ಮಸ್ಥಳ ಸಂಘದ ವಾರದ ಮೀಟಿಂಗ್ ನಿಮಿತ್ತ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ನಾವೂರುಗೆ ತೆರಳಿ ಅಲ್ಲಿಂದ ವಾಪಾಸ್ ಸಮಯ ಸುಮಾರು 15:00 ಗಂಟೆಗೆ  ನಾವೂರು ಜಂಕ್ಷನ್ ಮಾರ್ಗವಾಗಿ ಗಾಂಧಿನಗರದ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವರೇ, ಗಾಂಧಿನಗರ ಕಡೆಯಿಂದ ನಾವೂರು ಕಡೆಗೆ ಕೆಎ 21 ಬಿ 5768 ನೇದರ ಆಟೋರಿಕ್ಷಾ ಚಾಲಕ ಶಿವಪ್ರಸಾದ್ ಎಂಬಾತನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆಟೋ ರಿಕ್ಷಾವನ್ನು ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಿಕ್ಷಾದ ಅಡಿಗೆಬಿದ್ದು, ತಲೆಗೆ, ಗದ್ದಕ್ಕೆ, ಬಲಮೊಣಕೈಗೆ, ಎಡಕೆನ್ನೆಗೆ, ಎಡಕಾಲಿನತೊಡೆಗೆ ಮತ್ತು ಎಡಭುಜದ ಹಿಂಬದಿಗೆ ರಕ್ತಗಾವಾಗಿರುವುದಾಗಿದ್ದವರನ್ನು ಅಲ್ಲೇ ಇದ್ದ ಕೃಷ್ಣಪ್ಪ ಮತ್ತು ಅಭಿಲಾಷ್ ಎಂಬವರು ಪಿರ್ಯಾದುದಾರರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದುದಾರರನ್ನು ಒಳರೋಗಿಯಾಗಿ  ದಾಖಲಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 108/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಿನೇಶ ಕೆ  (38) ತಂದೆ: ದಿ. ವಿಶ್ವನಾಥ ಪೂಜಾರಿ, ಕೆಲೆಂಬಿರಿ ಮನೆ, ಬೆಳಂದೂರು  ಗ್ರಾಮ, ಕಡಬ  ತಾಲೂಕು  ಎಂಬವರ ದೂರಿನಂತೆ ದಿನಾಂಕ 22.09.2022 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರು ತನ್ನ ಮನೆಯಾದ ಕಡಬ ತಾಲೂಕು ಬೆಳಂದೂರು ಗ್ರಾಮದ  ಕೆಲೆಂಬಿರಿ ಎಂಬಲ್ಲಿನ ಮನೆಯಲ್ಲಿ ಟಿ ವಿ ನೋಡುತ್ತಿರುವ ಸಮಯ ಪಕ್ಕದಲ್ಲಿರುವ ಪ್ರತ್ಯೇಕ ಮನೆಯಲ್ಲಿ ವಾಸವಿರುವ ಪಿರ್ಯಾದಿದಾರರ ಅಣ್ಣ ರಮೇಶ ಮತ್ತು ಇತರ ಮೂರು ಮಂದಿ ಅಪರಿಚಿತರು ಮನೆಯ ಅಂಗಳಕ್ಕೆ ಬಂದು ಪಿರ್ಯಾದುದಾರರನ್ನು ಕರೆದು ಅವಾಚ್ಯ ಶಬ್ದಗಳಿಂದ ಬೈದು ರಮೇಶ ನ ಕೈಯಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರ ಬಲಭುಜಕ್ಕೆ ಹೊಡೆದಿರುತ್ತಾರೆ. ಆಗ ಪಿರ್ಯಾದಿದಾರರು ಬೊಬ್ಬೆ ಹೊಡೆದು ನೆಲಕ್ಕೆ ಬಿದ್ದಾಗ ಇತರು ಮೂರು ಮಂದಿ ಕಾಲಿನಿಂದ ತುಳಿದು ಕೈಯಿಂದ ಹೊಡೆದಿದ್ದು, ಬೊಬ್ಬೆ ಕೇಳಿ ಮನೆಯ ಒಳಗಡೆ ಇದ್ದ ಪಿರ್ಯಾದಿದಾರರ ತಾಯಿ ಮತ್ತು ಮನೆಯ ಪಕ್ಕದಲ್ಲಿ ವಾಸವಿರುವ ತಂಗಿ ಮಮತಾ ರವರು ಬಂದಾಗ ರಮೇಶನು ಪಿರ್ಯಾದಿದಾರರನ್ನುದ್ದೇಶಿ ಮುಂದಕ್ಕೆ ಜಾಗದ ವಿಚಾರದಲ್ಲಿ ಪಾಲು ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಅವರು ಬಂದಿರುವ ಓಮಿನಿ ಕಾರಿನಲ್ಲಿ ಹೋಗಿರುತ್ತಾರೆ. ಪಿರ್ಯಾದಿದಾರರ ಬೊಬ್ಬೆ ಕೇಳಿ ಬಂದ ದೊಡ್ಡಪ್ಪನ ಮಗ ಲೋಕೇಶರವರು ಅವರ  ಕಾರಿನಲ್ಲಿ  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಬಳಿಕ ದಿನಾಂಕ 24.09.2022 ರಂದು ರಾತ್ರಿ ಹಲ್ಲೆಯಿಂದಾದ ನೋವು ಉಲ್ಬಣಗೊಂಡ ಬಗ್ಗೆ ಚಿಕಿತ್ಸೆ ಕುರಿತು ಪುತ್ತೂರು ಸರಕಾರಿ  ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ.  ಅ.ಕ್ರ 75/2022  ಕಲಂ 504,324,323,506   ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 25.09.2022 ರಂದು ಪುತ್ತೂರು ನಗರ ಠಾಣೆಯ  ಪೊಲೀಸ್‌ ನಿರೀಕ್ಷಕರಾದ ಸುನೀಲ್‌ ಕುಮಾರ್‌  ಎಂ.ಎಸ್‌ರವರು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಸಮಯ  ಬೆಳಗಿನ ಜಾವ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ  ಕಬಕ ಗ್ರಾಮದ ಮುರ ಮಾರ್ಗವಾಗಿ ಅಕ್ರಮವಾಗಿ  ಜಾನುವಾರು ಸಾಗಾಟ ಮಾಡುತ್ತಿರುವ  ಬಗ್ಗೆ  ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಮುರ ಜಂಕ್ಷನ್‌ ಎಂಬಲ್ಲಿ ನಿಂತಿದ್ದಾಗ  ಬೆಳಗಿನ ಜಾವ ಸುಮಾರು  4.25ಗಂಟೆಗೆ ಕೆದಿಲ ಗ್ರಾಮದ ಕಡೆಯಿಂದ ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಕೆಎ 19 ಡಿ 7757 ನೇ  ಪಿಕಪ್‌ ವಾಹನವು ಅನುಮಾನಾಸ್ಪದವಾಗಿ ಕಂಡು ಬಂದಿದ್ದರಿಂದ  ಸಿಬ್ಬಂದಿಗಳ ಸಹಾಯದಿಂದ ತಡೆದು ನಿಲ್ಲಿಸಿದಾಗ ಚಾಲಕ  ಪಕ್ಕದಲ್ಲಿ ಕುಳಿತ ವ್ಯಕ್ತಿಯು ಪಿಕಪ್‌ ನಿಲ್ಲುತ್ತಿದ್ದಂತೆಯೇ  ಪಿಕಪ್‌ನಿಂದ ಇಳಿದು ಓಡಿಹೋಗಿರುತ್ತಾನೆ. ಕೂಡಲೇ ಪಿಕಪ್‌ ವಾಹನಕ್ಕೆ ಸುತ್ತುವರಿದು, ಪರಿಶೀಲಿಸಲಾಗಿ ಸದ್ರಿ ವಾಹನದ ಹಿಂಬದಿಯಲ್ಲಿ  ಹಿಂಸಾತ್ಮಕ ರೀತಿಯಲ್ಲಿ  3 ಜಾನುವಾರುಗಳನ್ನು ಕಟ್ಟಿರುವುದು ಕಂಡು ಬಂದಿರುತ್ತದೆ. ನಂತರ ಪಿಕಪ್‌ವಾಹನದ ಚಾಲಕನನ್ನು ವಿಚಾರಿಸಿದಾಗ  ಆರೋಪಿಗಳು ಈ ಜಾನುವಾರುಗಳನ್ನು  ಕೆದಿಲ ಗ್ರಾಮದ ಗಡಿಯಾರದಿಂದ ಕೇರಳ ರಾಜ್ಯದ ಮಂಜೇಶ್ವರ ಎಂಬಲ್ಲಿಗೆ ಯಾವುದೇ ಪರವಾನಿಗೆ ಇಲ್ಲದೆ ಕೊಂಡೊಯ್ದ  ಮಾಂಸಕ್ಕಾಗಿ ವಧೆ ಮಾಡಲು  ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಸದ್ರಿ ಚಾಲಕನ ಹೆಸರು ವಿಳಾಸ ಕೇಳಲಾಗಿ ಅಬ್ಬಾಸ್‌ .ಎ ಪ್ರಾಯ 60ವರ್ಷ ತಂದೆ;- ದಿ. ಉಪ್ಪುಂಞ ಬ್ಯಾರಿ ವಾಸ;- ಸ್ವಾಗತ ನಗರ ಮನೆ,  ಗಡಿಯಾರ , ಕೆದಿಲ ಗ್ರಾಮ, ಬಂಟ್ವಾಳ ತಾಲೂಕು ನಂತರ ಓಡಿ ಹೋದವನ ಬಗ್ಗೆ ವಿಚಾರಿಸಲಾಗಿ ಆತನ ಹೆಸರು ಅಶ್ರಪ್‌.ಜಿ   ತಂದೆ;- ಮಹಮ್ಮದ್‌ ವಾಸ;- ಗಡಿಯಾರ ಮನೆ, ಕೆದಿಲ ಗ್ರಾಮ,ಪೇರಮೊಗ್ರು ಅಂಚೆ, ಬಂಟ್ವಾಳ ತಾಲೂಕು ಎಂದು ತಿಳಿಸಿರುತ್ತಾನೆ. ಸ್ವಾಧೀನ ಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ   ಅಂದಾಜು ಮೌಲ್ಯ ರೂ 60,000/ ಹಾಗೂ ಕೆಎ 19 ಡಿ 7757ನೇ ಪಿಕಪ್‌ ವಾಹನದ ಅಂದಾಜು ಮೌಲ್ಯ ರೂ 6 ಲಕ್ಷ ಆಗಬಹುದು . ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ:81/2022  ಕಲಂ: 4, 5, 6,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ಆದ್ಯಾಧೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹೇಶ ಕೆ. ಪ್ರಾಯ: 28 ವರ್ಷ ತಂದೆ: ಎಲ್ಯಣ್ಣ ಗೌಡ ವಾಸ: ಗುಂಡಡ್ಕ ಮನೆ,   ಪಂಜ, ಕೂತ್ಕುಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ: 25-09-2022 ರಂದು ಪಿರ್ಯಾದಿದಾರರು ಬಳ್ಪ ಕ್ಕೆ ಕೂಲಿ ಕೆಲಸಕ್ಕೆ  ಬೆಳಿಗ್ಗೆ 7:30 ಗಂಟೆಗೆ ಹೊರಟು ಹೋದ ಸಮಯ ಬೆಳಿಗ್ಗೆ 11:45 ಗಂಟೆಗೆ ನೆರೆ ಮನೆಯ ಸೆಲಿನಾ ಎಂಬವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಪಿರ್ಯಾದಿದಾರರ ತಂದೆ ಎಲ್ಯಣ್ಣ ಗೌಡ ಪ್ರಾಯ 83 ವರ್ಷ ಎಂಬವರು ಪಿರ್ಯಾದಿದಾರರ ಮನೆಯ ಅಂಗಳದಲ್ಲಿರುವ ಟಿ ವಿ ಡಿಶ್‌ ಅಳವಡಿಸಿರುವ ಕಂಬಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡಿರುವುದಾಗಿ ತಿಳಿಸಿದ್ದು. ಪಿರ್ಯಾಧಿದಾರರು ಕೆಲಸದಲ್ಲಿಂದ ಕೂಡಲೇ ಬಂದು ಮನೆಯ ಹತ್ತಿರದವರನ್ನು ಸೇರಿಸಿಕೊಂಡು ಬಂದು ನೋಡಿದಾಗ ತಂದೆಯವರು ಮೃತ ಪಟ್ಟಿದ್ದು ಕಂಡು ಬಂದಿದ್ದು,  ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ  ಯು ಡಿ ಆರ್: 17-2022 ಕಲಂ: ಸಿ ಆರ್ ಪಿ ಸಿ 174 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬೂಬಕ್ಕರ್ ಎಂ ಹೆಚ್ ಪ್ರಾಯ;53 ವರ್ಷ ತಂದೆ; ಹಮೀದ್ ವಾಸ; ಮಲೆಬೆಟ್ಟು ಮನೆ ಕೊಯ್ಯೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಬಾಬ್ತು ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿ ರುವ ಸಮಡೈನ್ ಹೋಟೆಲ್ ನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ  ಖಾಲಿದ್ (55) ರವರು ದಿನಾಂಕ;24-09-2022 ರಂದು ಹಗಲು ಸಮಯದಲ್ಲಿ ಹೋಟೇಲ್ ನಲ್ಲಿ ಕೆಲಸ ಮಾಡಿ ರಾತ್ರಿ ಊಟ ಮುಗಿಸಿ ಕುತ್ಯಾರು ದೇವಸ್ಥಾನದ ಸಮೀಪದಲ್ಲಿರುವ ಬಾಡಿಗೆ ರೂಮಿನಲ್ಲಿ  ದಿನಾಂಕ;25-09-2022 ರಂದು 00.30 ಗಂಟೆಗೆ ಮಲಗಿದ್ದವರು ಬೆಳಿಗ್ಗೆ 06.30 ಗಂಟೆಯ ಮದ್ಯ ಸಮಯದಲ್ಲಿ ಹೃದಯಾಘಾತ ಅಥವಾ ಇನ್ನಿತರ ಖಾಯಿಲೆಯಿಂದ,ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 41/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಕಾಶ್ ಶೆಟ್ಟಿ, ಪ್ರಾಯ: 44 ವರ್ಷ, ತಂದೆ: ನಾರಾಯಣ ಶೆಟ್ಟಿ, ವಾಸ: ಜೋಡು ಸ್ಥಾನ ಮನೆ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:25.09.2022 ರಂದು ಬೆಳಿಗ್ಗೆ 07-45 ಗಂಟೆಗೆ  ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕುಡುಮಪುರ ಜಂಕ್ಷನ್ ನ ಎಡಭಾಗದ ಫುಟ್‌ ಪಾತ್ ನ ಬಳಿಯ ಹುಲ್ಲುಗಳ ಮಧ್ಯೆ ಸುಮಾರು 75-80 ವರ್ಷ ಪ್ರಾಯದ ಅಪರಿಚಿತ ಹೆಂಗಸು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ನರಳಾಡುತ್ತಿದ್ದು, ಸ್ಥಳಕ್ಕೆ 108 ಅಂಬ್ಯುಲೆನ್ಸ್ ವೊಂದನ್ನು ಬರಮಾಡಿ ಕೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರಗೆ ಕಳುಹಿಸಿಕೊಟ್ಟಿದ್ದು,  ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿದ್ದು, ಸದ್ರಿ ಅಪರಿಚಿತ ಹೆಂಗಸನ್ನು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಸಮಯ 10.40 ಗಂಟೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಅಪರಿಚಿತ ಹೆಂಗಸು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ UDR NO 55/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 26-09-2022 11:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080