ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ವಾಸುದೇವ,ರೈ ಪ್ರಾಯ : 58 ವರ್ಷ, ತಂದೆ: ದಿ|| ಬಾಬು ರೈ ವಾಸ: ಕಾವಿನಮೂಲೆ ಮನೆ, ಬೆಳ್ಳಾರೆ  ಗ್ರಾಮ ಮತ್ತು ಅಂಚೆ  ಸುಳ್ಯ ತಾಲೂಕು ಎಂಬವರ ದೂರಿನಂತೆ  ದಿನಾಂಕ 25-10-2021 ರಂದು ತನ್ನ ಸ್ನೇಹಿತ ದಿನೇಶ್.ರೈ ರವರನ್ನು ತನ್ನ ಬಾಬ್ತು KA-21-W-0545ನೇ ಮೋಟಾರ್ ಸೈಕಲಿನಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಾ ಸಮಯ ಸುಮಾರು 11:00 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿಗೆ ತಲುಪುವಾಗ  ಕಲ್ಲಡ್ಕ ಕಡೆಯಿಂದ KA-19HD-5919 ನೇ ಮೋಟಾರ್ ಸೈಕಲನ್ನು ಅದರ ಸವಾರ ಫಾರೂಕ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ  ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈಯ ಕಿರುಬೆರಳಿಗೆ ರಕ್ತಗಾಯವಾಗಿರುವುದಲ್ಲದೇ ಮೈಕೈಗೆ ಗುದ್ದಿದ ನೋವಾಗಿದ್ದು, ಕಲ್ಲಡ್ಕ ಪುಪ್ಷರಾಜ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು,  ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 111/2021  ಕಲಂ 279,337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸಿ ಪುತ್ತು ತಂದೆ: ಇಬ್ರಾಹಿಂ ಬ್ಯಾರಿ ವಾಸ: ಚೆಲ್ಯಡ್ಕ್ ಮನೆ ಬೆಟ್ಟಂಪಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ:- 24.10.2021 ರಂದು  ತನ್ನ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಚೆಲ್ಲಿಯಡ್ಕ-ಸೆಂಟ್ಯಾರ್ ರಸ್ತೆಯಲ್ಲಿ  ಚೆಲ್ಲಿಯಡ್ಕ ಕಡೆಯಿಂದ ಸೆಂಟ್ಯಾರ್ ಕಡೆಗೆ ಬರುತ್ತಾ  ಮಧ್ಯಾಹ್ನ ಸುಮಾರು 12.00 ಗಂಟೆಗೆ ಪುತ್ತೂರು ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿಗೆ ತಲುಪಿದಾಗ ಸೆಂಟ್ಯಾರ್ ಕಡೆಯಿಂದ ಚೆಲ್ಲಿಯಡ್ಕ ಕಡೆಗೆ KA21 K 3435ನೇ ಸ್ಕೂಟರಿನಲ್ಲಿ ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು  ಸದ್ರಿ ಸ್ಕೂಟರನ್ನು ಅದರ ಸವಾರನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದ ಪರಿಣಾಮ ಸದ್ರಿ ಸ್ಕೂಟರ್ ರಸ್ತೆಯಲ್ಲಿ ಮಗುಚಿ ಬಿದ್ದಿರುತ್ತದೆ.  ಬಳಿಕ ಫಿರ್ಯಾದುದಾರರು ಆಟೋರಿಕ್ಷಾವನ್ನು ನಿಲ್ಲಿಸಿ,  ಸದ್ರಿ ಸ್ಕೂಟರಿನ ಬಳಿ ತೆರಳಿ ನೋಡಲಾಗಿ ಸ್ಕೂಟರ್ ಸವಾರ ಪ್ರವೀಣ ಕೆ. ಎಂಬವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ಹಿಂಬದಿ ಸವಾರನಾದ ಕೃಷ್ಣಪ್ಪ ಎಂಬವರಿಗೆ ಮುಖ, ಸೊಂಟ, ಬಲಕಾಲು, ಎದೆ, ಎಡ ಕಾಲು, ಎಡ ಕೈ ಮತ್ತು ಭುಜದ ಮೇಲೆ ರಕ್ತ ಗಾಯ ಮತ್ತು  ಗುದ್ದಿದ ರೀತಿಯ ಗಾಯಗಳಾಗಿರುತ್ತದೆ. ಬಳಿಕ ಗಾಯಾಳುವನ್ನು ಫಿರ್ಯಾದುದಾರರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು  ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಫಿರ್ಯಾದುದಾರರು ಕೃಷ್ಣಪ್ಪರವರನ್ನು  ಅಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ವೆನ್‌ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಕೃಷ್ಣಪ್ಪರವರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.  ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 93/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-10-2021 10:55 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080