ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಇಮ್ತಿಯಾಸ್ ಪ್ರಾಯ 27 ವರ್ಷ ತಂದೆ: ಹಸನಬ್ಬ ವಾಸ:ಬೆಳ್ತಂಗಡಿ ಕಸಬಾ ಗ್ರಾಮ,    ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 25-10-2022 ರಂದು ಸಮಯ ಸುಮಾರು ಬೆಳಿಗ್ಗೆ 11.40 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಸಂತೆಕಟ್ಟೆ ಎಂಬಲ್ಲಿ ಪಾದಚಾರಿ ದಿವ್ಯಾ ಎಂಬವರು ರಸ್ತೆ ದಾಟುತ್ತಿರುವಾಗ ಮಡಂತ್ಯಾರು ಕಡೆಯಿಂದ ಬೆಳ್ತಂಗಡಿ ಕಡೆಗೆ ಕೆಎ 19 MD 2308 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ದಿವ್ಯಾ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಅಲ್ಲಿಯೇ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಮಂಗಳೂರು ಕಡೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 132/2022 ಕಲಂ; 279,337 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚೇತನ್  ಪ್ರಾಯ: 27 ವರ್ಷ ತಂದೆ: ಓಬಯ್ಯ ಪೂಜಾರಿವಾಸ: ಕೊಯಿಲ ಸ್ಕೂಲ್ ಹತ್ತಿರ, ಕೊಯಿಲ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 25-10-2022 ರಂದು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಸಿದ್ದಕಟ್ಟೆಯಿಂದ ಮನೆಕಡೆಗೆ ಹೋಗುತ್ತಾ ಸಮಯ ಸುಮಾರು 14:40 ಗಂಟೆಗೆ  ಬಂಟ್ವಾಳ ತಾಲೂಕು, ರಾಯಿ ಗ್ರಾಮದ, ಕುದ್ಮಾನಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಿ.ಸಿ.ರೋಡು ಕಡೆಯಿಂದ KA-19-D-9987 ನೇ ಈಚರ್ ಲಾರಿಯನ್ನು ಅದರ ಚಾಲಕ ಗಣೇಶ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಮುಂದಿನಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದ ದಿನೇಶ್ ರವರ KA-19-ED-0547 ನೇ ಮೋಟಾರ್ ಸೈಕಲ್ ಗೆ ಲಾರಿಯ ಬಲಬದಿಯ ಹಿಂಬದಿ ರಭಸವಾಗಿ ಡಿಕ್ಕಿ ಹೊಡೆದು ಅಪಘಾತವಾಗಿದ್ದು ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಅಪಘಾತವಾಗಿದ್ದು ತಲೆಗೆ ಗುದ್ದಿದ ರಕ್ತ ಗಾಯ, ಕೈ-ಕಾಲುಗಳಲ್ಲಿ ಗುದ್ದಿದ ಹಾಗೂ ತರಚಿದ ಗಾಯಾಗಳಾಗಿದ್ದು ಚಿಕಿತ್ಸೆ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಗಾಯಾಳುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 128/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೋಹನ್ ಕೆ.ಎಸ್.: 22 ವರ್ಷ ತಂದೆ: ದಿ|| ಸುರೇಶ್ ಕೆ ವಾಸ: ಡೋರ್ ನಂಬ್ರ 21-265/3 ಶಿಲ್ಪಾ ಸದನ, ಕಾಪಿಕಾಡು, ಬೊಂಡಾಲ ಮನೆ, ಪಾಣೆಮಂಗಳೂರು  ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 24.10.2022 ರಂದು  ಪಿರ್ಯಾದಿದಾರರ ತಂದೆಯ ಬಾಬ್ತು ಸ್ಕೂಟರ್ ನಂಬ್ರ KA 19 EN 0295  ನೇ ದರಲ್ಲಿ  ಸ್ನೇಹಿತ ಚಿತ್ತರಂಜನ್ ರವರನ್ನು  ಸಹ ಸವಾರನಾಗಿ ಕುಳ್ಳಿರಿಸಿಕೊಂಡು  ಅಗತ್ಯ ಕೆಲಸದ ನಿಮಿತ್ತ ಬಿಸಿರೋಡ್ ಗೆ ಹೋಗಿ ವಾಪಾಸ್ಸು ಸ್ನೇಹಿತ ಚಿತ್ತರಂಜನ್ ರವರನ್ನು ಕಲ್ಲಡ್ಕದ ಕುಂಟಿಪಾಪು ಎಂಬಲ್ಲಿಗೆ  ಬಿಡಲು ಬರುತ್ತಿರುವಾಗ ಸಮಯ ಸುಮಾರು 16:00 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ  ಕಲ್ಲಡ್ಕ ದ ಮೇಲಿನ ಪೇಟೆ ಎಂಬಲ್ಲಿಗೆ ತಲುಪಿದಾಗ ವಿಟ್ಲ ಕಡೆಯಿಂದ ಯಾವುದೇ ನಂಬರ್ ಪ್ಲೇಟ್ ಅಳವಡಿಸದ ಒಂದು ಯಮಹಾ ಎಫ್ ಝಡ್ ಮೋಟರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ರಸ್ತೆಯ ತೀರ ಬಲಬದಿ ರಾಂಗ್ ಸೈಡಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಹಾಗೂ ಸಹ ಸವಾರ  ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು, ಅಪಘಾತಪಡಿಸಿ ಯಮಹಾ ಎಫ್ ಝಡ್  ಮೋಟರ್ ಸೈಕಲ್ ಸವಾರ ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ , ವಾಹನ ಸಮೇತ ಪರಾರಿಯಾಗಿರುತ್ತಾರೆ.   ಸಹ ಸವಾರ ಚಿತ್ತರಂಜನ್ ರವರಿಗೆ ಬಲಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು , ಚಿಕಿತ್ಸೆ ಬಗ್ಗೆ ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 129/2022 ಕಲಂ: 279, 337 IPC 134(A&B) IMV  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೋಹಿತ್ ಕೆ,  ಪ್ರಾಯ 34 ವರ್ಷ, ತಂದೆ: ಎಲ್ಯಣ್ಣ ಗೌಡ, ವಾಸ: ಖಂಡಿಗ ಮನೆ, ಕುದ್ಮಾರ್ ಅಂಚೆ & ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 24-10-2022 ರಂದು 17-40 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಸಮೀರ್‌ ಎಂಬವರು ನೋಂದಣಿ ನಂಬ್ರ ಅಳವಡಿಸದ ಸ್ಕೂಟರನ್ನು ಪುತ್ತೂರು ಮುಖ್ಯ ರಸ್ತೆಯಲ್ಲಿ ಬೊಳುವಾರು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಶ್ರೀಧರ್ ಭಟ್ ಜಂಕ್ಷನ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ನಿಯಮಗಳನ್ನು ಪಾಲಿಸದೇ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಆರೋಪಿಯ ಸ್ಕೂಟರಿನ ಮುಂದೆ ಪಿರ್ಯಾದುದಾರರಾದ ರೋಹಿತ್ ಕೆ ರವರು ಮಂಗಳೂರು ಕಡೆಯಿಂದ ಕುದ್ಮಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಸದ್ರಿ ಸ್ಥಳದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಬಳಿ ಸೋಜಾ ಮೇಟಲ್ ಅಂಗಡಿಗೆ ಹೋಗಲು  ಇಂಡಿಕೇಟರ್ ಹಾಕಿ ನಿಧಾನವಾಗಿ ಬಲ ಭಾಗಕ್ಕೆ ಚಲಾಯಿಸುತ್ತಿದ್ದ KA-19EU-1049 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಆರೋಪಿ ಸ್ಕೂಟರ್ ಸವಾರ ರಸ್ತೆಗೆ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತ ಗಾಯ ಮತ್ತು ಆರೋಪಿ ಸ್ಕೂಟರ್ ಸವಾರನಿಗೆ ಗಾಯವಾಗಿ ಚಿಕಿತ್ಸೆ ಬಗ್ಗೆ ಆಂಬ್ಯೂಲೆನ್ಸ್‌ ನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದುದಾರರು ಒಳಗೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಆರೋಪಿ ಸ್ಕೂಟರ್ ಸವಾರ ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 163/2022 ಕಲಂ: 279, 337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೂಫಿಯಾನ್ (28) ತಂದೆ: ಮಹಮ್ಮದ್ ಆಲಿ ವಾಸ: HN NO: 4/44, ಹಿಲ್ ರೋಡ್ ಮಡಿಕೇರಿ ಕೊಡಗು ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 25.10.2022 ರಂದು ತಮ್ಮ ಸ್ನೇಹಿತ ಹನೀಫ್ ಎಂಬಾತನೊಂದಿಗೆ ಆತನ  ಬಾಬ್ತು ಕೆಎ 09 ಎಂಬಿ 8677 ನೇ ಕಾರಿನಲ್ಲಿ ಹನೀಪ್ ರವರು ಚಾಲಕರಾಗಿ ಮಡಿಕೇರಿಯಿಂದ ಬಂಟ್ವಾಳಕ್ಕೆ ಹೋಗುತ್ತಿರುವ ಸಮಯ ಸುಮಾರು 16:50 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಚೌಕ್  ಬಳಿ ತಲುಪುತ್ತಿದ್ದಂತೆ   ಅಲ್ಲೇ ರಸ್ತೆಯ ಬದಿಯಲ್ಲಿದ್ದ,  ಎಳನೀರು ಅಂಗಡಿ ನೋಡಿ ಕಾರನ್ನು ಎಡಬದಿಯಲ್ಲಿ ನಿಲ್ಲಿಸಿ ಎಳನೀರು ಕುಡಿಯಲು ಕಾರಿನಿಂದ ಇಳಿಯುತ್ತಿರುವಾಗ, ಸುಳ್ಯ ಕಡೆಯಿಂದ ಮಡಿಕೇರಿ ಕಡೆಗೆ ಕಾರೊಂದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನ್ನು ಆತನ ತೀರಾ ಬಲಬದಿಗೆ ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ, ದುರಸ್ತಿಯಲ್ಲಿರುವ ಜೀಪಿಗೆ ಡಿಕ್ಕಿವುಂಟು ಮಾಡಿ ನಂತರ ಗೂಡು ಅಂಗಡಿಗೆ ಡಿಕ್ಕಿಪಡಿಸಿ ಗೂಡು ಅಂಗಡಿಯ ಎದುರು ನಿಂತಿದ್ದ ಸ್ಕೂಟರ್ ವೊಂದಕ್ಕೆ ಡಿಕ್ಕಿಪಡಿಸಿ ನಂತರ ಪಿರ್ಯಾದುದಾರರ ಕಾರಿಗೆ ಡಿಕ್ಕಿವುಂಟು ಮಾಡಿ ಕಾರಿನ ಮೇಲೆ ಮಗುಚಿ ಬಿದ್ದಗಾ ಕೂಡಲೇ ಪಿರ್ಯಾದುದಾರರು ಅಪಘಾತ ಪಡಿಸಿದ ಕಾರಿನ ಬಳಿಗೆ ಹೋಗಿ ನೋಡಲಾಗಿ ಕಾರಿನ ಚಾಲಕ ಮತ್ತು ಒಬ್ಬರು ಮಹಿಳಾ ಪ್ರಯಾಣಿಕರಿದ್ದು, ಅಲ್ಲೇ ಇದ್ದ ಸ್ಥಳಿಯರೊಂದಿಗೆ ಉಪಚರಿಸಿ ನೋಡಲಾಗಿ ಕಾರಿನ ಚಾಲಕನಿಗೆ ಯಾವುದೇ ಗಾಯವಾಗಿರುವುದಿಲ್ಲ, ಪ್ರಯಾಣಿಕರಾಗಿದ್ದ ಸರಾಮ್ಮ ಎಂಬವರಿಗೆ ಮೂಗಿಗೆ ರಕ್ತಗಾಯವಾಗಿರುವುದಾಗಿ, ನಂತರ ಅಪಘಾತ ಪಡಿಸಿದ ಕಾರಿನ ನಂ: ಕೆಎ 21 ಎನ್ 9277 ಆಗಿದ್ದು,ಅದರ ಚಾಲಕನ ಹೆಸರು ಮಹ್ಮದ್ ಹನೀಪ್ ಇ ಆರ್ ಆಗಿರುವುದಾಗಿ  ಅಪಘಾತಕ್ಕೆ ಒಳಗಾದ ಸ್ಕೂಟರ್ ನಂ: ಕೆ 21 ಆರ್ 7538 ಆಗಿರುವುದಾಗಿ, ನಂತರ ತಿಳಿದು ಬಂದಿರುತ್ತದೆ.ಈ ಅಪಘಾತದಿಂದ ಪಿರ್ಯಾದುದಾರರ ಕಾರು ಮತ್ತು ಸ್ಕೂಟರ್ ಗಳು ಜಕ್ಕಂ ಆಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ: 124/2022 ಕಲಂ: 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  

ಇತರೆ ಪ್ರಕರಣ: 2

 

 • ವೇಣೂರು ಪೊಲೀಸ್ ಠಾಣೆ : ದಿನಾಂಕ 25.10.2022 ರಂದು ಬೆಳಿಗ್ಗೆ 11:50 ಗಂಟೆಗೆ ಬೆಳ್ತಂಗಡಿ  ತಾಲೂಕು  ಕರಿಮಣೇಲು ಗ್ರಾಮದ ರಾಮನಗರ  ಎಂಬಲ್ಲಿ ಸಾರ್ವಜನಿಕ  ಸ್ಥಳದಲ್ಲಿ  ಆರೋಪಿತರು  ಅಕ್ರಮವಾಗಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದುದನ್ನು  ಪತ್ತೆಹಚ್ಚಿದ್ದು,  ಜುಗಾರಿ ಆಟ ಆಡುತ್ತಿದ್ದ ಖಚಿತ ಮಾಹಿತಿಯ  ಮೇರೆಗೆ ಶ್ರೀಮತಿ ಸೌಮ್ಯ ಜೆ ಪೊಲೀಸ್ ಉಪನಿರೀಕ್ಷಕರು ವೇಣೂರು ಪೊಲೀಸ್ ಠಾಣೆ  ತನ್ನ  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  7  ಜನ  ಆರೋಪಿಗಳಾದ  1) ಸುರೇಶ, 2) ಸದಾನಂದ,. 3) ಮಹಾಬಲ, 4) ನಾರಾಯಣ 5) ನವೀನ ,6) ಸುಂದರ.  7) ಗಣೇಶ್ ರವರುಗಳನ್ನು  ವಶಕ್ಕೆ  ಪಡೆದು  ಜುಗಾರಿ ಆಟಕ್ಕೆ ಉಪಯೋಗಿಸಿದ 52  ಇಸ್ಪೀಟ್ ಎಲೆಗಳನ್ನು ಹಾಗೂ ನಗದು ಹಣ ಸ್ವಾದೀನ ಪಡಿಸಿ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 64-2022 ಕಲಂ: 87  ಕೆ ಪಿ ಆಕ್ಟ್‌  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವೇಣೂರು ಪೊಲೀಸ್ ಠಾಣೆ : ದಿನಾಂಕ 25.10.2022 ರಂದು 16:30 ಗಂಟೆಗೆ ಬೆಳ್ತಂಗಡಿ  ತಾಲೂಕು  ಗುಂಡೂರಿ  ಗ್ರಾಮದ  ನೇರೊಲ್ದಪಲ್ಕೆ  ಬಸ್  ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ   ಇಬ್ಬರು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿರುವ   ಬಗ್ಗೆ   ಖಚಿತ  ಮಾಹಿತಿಯ  ಮೇರೆಗೆ ಶ್ರೀಮತಿ ಸೌಮ್ಯ ಜೆ ಪೊಲೀಸ್ ಉಪನಿರೀಕ್ಷಕರು ವೇಣೂರು ಪೊಲೀಸ್ ಠಾಣೆ  ತನ್ನ  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಆರೋಪಿಗಳಾದ  1)ಹರೀಶ್  ಪೂಜಾರಿ  2) ಜಯ ಪೂಜಾರಿ ರವರನ್ನು  ವಶಕ್ಕೆ   ಪಡೆದು  ಆರೋಪಿತರು  ಮದ್ಯ  ಸೇವನೆಗೆ  ಉಪಯೋಗಿಸಿದ  MYSORE LANCER WHISKY  ಎಂದು ಲೇಬಲ್ ಇರುವ ಮಧ್ಯ ತುಂಬಿದ  ಟೆಟ್ರೋ ಪ್ಯಾಕೇಟ್ಗಳನ್ನು ಸ್ವಾಧೀನ ಪಡಿಸಿ, ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 65-2022 ಕಲಂ: 15(ಎ), 32 (3) ಕರ್ನಾಟಕ ಅಬಕಾರಿ ಕಾಯ್ದೆ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 26-10-2022 02:32 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080