ಅಪಘಾತ ಪ್ರಕರಣ: ೦4
ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಂತೋಷ್, ಪ್ರಾಯ 22 ವರ್ಷ ತಂದೆ: ಬಾಬು ಗೌಡ ವಾಸ: ಎನ್ನೋಡಿ ಮನೆ, ಮಚ್ಚಿನ ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 25.11.2022 ರಂದು ಸಂಜೆ 4.45 ಗಂಟೆಯ ಸಮಯಕ್ಕೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಬ್ರಹ್ಮಗಿರಿ ಚಡವು ಎಂಬಲ್ಲಿ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ KA 21H 5874 ನೇದನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ತನ್ನ ಮುಂದಿನಿಂದ ಹೋಗುತ್ತಿದ್ದ ಲಾರಿ KA 19AB 9914 ನೇದನ್ನು ಓವರ್ ಟೇಕ್ ಮಾಡಿ ಎದುರುಗಡೆಯಿಂದ ಅಂದರೆ ಬಳ್ಳಮಂಜ ಕಡೆಯಿಂದ ಮಡಂತ್ಯಾರು ಕಡೆಗೆ ಬರುತ್ತಿದ್ದ ಫಿರ್ಯಾದಿದಾರರ ಬಾಬ್ತು ಆಟೋ ರಿಕ್ಷಾ KA 70-4769 ನೇದಕ್ಕೆ ತಾಗಿಸಿ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗಿ ಲಾರಿಗೆ ತಾಗಿಸಿಕೊಂಡು ರಸ್ತೆಗೆ ಬಿದ್ದು, ಗಾಯಗೊಂಡಿದ್ದು, ಬಳಿಕ ಫಿರ್ಯಾದಿದಾರರು ಲಾರಿ ಚಾಲಕ ಮತ್ತು ಇತರರು ಸೇರಿ ಮೋಟಾರ್ ಸೈಕಲ್ ಸವಾರನನ್ನು ಬಿದ್ದಲ್ಲಿಂದ ಎತ್ತಿ ಆರೈಕೆ ಮಾಡಿ ಆಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 87/2022 ಕಲಂ 279, 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಬೂಬಕ್ಕರ್, ಪ್ರಾಯ:57 ವರ್ಷ ತಂದೆ: ದಿ|| ಅಬ್ದುಲ್ ರಹಿಮಾನ್ ಶಾಂತಿಅಂಗಡಿ ಮನೆ, ಬಿ-ಮೂಡ ಗ್ರಾಮ, ಜೋಡು ಮಾರ್ಗ ಅಂಚೆ, ಬಂಟ್ವಾಳ ತಾಲೂಕು ರವರು ದಿನಾಂಕ 24-11-2022 ರಂದು ಮೀನು ತರುವರೇ ಕೈಕಂಬದಲ್ಲಿ ಮೀನು ಮಾರಾಟ ಮಾಡುತ್ತಿರುವ ಅಂಗಡಿಗೆ ಹೋಗಿದ್ದು ಮೀನು ವ್ಯಾಪಾರದ ಅಬ್ದುಲ್ ಲತೀಫ್ ರವರು ಎದುರಿನ ತರಕಾರಿ ಅಂಗಡಿಗೆ ಹೋಗುವರೇ ರಸ್ತೆ ದಾಟುತ್ತಿದ್ದ ಸಮಯ ಸುಮಾರು 15:30 ಗಂಟೆಗೆ ಮಂಗಳೂರು-ಬೆಂಗಳೂರು ರಾಷ್ತ್ರೀಯ ಹೆದ್ದಾರಿ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಕೈಕಂಬ ಎಂಬಲ್ಲಿ KA-13-D-0269 ನೇ ಟ್ಯಾಂಕರ್ ನ್ನು ಅದರ ಚಾಲಕ ಶರತ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಬ್ದುಲ್ ಲತೀಫ್ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಪರಿಣಾಮ ಅಬ್ದುಲ್ ಲತೀಫ್ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಎದೆಯ ಬಲಭಾಗಕ್ಕೆ, ಹಣೆಗೆ ಗುದ್ದಿದ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 149/2022 ಕಲಂ: 279, 337, ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಚ್ಚೇಂದ್ರನಾಥ್ ನಾಯಕ್ (31), ವಾಸ: ರಮೇಶ ನಾಯಕ್, ವಾಸ: ಕೆಂಬರ್ಜೆ ಮನೆ, ಬೆಳ್ತಂಗಡಿ ಕಸ್ಬಾ ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 24-11-2022 ರಂದು ಕೆಎ 21 W 8307 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಕಿಶನ್ ಕುಮಾರ್ ಎಂಬವರು ಸಹಸವಾರನ್ನಾಗಿ ಕಿಶೋರ್ ಎಂಬವರನ್ನು ಕುಳ್ಳಿರಿಸಿಕೊಂಡು ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 5.00 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬ ಗ್ರಾಮದ ಹಳೇಕೋಟೆ ಸ್ನೇಹ ಎಂಟರ್ ಪ್ರೈಸಸ್ ಟಯರ್ ಶಾಫ್‌ನ ಬಳಿ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿ ಸವಾರನ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್ ಸ್ಕಿಡ್ ಆಗಿ ಮೋಟಾರು ಸೈಕಲ್ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಮೋಟಾರು ಸೈಕಲ್ ಸಹಸವಾರ ಕಿಶೋರ್ ರವರು ಬಲ ಕೈ ಯ ಭುಜಕ್ಕೆ, ಮತ್ತು ಬೆನ್ನಿಗೆ ತೀವ್ರ ತರಹದ ಗುದ್ದಿದ ಗಾಯ ಹಾಗೂ ಸವಾರ ಕಿಶನ್ ಕುಮಾರ್ ರವರ ಕೈ ಕಾಲುಗಳಿಗೆ ತರಚಿದ ಗಾಯಗೊಂಡಿರುತ್ತಾರೆ ಗಾಯಾಳುಗಳ ಪೈಕಿ ಕಿಶೋರ್ ರವರು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು ಕಿಶನ್‌ಕುಮಾರ್‌ರವರು ಗುರುವಾಯನಕೆರೆ ಆಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 149/2022 ಕಲಂ; 279, 337,338 ಭಾದಂಸಂ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಕಲ್ಯಾಣಿ ಪ್ರಾಯ 42 ವರ್ಷ ಗಂಡ ಪೂವಪ್ಪ ನಾಯ್ಕ್, ವಾಸ ಪದವು ಮನೆ ಬಲ್ನಾಡು ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 24.11.2022 ರಂದು ತಮ್ಮ ಗಂಡನೊಂದಿಗೆ ಅವರ ಬಾಬ್ತು ಕೆಎ 19 ಸಿ 3320 ನೇದರ ಕಾರಿನಲ್ಲಿ ತಮ್ಮ ಮಕ್ಕಳನ್ನು ಹಾರಾಡಿ ಶಾಲೆಯಿಂದ ಅವರೊಂದಿಗೆ 4 ನೇ ತರಗತಿಯ ಅಭಿಷನನ್ನು ಕರೆದುಕೊಂಡು ಬರುತ್ತಿರುವ ಸಮಯ ಪುತ್ತೂರು ಉಜ್ರುಪಾದೆ ರಸ್ತೆಯಲ್ಲಿ ಅಭಿಷನನ್ನು ಅವನ ಮನೆಯ ಬಳಿ ಬಿಟ್ಟು ನಂತರ ಫಿರ್ಯಾದಿದಾರರ ಮನೆಯ ಕಡೆಗೆ ಬರುತ್ತಾ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಉಳ್ಳಾಲ್ತಿ ಸ್ಟೋರ್ ಎದುರು ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿದ್ದು, ಫಿರ್ಯಾದಿದಾರರ ಮಗ ಪ್ರೀತಮ್ ನು ತಿಂಡಿ ತರುವರೇ ಕಾರಿನಿಂದ ಇಳಿದು ರಸ್ತೆ ದಾಟಿ ಉಳ್ಳಾಲ್ತಿ ಸ್ಟೋರ್ ಗೆ ತಿಂಡಿ ತೆಗೆದುಕೊಂಡು ಪುನಃ ರಸ್ತೆ ದಾಟಲು ನಿಂತ್ತುಕೊಂಡಿದ್ದ, ಸಮಯ ಪುತ್ತೂರು ಕಡೆಯಿಂದ ಬಲ್ನಾಡು ಕಡೆಗೆ ಮೋಟಾರು ಸೈಕಲೊಂದನ್ನು ಸದರ ಸವಾರನು ಅಜಾಗುರೂಕತೆ ಮತ್ತು ತೀವೃ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತ್ತಿದ ಫಿರ್ಯಾದಿದಾರರ ಮಗ ಪ್ರೀತಮ್ ಗೆ ಡಿಕ್ಕಿ ಹೊಡೆದಿದ್ದು ಪ್ರಿತಮ್ ನು ರಸ್ತೆಗೆ ಬಿದಿದ್ದು, ಮೋಟಾರ ಸೈಕಲ್ ಸವಾರನು ಕೂಡ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ.ಕಾರಿನಲ್ಲಿದ್ದ ಫಿರ್ಯಾದಿದಾರರು ಹಾಗೂ ಅವರ ಗಂಡ ಮೋಟಾರ್ ಸೈಕಲ್ ಸವಾರ ಮತ್ತು ಇತರ ಸಾರ್ವಜನಿಕರು ಓಡಿ ಬಂದು ಪ್ರೀತಮ್ ನನ್ನು ಉಚರಿಸಿ ನೋಡಿದಾಗ ಪ್ರೀತಮ್ ನ ಎಡ ಕಾಲು, ಬಲ ಕೈಗೆ ಗಾಯವಾಗಿದ್ದು ಕೂಡಲೇ ಫಿರ್ಯಾದಿದಾರರ ಕಾರಿನಲ್ಲಿ ಪ್ರೀತಮ್ ನನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರುಗೆ ಕರೆದುಕೊಂಡು ಹೋಗುವಂತ್ತೆ ತಿಳಿಸಿದ್ದು, ಅದರಂತೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ Cr.NO 103/2022 ಕಲಂ: 279,337 IPC. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಕಾಶ್ ಪ್ರಾಯ: 31 ವರ್ಷ ತಂದೆ: ದಿ| ಬಾಬು ಪೂಜಾರಿ ವಾಸ: ಜಕ್ರಿಬೆಟ್ಟು ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರು ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹಗಾರನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ:25-11-2022 ರಂದು ಮಧ್ಯಾಹ್ನ 12.20 ಗಂಟೆಗೆ ಬಿಸಿರೋಡ್ ಕಡೆಯಿಂದ ಬಂದ ಕೆಎ 19 ಎಡಿ 4937 ನಂಬ್ರ ಖಾಸಗಿ ಬಸ್ ನ್ನು ಟೋಲ್ ಸಂಗ್ರಹಕ್ಕಾಗಿ ನಿಲ್ಲಿಸಲು ಕೈ ತೋರಿಸಿದಾಗ ಚಾಲಕನು ಬಸ್ಸ್ ನ್ನು ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ “ನನ್ನ ಬಸ್ಸಿಗೆ ಕೈ ತೋರಿಸಬೇಡ ಎಂದು ಹೀಯಾಳಿಸಿ ಡ್ರೈವರ್ ನ ಸೀಟಿನ ಕೆಳಗಡೆ ಹುಡುಕಾಡಿ ಆತನ ಬಲಗಡೆ ಇರುವ ಬಾಗಿಲನ್ನು ಪಿರ್ಯಾದಿದಾರರ ಕಡೆ ಬಲವಾಗಿ ತಳ್ಳಿದಾಗ ಬಾಗಿಲು ಪಿರ್ಯಾದಿದಾರರ ಎಡತೋಳಿಗೆ, ಎಡ ಕಿಬ್ಬೊಟ್ಟೆಗೆ ತಾಗಿ ನೋವಾಗಿದ್ದು, ಅಲ್ಲದೇ ಆತನು ಪಿರ್ಯಾದಿದಾರರನ್ನು ಉದ್ದೇಶಿಸಿ ದಾರಿಯಲ್ಲಿ ಸಿಕ್ಕು ನಿನ್ನನ್ನು ಬಸ್ಸಿನ ಅಡಿಗೆ ಹಾಕಿ ಕೊಲ್ಲುತ್ತೇನೆ” ಎಂದು ಹೇಳಿ ಕೈಯಿಂದ ಪಿರ್ಯಾದಿದಾರರ ಎಡ ಕೆನ್ನೆಗೆ ಹೊಡೆದು ಹೋಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 113/2022 ಕಲಂ: 504, 324, 323, 506 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಿವಕುಮಾರ್ ಎನ್ ಜಿ ಪ್ರಾಯ:52 ವರ್ಷ ತಂದೆ;ದಿ”ಸುಬ್ಬಣ್ಣ ಭಟ್ .ವಾಸ; ಗೋವಿಂದ ಕಟ್ಟೆ ಮನೆ, ಬಲ್ಯ ಗ್ರಾಮ.ಕಡಬ ತಾಲೂಕು ರವರು ಕುನಾಲು ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದು ಹೆಂಡತಿ ರಮ್ಯ ಹಾಗೂ ತಾಯಿಯವರಾದ ದೇವಕಿ ಎಸ್ ಭಟ್ ಪ್ರಾಯ 77 ವರ್ಷ ಗಂಡ:ದಿ” ಸುಬ್ಬಣ್ಣ ಭಟ್ ರವರೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರ ತಾಯಿ ದೇವಕಿ ರವರು ಅಡಿಕೆ ಹೆಕ್ಕಲು ಮತ್ತು ಇತರೆ ಕೆಲಸಕ್ಕೆ ಒಮ್ಮೊಮ್ಮೆ ತೋಟಕ್ಕೆ ಹೋಗಿ ಬರುತ್ತಿರುತ್ತಾರೆ ಪಿರ್ಯಾದಿದಾರರ ತೋಟದ ಬದಿಯಲ್ಲಿ ತೋಟಕ್ಕೆ ನೀರು ಹಾಯಿಸುವ ಕೆರೆಯಿದ್ದು ಪಿರ್ಯಾದಿದಾರರು ದಿನಾಂಕ:25.11.2022 ದಂದು ಸಮಯ ಬೆಳಗ್ಗೆ 09.00 ಗಂಟೆಗೆ ಕರ್ತವ್ಯದ ನಿಮಿತ್ತ ಶಾಲೆಗೆ ಹೋಗುವಾಗ ಪಿರ್ಯಾದಿದಾರರ ತಾಯಿ ಮನೆ ಜಗಲಿಯಲ್ಲಿಯೇ ಕುಳಿತು ಕೊಂಡಿದ್ದು ಪಿರ್ಯಾದಿದಾರರ ಪತ್ನಿ ಸುಮಾರು 10.00 ಗಂಟೆ ಸಮಯಕ್ಕೆ ಕೆಲಸದವರಿಗೆ ಚಾ- ತಿಂಡಿ ಕೊಡುವ ಸಮಯ ಪಿರ್ಯಾದಿದಾರರ ತಾಯಿ ಮನೆ ಜಗಲಿಯಲ್ಲಿ ಕುಳಿತುಕೊಂಢಿರುತ್ತಾರೆ ಬಳಿಕ ಸಮಯ ಸುಮಾರು 11.0 ಗಂಟೆಗೆ ಕೆಲಸದವರಾದ ಶಿವರಾಮ್ ಎಂಬುವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಪಿರ್ಯಾದಿದಾರರ ತಾಯಿಯವರ ದೇಹವು ತೋಟದಲ್ಲಿರುವ ಕೆರೆಯಲ್ಲಿ ಬಿದ್ದಿರುವುದನ್ನು ನೋಡಿ ಕೂಡಲೇ ಪಿರ್ಯಾದಿದಾರರ ಹೆಂಡತಿ ಮತ್ತು ಅಕ್ಕ ಹಾಗೂ ಭಾವ ರವರಿಗೆ ತಿಳಿಸಿದ್ದು ಅವರು ಬಂದು ಪಿರ್ಯಾದಿದಾರರ ತಾಯಿಯನ್ನು ನೀರಿನಿಂದ ಮೇಲೆತ್ತಿ ನೋಡಿದಾಗ ಮೃತಪಟ್ಟಿರುವುದು ದೃಢಪಟ್ಟಿರುತ್ತದೆ, ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;34/2022 ಕಲಂ. 174 Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.