ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦5

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುನೀಲ್ ಐವನ್ ಮೆನೇಜಸ್ ಪ್ರಾಯ: 45 ವರ್ಷ ತಂದೆ:ದಿ||ಕಾಮಿಲ್ ಮೆನೇಜಸ್ ವಾಸ: ಉಗ್ಗಬೆಟ್ಟು ಮನೆ, ಕಾವಳಪಡೂರು ಗ್ರಾಮ ,ಕಾಡಬೆಟ್ಟು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25-12-2022 ರಂದು ಪಿರ್ಯಾದಿದಾರರು ಆಂಬುಲೆನ್ಸ್ ವಾಹನವನ್ನು ತನ್ನ ಮನೆಯ ಮುಂದಿನ ಅಂಗಳದಲ್ಲಿ ನಿಲ್ಲಿಸಿಕೊಂಡು ತೊಳೆಯುತ್ತಿದ್ದ ಸಮಯ ಸುಮಾರು 2:00 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಕಡೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ ಕಡೆಯಿಂದ KA-02-MS-5267 ಕಾರನ್ನು ಅದರ ಚಾಲಕ ದರ್ಶನ್ ರವರು ತಿರುವು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ KA-19-EY-1904 ನೇ ಮೋಟಾರ್ ಸೈಕಲಿಗೆ ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಕಿರಣ್ ಮೋರಸ್(33)  ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಎಡ ಮತ್ತು ಬಲ ಕೋಲು ಕಾಲು ಹಾಗೂ ಮೊಣ ಕಾಲಿಗೆ ಗುದ್ದಿದ ರಕ್ತ ಗಾಯ,  ಬಲ ಕೈಗೆ ಗುದ್ದಿದ ಮತ್ತು ರಕ್ತ ಗಾಯವಾದವರು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 157/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಐವನ್ ಪ್ರಶಾಂತ್ ಕಾರ್ಲೋ ಪ್ರಾಯ: 34 ವರ್ಷ ತಂದೆ: ದಿ|| ಚಾರ್ಲ್ಸ ಕಾರ್ಲೋ ವಾಸ: ಫರ್ಲಾ ಚರ್ಚ ಮನೆ, ನಾವೂರು ಗ್ರಾಮ ,ಬಂಟ್ವಾಳ ತಾಲೂಕುಎಂಬವರ ದೂರಿನಂತೆ ದಿನಾಂಕ 25-12-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸಮಯ ಸುಮಾರು ಸಂಜೆ 6:45  ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಫರ್ಲಾ ಚರ್ಚ್ ಹತ್ತಿರ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ KA-21-W-0760 ನೇ ಮೋಟಾರ್ ಸೈಕಲನ್ನು ಅದರ ಸವಾರ ಸುಕುಮಾರ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಉಮಾವತಿ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಉಮಾವತಿ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಭಾಗ ತಲೆಗೆ ಗುದ್ದಿದ ಗಂಭೀರ ಸ್ವರೂಪದ ರಕ್ತ ಗಾಯ ಮತ್ತು ಮೈ ಕೈ ಗಳಲ್ಲಿ ಗುದ್ದಿದ ಗಾಯಗಳಾದವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಸಾಗಿಸುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ..ಈ ಬಗ್ಗೆ ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ ಅ.ಕ್ರ : 158/2022 ಕಲಂ :  279, 304(A), IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಗದೀಶ  (32) ತಂದೆ: ಆನಂದ ಪೂಜಾರಿ ವಾಸ:ಮೇಲಿನಡ್ಕ ಮನೆ, ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 20-12-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ಕೆಎ 21 B 5614 ನೇ ಆಟೋರಿಕ್ಷಾದಲ್ಲಿ ಸಹಪ್ರಯಾಣಿಕರಾಗಿ ಕೃಷ್ಣಪ್ಪನಾಯ್ಕರವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 8.40 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಕಾಶಿಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ವಿರುಧ್ಧ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಯಾವುದೋ ಅಪರಿಚಿತ ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾದ ಬಲಬದಿಗೆ ಢಿಕ್ಕಿ ಹೊಡೆದ ಪರಿಣಾಮ ಸಹ ಪ್ರಯಾಣಿಕರಾದ ಕೃಷ್ಣಪ್ಪ ನಾಯ್ಕ ರವರಿಗೆ ಬಲಬದಿಯ ಭುಜ ಹಾಗೂ ಕೈಗಳಿಗೆ ಗುದ್ದಿದ ಗಾಯವಾಗಿ ದಿನಾಂಕ 24-12-2022 ರಂದು ಗಾಯ ಉಲ್ಬಣಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಅತ್ತಾವರ KMC ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅಪಘಾತ ನಡೆಸಿದ ಅಪರಿಚಿತ ಬಸ್ಸನ್ನು ಅದರ ಚಾಲಕ ನಿಲ್ಲಿಸದೇ ಗಾಯಳುವನ್ನು ಉಪಚರಿಸದೇ,ಸಂಬಂಧ ಪಟ್ಟವರಿಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 169/2022 ಕಲಂ; 279,337,ಭಾದಂಸಂ.ಕಲಂ:134(A)&(B)ಜೊತೆಗೆ187ಮೋ.ವಾ.ಕಾಯಿದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೊರಗಪ್ಪ ಗೌಡ  (57) ತಂದೆ: ದಿ! ಅಣ್ಣಿಗೌಡ,ವಾಸ:ಅರಣಿಪಾದೆ ಮನೆ, ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:25-12-2022 ರಂದು ತನ್ನ ಬಾಬ್ತು ಕಾರಿನಲ್ಲಿ ಬೆಳ್ತಂಗಡಿ ಕಡೆಯಿಂದ ಚಾರ್ಮಾಡಿಗೆ ಅವರ ಮನೆಗೆ ಹೋಗುತ್ತಿರುವ ಸಮಯ ಸುಮಾರು ಸಂಜೆ 07.10 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ, ಕಾಶೀಬೆಟ್ಟು ಪ್ರಸನ್ನ ಕಾಲೇಜು ಬಳಿ ತಲುಪುತ್ತಿರುವಾಗ ಅದೇ ಮಾರ್ಗವಾಗಿ ಬೆಳ್ತಂಗಡಿ ಕಡೆಯಿಂದ ಚಾರ್ಮಾಡಿಕಡೆಗೆ ಹೋಗುತ್ತಿದ್ದ ಕೆಎ 13 ಡಿ1448 ನೇ ಗೂಡ್ಸ್‌ ಟೆಂಪೋ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕೆಎ 19 ಹೆಚ್‌ಎ 2301 ನೇ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ದ್ವಿಚಕ್ರ ಸವಾರ  ದ್ವಿಚಕ್ರ ವಾಹನ  ಸಮೇತ ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರ ಪುರುಷೋತ್ತಮ ಪೂಜಾರಿ ರವರಿಗೆ ತಲೆಗೆ ತೀವ್ರ ತರಹದ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 170/2022 ಕಲಂ; 279,  304 (A), ಭಾದಂಸಂ.ಕಲಂ:ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರೇವಣೇಶ, ಪ್ರಾಯ 26 ವರ್ಷ, ತಂದೆ: ಚಂದ್ರಪ್ಪ, ವಾಸ: ಹೆಗಡಿಹಾಲ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿ , ಕೊಳಾಲ ಅಂಚೆ, ಹೆಗಡಿಹಾಲ ಗ್ರಾಮ, ಚಿತ್ರದುರ್ಗ ಎಂಬವರ ದೂರಿನಂತೆ ದಿನಾಂಕ 25-12-2022 ರಂದು 12:45 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಗಣೇಶ ಗೌಡ ಕೆ ಎಂಬವರು  KA-21-B-2632 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಸುಬ್ರಹ್ಮಣ್ಯ-ಪುತ್ತೂರು ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ಜಂಕ್ಷನ್‌ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ  ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮಾವ ವೀರೇಶ ಎಂಬವರು ಮುಕ್ವೆ ಜಂಕ್ಷನ್‌ ನಿಂದ ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-16-EM-3527 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಟೋರಿಕ್ಷಾ ಅಪಘಾತವಾಗಿ,  ಅಟೋರಿಕ್ಷಾ ಪಲ್ಟಿಯಾಗಿ, ವೀರೇಶರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ತಲೆಗೆ ಗುದ್ದಿದ ಮತ್ತು ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 13-45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅಟೋರಿಕ್ಷಾ ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕ ಗಂಗಾಧರ ನಾಯ್ಕ ಎಂಬವರಿಗೆ ಗಾಯಗಳಾಗಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 195/2022 ಕಲಂ: 279, 337, 304(ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 26-12-2022 07:05 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080