ಅಪಘಾತ ಪ್ರಕರಣ: ೦3
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂಪತ್ತ್ (19)ವರ್ಷ.ತಂದೆ:ಸೋಮಶೇಖರ ಪೂಜಾರಿ ವಾಸ: ಕುದ್ಕೋಳಿ ಮನೆ, ಕುಕ್ಕಿಪಾಡಿ ಗ್ರಾಮ. ಮಾವಿನಕಟ್ಟೆ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 25.01.2023 ಪಿರ್ಯಾದಿದಾರರು KA-19-EV-0211 ನೇ ಸ್ಕೂಟರ್ ನಲ್ಲಿ ಸವಾರನಾಗಿ ಶೈಲೇಶ್ ಕುಮಾರ್ ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮೂಡಬಿದ್ರೆ ಮಹಾವೀರ ಕಾಲೇಜಿನಿಂದ ಕರಿಮಲೆ ಪಂಜಿಕಲ್ಲು ಮಾರ್ಗವಾಗಿ ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು 16:30 ಗಂಟೆಗೆ ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಅಂಗಡಿಪಲ್ಕೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ KA-19-AD-0059 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರ್ ಸಹಸವಾರ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಬಲ ಕೈ ತೋಳಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು, ಸಹಸವಾರನಿಗೆ ಬಲಬದಿಯ ಹೊಟ್ಟೆಗೆ, ಬಲಬದಿಯ ಪಾದಕ್ಕೆ ಗುದ್ದಿದ ಗಾಯವಾಗಿದ್ದು, ಗಾಯಾಳುಗಳು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 18/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಂದ್ರಶೇಖರ (38) ವರ್ಷ.ತಂದೆ: ವಾಸು ನಾಯ್ಕ್ ವಾಸ: ನಡುಗುಡ್ಡೆ ಮನೆ, ಮಚ್ಚಿನ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 25.01.2023 ರಂದು KA-70-E-6939 ನೇ ಸ್ಕೂಟರ್ ನಲ್ಲಿ ಮನೆಯಿಂದ ನೈಬೈಲು ಕಡೆಗೆ ಹೋಗುತ್ತಾ ಸಮಯ ಸುಮಾರು 16:30 ಗಂಟೆಗೆ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ನೆಕ್ಕರಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ KA-70-E-2751 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಕಾಲು ಮೊಣಗಂಟಿಗೆ ಗುದ್ದಿದ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ,.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 19/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರುತೀಶ್, ಪ್ರಾಯ 27 ವರ್ಷ, ತಂದೆ: ಜನಾರ್ಧನ ಆಳ್ವ ವಾಸ: ನುಳಿಯಾಲು ಮನೆ, ನಿಡ್ಪಳ್ಳಿ ಗ್ರಾಮ, ತಂಬುತ್ತಡ್ಕ ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 26-01-2023 ರಂದು 10:45 ಗಂಟೆಗೆ ಆರೋಪಿ ಕಾರು ಚಾಲಕ ಸುರೇಶ್ ರಾವ್ ಎಂಬವರು KA-04-MN-9382 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸಂಪ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಭಗವಾನ್ ಎಂಟರ್‌ಪ್ರೈಸಸ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ಬಲಬದಿಗೆ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಶ್ರುತೀಶ್ ರವರು ಸವಾರರಾಗಿ ಮುಕ್ರಂಪಾಡಿ ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EC-3918 ನೇ ನೊಂದಣಿ ನಂಬ್ರದ ಮೋಟಾರ್ ಸೈಕಲಿಗೆ ಕಾರು ಅಪಘಾತವಾಗಿ ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಕೋಲು ಕಾಲಿಗೆ ತೀವ್ರ ರಕ್ತಗಾಯ ಮತ್ತು ಎಡಕಾಲಿನ ಪಾದಕ್ಕೆ ತರಚಿದ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 14/2023 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುರೇಶ್ ಪ್ರಾಯ:30 ವರ್ಷ, ತಂದೆ: ತಿಮ್ಮಪ್ಪ ಗೌಡ, ವಾಸ: ಛತ್ರಪ್ಪಾಡಿ ಮನೆ, ಗುತ್ತಿಗಾರು ಗ್ರಾಮ, ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 17.01.2023 ರಂದು ರಾತ್ರಿ ಸುಮಾರು 22.30 ಗಂಟೆಗೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಗುತ್ತಿಗಾರು ಪೇಟೆಯಲ್ಲಿರುವ ಜೀಪು ಪಾರ್ಕಿಂಗ್ ಬಳಿ ಪಿರ್ಯಾದಿದಾರರಾದ ಸುರೇಶ್ ಎಂಬವರು ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಪಿರ್ಯಾದಿದಾರರ ಪರಿಚಯದವರಾದ ದೇವಿಪ್ರಸಾದ್ ಚಿಕ್ಮುಳಿ, ಶಿವರಾಮ ಮೆಸ್ಕಾಂ, ನವೀನ್ ಚಿಕ್ಮುಳಿ ಹಾಗೂ ಮುರುಳಿ ಮೊಟ್ಟೆ ಮನೆ ಎಂಬವರುಗಳು ಪಿರ್ಯಾದಿದಾರರ ಬಳಿ ಬಂದು ವಿನಾಕಾರಣ ಪಿರಾದಿದಾರರನ್ನು ಉದ್ದೇಶಿಸಿ ಹೀನಾಮಾನವಾಗಿ ಬೈದಾಗ ಪಿರ್ಯಾದಿದಾರರು ಆಕ್ಷೇಪಿಸಿದಾಗ ಪಿರ್ಯಾದಿದಾರರನ್ನು ದೂಡಿ ಹಾಕಿ ಕಾಲಿನಿಂದ ಒದ್ದು, ಆರೋಪಿತರು ಬರುವಾಗ ಅವರ ಜೊತೆಯಲ್ಲಿ ತೆಗೆದುಕೊಂಡು ಬಂದಿದ್ದ ರಾಡ್ ಹಾಗೂ ದೊಣ್ಣೆಯಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿದಾರರ ಎಡ ಕೈಗೆ ರಕ್ತಗಾಯ ಹಾಗೂ ಬೆನ್ನಿಗೆ ವಿಪರೀತ ಗಾಯವಾಗಿರುತ್ತದೆ. ಈ ವೇಳೆ ಪಿರ್ಯಾದಿದಾರರು ಜೀವ ಭಯದಿಂದ ಬೊಬ್ಬೆ ಹೊಡೆದ ವೇಳೆ ಸಾರ್ವಜನಿಕರು ಸೇರಿದಾಗ ಆರೋಪಿತರು ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾರೆ. ಬಳಿಕ ಪಿರ್ಯಾದಿದಾರರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ಮರುದಿನ ಹೆಚ್ಚಿನ ಚಿಕಿತ್ಸೆ ಬಗ್ಗೆ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಅ.ಕ್ರ ನಂಬ್ರ : 08-2023 ಕಲಂ:504, 324 ಜೊತೆಗೆ ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಜೀವ ಬೆದರಿಕೆ ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುಷ್ಪಾವತಿ (46) ಗಂಡ:ದಿ|| ಜನಾರ್ಧನ ಪೂಜಾರಿ ವಾಸ: ಎನ್ಮಾಡಿ ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 20-01-2023 ರಂದು ರಾತ್ರಿ ಸುಮಾರು 9.00 ಗಂಟೆಯ ಸಮಯಕ್ಕೆ ಸಣ್ಣ ಮಗ ಯೋಗೀಶ್ ನಲ್ಲಿ ಗ್ಯಾಸ್ ಖಾಲಿಯಾಗಿದ್ದು ಗ್ಯಾಸ್ ಪಡೆದುಕೊಳ್ಳಲು ರೂ 1,000/- ಹಣವನ್ನು ಕೊಡು ಎಂದು ಕೇಳಿದಾಗ ದೊಡ್ಡ ಮಗ ಮಂಜುನಾಥನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರನ್ನು ಸೋಫಾದಿಂದ ಎಳೆದು ಕೆಳಗೆ ಹಾಕಿ ಸೊಂಟಕ್ಕೆ ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದಿರುತ್ತಾನೆ. ನಂತರ ಮಂಜುನಾಥನು ಮೋಟಾರು ಸೈಕಲಿನಲ್ಲಿ ಉಪ್ಪಿನಂಗಡಿಗೆ ಹೋಗಿ ಅಮಲು ಪದಾರ್ಥ ಸೇವಿಸಿ ವಾಪಾಸು ಮನೆಗೆ ಬಂದು ಪಿರ್ಯಾದುದಾರರಲ್ಲಿ ನೀನು ಬಾರಿ ಪೊಲೀಸ್ ಕಂಪ್ಲೇಟ್ ನೀಡುತ್ತೀಯಾಎಂದು ಹೇಳಿ ಸೆಲ್ಪ್ ನಲ್ಲಿದ್ದ ಕ್ರಿಕೆಟ್ ಬ್ಯಾಟ್ ನ್ನು ತೆಗೆದು ತಲೆಗೆ, ಎಡ ಕೈ ಹಾಗೂ ಬಲ ಕೈ ಭುಜಕ್ಕೆ ಹೊಡೆದು ನೋವುಂಟು ಮಾಡಿರುತ್ತಾನೆ. ಜಗಳ ಜಾಸ್ತಿಯಾಗುವುದು ಬೇಡ ಎಂಬ ಉದ್ದೇಶದಿಂದ ಮಗ ಯೋಗೀಶನು ಮಂಜುನಾಥನನ್ನು ಕರೆದುಕೊಂಡು ರಾತ್ರಿ 12.00 ಗಂಟೆಯ ಸಮಯಕ್ಕೆ ಮಗಳ ಮನೆಗೆ ಹೋಗಿರುತ್ತಾನೆ. ಪಿರ್ಯಾದುದಾರರು ಒಬ್ಬರೆ ಮನೆಯಲ್ಲಿದ್ದರು. ಬೆಳಗಿನ ಜಾವ 02.00 ಗಂಟೆಯ ಸಮಯಕ್ಕೆ ಮಂಜುನಾಥನು ಮಗಳ ಮನೆಯಿಂದ ಬಂದು ಬಾಗಿಲು ಬಡಿದಾಗ ಸಣ್ಣ ಮಗ ಯೋಗೀಶನು ಬಂದಿರಬಹುದು ಎಂದು ಬಾವಿಸಿ ಬಾಗಿಲು ತೆರೆದೆನು. ಮನೆಯೊಳಗೆ ಬಂದ ಮಂಜುನಾಥನು ಪಿರ್ಯಾದುದಾರರ ಜುಟ್ಟು ಹಿಡಿದು ತಲೆಯನ್ನು ಕಬ್ಬಿಣದ ಮಂಚಕ್ಕೆ ತಾಗಿಸಿ ಎಳೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿ ಎದೆಯ ಮೇಲೆ ಕುಳಿತು ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆ ತುರುಕಿ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದು ಕೆನ್ನೆಗೆ ಹೊಡೆದು ನೋವುಂಟು ಮಾಡಿ ಮಗನು ಕುಶಾಲಪ್ಪ ಪೂಜಾರಿ, ಕೇಶವ ಸುವರ್ಣ ಹಾಗೂ ಪಿರ್ಯಾದುದಾರರನ್ನು ಉದ್ದೇಶಿಸಿ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ. ಒಂದು ಗತಿ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಹಾಕಿರುತ್ತಾನೆ. ದಿನಾಂಕ: 21-01-2023 ರಂದು 03.00 ಗಂಟೆಗೆ 112 ಕ್ಕೆ ಕರೆ ಮಾಡಿದಾಗ ಪೊಲೀಸರು ಸ್ಥಳಕ್ಕೆ ಬಂದು ಬುದ್ದಿ ಮಾತು ತಿಳುವಳಿಕೆ ಹೇಳಿ ಸಾಂತ್ವಾನಪಡಿಸಿ ಅವರು ಹೋಗಿರುತ್ತಾರೆ. ಮಗ ಮಂಜುನಾಥ ಹಲ್ಲೆ ನಡೆಸಿ ಉಂಟಾದ ನೋವಿನಿಂದ ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಬಂದಾಗ ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ. ನಂತರ ನೆರೆಕರೆಯ ವೇದ ರವರೊಂದಿಗೆ ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 08/2023 ಕಲಂ: 504,323,324,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉದಯ ಪ್ರಾಯ 32 ವರ್ಷ ತಂದೆ: ವಿಶ್ವನಾಥ್ ಜಿ.ಡಿ ವಾಸ: ಜಟ್ಟಿಪಳ್ಳ ಮನೆ, ಸುಳ್ಯ ಕಸಬಾ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಉದಯರವರ ತಂದೆ ವಿಶ್ವನಾಥ್ ಜಿ.ಟಿ ಪ್ರಾಯ 72 ವರ್ಷ ರವರಿಗೆ ಕಳೆದ 2 ವರ್ಷಗಳ ಹಿಂದೆ ಆಕಸ್ಮಿಕವಾಗಿ ಬಿದ್ದು ಎಡಕಾಲಿಗೆ ಗಾಯವಾಗಿ ಆಪರೇಷನ್ ಆಗಿದ್ದು ಎಲ್ಲಿಗೂ ಹೋಗದೇ ಮನೆಯಲ್ಲಿ ಇದ್ದು, ಅಲ್ಲದೇ ಶುಗರ್ ಬಿಪಿ ಕಾಯಿಲೆ ಇದ್ದುದರಿಂದ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 26.01.2023 ರಂದು ಪಿರ್ಯಾದಿದಾರರು ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮದ ಬಗ್ಗೆ ಬೈಲುಕೊಪ್ಪಕ್ಕೆ ತೆರಳಿದ್ದು, ಪಿರ್ಯಾದಿದಾರರ ತಾಯಿ 11.30 ಗಂಟೆಗೆ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆ ಹೋಗಿದ್ದು ತಂದೆ ಮನೆಯಲ್ಲಿ ಒಬ್ಬರೇ ಇರುವ ವಿಚಾರವನ್ನು ತಿಳಿಸಿರುತ್ತಾರೆ. ಮಧ್ಯಾಹ್ನ ಸಮಯ ಸುಮಾರು 2.00 ಗಂಟೆಗೆ ಪಿರ್ಯಾದಿದಾರರ ಮನೆ ಬಳಿ ಇರುವ ಚಿಕ್ಕಪ್ಪ ಗೋಪಾಲಕೃಷ್ಣರವರು ಫೋನ್ ಮಾಡಿ ತಂದೆ ವಿಶ್ವನಾಥ್ ರವರು ಮನೆ ಮುಂಭಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದಂತೆ ಕೂಡಲೇ ಬೈಲು ಕೊಪ್ಪದಿಂದ 4.00 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳದಲ್ಲಿರುವ ತನ್ನ ಮನೆಗೆ ಬಂದು ನೋಡಿದಾಗ ತಂದೆ ವಿಶ್ವನಾಥ್ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸುಳ್ಯ ಠಾಣಾ ಯುಡಿಅರ್ ನಂಬ್ರ 07/23 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಶೇಖರ,ಪ್ರಾಯ: 23 ವರ್ಷ, ತಂದೆ: ಕೇಶವ, ಪಂಜಿಕೋಡಿ ಮುಳ್ಯ ಮನೆ, ತೊಡಿಕಾನ ಗ್ರಾಮ, ಸುಳ್ಯ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರ ಅಕ್ಕ ಮಲ್ಲಿಕಾ, ಪ್ರಾಯ 25 ವರ್ಷ ಎಂಬವರು ಮತ್ತು ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ನಾಂಗುಳಿ ಪಡ್ಡಂಬೈಲು ನಿವಾಸಿಯಾದ ಶರತ್ ಎಂಬವರು ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದೆ ಹಿರಿಯರ ಒಪ್ಪಿಗೆಯೊಂದಿಗೆ ಮದುವೆಯಾಗಿ ಅತ್ತೆ ಮಾವ ಮತ್ತು ಗಂಡನೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸಿಕೊಂಡಿದ್ದು, ಪ್ರಸ್ತುತ ಏಳು ತಿಂಗಳ ಗರ್ಭಿಣಿಯಾಗಿರುತ್ತಾರೆ. ಮಲ್ಲಿಕಾಳು ಅವಳ ಗಂಡನ ಮನೆಯಿಂದ ಹೋಗಿ ಬಂದು ಸುಳ್ಯ ಕೆವಿಜಿ ಆಯುರ್ವೇದಿಕ್ ಕಾಲೇಜು ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿರುವುದಾಗಿದೆ. ಮಲ್ಲಿಕಾಳ ಗಂಡ ಶರತ್ ಪಿರ್ಯಾದಿದಾರರೊಂದಿಗೆ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಶರತ್‌ರವರ ತಂದೆ ತಾಯಿ ಮನೆಯಲ್ಲಿಯೇ ಇದ್ದು, ಕೃಷಿ ಕೆಲಸ ನೋಡಿಕೊಂಡಿರುವುದಾಗಿದೆ. ಮಲ್ಲಿಕಾಳು ಮದುವೆಯಾಗುವುದಕ್ಕೆ ಒಂದು ವರ್ಷದ ಮುಂಚೆ ತನಗಿದ್ದ ಮಾನಸಿಕ ಖಾಯಿಲೆಯ ಬಗ್ಗೆ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ಮಾತ್ರೆ ಸೇವಿಸಿಕೊಂಡಿದ್ದಳು. ಅಲ್ಲದೇ ಇತ್ತೀಚೆಗೆ ಮಲ್ಲಿಕಾಳಿಗೆ ರಾತ್ರಿ ಸಮಯ ನಿದ್ದೆ ಬಾರದೇ ಇರುವ ಬಗ್ಗೆ ಪಿರ್ಯಾದಿದಾರರಲ್ಲಿ ಆಗಾಗ ಫೋನ್ ಮಾಡಿ ತಿಳಿಸುತ್ತಿದ್ದುದಾಗಿದೆ. ಮಲ್ಲಿಕಾಳು ದಿನಾಂಕ: 25.01.2023 ರಂದು ರಾತ್ರಿ ಕರ್ತವ್ಯಕ್ಕೆ ಆಸ್ಪತ್ರೆಗೆ ಹೋಗಿ ದಿನಾಂಕ: 26.01.2023 ರಂದು ಬೆಳಿಗ್ಗೆ 8:00 ಗಂಟೆಗೆ ಕೆಲಸ ಮಗಿಸಿ 9:00 ಗಂಟೆಗೆ ಆಕೆಯ ಮನೆಗೆ ಬಂದಿರುವುದಾಗಿ ಪಿರ್ಯಾದಿದಾರರಲ್ಲಿ ಪೋನ್ ಮುಖೇನಾ ತಿಳಿಸಿದ್ದು, ಈ ದಿನ ಶರತ್‌ರವರು ಪಿರ್ಯಾದಿದಾರರೊಂದಿಗೆ ಪೈಟಿಂಗ್ ಕೆಲಸದಲ್ಲಿದ್ದು, ಮಲ್ಲಿಕಾಳ ಅತ್ತೆ ಮಾವ ಮದ್ಯಾಹ್ನ2:00 ಗಂಟೆಗೆ ಊಟ ಮಾಡಿ ತೋಟಕ್ಕೆ ಕೃಷಿ ಕೆಲಸಕ್ಕೆ ಹೋಗಿದ್ದವರು ಸಂಜೆ 5:45 ಗಂಟೆಗೆ ಮನೆಗೆ ಬಂದಾಗ ಮಲ್ಲಿಕಾಳು ಮನೆಯ ರೂಮಿನ ಅಡ್ಡಕ್ಕೆ ಹಾಗೂ ತನ್ನ ಕುತ್ತಿಗೆಗೆ ಕಾಟನ್ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಫೋನ್ ಮುಖೇನಾ ತಿಳಿಸಿದಂತೆ, ನಾನು ಶರತ್‌ರವರೊಂದಿಗೆ ಅಕ್ಕನ ಮನೆಯಾದ ಅಜ್ಜಾವರಕ್ಕೆ ಬಂದಿರುತ್ತೇನೆ. ಅಕ್ಕ ಮಲ್ಲಿಕಾಳು ಗರ್ಭಿಣಿಯಾದ ಬಳಿಕ ತನ್ನ ಮಾನಸಿಕ ಖಿನ್ನತೆಯ ಬಗ್ಗೆ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ನಿಲ್ಲಿಸಿದ್ದು, ಆಕೆಯು ಮಾನಸಿಕ ಖಿನ್ನತೆ ಹೆಚ್ಚಾಗಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಈ ದಿನ ಮದ್ಯಾಹ್ನ 2:00 ಗಂಟೆಯಿಂದ ಸಂಜೆ 5:45 ಗಂಟೆಯ ನಡುವೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 08/2023 ಕಲಂ: 174 (iii) (iv) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.