ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್‌ ರಝಾಕ್‌ ಪ್ರಾಯ 42 ವರ್ಷ ತಂದೆ:ಅದ್ರಾಮ ಬ್ಯಾರಿ ವಾಸ:ಪೆರ್ನೆ ಮುಗೇರು ಮನೆ,ಕರೋಪ್ಪಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಬಾಬ್ತು ಬಂಟ್ವಾಳ ತಾಲೂಕು ಕರೋಪ್ಪಾಡಿ ಗ್ರಾಮದ ಪೆರ್ನೆಮುಗೇರು ಎಂಬಲ್ಲಿನ ತನ್ನ ವಾಸ್ತವ್ಯದ ಮನೆಯ ಎದುರು ಅಡಿಕೆ ಹಾಗೂ ತೆಂಗಿನಕಾಯಿ ಶೇಖರಣೆ ಮಾಡುವ ಕೊಣೆಯಲ್ಲಿದ್ದ 15 ಗೋಣಿ ಚೀಲದಲ್ಲಿದ್ದ ಅಂದಾಜು ಸುಮಾರು 01 ಲಕ್ಷ ಮೌಲ್ಯದ, 300 ಕೆಜಿ ಇಡಿ ಅಡಿಕೆಯನ್ನು ದಿನಾಂಕ:25-02-2021 ರಂದು ರಾತ್ರಿ 23.00 ಗಂಟೆಯಿಂದ ದಿನಾಂಕ:26-02-2021 ರಂದು ಬೆಳಿಗ್ಗೆ 05.00 ಗಂಟೆಯ ಮಧ್ಯೆ ಯಾರೋ ಕಳ್ಳರು ಕೋಣೆಯ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಒಳಗಡೆ ಪ್ರವೇಶಿಸಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 32/2021 ಕಲಂ: 457,380 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಾದವ ಪ್ರಾಯ 53 ವರ್ಷ ತಂದೆ: ದಿ. ವೆಂಕಪ್ಪ ಪೂಜಾರಿ ವಾಸ: ಕೋರ್ಯ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 26/02/2021 ರಂದು ಬೆಳಿಗ್ಗೆ 9.30 ಗಂಟೆಗೆ ಬಾಳ್ತಿಲ ಗ್ರಾಮದ ಕಾಂದಿಲ ಪಡ್ಪು ನಲ್ಲಿರುವ ಜಾಗಕ್ಕೆ ಬಂದು ನೋಡಿದಾಗ ಅಲ್ಲಿಯ ತೆಂಗಿನ ಗಿಡಗಳಿಗೆ ಹಾನಿಯಾಗಿದ್ದು. ಈ ವೇಳೆ ಅಲ್ಲಿಯೇ ಇದ್ದ ಶಿವರಾಜ ಎಂಬಾತನು ಬಂದು ನಾವು ಪಂಚಾಯತ್ ವತಿಯಿಂದ ನೀರಿನ ಪೈಪ್ ಅಳವಡಿಸಿಸುತ್ತಿರುವುದಾಗಿ ತಿಳಿಸಿ ಇದನ್ನು ಕೇಳುವವರು ಯಾರು ಎಂದು ಅಲ್ಲಿಂದ ಹೋಗಿರುತ್ತಾನೆ. ನಂತರ ಪಿರ್ಯಾಧಿದಾರರು ಕೆಲಸದಾಳು, ಪ್ರೀತೇಶ ಮತ್ತು ಮಗ ಯಶ್ವತ್ ನೊಂದಿಗೆ ಬಿ ಸಿ ರೋಡಿಗೆ ಬರುತ್ತಿರುವಾಗ ನರಿಕೊಂಬು ಗ್ರಾಮದ ಗ್ರಾಮ ಪಂಚಾಯತ್ ಕಛೇರಿ ಹತ್ತಿರ ಶಿವರಾಜ ಮತ್ತು ಲೋಕೇಶ ರವರು ಮೋಟಾರ ಸೈಕಲ್ ನಲ್ಲಿ ಬಂದು ಪಿರ್ಯಾಧಿದಾರರ ಕಾರನ್ನು ತಡೆದು ನಿಲ್ಲಿಸಿ ಆರೋಪಿತ ಶಿವರಾಜನು ಪಿರ್ಯಧಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅಂಗಿಯ ಕಾಲರನ್ನು ಹಿಡಿದು ಹರಿದು ಕೈಯಲ್ಲಿದ್ದ ಕಲ್ಲಿನಿಂದ ಹೊಡೆಯಲು ಯತ್ನಿಸಿದಾಗ ಪಿರ್ಯಾಧಿದಾರರು ಬಗ್ಗಿದ್ದು ಆ ಸಮಯ ಆರೋಪಿಗಳು ಇಬ್ಬರು ಸೇರಿ ಕಾಲಿನಿಂದ ತುಳಿದಿರುತ್ತಾರೆ. ಪ್ರಿತೇಶನಿಗೆ ಲೋಖೇಶನು ಕನ್ನೆಗೆ ಹೊಡೆದಿರುತ್ತಾನೆ. ಪಿರ್ಯಾಧಿದಾರರು ತೆಂಗಿನ ಗಿಡಗಳಿಗೆ ಹಾನಿಯಾದ ಬಗ್ಗೆ ವಿಚಾರಿಸಿದಕ್ಕೆ ಆರೋಪಿಗಳು ಈ ರೀತಿ ಹಲ್ಲೆ ನಡೆಸಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 26-2021 ಕಲಂ: 341, 504, 324, 323, ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಬೆದರಿಕೆ ಪ್ರಕರಣ: 2

ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವರಾಜ    ಪ್ರಾಯ 38 ವರ್ಷ   ತಂದೆ: ಸಂಜೀವ ಶೆಟ್ಟಿ ವಾಸ: ಕಾಂದಿಲ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 26/02/2021 ರಂದು ಬೆಳಿಗ್ಗೆ 9.30 ಗಂಟೆಗೆ ಮನೆಯಿಂದ ಹೊರಟು ಬಾಳ್ತಿಲ ಗ್ರಾಮ ಕಾಂದಿಲ್ ಕ್ರಾಸ್ ನಲ್ಲಿ  ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ಗುತ್ತಿಗೆದಾರರ ಸಹಾಯಕನಾದ ಅಭಿಲಾಷ ರೊಂದಿಗೆ ಮಾತುಕತೆ ಮಾಡುತ್ತಿರುವ ಸಮಯ ಪರಿಚಯದ ವೆಂಕಪ್ಪ ಪೂಜಾರಿ ರವರ ಮಗ ಯಾದವ ಬಿಳಿ ಬಣ್ಣದ ಟಾಟಾ ವೆಂಚರ ವಾಹನದಲ್ಲಿ ಬಂದು ಕೆಲಸ ನಡೆಯುವ ಸ್ಥಳದಲ್ಲಿ ಸದ್ರಿ ವಾಹನವನ್ನು ನಿಲ್ಲಿಸಿ ಪಿರ್ಯಾಧಿದಾರರಿಗೆ ಅವ್ಯಾಚ ಶಬ್ಧಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಪಿರ್ಯಾಧಿದಾರರ ಪಕ್ಕದಲ್ಲಿ ನಿಂತು ಕೊಂಡಿದ್ದ ಅಭಿಲಾಷ  ಎಂಬುವವರಿಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹಲ್ಲೆ ಮಾಡಲು ಬಂದಿರುತ್ತಾನೆ. ಆಗ ಪಿರ್ಯಾಧಿದಾರರು ತಡೆಯುತ್ತಿದ್ದಂತೆ ಆರೋಪಿತನು ಏಕಾಏಕಿಯಾಗಿ ಪಿರ್ಯಾಧಿದಾರರ ಮೈಗೆ ಕೈ ಹಾಕಿ ನನ್ನ ಕೆನ್ನೆಗೆ ಕೈಯಿಂದ ಬಲವಾಗಿ ಹೊಡೆದ್ದು, ನಂತರ  ಆತನ ವಾಹನದಿಂದ ಕಬ್ಬಿಣದ ರಾಡ್ ನ್ನು ತಂದು ತಲೆಗೆ ಹೊಡೆಯಲು ಯತ್ನಿಸಿದಾಗ ಪಿರ್ಯಾಧಿದಾರರು ಬಲ ಕೈಯನ್ನು ಅಡ್ಡಲಾಗಿ ಹಿಡಿದ ಪರಿಣಾಮ ಬಲ ಕೋಲು ಕೈಗೆ ತಾಗಿ ತೀವ್ರ ಆಘಾತವಾಗಿರುತ್ತದೆ. ನಂತರ ಆರೋಪಿತನು ತನ್ನ ವಾಹನದಲ್ಲಿ ಕುಳಿತು ರಸ್ತೆ ಬದಿಯಲ್ಲಿ ನಿಲ್ಲಿಸಿದ ಪಿರ್ಯಾಧಿದಾರರ ಆಕ್ಟೀವಾ ಸ್ಕೂಟರ್ ಗೆ  ಡಿಕ್ಕಿ ಹೊಡೆಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 25-2021 ಕಲಂ: 504, 506, 323, 324, 279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವಿಪ್ರಸಾದ್ ಎ ಪ್ರಾಯ 26 ವರ್ಷ, ತಂದೆ: ದಿ: ವೆಂಕಪ್ಪ ಗೌಡ, ಆಮ್ಚಿನಡ್ಕ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು, ಎಂಬವರ ದೂರಿನಂತೆ ದಿನಾಂಕ 25.02.2021 ರಂದು ಫಿರ್ಯಾದಿದಾರರು ಅವರ  ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-21-ಆರ್-6345 ನೇಯದರಲ್ಲಿ ಹೋಗುತ್ತಿರುವಾಗ ಸಮಯ ಸುಮಾರು 16-30 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಾವಿನಕಟ್ಟೆ ಬಳಿಯ ಕೊಂರ್ಬಡ್ಕ ಎಂಬಲ್ಲಿ ತಲುಪಿದಾಗ ಆರೋಪಿತರಾದ ಶಶಿ ಮತ್ತು ಹೆಸರು ತಿಳಿಯದ ಇಬ್ಬರು ವ್ಯಕ್ತಿಗಳು ಬುಲೆಟ್ ಮೋಟಾರು ಸೈಕಲ್ ನಂಬ್ರ ಕೆಎ-21-ಡಬ್ಲ್ಯೂ-0939 ನೇಯದರಲ್ಲಿ ಬಂದು ಫಿರ್ಯಾದಿದಾರರ ಮೋಟಾರು ಸೈಕಲನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಆರೋಪಿ ಶಶಿ ಎಂಬಾತನು ಕಬ್ಬಿಣದ ರಾಡನ್ನು ತೆಗೆದು ಫಿರ್ಯಾದಿದಾರರ ತಲೆಗೆ ಹೊಡೆಯಲು ಯತ್ನಿಸಿದಾಗ ಫಿರ್ಯಾದಿದಾರರು ಕೈಯಿಂದ ತಡೆದಿದ್ದು ಪರಿಣಾಮ ಫಿರ್ಯಾದಿದಾರರ ಹಣೆಯ ಬಲಭಾಗ ರಕ್ತಗಾಯ ಹಾಗೂ ಎಡಕೈಗೆ ಗುದ್ದಿದ ಗಾಯವಾಗಿದ್ದು, ಆಗ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ನಡೆಸಿದ್ದು ಬಳಿಕ ಆರೋಪಿತ ಶಶಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ, ಅಕ್ರ 09/2021 ಕಲಂ 341, 324, 323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-02-2021 10:56 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080