ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಆಯಿಷಾ ಸಜ್ಮಾ(11) ತಂದೆ: ಹಮೀದ್ ವಾಸ: ಬೀಜದಡಿ ಮನೆ ಮಿತ್ತಬಾಗಿಲು ಗ್ರಾಮ ಕಿಲ್ಲೂರು ಅಂಚೆ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ  ದಿನಾಂಕ: 25-02-2022 ರಂದು ಪಿರ್ಯಾದಿದಾರರು ತನ್ನ ತಾಯಿ ಬದ್ರುನ್ನಿಸಾ, ದೊಡ್ಡಪ್ಪ ಸಾಹುಲ್ ರವರೊಂದಿಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಸಂತೆಕಟ್ಟೆ ಎಂಬಲ್ಲಿ ರಸ್ತೆ  ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 7:30 ಗಂಟೆಗೆ ಉಜಿರೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 18 ಬಿ 4396 ನೇ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದು ಆಟೋರಿಕ್ಷಾ ಮಗಚಿ ಬಿದ್ದಿರುತ್ತದೆ, ಪರಿಣಾಮ ಪಿರ್ಯಾದಿದಾರರು ಅಲ್ಲಿಯೇ ರಸ್ತೆಗೆ ಬಿದ್ದು ಬಲಕಾಲಿನ ಪಾದಕ್ಕೆ ತರಚಿದ ಗಾಯ ಹಾಗೂ ಆಟೋರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಾದ ಫಾತಿಮಾ ಉನ್ನೀಸ್ ರವರು ಬಲಕಾಲಿಗೆ ಗುದ್ದಿದ ಗಾಯ, ಆಟೋರಿಕ್ಷಾ ಚಾಲಕ ರೆಹಮಾನ್ ರವರು  ಬಲಕೈ ಮಣಿಗಂಟಿಗೆ, ಬಲಕಣ್ಣಿನ ಕೆಳಭಾಗ, ಬಲ ಹಣೆಗೆ ಗುದ್ದಿದ ರಕ್ತಗಾಯಗೊಂಡಿರುತ್ತಾರೆ.ಗಾಯಾಳುಗಳ ಪೈಕಿ ಪಿರ್ಯಾದಿದಾರರು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ಹಾಗೂ  ಫಾತಿಮಾ ಉನ್ನೀಸ್ ಮತ್ತು ರೆಹಮನ್ ರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 34/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕವಿತಾ, ಪ್ರಾಯ 23 ವರ್ಷ, ತಂದೆ: ಸುಂದರ ಗೌಡ, ವಾಸ: ಕರ್ಗಲ್ ಮನೆ, ಕುಳ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 25-02-2022 ರಂದು 20-10 ಗಂಟೆಗೆ ಆರೋಪಿ ಕಾರು ಚಾಲಕ ಜಯಪ್ರಕಾಶ್ ಎಂಬವರು KA-06-M-3641 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಬೊಳುವಾರು ಮುಖ್ಯ ರಸ್ತೆಯಲ್ಲಿ ಬೊಳುವಾರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪ್ರಗತಿ ಆಸ್ಪತ್ರೆಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೇ ರಸ್ತೆಯಲ್ಲಿ ಹೋಗುವ ಇತರ ವಾಹನಗಳನ್ನು ಗಮನಿಸದೇ ಕಾರನ್ನು ಬಲಗಡೆ ತಿರುಗಿಸಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕವಿತಾ ರವರು ಸಹಸವಾರರರಾಗಿ ಅವರ ತಮ್ಮ ಲೋಹಿತ್ ರವರು ಸವಾರರಾಗಿ ಪುತ್ತೂರು ಕಡೆಯಿಂದ ಬೊಳುವಾರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-8390ನೇ ನೋಂದಣಿ ನಂಬ್ರದ ಸ್ಕೂಟರಿಗೆ ಅಪಘಾತವಾಗಿ. ಪಿರ್ಯಾದುದಾರರು ಮತ್ತು ಸವಾರ ಲೋಹಿತ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿನ ಕೋಲು ಕಾಲಿಗೆ ತರಚಿದ ಹಾಗೂ ಗುದ್ದಿದ ನೋವು, ಸೊಂಟದ ಎಡಭಾಗಕ್ಕೆ ಗುದ್ದಿದ ನೋವಾಗಿ, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  35/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕಮಲಾಕ್ಷ ಪೂಜಾರಿ, ಪ್ರಾಯ: 51 ವರ್ಷ. ತಂದೆ: ದಿ/ ವೀರಪ್ಪ ಪೂಜಾರಿ, ವಾಸ: ಪಾದೆ ಮನೆ, ತೋಟತ್ತಾಡಿ ಗ್ರಾಮ,  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಬೆಳ್ತಂಗಡಿ ತಾಲೂಕು, ತೋಟತ್ತಾಡಿ ಗ್ರಾಮದ ಬೈಲಂಗಡಿ ಎಂಬಲ್ಲಿರುವ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅದ್ಯಕ್ಷರಾಗಿದ್ದು ದಿನಾಂಕ: 25-02-2022 ರಂದು ರಾತ್ರಿ  ಸುಮಾರು 9.30 ಗಂಟಿಯ ಸಮಯಕ್ಕೆ ಶಿವರಾತ್ರಿ ಪ್ರಯುಕ್ತ ಶ್ರಮದಾನ ಕೆಲಸ ಮುಗಿಸಿ ಭಜನಾ ಮಂದಿರ ಹಾಗೂ ಬಾಲ ಮಂದಿರಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ:26-02-2022 ರಂದು ಬೆಳಗ್ಗೆ 08.30 ಗಂಟೆಯ ಸಮಯಕ್ಕೆ ಸತೀಶ್  ಎಂಬವರು ಸೌಂಡ್ಸ್‌ ಸಿಸ್ಟಂ ಬಗ್ಗೆ ಭಜನಾ ಮಂದಿರಕ್ಕೆ ಬಂದಾಗ,  ಬಾಲ ಮಂದಿರದ ಹುಂಡಿ ಹಾಗೂ ಸೋಮನಾಥೇಶ್ವರ  ಭಜನಾ ಮಂದಿರದ ಹುಂಡಿಯನ್ನು ಪ್ರಸ್ತುತ  ನಿರ್ಮಾಣ ಹಂತದಲ್ಲಿರುವ ಶ್ರೀ ಸೋಮನಾಥೇಶ್ವರ  ದೇವಸ್ಥಾನದ ಪಶ್ವಿಮ ಬದಿಯಲ್ಲಿ ಎಸೆದಿರುವುದು ಕಂಡು ಬರುವುದಾಗಿ  ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಭಜನಾ ಮಂದಿರಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಬಾಲ ಮಂದಿರದ ಹಾಗೂ ಶ್ರೀ ಸೋಮನಾಥೇಶ್ವರ ಭಜನಾ ಮಂದಿರದ ಹುಂಡಿಯನ್ನು   ಯಾವುದೋ ಆಯುಧದಿಂದ ಮೀಟಿ ತೆರೆದು ಅದರ ಒಳಗಿದ್ದ ಸುಮಾರು ರೂ. 4000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 18/2022 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲೋಕೇಶ್ ಪ್ರಾಯ:  36  ವರ್ಷ ತಂದೆ: ಕೃಷ್ಣಪ್ಪ ಪೂಜಾರಿ ವಾಸ: ನಾಯಿಲ ಬೋರುಗುಡ್ಡೆ ಮನೆ, ನರಿಕೊಂಬು ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಜಗದೀಶ (39) ಮತ್ತು ಬಾವ ದಿನಾಂಕ:25-02-2022 ರಂದು ಸಂಜೆ 4.30 ಗಂಟೆಗೆ ದನವನ್ನು ಹುಡುಕಿಕೊಂಡು ಬರುವುದಾಗಿ ಮನೆಯಿಂದ ಹೋದವರು ಕತ್ತಲಾದರೂ ಮನೆಗೆ ಬಾರದಿರುವುದನ್ನು ಕಂಡು ಸುಮಾರು 7.30 ಗಂಟೆಗೆ ಹುಡುಕಿಕೊಂಡು ಹೋಗಲಾಗಿ ಪಾಣೆಮಂಗಳೂರು ಗ್ರಾಮದ ಸ.ನಂ.172 ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಕೋರೆಯ ನೀರಿನ ಗುಂಡಿಯ ಬಳಿ ಮೇಯಲು ಬಿಟ್ಟ ದನ ಮತ್ತು ಜಗದೀಶ ಮತ್ತು ನಿಧೀಶ್ ನ ಚಪ್ಪಲಿಯನ್ನು ಕಂಡು ಪೊಲೀಸರಿಗೆ ತಿಳಿಸಿದ್ದು, ಬಳಿಕ ಅಗ್ನಿಶಾಮಕ ದಳದವರ ಮತ್ತು ಪೊಲೀಸರ ಸಹಾಯದಿಂದ ಜಗದೀಶ ಮತ್ತು ನಿಧೀಶ್ ರವರನ್ನು ನೀರಿನಿಂದ ಮೇಲಕ್ಕೆತ್ತಿ ನೋಡಲಾಗಿ ಅವರು ಮೃತಪಟ್ಟಿರುವುದು ಕಂಡು ಬರುತ್ತದೆ. ಕೋರೆಯ ನೀರಿನ ಗುಂಡಿಗೆ ಈ ಹಿಂದೆ ಹಲವಾರು ಜಾನುವಾರುಗಳು ಬಿದ್ದು ಪ್ರಾಣ ಬಿಟ್ಟಿದ್ದು, ಈ ವಿಷಯವನ್ನು ಎದ್ರಿಯವರಿಗೆ ತಿಳಿಸಿದ್ದರೂ ಎದ್ರಿಯವರು ನಿರ್ಲಕ್ಷತೆ ವಹಿಸಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 21/2022  ಕಲಂ: 304(ಎ)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೋಮಪ್ಪ ನಾಯ್ಕ (62) ತಂದೆ: ದೇವಪ್ಪ ನಾಯ್ಕ ವಾಸ: ರೆಂಜಾಳ ಮನೆ , ಮರ್ಕಂಜ ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ, ಪಿರ್ಯಾದುದಾರರ ತಂದೆ ದೇವಪ್ಪ ನಾಯ್ಕ (85) ರವರು ದಿನಾಂಕ: 26.02.2022 ರಂದು ತಮ್ಮ ಮನೆಯಾದ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ರೆಂಜಾಳ ಎಂಬಲ್ಲಿ ಬೆಳಿಗ್ಗೆ 09:00 ಗಂಟೆಗೆ ತಮ್ಮ ಮನೆಯಲ್ಲಿದ್ದ ರಬ್ಬರ್ ಗೀಡಕ್ಕೆ ಹಾಕಲು ತಂದಿದ್ದ ದ್ರವರೂಪದ ಕೀಟನಾಶಕವನ್ನು ಸೇವಿಸಿ ಗೊಬ್ಬೆ ಹೊಡೆಯುತ್ತಿದ್ದವರನ್ನು, ಪಿರ್ಯಾದುದಾರರು ತಮ್ಮ ನೆರೆಮನೆಯ ರಾಜೇಶ್ ರವರ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್  ಆಸ್ಪತ್ರೆಗೆ ಕರೆದುಕೊಂಡು ಹೋಗುವರೇ ಪುತ್ತೂರು ಬಳಿ ತಲುಪುತ್ತಿದ್ದಂತೆ ದೇವಪ್ಪ ನಾಯ್ಕರವರ ಮಾತನಾಡುವುದನ್ನು ನಿಲ್ಲಿಸಿದಾಗ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ದೇವಪ್ಪ ನಾಯ್ಕರವರ ಮೃತಪಟ್ಟಿರುವುದಾಗಿ ಸಮಯ ಸುಮಾರು 13:15  ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್  10/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2022 11:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080