ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವಿಚಂದ್ರ ಪ್ರಾಯ 32 ವರ್ಷ ತಂದೆ: ಶೇಖರ್‌ ಪೂಜಾರಿ ವಾಸ: ಗಾಂಧಿನಗರ ಮನೆ, ಪೇರಮೊಗರು ಅಂಚೆ, ಕೆದಿಲ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25-02-2023 ರಂದು 23:05 ಗಂಟೆಗೆ ಆರೋಪಿ ಹೆಸರು ಮತ್ತು ನೋಂದಣಿ ನಂಬ್ರ ತಿಳಿದು ಬಾರದ ವಾಹನದ ಚಾಲಕ ನೋಂದಣಿ ನಂಬ್ರ ತಿಳಿದು ಬಾರದ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೇರಮೊಗರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ಗಡಿಯಾರ ಕಡೆಯಿಂದ ಪೇರಮೊಗರು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ತಂದೆ ಶೇಖರ್‌ ಪೂಜಾರಿ ರವರಿಗೆ ಅಪಘಾತವಾಗಿ, ಶೇಖರ್‌ ಪೂಜಾರಿ ರವರ ತಲೆ ಭಾಗ ಸಂಪೂರ್ಣ ಜಖಂಗೊಂಡು ಮೃತಪಟ್ಟಿರುತ್ತಾರೆ. ಆರೋಪಿ ವಾಹನದ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೇ ಮತ್ತು ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆಯಲ್ಲಿ 37/2023 ಕಲಂ: 279, 304(A) ಐಪಿಸಿ & 134 (A&B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಂಜು ಕಿರಣ್‌ ಪ್ರಾಯ 22 ವರ್ಷ ತಂದೆ: ವಿಶ್ವನಾಥ ನಾಯ್ಕ ವಾಸ: ಶಾಂತಿನಗರ ಮನೆ, ಉಜಿರೆ ಅಂಚೆ ‍ಮತ್ತು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 26-02-2023 ರಂದು 12:45 ಗಂಟೆಗೆ ಆರೋಪಿ ಕಾರು ಚಾಲಕ ಸುಧಾಕರ ತೋನ್ಸೆ ಎಂಬವರು KA-20-MB-0232 ನೇ ನೋಂದಣಿ ನಂಬ್ರದ ಕಾರನ್ನು ಉಪ್ಪಿನಂಗಡಿ-ಬೆಳ್ತಂಗಡಿ ರಾಜ್ಯ ಹೆದ್ದಾರಿಯಲ್ಲಿ ಬೆಳ್ತಂಗಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಪೆಟ್ರೋಲ್‌ ಬಂಕ್‌ ಎದುರುಗಡೆ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ರಸ್ತೆ ಬದಿಯಲ್ಲಿ ಮೆಣಸು ವ್ಯಾಪಾರ ಮಾಡಿಕೊಂಡಿದ್ದ ಪಿರ್ಯಾದುದಾರರಿಗೆ ಕಾರು ಅಪಘಾತವಾಗಿ, ನಂತರ ಮುಂದುವರಿದು ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿಕೊಂಡಿದ್ದ KA-19-ED-9224 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಕಾರು ಅಪಘಾತವಾಗಿ, ಮುಂದಕ್ಕೆ ಹೋಗಿ ತಗ್ಗು ಪ್ರದೇಶದಲ್ಲಿ ನಿಂತಿರುತ್ತದೆ.  ಈ ಅಪಘಾತದಿಂದ ಪಿರ್ಯಾದುದಾರರಿಗೆ ಎಡಕಾಲಿನ ಕೋಲು ಕಾಲಿಗೆ ಗುದ್ದಿದ ರಕ್ತಗಾಯ, ಎಡ ಸೊಂಟದ ಬಳಿ ತರಚಿದ ಮತ್ತು ಗುದ್ದಿದ ನೋವು, ಬೆನ್ನಿಗೆ ಮತ್ತು ದೇಹಕ್ಕೆ ಗುದ್ದಿದ ನೋವಾದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ  ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 38/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಘುನಾಥ,ಪ್ರಾಯ;42ವರ್ಷ ತಂದೆ; ಮಹಾಲಿಂಗ ನಾಯ್ಕ ಮೇಗಿನಪೇಟೆ ಮನೆ, ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ಹಾಗೂ ಫಿರ್ಯಾದಿದಾರರ ದೊಡ್ಡಪ್ಪ ದಿ ವಾಸು ನಾಯ್ಕ ರವರ ಮಗ ಮೃತ ಅರವಿಂದ ಭಾಸ್ಕರವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು. ಅರವಿಂದ ಭಾಸ್ಕರ ರವರು  ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು,ಸದ್ರಿ ಮನೆಯ ಸೆಂಟ್ರಿಂಗ್‌  ಕೆಲಸವನ್ನು ಯೋಗೀಶ ಗೌಡ ಎಂಬಾತನು ಮಾಡಿಸುತ್ತಿದ್ದು ಆ ಬಳಿಕ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯತೆಯಿಂದಿರುತ್ತಾನೆ. ಅರವಿಂದ ಭಾಸ್ಕರನು ಅವರ ಅಡಿಕೆ ತೋಟದ ಅಡಿಕೆಯನ್ನು ತೆಗದುಕೊಂಡು ಹೋಗಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಶಾಳು ಆಕ್ಷೇಪಿಸುತ್ತಿರುವುದಲ್ಲದೇ ಕೆಲವೊಂದು ಬಾರಿ ಯೋಗೀಶನು  ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿರುವ ಬಗ್ಗೆ ಹಾಗೂ ಇದಕ್ಕೋಸ್ಕರ ಆತನು ಹೆದರಿ ರಾತ್ರಿ ವೇಳೆಯಲ್ಲಿ ಆತನ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ಕಾಣಸಿಕ್ಕಿ ಫಿರ್ಯಾದಿದಾರರಲ್ಲಿ ತಿಳಿಸಿರುತ್ತಾರೆ. ದಿ; 26.02.2023 ರಂದು ಬೆಳಿಗ್ಗೆ ಸುಮಾರು 08.00 ಗಂಟೆ ಸಮಯಕ್ಕೆ ಆಶಾಳು ಫಿರ್ಯಾದಿದಾರರ ತಂದೆಯವರಿಗೆ ಫೋನು ಕರೆ ಮಾಡಿ ಪತಿ ಅರವಿಂದ ಭಾಸ್ಕರ ರವರು ರಾತ್ರಿ 10.00 ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು ಈ ದಿನ ಬೆಳಗ್ಗಿನ ಜಾವ 07.30 ಗಂಟೆಯ ಸಮಯಕ್ಕೆ ನಾನು ಎದ್ದು ನೋಡುವಾಗ ಗಂಡನವರು ಮಲಗಿದ್ದಲ್ಲಿಂದ ಏಳುತ್ತಿಲ್ಲ. ನೀವು ಮನೆಗೆ ಬನ್ನಿ ಎಂಬುದಾಗಿ ಹೇಳಿರುವ ವಿಚಾರವನ್ನು ತಿಳಿಸಿದ ಬಳಿಕ ಅಂಬ್ಯುಲೆನ್ಸ್‌ ವಾಹನದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿರುವ ವಿಚಾರ ತಿಳಿದು ಫಿರ್ಯಾದಿದಾರರು ಕೂಡಾ ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯಕ್ಕೆ ವಿಟ್ಲ ಆಸ್ಪತ್ರೆಗೆ ಬಂದಿದ್ದು ವೈಧ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದು, ಮೃತದೇಹದ ಸ್ಥಿತಿಗತಿಯನ್ನು ನೋಡಿದಾಗ ಮೃತ ಅರವಿಂದ ಭಾಸ್ಕರನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಯೋಗೀಶ ಗೌಡ ಹಾಗೂ ಅರವಿಂದ ಭಾಸ್ಕರನ ಪತ್ನಿ ಆಶಾರವರು ಸೇರಿಕೊಂಡು ಕೊಲೆ ಮಾಡಿರುವ ಸಂಶಯವಿರುವುದಾಗಿ ತಿಳಿಸಿದಂತೆ ವಿಟ್ಲ ಪೊಲೀಸ್‌ ಠಾಣೆ ಅ ಕ್ರ 30/2023 ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 3(2)(V),3(2)(Va) SC/ST Act -2015ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಮಯಂತಿ, ಪ್ರಾಯ: 38 ವರ್ಷ,     ಗಂಡ: ಮೋಹನ     ವಾಸ: ನೆಲ್ಲಿಕಟ್ಟೆ ಮನೆ, ಮುಳಿಕ್ಕಾರು,  ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮೃತ ಮೋಹನ್‌ ಪ್ರಾಯ: 39 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಚಟ ಹೊಂದಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ  ದಿನಾಂಕ: 25.02.2023 ರಂದು ರಾತ್ರಿ 9.30 ಗಂಟೆಗೆ ಮನೆಯಲ್ಲಿ ಊಟ ಮಾಡಿ ಮಲಗಿದವರು ಈ ದಿನ ಬೆಳಿಗ್ಗೆ ಮೃತನ ತಾಯಿ ರುಕ್ಮಿಣಿಯವರು ಬೆಳಿಗ್ಗೆ 6.30 ಗಂಟೆಗೆ ಎದ್ದು ನೋಡಲಾಗಿ ತನ್ನ ವಾಸದ ಮನೆಯ ಎದುರಿನ ಹಾಲ್‌ ನಲ್ಲಿ ಮನೆಯ ಛಾವಣಿಗೆ ಅಳವಡಿಸಿದ ಬಿದಿರಿನ ಪಕ್ಕಾಸಿಗೆ ನೈಲಾನ್‌ ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ 16/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-02-2023 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080