ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಟೋನಿ ತೋಮಸ್‌, ಪ್ರಾಯ 22 ವರ್ಷ, ತಂದೆ: ತೋಮಸ್‌ ವಿ.ಎಂ, ವಾಸ: ವಳಕಪಾರ ಮನೆ, ಚುಳ್ಳಿಕಾರ, ಪಡಿಮರದ್‌ ಅಂಚೆ, ವೆಳ್ಳರಿಕುಂಡ ತಾಲೂಕು, ಕಾಸರಗೋಡು ಎಂಬವರ ದೂರಿನಂತೆ ದಿನಾಂಕ 25-04-2022 ರಂದು 23-00 ಗಂಟೆಗೆ ಹೆಸರು ತಿಳಿದು ಬಾರದ ಆರೋಪಿ ಲಾರಿ ಚಾಲಕ ನೋಂದಣಿ ನಂಬ್ರ ತಿಳಿದು ಬಾರದ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ  ತಾಲೂಕು ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸಹಸವಾರರಾಗಿ, ಪ್ರಜ್ವಲ್‌ ಎಸ್‌  ರಾವ್‌ ರವರು ಸವಾರರಾಗಿ ನೆಲ್ಯಾಡಿ ಕಡೆಯಿಂದ ದೇರಳಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KL-60-3920 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಮೋಟಾರ್‌ ಸೈಕಲ್‌ ರಸ್ತೆಗೆ ಬಿದ್ದು, ಪಿರ್ಯಾದುದಾರರು ರಸ್ತೆಯ ಎಡಬದಿಗೆ ಬಿದ್ದು,  ಪ್ರಜ್ವಲ್‌ ಎಸ್‌  ರಾವ್‌ ರವರು ರಸ್ತೆಯ ಮಧ್ಯಭಾಗಕ್ಕೆ ಬಿದ್ದು, ಅಪಘಾತದ ಲಾರಿಯ ಚಕ್ರವು ಪ್ರಜ್ವಲ್‌ ಎಸ್‌  ರಾವ್‌ ರವರ  ಮೈ ಮೇಲೆ ಹಾದು ಹೋಗಿ ಗಂಭೀರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುತ್ತಾರೆ. ಪಿರ್ಯಾದುದಾರರಿಗೆ ಎರಡು ಮೊಣಕಾಲು ಹಾಗೂ ಕಾಲಿನ ಹೆಬ್ಬೆರಳಿಗೆ ತರಚಿದ ಗಾಯಗಳಾಗಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತದ ಬಳಿಕ ಆರೋಪಿ ಲಾರಿ ಚಾಲಕ ಗಾಯಾಳುವನ್ನು ಚಿಕಿತ್ಸೆಗೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ ಮತ್ತು ಪೊಲೀಸ್‌ ಠಾಣೆಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  79/2022  ಕಲಂ: 279,  337, 304(ಎ) ಐಪಿಸಿ & ಕಲಂ: 134(ಎ)&(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಜೀಜ್‌, ಪ್ರಾಯ 46 ವರ್ಷ, ತಂದೆ: ಹೈದ್ರೋಸ್‌, ವಾಸ: ಬೊಳಂತಿಲ ಮನೆ, 34 ನೇ ನೆಕ್ಕಿಲಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 26-04-2022 ರಂದು 15-00  ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಜಯಪ್ರಸಾದ್‌  ಎಂಬವರು  KA-70-H-4530 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು  ಪೆದಮಲೆ-ಬಾಜಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪೆದಮಲೆ ಕಡೆಯಿಂದ ಬಾಜಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಉರ್ಲಡ್ಕ ಗೋದಾಮುಗುಡ್ಡೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಚಾಲಕರಾಗಿ, ಹಮೀದ್‌, ಶಾಹಿದಾ ಮತ್ತು ಕು|| ಸಮ್ನಾಜ್‌ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಬಾಜಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ka-21-c-0446 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಮೋಟಾರ್‌ ಸೈಕಲ್‌ ಅಪಘಾತವಾಗಿ, ಅಟೋರಿಕ್ಷಾದಲ್ಲಿದ್ದ  ಕು|| ಸಮ್ನಾಜ್‌ ಳ ಬಲಕಾಲಿನ ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಕು|| ಸಮ್ನಾಜ್‌ ಳನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಗೆ ಕರೆದುಕೊಂಡು ಹೋಗಿರುತ್ತಾರೆ.  ಆರೋಪಿ ಸವಾರನಿಗೂ ಬಲಕಾಲಿನ ಪಾದಕ್ಕೆ ಗಾಯವಾಗಿರುತ್ತದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  80/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಭಾಸ್ಕರ ಪೈ ಪ್ರಾಯ 40 ವರ್ಷ ತಂದೆ: ಆರ್ ವಿ ಪೈ ವಾಸ: ಜಿ-6 ಎಸ್ ವಿ ಎಸ್ ಪ್ರೆಸ್ಟಿನ್ ಅಪಾರ್ಟ್ ಮೆಂಟ್ ಜೆ ಪಿ ನಗರ ಬೆಂಗಳೂರು ಎಂಬವರ ದೂರಿನಂತೆ ದಿನಾಂಕ 26-04-2022 ರಂದು ಅಪರಾಹ್ನ 3.05 ಗಂಟೆಗೆ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲ್ ಟೋಲ್ ಗೇಟ್ ಬಳಿ ತಮ್ಮ ಬಾಬ್ತು ಕಾರು KA 05 MW 9081 ನೇದರಲ್ಲಿ ಕ್ಯೂ ನಲ್ಲಿ ನಿಂತಿರುವಾಗ ಎಡಬದಿಯಿಂದ ಬಂದ ನೀಲಿ ಬಣ್ಣದ KA 19 MG 7506  ಕಾರಿನಲ್ಲಿ ಇಬ್ಬರು ಹುಡುಗರು ಟೋಲನ್ನ ಎಡಬದಿಯಿಂದ ನುಗ್ಗಿ ಬರಲು ಪ್ರಯತ್ನಿಸಿ, ಪಿರ್ಯಾಧಿದಾರರ ಕಾರಿನ ಮುಂದೆ ಬರಲು ಪ್ರಯತ್ನಿಸಿರುತ್ತಾರೆ, ಆಗ ಪಿರ್ಯಾಧಿದಾರರು ಪ್ರಶ್ನೆಸಿದಾಗ  ಪಿರ್ಯಾಧಿದಾರರನ್ನು ಅಡ್ಡ ಗಟ್ಟಿ, ಕೆಟ್ಟ ಮಾತುಗಳಿಂದ ಬೈದು, ಬೆದರಿಕೆ ಹಾಕಿರುತ್ತಾರೆ. ಆಗ ಕಾರಿನಿಂದ ಇಳಿದು ಪ್ರಶ್ನೆ ಮಾಡಲು ಹೋದ ಪಿರ್ಯಾಧಿದಾರರ ಮೇಲೆ ಸದ್ರಿ ಇಬ್ಬರು ವ್ಯಕ್ತಿಗಳು ಕಾಲಿನಿಂದ ಪಿರ್ಯಾಧಿದಾರರಿಗೆ ಒದ್ದು ಹಲ್ಲೆ ಮಾಡಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 45/2022  ಕಲಂ: 341, 504, 506, 323 ಜೊತೆ 34  ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 26.04.2022 ರಂದು ಸುಬ್ರಮಣ್ಯ ಪೊಲೀಸ್‌ ಠಾಣೆಯಲ್ಲಿ ಅ.ಕ್ರ ನಂಬ್ರ  48/2022 ಕಲಂ:   420,504,507 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-04-2022 12:52 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080