ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಜ್ವಲ್(24) ತಂದೆ:ರಮೇಶ ವಾಸ:ಪ್ರಗತಿ ನಿವಾಸ ಮನೆ, ಅಯ್ಯಪ್ಪ ನಗರ , ಕುವೆಟ್ಟು ಗ್ರಾಮ, ಗುರುವಾಯನ ಕೆರೆ ಎಂಬವರ ದೂರಿನಂತೆ ದಿನಾಂಕ: 25-06-2022 ರಂದು ಪಿರ್ಯಾದಿದಾರರು KA 70 M 2890 ನೇ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ವಿಷ್ಣುರವರನ್ನು ಕುಳ್ಳಿರಿಸಿಕೊಂಡು ಲಾಯಿಲ ಕಡೆಯಿಂದ  ಬೆಳ್ತಂಗಡಿಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 9.05 ಗಂಟೆಗೆ ಬೆಳ್ತಂಗಡಿ ತಾಲೂಕು ,ಬೆಳ್ತಂಗಡಿ ಕಸಬಾ ಗ್ರಾಮದ ದಾಮೋದರ ಆಸ್ಪತ್ರೆಯಬಳಿ  ತಲುಪುತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಲಾಯಿಲ ಕಡೆಗೆ ಕೆಎ70 ಇ 3751 ನೇ ಮೋಟಾರು ಸೈಕಲ್ ನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿ ಒಂದು ವಾಹನವನ್ನು ಓವರ್ ಟೇಕ್ ಮಾಡುವರೇ ತೀರ ಬಲ ಬದಿಗೆಚಲಾಯಿಸಿ ಕೊಂಡುಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೋಡೆದು ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದರು, ಪರಿಣಾಮ ಮೋಟಾರು ಸೈಕಲ್ ಸವಾರ ಮಹಮ್ಮದ್ ಮುಸ್ತಾಫಾ ರವರಿಗೆ ಬೆನ್ನಿಗೆ ಗುದ್ದಿದ ರಕ್ತಗಾಯ,ಸಹ ಸವಾರ ಮಹಮ್ಮದ್ ಇಬ್ರಾಹಿಮ್ ಕೈಫ್ ರವರಿಗೆ ಬೆನ್ನಿಗೆ ಹಾಗೂ ಬಲಕೈಗೆ ಗುದ್ದಿದ ರಕ್ತಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಧಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 91/2022 ಕಲಂ: 279, 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪದ್ಮಾನಾಭ ನಾಯ್ಕ್ (52) ತಂದೆ ತುಕ್ರ ನಾಯ್ಕ ಅಗರಗಂಡಿ ಮನೆ, ಮಣಿನಾಲ್ಕೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25.6.2022 ರಂದು ಬೆಳಿಗ್ಗೆ ಪಿರ್ಯಾದಿದಾರರ ಪತ್ನಿ ತಾಯಿ ಮನೆಗೆ ಹೋಗಿ ಅಡುಗೆ ಪಾತ್ರೆಗಳನ್ನು  ತೊಳೆದು ಮನೆಯ ಹೊರಗಢೆ ಒಣಗಲು ಇಟ್ಟು ಬೆಳಿಗ್ಗೆ 10.00 ಗಂಟೆಗೆ  ಮನೆಗೆ ಬಂದಿರುತ್ತಾರೆ. ನಂತರ ಸಾಯಂಕಾಲ   05 ಗಂಟೆಗೆ  ಪಾತ್ರೆಗಳನ್ನು  ಒಳಗೆ ಇಟ್ಟು ಬರಲು ತೆರಳಿದ ಸಮಯ  ಸ್ನಾನ ಮಾಡಲು ಉಪಯೋಗಿಸುವ 1 ಅಲ್ಯೂಮಿನಿಯಂ ಪಾತ್ರೆ (ಹಂಡೆ) ಮತ್ತು ಅಡುಗೆ ಮಾಡಲು ಉಪಯೋಗಿಸುವ 2 ಪಾತ್ರೆಗಳು ಹಾಗೂ 2 ಪೈಬರ್ ಚೇರ್  ಕಳವು ಮಾಡಿದ್ದು ಕಳುವಾದ ಸ್ವತ್ತುಗಳ ಅಂದಾಜು ಮೌಲ್ಯ 3500 ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 44/2022 ಕಲಂ 379  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಾಯ: 68 ವರ್ಷ ತಂದೆ: ದಿ/ಇದಿನಾ ಬ್ಯಾರಿ ವಾಸ: ಕೋಡಿ ಮನೆ ಕೆದಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರವರು ದಿನಾಂಕ 25.06.2022 ರಂದು 18.30 ಗಂಟೆಗೆ ತನ್ನ ಪತ್ನಿ ಶ್ರಿಮತಿ ಅಲಿಮಾ(60), ಮಗಳು ಶ್ರೀಮತಿ ಫಾತಿಮಾ ಮತ್ತು ಅಳಿಯ ಇಸುಬು ರವರ ಜೊತೆ ತನ್ನ ಮನೆಯಲ್ಲಿ ಇದ್ದ ಸಮಯ ಗುರುತು ಪರಿಚಯ ಇಲ್ಲದ 08 ಮಂದಿ ಸಮಾನ ಉದ್ದೇಶದಿಂದ ಏಕಾಏಕಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರನ್ನು ಉದ್ದೇಶೀಸಿ ಮಲೆಯಾಳಿ ಭಾಷೆಯಲ್ಲಿ “ನಿನ್ನ ಮಗ ಆರೀಫ ಎಲ್ಲಿದ್ದಾನೆ?” ಎಂದು ಕೇಳಿ ಕೈಯಿಂದ ಬೆನ್ನಿಗೆ ಹೊಡೆದು ಕಾಲಿನಿಂದ ಪಿರ್ಯಾದುದಾರರ ಎರಡೂ ಕಾಲಿಗೆ ತುಳಿದಿರುತ್ತಾರೆ. ಈ ಸಮಯ ಬಿಡಿಸಲು ಬಂದ ಪಿರ್ಯಾದುದಾರರ ಪತ್ನಿ ಶ್ರಿಮತಿ ಅಲಿಮಾ ಹಾಗೂ ಅಳಿಯ ಇಸುಬುರವರವನ್ನು ಆರೋಪಿಗಳು ಕೈಯಿಂದ ದೂಡಿ ಹಾಕಿರುತ್ತಾರೆ ಆ ಬಳಿಕ ಪಿರ್ಯಾದುದಾರರನ್ನು ಉದ್ದೇಶಿಸಿ ಪುನಃ ಮಲಯಾಳಿ ಭಾಷೆಯಲ್ಲಿ ಕೊಲೆ ಬೆದರಿಕೆ ವಾಹನದಲ್ಲಿ ಹೊರಟು ಹೋಗಿರುತ್ತಾರೆ. ಈ ಹಲ್ಲೆಯಿಂದ ಗಾಯಗೊಂಡ ಪಿರ್ಯಾದುದಾರರು ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ 51/2022 ಕಲಂ 143, 147, 448, 323, ಜೊತೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಖಾದರ್ ಪ್ರಾಯ: 52 ವರ್ಷ ತಂದೆ: ದಿ/ಮೊಯಿದು ಕುಂಞಿ ವಾಸ: ಕೆರೆಮೂಲೆ ಮನೆ ಚಿಕ್ಕಮುಡ್ನೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 26.06.2022 ರಂದು ಸಂಜೆ ಸಮಯ ಸುಮಾರು 17.20 ಗಂಟೆಗೆ ತನ್ನ ಮನೆಯಿಂದ ಕೆರೆಮೂಲೆ ಜಂಕ್ಷನನಲ್ಲಿ ಚಾ ಕುಡಿಯಲು ತೆರಳುತ್ತಿದ್ದಾಗ ಆರೊಪಿತ ಅಬ್ದುಲ್ ಖಾದರ್ ಎಮಬಾತನು ನನ್ನನ್ನು ಕೆರೆಮೂಲೆ ಜಂಕ್ಷನನಲ್ಲಿ ತಡೆದು ನಿಲ್ಲಿಸಿ ಮಲಯಾಳಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅವನ ಕೈಯಲ್ಲಿದ್ದ ಸಣ್ಣ ಪಿಕ್ಕಾಸಿನಿಂದ ಪಿರ್ಯಾದುದಾರರ ತಲೆಯ ಎಡಭಾಗಕ್ಕೆ, ಎದೆಗೆ ಮತ್ತು ಎಡಕೈಗೆ ಹೊಡೆದಿದ್ದು ಅದರ ಪರಿಣಾಮ ಪಿರ್ಯಾದುದಾರರ ಎದೆಗೆ ತರಚಿದ ಗಾಯವಾಗಿದ್ದು ಪಿರ್ಯಾದುದಾರರು ಬೊಬ್ಬೆ ಹಾಕಿ ಕುಸಿದು ಬಿದ್ದಿರುತ್ತಾರೆ, ಪಿರ್ಯಾದುದಾರರ ಬೊಬ್ಬೆ ಕೇಳಿ ಪಿರ್ಯಾದುದಾರರ ಅಳಿಯ ಉಮ್ಮರ ಶಾಫಿ ಮತ್ತು ಹೋಟೆಲ್‌ನಲ್ಲಿದ್ದ ಉಮ್ಮರ್  ಹಾಗೂ ಅಲ್ಲಿದ್ದ ಸಾರ್ವಜನಿಕರು ಬರುವುದನ್ನು ನೋಡಿದ ಆರೋಪಿತ ತನ್ನ ಬಾಬ್ತು ಸ್ಕೂಟರನಲ್ಲಿ ತನ್ನ ಕೈಯಲ್ಲಿಂದ ಪಿಕ್ಕಾಸನ್ನು ತೆಗದುಕೊಂಡು ಆತನ ಮನೆಗೆ ತೆರಳುವಾಗ “ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ” ಎಂದು ಜೀವ ಬೆದರಿಕೆ ಹಾಕಿ ತೆರಳಿರುತ್ತಾನೆ, ಪಿರ್ಯಾದುದಾರರು ಕುಸಿದು ಬಿದ್ದವರನ್ನು ಅವರ ಅಳಿಯ ಉಮ್ಮರ್ ಶಾಫಿ, ಹೋಟೆಲ್ ಉಮ್ಮರ್ ಹಾಗೂ ರಿಕ್ಷಾಚಾಲಕ ಅಬ್ದುಲ್ ಖಾದರ್ ರವರು ಪಿರ್ಯಾದುದಾರರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ 52/2022 ಕಲಂ 341, 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಖಾದರ್ ಪ್ರಾಯ; 63 ವರ್ಷ ತಂದೆ: ದಿ/ಅಬೂಬಕ್ಕರ್ ವಾಸ: ಕೆರೆಮೂಲೆ ಮನೆ ಚಿಕ್ಕಮೂಡ್ನುರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ನಾಟಿ ವೈದ್ಯರಾಗಿ  ಕೆಲಸಮಾಡುತ್ತಿದ್ದು ದಿನಾಂಕ;- 26.06.2022ರಂದು ಸಾಯಂಕಾಲ  5.00 ಗಂಟೆಗೆ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆರೆ ಮೂಲೆ ಎಂಬಲ್ಲಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಿಂತಿರುವ ಸಮಯ ನನಗೆ ಸಿಗುವ ಅಡುಗೆಯನ್ನು ತಪ್ಪಿಸಿ ಬೇರೆಯವರಿಗೆ ಕೊಡಿಸಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ದ್ವಿಚಕ್ರ ವಾಹನದಲ್ಲಿದ್ದ ಹೆಲ್ಮೆಟ್‌ ನಿಂದ ಪಿರ್ಯಾದಿದಾರರಿಗೆ ತಲೆಗೆ, ಎದೆಗೆ ಹಲ್ಲೆ ನಡೆಸಿದಾಗ ಪಿರ್ಯಾದಿದಾರರು ನೆಲ್ಲಕ್ಕೆ ಬಿದ್ದು ಪಿರ್ಯಾದಿದಾರರ   ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು ನಂತರ ಪಿರ್ಯಾದಿದಾರರು ಸಾವರಿಸಿಕೊಂಡು ಎದ್ದು ನಿಂತಾಗ ಅಬ್ದುಲ್‌ ಖಾದರ್‌ನ ಮನೆಗೆ ಹೋದನು ನಂತರ ಕೂಡಲೇ ಅಬ್ದುಲ್‌ ಖಾದರ್‌ನ  ಮಗ ಸಿರಾಜ್‌ ಅಲ್ಲಿಗೆ ಬಂದು ಪಿರ್ಯಾದಿದಾರರ  ಎರಡೂ ಕೆನ್ನೆಗಳಿಗೆ  ಕೈಯಿಂದ ಹಲ್ಲೆ ನಡೆಸಿರುತ್ತಾನೆ.  ಆ ಸಮಯ ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಪರಿಚಯದ ಜಹಿರುದ್ದೀನ್‌ ಹಾಗೂ ರಹಿಮಾನ್‌ರವರು ಹಲ್ಲೆ ನಡೆಸುವುದನ್ನು ತಡೆದು ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಒಂದು ಆಟೋ ರಿಕ್ಷಾದಲ್ಲಿ  ಪುತ್ತೂರು ಹಿತಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯ ಬಗ್ಗೆ ದಾಖಲು  ಮಾಡಿರುತ್ತಾರೆ.  ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣಾ ಅಕ್ರ 53/2022 ಕಲಂ 504, 323, 324 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-06-2022 11:41 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080