ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಬ್ರಹ್ಮಣ್ಯ, ಪ್ರಾಯ:  42  ವರ್ಷ, ತಂದೆ:ದೇವಪ್ಪ ನಾಯ್ಕ್, ವಾಸ:ಕೊಟ್ಯಾಡಿ ಮನೆ, ನೆಟ್ಟಣಿಗೆ ಮುಡ್ನೂರು ಗ್ರಾಮ  ಪುತ್ತೂರು ಎಂಬವರ ದೂರಿನಂತೆ ದಿನಾಂಕ:25-07-2022 ರಂದು ಸಂಜೆ ಸುಮಾರು 6.00 ಗಂಟೆಯ ಸಮಯಕ್ಕೆ ಫಿರ್ಯಾದುದಾರರು ತನ್ನ  ಮನೆಯ ಗೇಟ್ ಬಳಿ ಕೆಲಸ ಮಾಡುತ್ತಿದ್ದ ಸಮಯ ದುಗ್ಗಮ್ಮ @ ಸೌಮ್ಯರವರು ಫಿರ್ಯಾದುದಾರರ  ಮನೆಯಿಂದ ಅವರ ಮನೆಯ ಕಡೆಗೆ ಹೋಗಲು  ಕೊಟ್ಯಾಡಿಯಲ್ಲಿರುವ  ಸುಳ್ಯ-ಕಾಸರಗೋಡು ರಾಜ್ಯ ಹೆದ್ದಾರಿಯ ಬದಿಯಲ್ಲಿ ನಿಂತಿದ್ದ ವೇಳೆ ಬಿಳಿ ಬಣ್ಣದ ಒಂದು ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯನ್ನು ಕುಳ್ಳಿರಿಸಿಕೊಂಡು ಅದರ ಸವಾರನು ಸುಳ್ಯ ಕಡೆಯಿಂದ ಕಾಸರಗೋಡು ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದ ಪರಿಣಾಮ  ದುಗ್ಗಮ್ಮ @ ಸೌಮ್ಯರವರಿಗೆ ಸದ್ರಿ ಸ್ಕೂಟರ್ ಢಿಕ್ಕಿಯಾಗಿದ್ದು,  ಸದರಿ ಸ್ಕೂಟರ್ ಗುದ್ದಿದ ರಭಸಕ್ಕೆ ದುಗ್ಗಮ್ಮರವರು ಡಾಮಾರು ರಸ್ತೆಗೆ ಬಿದ್ದಿದ್ದಲ್ಲದೇ  ಸ್ಕೂಟರ್ ಸವಾರ ಮತ್ತು ಸಹಸವಾರೆ ಕೂಡಾ ಸ್ಕೂಟರ್ ಸಮೇತ ಬಿದ್ದಿರುತ್ತಾರೆ. ಫಿರ್ಯಾದುದಾರರು  ಹಾಗೂ ಈ ಅಪಘಾತವನ್ನು ನೋಡಿದ  ಮೋಟಾರ್ ಸೈಕಲ್ ಸವಾರ  ಯೋಗೀಶ್ ರವರು ಸೇರಿ ರಸ್ತೆಯಲ್ಲಿ ಬಿದ್ದ ದುಗ್ಗಮ್ಮ @ ಸೌಮ್ಯರವರನ್ನು ಎಬ್ಬಿಸಿ ಉಪಚರಿಸಿದಾಗ ಅವರ ತಲೆಗೆ ರಕ್ತ ಗಾಯ, ಕೈ ಹಾಗೂ ಇತರೆ ಕಡೆಗಳಿಗೆ ಗಾಯಗಳಾಗಿದ್ದು,  ಸದ್ರಿ ಸ್ಕೂಟರ್  ಸವಾರ ಶಾಹೀರ್ ಮತ್ತು ಹಿಂಬದಿ ಸವಾರೆ ನೆಬಿಸಾರವರಿಗೂ  ಗಾಯವಾಗಿರುತ್ತದೆ. ಈ ಅಪಘಾತಪಡಿಸಿದ ಸ್ಕೂಟರ್ ನಂಬ್ರ ಕೆಎಲ್ -14-ಎಸ್-3025 ಆಗಿರುತ್ತದೆ. , ಬಳಿಕ ಫಿರ್ಯಾದುದಾರರು  ಗಾಯಾಳುಗಳನ್ನು ಅಲ್ಲೇ ಹತ್ತಿರದಲ್ಲಿರುವ ಮಾಲಿಕುದಿನಾರ್  ಖಾಸಗಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿರುತ್ತಾರೆ. ಬಳಿಕ ದುಗ್ಗಮ್ಮ @ ಸೌಮ್ಯರವರ ನಾದಿನಿ ಯಶೋಧ ಎಂಬವರು ಸದ್ರಿ ಆಸ್ಪತ್ರೆಗೆ ಬಂದಿದ್ದು, ನಂತರ ಮೂರು ಜನ ಗಾಯಾಳುಗಳನ್ನು ಆಂಬುಲೆನ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಾಸರಗೋಡಿಗೆ ಕರೆದುಕೊಂಡು ಹೋಗಿದ್ದು, ದುಗ್ಗಮ್ಮರವರ ಜೊತೆಯಲ್ಲಿ ಯಶೋಧರವರು ಹೋಗಿರುತ್ತಾರೆ. ಬಳಿಕ ಗಾಯಾಳುಗಳನ್ನು ಕಾಸರಗೋಡಿನ ಕೇರ್ ವೆಲ್  (Care Well) ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿಯೂ, ಅಲ್ಲಿನ ವೈದ್ಯರು ತಿಳಿಸಿದಂತೆ ತೀವ್ರವಾಗಿ ಗಾಯಗೊಂಡಿದ್ದ ದುಗ್ಗಮ್ಮರವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿಯೂ ಯಶೋದಾರವರು ಫೋನ್ ಮಾಡಿ ಫಿರ್ಯಾದುದಾರರಿಗೆ  ತಿಳಿಸಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರ ಹಾಗೂ ಸಹಸವಾರೆಯವರು ಕೇರ್ ವೆಲ್ (Care Well) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿರುತ್ತಾರೆ. ನಂತರ ರಾತ್ರಿ ಸುಮಾರು 11.30 ಗಂಟೆಗೆ ಯಶೋಧರವರು ಕರೆ ಮಾಡಿ  ದುಗ್ಗಮ್ಮ @ ಸೌಮ್ಯಾರವರು  ರಾತ್ರಿ 11.10 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ.ಅ.ಕ್ರ : 82/2022  ಕಲo: 279,337.304(A)  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವೀಶ್‌ ಪ್ರಾಯ 32 ವಷ ತಂದೆ: ಗುಡ್ಡಪ್ಪ ಗೌಡ ವಾಸ: ಕಾನತ್ತಿಲ ಮನೆ, ಸುಳ್ಯ ಕಸಬ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ರವೀಶ್‌ ಪ್ರಾಯ 32 ವರ್ಷ ತಂದೆ: ಗುಡ್ಡಪ್ಪ ಗೌಡ ವಾಸ: ಕಾನತ್ತಿಲ ಮನೆ, ಸುಳ್ಯ ಕಸಬ ಗ್ರಾಮ ಸುಳ್ಯ ತಾಲೂಕು ಎಂಬವರು ದಿನಾಂಕ 25.07.2022 ರಂದು ವ್ಯಾಪಾರ ಮುಗಿಸಿ ತನ್ನ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಮನೆ ಕಡೆಗೆ ಹೋಗುತ್ತಿರುವ ಸಮಯ ಜಟ್ಟಿಪಳ್ಳ ಕ್ರಾಸ್ ಬಳಿ ತಮ್ಮ ದಿನೇಶ್ ಕಾಣ ಸಿಕ್ಕಿದ್ದು, ಆತನ ಬಳಿ ಮಾತನಾಡಿದ್ದು, ಪಿರ್ಯಾದಿದಾರರ ತಮ್ಮ ದಿನೇಶನು ಆತನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಹೆಚ್‌ಬಿ-2506 ನೇದಲ್ಲಿ ಮನೆ ಕಡೆ ಹೋಗುತ್ತಿರುವ ಸಮಯ 8.45 ಗಂಟೆ ಸಮಯಕ್ಕೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಏರ್‌ಟೆಲ್ ಟವರ್ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಜಟ್ಟಪಳ್ಳ ಕಡೆಯಿಂದ ಸುಳ್ಯ ಕಡೆಗೆ ಪಲ್ಸರ್ ಮೋಟಾರ್ ಸೈಕಲ್ ನಂಬ್ರ ಕೆಎ-03-ಇವೈ-0882 ನೇ ದನ್ನು ಅದರ ಸವಾರ ರೋಹಿತ್ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ದಿನೇಶ್ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದುದರಿಂದ ಇಬ್ಬರು ಮೋಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಮೋಟಾರ್ ಸೈಕಲನ್ನು ನಿಲ್ಲಿಸಿ ಹೋಗಿ ನೋಡಲಾಗಿ ಇಬ್ಬರು ಮೋಟಾರ್ ಸೈಕಲ್ ಸವಾರರಿಗೆ  ಗಾಯವಾದವರನ್ನು ಪಿರ್ಯಾದಿದಾರರು ಮತ್ತು ಹರೀಶ್ ಬಂಟ್ವಾಳ ಇತರರೊಂದಿಗೆ ಸೇರಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ದಿನೇಶನನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 85/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಕ್ಷಿತ್ (22) ವರ್ಷ.ತಂದೆ: ನಾರಾಯಣ ಬಂಗೇರ.ವಾಸ:ಕೋರ್ಯ ಮನೆ,ಬಾಳ್ತಿಲ ಗ್ರಾಮ, ಬಂಟ್ವಾಳ ತಾಲೂಕು.ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 26-07-2022 ರಂದು ಕೆಲಸ ಮುಗಿಸಿ ಮೋಟಾರ್ ಸೈಕಲಿನಲ್ಲಿ ಬರಿಮಾರು ಕಡೆಯಿಂದ ಮನೆ ಕಡೆಗೆ ಬರುತ್ತಾ ಸಮಯ ಸುಮಾರು 18:15 ಗಂಟೆಗೆ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಪಂಜುರ್ಲಿ ಗುಡ್ಡೆ ಎಂಬಲ್ಲಿಗೆ ತಲುಪುತ್ತಿದಂತೆ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19-MG-1076  ಕಾರನ್ನು ಅದರ ಚಾಲಕ ಚೇತನ್ ಎಂಬುವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಹೋಗಿ ಸೂರಿಕುಮೇರು ಕಡೆಯಿಂದ KA-19-X-6024 ನೇ ಮೋಟಾರ್ ಸೈಕನ್ನು ಅದರ ಸವಾರ ಪಂಜುರ್ಲಿ ಗುಡ್ಡೆ ಕೋಸ್ಟಲ್ ಫಾರ್ಮ್ ಕಡೆಗೆ ತಿರುಗಿಸಲು ನಿಧಾನಿಸಿದಾಗ ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಸಾರ್ವಜನಿಕರೊಂದಿಗೆ ಎಬ್ಬಿಸಿ ಉಪಚರಿಸಿ ನೋಡಲಾಗಿ ಗಾಯಾಳು ಪಿರ್ಯಾದಿದಾರರಿಗೆ ಪರಿಚಯದ ಸುನೀಲ್ ಎಂಬುವವರಾಗಿದ್ದು ಅಪಘಾತದಲ್ಲಿ ಸುನೀಲ್ ರವರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತ ಗಾಯ, ಬಲಭಾಗ ಮುಖದಲ್ಲಿ ತರಚಿದ ಗಾಯ, ಬಲಬದಿಯ ಸೊಂಟಕ್ಕೆ ಗುದ್ದಿದ ನೋವಾದವರನ್ನು ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ 20:43 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 81/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಪ್ರಕರಣ: 1

 • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಧು ಕುಮಾರ್ ವಾಸ: ಸಂತೋಷ್ ನಗರ ಮನೆ, ಮಾಡಾವು, ಕೆಯ್ಯೂರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರು ಸುಳ್ಯ ತಾಲೂಕು ಬೆಳ್ಳಾರೆ ಗ್ರಾಮದ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಪ್ರೆಶ್‌ ಚಿಕನ್‌ ಫಾರ್ಮ್‌ ನಲ್ಲಿ ಕ್ಲೀನಿಂಗ್‌ ಕೆಲಸ ಮಾಡುತ್ತಿದ್ದು, ಅದರ ಮಾಲೀಕ ಪ್ರವೀಣ್‌ ನೆಟ್ಟಾರು ರವರು ದಿನಾಂಕ 26.07.2022 ರಂದು ರಾತ್ರಿ ವ್ಯಾಪಾರ ಮುಗಿಸಿ 20-30 ಗಂಟೆಗೆ ಅಂಗಡಿ ಬಾಗಿಲು ಹಾಕಿ ತನ್ನ ಮನೆ ಕಡೆಗೆ ಹೋಗಲು ಸ್ಕೂಟರಿನಲ್ಲಿ ಕುಳಿತು ಸಿದ್ದತೆಯಲ್ಲಿದ್ದಾಗ ಅಲ್ಲಿದ್ದ ಫಿರ್ಯಾದಿದಾರರು ಅಂಗಡಿಯ ಒಳಗೆ ರೈನ್‌ ಕೋಟ್‌ ತರಲೆಂದು ಹೋದ ಸಮಯ ಅಂಗಡಿಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ ಹೊರಗಡೆ ಬಂದು ನೋಡುವಷ್ಟರಲ್ಲಿ ಪ್ರವೀಣ್‌ ನೆಟ್ಟಾರು ರವರು ಸ್ಕೂಟರ್‌ ನಿಂತಿದ್ದ ಸ್ಥಳದಿಂದ ಸುಮಾರು 50 ಅಡಿ ದೂರದಲ್ಲಿ ಕವಚಿ ಬಿದ್ದಿದ್ದುಆಗ ಅಲ್ಲಿಂದ ಮೂರು ಜನ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಹತ್ಯಾರುಗಳನ್ನು ಹಿಡಿದುಕೊಂಡು ಮೋಟಾರು ಸೈಕಲಿನಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದು ನೆಲದಲ್ಲಿ ಬಿದ್ದಿದ್ದ ಪ್ರವೀಣ್‌ ರವರನ್ನು ನೋಡಿದಾಗ ಅವರ ಕುತ್ತಿಗೆಯ ಮತ್ತು ತಲೆಯ ಭಾಗದಲ್ಲಿ ಭಾರಿ ಗಾಯವಾಗಿ ರಕ್ತ ಸ್ರಾವ ಆಗುತ್ತಿದ್ದು, ಸ್ಥಳಕ್ಕೆ ಅಂಬ್ಯುಲೆನ್ಸ್‌ ಬರ ಹೇಳಿ ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರವೀಣ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಠಾಣಾ ಅ.ಕ್ರ:63/2022 ಕಲಂ 302 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರದೀಪ್(31) ತಂದೆ: ಬಿನ್ ಕಾಂತಪ್ಪ ಅಲೆಪ್ಪಾಡಿ ಮನೆ,ಕೊಡಂಬೆಟ್ಟು ಗ್ರಾಮ ಮತ್ತು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ :25-07-2022 ರಂದು 09.00 ಗಂಟೆ ಸಮಯಕ್ಕೆ ಫಿರ್ಯಾದಿದಾರರು ತನ್ನ ಮನೆಯಲ್ಲಿ ಕೆಲಸಕ್ಕೆ ಹೋಗುವರೇ ಮನೆಯೊಳಗೆ ಸಿದ್ದವಾಗುತ್ತಿದ್ದ ಸಮಯ ಪರಿಚಯದ ಪಾಡುರಂಗ ಮತ್ತು ರವಿ ಎಂಬವರು ಕೈಯ್ಯಲ್ಲಿ ತಲವಾರು ಹಿಡಿದುಕೊಂಡು ಮನೆಯ ಹೊರಗಡೆ ನಿಂತು  ಆರೋಪಿಗಳ ಪೈಕಿ ಪಾಂಡುರಂಗ ಎಂಬವನು ಪಿರ್ಯಾದಿದಾರರನ್ನು ಉದ್ದೇಶಿಸಿ  ಏಕವಚನದಿಂದ ಅವಾಚ್ಯ ಶಬ್ದಗಳಿಂದ ಬೈದು,  ನಿನ್ನನ್ನು ಕಡಿದು ಕೊಂದು  ಹಾಕುತ್ತೇವೆಂದು ಜೀವ ಬೆದರಿಕೆ ಹಾಕುತ್ತಾ  ಕೈಯಲ್ಲಿದ್ದ ತಲವಾರನ್ನು ಜಲಪಿಸುತ್ತಾ ಮನೆಯೊಳಗಡೆ ಅಕ್ರಮ ಪ್ರವೇಶ ಮಾಡುತ್ತಿದ್ದಂತೆ ಪಿರ್ಯಾದಿದಾರರು ಹೆದರಿ ಅಲ್ಲಿಂದ ಓಡಿ ಹೋಗುತ್ತಿದ್ದಾಗ, ಆರೋಪಿಗಳು  ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾ ಅಲ್ಲಿಂದ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 52/2022 ಕಲಂ 448, 504, 506(2), 506 ಜೊತೆಗೆ 34  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 26.07.2022  ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 53/2022 ಕಲಂ:  POCSO 8 Act 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಮಹಿಳಾ ಪೊಲೀಸ್ ಠಾಣೆ : ದಿನಾಂಕ 26.07.2022 ರಂದು ದ.ಕ ಮಹಿಳಾ ಪೊಲೀಸ್‌ ಠಾಣಾ ಅ.ಕ್ರ 26/2022 ಕಲಂ: 498(ಎ), 504,323 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುರೇಶ್  ತಂದೆ:ಕೃಷ್ಣಪ್ಪ  , ವಾಸ: ಮಠದಬೈಲು ಬೆಟ್ಟು ಮನೆ, ಬೆಳ್ತಂಗಡಿ ಕಸಬಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮನೆಯಲ್ಲಿ ಸುಮಾರು 2 ವರ್ಷಗಳಿಂದ ಶ್ರೀಮತಿ ಲಲಿತಾರವರು ಕೆಲಸಕ್ಕಿದ್ದು, ಅವರಿಗೆ ಬಿ.ಪಿ, ಶುಗರ್ ಮತ್ತು ಹೃದಯ ಸಂಬಂಧಿ ಖಾಯಿಲೆ ಇದ್ದು, ಪುತ್ತೂರು ಚೇತನ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಪ್ರತಿದಿನ ಔಷದಿ ಸೇವಿಸುತ್ತಿದ್ದವರು. ದಿನಾಂಕ:25-07-2022 ರಂದು ರಾತ್ರಿ ಊಟ ಮುಗಿಸಿ 09-30 ಗಂಟೆಗೆ ಲಲಿತಾರವರು ಪಿರ್ಯಾದಿದಾರರ ಮನೆಯಲ್ಲಿ ಅವರು ಮಲಗುವ ಕೋಣೆಗೆ ಹೋಗಿ ಮಲಗಿದ್ದವರು, ದಿನಾಂಕ: 26-07-2022 ರಂದು ಬೆಳಿಗ್ಗೆ 6-30 ಗಂಟೆ  ಆದರೂ ಲಲಿತಾರವರು ಎದ್ದೇಲದೇ ಇದ್ದುದ್ದರಿಂದ ಪಿರ್ಯಾದಿದಾರರ ಪತ್ನಿಯು ಎಬ್ಬಿಸಲು ನೋಡಿದಾಗ ಎದ್ದೇಳದೇ ಹಾಗೂ ಮಾತನಾಡದೇ ಇದ್ದು,  ದೇಹವು ತಣ್ಣಗಾಗಿದ್ದುದ್ದರಿಂದ ಲಲಿತಾರವರು ಅವರಿಗಿದ್ದ ಬಿ.ಪಿ, ಶುಗರ್ ಮತ್ತು ಹೃದಯ ಸಂಬಂದಿ ಖಾಯಿಲೆಯು ಉಲ್ಬಣಗೊಂಡು ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ:  30/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-07-2022 10:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080