ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀಮತಿ.ರಮ್ಯ, 24 ವರ್ಷ, ಗಂಡ: ಚೇತನ್ ವಾಸ: ಶಿವಾಜಿ ನಗರ ಮನೆ, ಬೆಂಜನಪದವು ಅಂಚೆ,ಅಮ್ಮುಂಜೆ ಗ್ರಾಮ ಎಂಬವರ ದೂರಿನಂತೆ ತನ್ನ ಗಂಡ ಚೇತನ್ ಮತ್ತು ತನ್ನ ಮಗು ಶನವಿರೊಂದಿಗೆ ದಿನಾಂಕ 25.09.2021 ರಂದು KA-19HG-8350 ನೇ ಸ್ಕೂಟರಿನಲ್ಲಿ ಸಹಸವಾರಿಣಿಯಾಗಿ ಕುಳಿತುಕೊಂಡು ಬೆಂಜನಪದವು ಶಿವಾಜಿನಗರಕಡೆಯಿಂದ ತನ್ನ ತಾಯಿ ಮನೆಯಾದ ಸಿದ್ದಕಟ್ಟೆಗೆ ಹೋಗುತ್ತಾ ಸಮಯ ಸುಮಾರು 20:15 ಗಂಟೆಗೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿಗೆ ತಲುಪಿದಾಗ ಕಲ್ಪನೆ ಜಂಕ್ಷನ್ ಕಡೆಯಿಂದ KA-19-AB-0200 ನೇ ಆಟೋರಿಕ್ಷಾವನ್ನು ಅದರ ಚಾಲಕ ತಮೀಮ್ ರವರು ಅತೀ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು  ಬಂದು ಪಿರ್ಯಾದಿದಾರರು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರು ಸ್ಕೂಟರ್ ಸಮೇತಾ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಯ ಹಿಂಬದಿಗೆ ರಕ್ತಗಾಯ, ಕಣ್ಣಿನ ಹುಬ್ಬಿನ ಬಳಿ ತರಚಿದ ಗಾಯ ಹಾಗೂ ಎದೆಗೆ ಗುದ್ದಿದ ನೋವಾಗಿದ್ದು, ಸವಾರ ಚೇತನ್ ರವರ ಮುಖಕ್ಕೆ, ಎದೆಗೆ, ಬಲಕಾಲಿನ ಮೊಣಗಂಟಿಗೆ, ಹಣೆಗೆ ತರಚಿದ ಹಾಗೂ ಗುದ್ದಿದ ನೋವಾಗಿದ್ದು, ಗಾಯಗೊಂಡ ಪಿರ್ಯಾದಿದಾರರು ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ, ಸಹಸವಾರ ಚೇತನ್ ರವರು ತುಂಬೆಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಅಪಘಾತದ ಬಳಿಕ ಆಟೋರಿಕ್ಷಾ ಚಾಲಕ ಆಟೋರಿಕ್ಷಾವನ್ನು ಸ್ಥಳದಲ್ಲಿ ನಿಲ್ಲಿಸದೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸದೇ ಪರಾರಿಯಾಗುವ ಸಮಯ ಬೆಂಜನಪದವು ಎಂಬಲ್ಲಿ ಆಟೋರಿಕ್ಷಾವು ಮಗುಚಿ ಬಿದ್ದು ಆಟೋರಿಕ್ಷಾ ಚಾಲಕ ತಮೀಮ್ ರವರು  ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 101/2021  ಕಲಂ 279,337, ಐಪಿಸಿ  ಮತ್ತು 134(A&B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಪ್ರಕಾಶ್ ಪ್ರಾಯ: 30 ವರ್ಷ ತಂದೆ: ತಮ್ಮಯ್ಯ ಗೌಡ  ವಾಸ:ಬುಡೇರಿ ಮನೆ, ಕಾಯರ್ತಡ್ಕ ಅಂಚೆ, ಕಳೆಂಜ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 26-09-2021 ರಂದು ಕೆಎ19 ಹೆಚ್ ಬಿ 5234  ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಪ್ರಶಾಂತ ರವರು ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಅಂದರೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 20 ಎಬಿ 0189 ನೇ ಫಿಕ್ ಅಪ್ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಪ್ರಶಾಂತ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಬಲಕೈ ಮಣಿಗಂಟಿಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 73/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮೊಹಮ್ಮದ್ ಶಾದತ್ (29) ತಂದೆ: ಕುಂಞ ಮೋನು, ಕಮ್ಮಾಡಿ ಮನೆ, ಮರಿತು ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ 25.09.2021 ರಂದು ತಮ್ಮ ಬಾಬ್ತು ಕಾರು ನಂಬ್ರ ಕೆಎ 21 ಝಡ್ 3855 ನೇದರಲ್ಲಿ ಚಾಲನೆ ಮಾಡಿಕೊಂಡು  ಪುತ್ತೂರಿಂದ ಮೈಸೂರಿಗೆ ಹೋಗುತ್ತಿರುವ ಸಮಯ ಸುಮಾರು 09.00 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತ, ಎದುರಿನಿಂದ ಬಂದ ಆಟೋ ರಿಕ್ಷಾ ನಂಬ್ರ ಕೆಎ 21 ಸಿ 0720 ನೇದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಕಾರಿಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಎರಡು ವಾಹನಗಳು ಜಖಂ ಆಗಿದ್ದು, ಆಟೋರಿಕ್ಷಾ ಚಾಲಕ ರಾಧಕೃಷ್ಣ ಎಂಬಾತನಿಗೆ ತಲೆಗೆ ಹಾಗೂ ಹೊಟ್ಟೆಗೆ ಗಾಯವಾಗಿದ್ದವನನ್ನು ಪಿರ್ಯಾದುದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆ  ಅ.ಕ್ರ 76/2021 ಕಲಂ: 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಲತಾ, ಪ್ರಾಯ: 52 ವರ್ಷ, ಗಂಡ:ಸಂತೋಷ್,  ಉಪ ಕಾರ್ಯನಿರ್ವಹಣಾಧಿಕಾರಿ  ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ:25-09-2021 ರಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೃಹರಕ್ಷಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ದಿನೇಶ್ ಎನ್, ಮೆಟಲ್ ನಂಬ್ರ 731 ನೇ ರವರು ದೇವಸ್ಥಾನ ಆಡಳಿತ ಕಚೇರಿಗೆ ಬಂದು ನೀಡಿದ ದೂರಿನಂತೆ ದಿನಾಂಕ:24-09-2021 ರಂದು ಸಾಯಂಕಾಲ ಸುಮಾರು 5:35 ಗಂಟೆಯ ಹೊತ್ತಿಗೆ ಶ್ರೀ ದೇವಳದ ವಿ.ಐ.ಪಿ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಸಮಯ ಸದ್ರಿ ಪ್ರವೇಶ ದ್ವಾರದಿಂದ ಮುಂದಕ್ಕೆ ಕಾಟೇಜ್ ರೋಡ್ ನಲ್ಲಿ ವಾಹನಗಳಿಗೆ ಪ್ರವೇಶವಿರದ ಜಾಗದಲ್ಲಿ ಡಸ್ಟರ್ ಕಾರು ರಿಜಿಸ್ಟ್ರೇಶನ್ ನಂಬ್ರ ಕೆಎ 05 8211 ನೇದರ ಚಾಲಕ ಸದ್ರಿ ರಸ್ತೆಯಲ್ಲಿ ವಾಹನ ಹೋಗಲು ಅವಕಾಶ ಕೇಳಿದಾಗ ಸದ್ರಿ ರಸ್ತೆಯು ವಾಹನ ಚಲಾಯಿಸಲು ನಿಷೇಧವಿರುವುದಾಗಿ ಹೇಳಿದಾಗ ಡಸ್ಟರ್ ಕಾರಿನ ಚಾಲಕನು ವಾಗ್ವಾದಕ್ಕೆ ಇಳಿದು ದಿನೇಶ್ ಎನ್ ಎಂಬವರು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿರುವ ಸಾರ್ವಜನಿಕ ನೌಕರ ಎಂದು ತಿಳಿದಿದ್ದರೂ ಅವರ ಮೈಮೇಲೆ ಕೈ ಹಾಕಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಸದ್ರಿ ಕಾರಿನಲ್ಲಿ ಕುಳಿತಿದ್ದ ಇತರ ಇಬ್ಬರು ಸದ್ರಿರವರಿಗೆ ಅವಾಚ್ಯ ಶಬ್ಧಗಳಿಂದ ಬೈದು ಅಲ್ಲಿಂದ ಹೊರಟು ಹೋಗಿರುತ್ತಾರೆ. ಬಳಿಕ ಅವರು ಎದೆ ಹಾಗೂ ಬೆನ್ನಿಗೆ ತೀವ್ರ ನೋವಾಗಿದ್ದರಿಂದ ಶುಶ್ರೂಷೆ ಬಗ್ಗೆ ಕಡಬ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ : 66-2021 ಕಲಂ: 353,323, 504 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-09-2021 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080