ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 01

ಪುಂಜಾಲಕಟ್ಟೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಾಧಾಕೃಷ್ಣ ಪ್ರಾಯ: 41 ವರ್ಷ ತಂದೆ: ವಿಠ್ಠಲ್ ಸಪಲ್ಯಾ ವಾಸ: ವಾಮದಪದವು ಮನೆ ಚೆನೈತ್ತೊಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 25.11.2022 ರಂದು ಪಿರ್ಯಾದಿದಾರರು ಬಾಬ್ತು ಜೀಪ್‌ನಲ್ಲಿ ಮಾವಿನಕಟ್ಟೆಯಿಂದ  ಕೊರಗಟ್ಟೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಚೆನೈತ್ತೊಡಿ ಗ್ರಾಮದ ಬದ್ಯಾರ್ ಕ್ರಾಸ್ ರಸ್ತೆ ಎಂಬಲ್ಲಿಗೆ  ಸಂಜೆ 04.45 ಗಂಟೆ ಸುಮಾರಿಗೆ ತಲುಪಿದಾಗ ಅವರ ಎದುರಿನಿಂದ ಪಿರ್ಯಾದಿದಾರರ ಪರಿಚಯದ ಪ್ರಣಯ್ ಕುಮಾರ್ ಎಂಬವರು ಅವರ ಬಾಬ್ತು ಪಲ್ಸರ್ ಮೋಟಾರ್ ಸೈಕಲ್ KA19EV6267 ನೇದನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಚಿರಾಗ್‌ (6) ವರ್ಷ ಎಂಬವನಿಗೆ ಡಿಕ್ಕಿ ಹೊಡೆದಿದ್ದು.  ಡಿಕ್ಕಿ ಹೊಡೆದ ಪರಿಣಾಮ ಮಗುವಿನ ತಲೆಗೆ ಮತ್ತು ಮುಖಕ್ಕೆ ರಕ್ತಗಾಯ ಹಾಗೂ ಕೈಗೆ ತರಚಿದ ಗಾಯವಾಗಿದ್ದು  ಪಿರ್ಯಾದಿದಾರರು ಮತ್ತು ಮೋಟಾರ್ ಸೈಕಲ್ ಸವಾರ ಚಿಕಿತ್ಸೆ ಬಗ್ಗೆ ವಾಮದಪದವು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಮಗುವನ್ನು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಮಗುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 88/2022 ಕಲಂ: 279, 337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 01

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮಹಮ್ಮದ್ ಶರೀಫ್ (42) ತಂದೆ:ದಿ|| ಆದಂ ವಾಸ:ಬೋಳದಬೈಲು ಮನೆ ಕೊಕ್ಕಡ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 25-11-2022 ರಂದು ರಾತ್ರಿ ಮನೆಯಲ್ಲಿ ತಾಯಿ ಕರೆ ಮಾಡಿ ತಂಗಿ ಮತ್ತು ಬಾವ ಗಲಾಟೆ ಮಾಡುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದುದಾರರು ತಾಯಿ ಮನೆಗೆ ಹೋಗಿ ವಿಚಾರಿಸಿ ಕಡಬ ತಾಲೂಕು, ಕೌಕ್ರಾಡಿ ಗ್ರಾಮದ, ಪಟ್ಲಡ್ಕ ಎಂಬಲ್ಲಿಗೆ ತಂಗಿ ಮನೆಗೆ ಹೋಗಿ ವಿಚಾರಿಸುತ್ತಿದ್ದಾಗ, ಬಾವ ಅಜೀಜ್ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವ ಉದ್ದೇಶದಿಂದ ಕುತ್ತಿಗೆ ಕಡಿಯಲು ತಲವಾರಿನಿಂದ ಬೀಸಿದಾಗ ಪಿರ್ಯಾದುದಾರರು ತಪ್ಪಿಸಿಕೊಂಡ ಹಲ್ಲೆಯಿಂದ ಎಡಕೈ ಅಂಗೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ.  ನೆಲಕ್ಕೆ ಬಿದ್ದಾಗ ತಲೆಗೆ ಗುದ್ದಿದ ಗಾಯವಾಗಿರುತ್ತದೆ.  ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 123/2022 ಕಲಂ: 504,307 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 01

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಿರಣ್‌ ಕುಮಾರ್‌, ಪ್ರಾಯ: 32 ವರ್ಷ, ತಂದೆ: ಮೂರ್ತಿ, ಕೋಣಸೂರು ಗ್ರಾಮ ಮತ್ತು ಅಂಚೆ, ಬೆಟ್ಟದಪುರ ಹೋಬಳಿ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ಮಂಡ್ಯ ಜಿಲ್ಲೆಯ ಮಹಾದೇಶ್ವರ ಏಜೆನ್ಸಿಯವರ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 25.11.2022 ರಂದು ತಾನು ಕೆಲಸ ಮಾಡುವ ಏಜೆನ್ಸಿಯ ಲಾರಿ ನಂಬ್ರ KA42A0763 ನೇದರಲ್ಲಿ ಚಾಲಕನಾಗಿ ಭಾರತ್‌ ಕಂಪೆನಿಯ ಗ್ಯಾಸ್‌ ಸಿಲಿಂಡರ್‌ ಗಳನ್ನು ಮಂಗಳೂರು MRPL ಕಂಪೆನಿಯಿಂದ ಲೋಡ್‌ ಮಾಡಿಕೊಂಡು ಮೈಸೂರು ಹೆದ್ದಾರಿಯಲ್ಲಿ ದಿನಾಂಕ: 26.11.2022 ರಂದು 00:05 ಗಂಟೆ ಸುಳ್ಯ ತಾಲೂಕು ಜಾಲ್ಸೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕಾರೊಂದನ್ನು ಅದರ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರಿನ ಚಾಲಕ ಓವರ್‌ ಟೇಕ್‌ ಮಾಡಲು ಆತನ ಬಲಬದಿಗೆ ಕಾರನ್ನು ಚಲಾಯಿಸಿಕೊಂಡು ಬಂದಿದ್ದು, ಪಿರ್ಯಾದಿದಾರರು ತನ್ನ ಲಾರಿಗೆ ಸದ್ರಿ ಕಾರು ಡಿಕ್ಕಿಯಾಗಬಹುದೆಂದು ಲಾರಿಯನ್ನು ತೀರಾ ಎಡಬದಿಗೆ ಚಲಾಯಿಸಿದರೂ ಸದ್ರಿ ಕಾರು ಪಿರ್ಯಾದಿದಾರರ ಲಾರಿಯ ಬಲಬದಿ ಹಿಂಬದಿ ಟಯರ್‌ ಬಳಿ ಡಿಕ್ಕಿ ಉಂಟು ಮಾಡಿದ್ದು, ಪರಿಣಾಮ ಪಿರ್ಯಾದಿದಾರರ ಲಾರಿಯೂ ಅಲ್ಲಿಯೇ ನಿಂತಿರುತ್ತದೆ. ಬಳಿಕ ಪಿರ್ಯಾದಿದಾರರು ಇಳಿದು ಬಂದು ಅಪಘಾತ ಪಡಿಸಿದ ಕಾರನ್ನು ನೋಡಲಾಗಿ KA32P3729 ನೇ ನಂಬ್ರದ ಇನ್ನೋವಾ ಕಾರು ಆಗಿದ್ದು, ಕಾರು ಚಾಲಕನ ಮುಖಕ್ಕೆ ರಕ್ತಗಾಯವಾಗಿರುತ್ತದೆ. ಒಮ್ಮಲೇ ಕಾರಿನಲ್ಲಿದ್ದವರೆಲ್ಲರೂ ಪಿರ್ಯಾದಿದಾರರ ಬಳಿ ಬಂದು, ಅವರ ಪೈಕಿ ಕಾರು ಚಾಲಕ ಹಾಗೂ ಇತರ ಮೂರು ಜನರು ಏಕಾಏಕಿ ಪಿರ್ಯಾದಿದಾರರಿಗೆ ಮನಬಂದಂತೆ ಕೈಯಿಂದ ಹೊಡೆದು ನೆಲಕ್ಕೆ ದೂಡಿಹಾಕಿ ಕಾಲಿನಿಂದ ತುಳಿದು, ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿಗಳ ಹಲ್ಲೆಯಿಂದ ಗಾಯಗೊಂಡಿದ್ದ ಪಿರ್ಯಾದಿದಾರರನ್ನು ಅಲ್ಲಿ ಸೇರಿದ ಸ್ಥಳೀಯರು ಉಪಚರಿಸಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು   ಪರೀಕ್ಷಿಸಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 139/2022 ಕಲಂ: 279, 337, 323, 324, 504,  506 ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 02

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಯಮುನಾ,32 ವರ್ಷ, ಗಂಡ: ಶೀನಪ್ಪ, ಕೋಟನ್‌ಪಲ್ಕೆ ಮನೆ, ಪಿಲಾತಬೆಟ್ಟು ಗ್ರಾಮ,ನೈನಾಡು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರ ಅಣ್ಣ ಗೋಪಾಲ (37 ವರ್ಷ) ಎಂಬವರು ತನ್ನ ತಾಯಿ, ಪತ್ನಿ-ಮಕ್ಕಳು ಹಾಗೂ ಫಿರ್ಯಾಧಿದಾರರೊಂದಿಗೆ ವಾಸವಾಗಿದ್ದು, ಪುರ್ಲಿ ಎಂಬಲ್ಲಿರುವ ಶ್ರೀಮತಿ ಭಾರತಿ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದನು. ಗೋಪಾಲನು ವಿಪರೀತ ಮದ್ಯ ಸೇವನೆ ಮಾಡುವ ಚಟವುಳ್ಳವನಾಗಿದ್ದು ದಿನಾಂಕ: 19.11.2022 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಮನೆಗೆ ಬಂದು ವಾಪಾಸು ಮನೆಯಿಂದ ಹೊರಗಡೆ ಹೋಗಿ ರಾತ್ರಿ 7:00 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು, ತಾನು ಇಲಿ ಪಾಷಾಣ ಸೇವಿಸಿದ್ದೇನೆ ಎಂದು ಹೇಳಿದ್ದು ಫಿರ್ಯಾಧಿದಾರರು ಹಾಗೂ ಗೋಪಾಲರವರ ಪತ್ನಿ ಗಾಬರಿಯಿಂದ ನೆರೆಯವರವರನ್ನು ಕರೆಸಿದ್ದು, ಚಿಕಿತ್ಸೆ ಬಗ್ಗೆ ಜಿಲ್ಲಾ ವೆನ್‌ಲಾಕ್‌ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದವರು ದಿನಾಂಕ: 26.11.2022 ರಂದು 00:48 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬುದಾಗಿ ವೈಧ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಯುಡಿಆರ್‌ ನಂಬ್ರ 24/2022 ಕಲಂ: 174 ಸಿಆರ್‌ಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಘವೇಂದ್ರ ಡಿ ಎಸ್ ಪ್ರಾಯ: 25 ವರ್ಷ ತಂದೆ:ಡಿ ಕೆ ಸುಂದರ ಗೌಡ ವಾಸ:ಕುಕ್ಕಾಜೆ ಮನೆ ಬಿಳಿನೆಲೆ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:25.11.2022 ರಂದು ಪಿರ್ಯಾದುದಾರರು ತನ್ನ ಮಾವನವರಾದ ತಿಲೇಶ್ @ತುಕರಾಮ ಪ್ರಾಯ:50 ವರ್ಷ ತಂದೆ; ಹುಕ್ರಪ್ಪಗೌಡ ವಾಸ: ಕಾಳಪ್ಪಾಡಿ ಮನೆ, ಬಿಳಿನೆಲೆ ಗ್ರಾಮ ಕಡಬ ತಾಲೂಕು ಎಂಬವರು ಮತ್ತು ಅವರ ಪತ್ನಿ ಕೂಸಮ್ಮರವರೊಂದಿಗೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡಿದ್ದು ನಂತರ ತೀಲೇಶ್‌ರವರು 01.00 ಗಂಟೆಯಿಂದ ಮನೆಯಿಂದ ಎಲ್ಲಿಗೋ ಹೋದವರು ಮನೆಗೆ ಬಾರದೇ ಇರುವುದಾಗಿದ್ದು ತೀಲೇಶ್‌ರವರನ್ನು ಹುಡುಕಾಟ ಮಾಡಿ, ತೀಲೇಶ್‌ರವರು ಅವರ ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿರುವ ಕಾಡಿನಲ್ಲಿ ಯಾವುದೋ ವಿಷಪದಾರ್ಥವನ್ನು ಸೇವಿಸಿ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 35/2022 ಕಲಂ:174  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 27-11-2022 02:03 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080