ಅಪಘಾತ ಪ್ರಕರಣ: ೦4
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಐವನ್ ಪ್ರಶಾಂತ್ ಕಾರ್ಲೋ ಪ್ರಾಯ: 34 ವರ್ಷ ತಂದೆ: ದಿ|| ಚಾರ್ಲ್ಸ ಕಾರ್ಲೋ ವಾಸ: ಫರ್ಲಾ ಚರ್ಚ ಮನೆ, ನಾವೂರು ಗ್ರಾಮ ,ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 25-12-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಸಮಯ ಸುಮಾರು ಸಂಜೆ 6:45 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಫರ್ಲಾ ಚರ್ಚ್ ಹತ್ತಿರ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ KA-21-W-0760 ನೇ ಮೋಟಾರ್ ಸೈಕಲನ್ನು ಅದರ ಸವಾರ ಸುಕುಮಾರ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಉಮಾವತಿ ರವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಉಮಾವತಿ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಭಾಗ ತಲೆಗೆ ಗುದ್ದಿದ ಗಂಭೀರ ಸ್ವರೂಪದ ರಕ್ತ ಗಾಯ ಮತ್ತು ಮೈ ಕೈ ಗಳಲ್ಲಿ ಗುದ್ದಿದ ಗಾಯಗಳಾದವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಸಾಗಿಸುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ. ಅ.ಕ್ರ 158/2022 ಕಲಂ: 279, 304 (A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಬಶೀರ್ ಇಬ್ರಾಹಿಂ, ಪ್ರಾಯ 45 ವರ್ಷ, ತಂದೆ: ಬಿ.ಮಹಮ್ಮದ್, ವಾಸ: ಬಾಳಿಯೂರು ಕಾಂಪ್ಲೆಕ್ಸ್, ಫ್ಲಾಟ್ ನಂ: 119/ಬಿ 826, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 25-12-2022 ರಂದು 22:30 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಇಮ್ರಾನ್ ಕೆ.ಎನ್ ಎಂಬವರು KA-19-ES-2914 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ರಮ್ಲಾನ್ ಫಯಾಜ್ ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಕಡವಿನಬಾಗಿಲು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಕಡವಿನ ಬಾಗಿಲುಕ್ರಾಸ್ ಬಳಿ ಸ್ಕೂಟರಿಗೆ ನಾಯಿಯೊಂದು ಅಡ್ಡಬಂದಾಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಹತೋಟಿ ತಪ್ಪಿ ರಸ್ತೆಗೆ ಬಿದ್ದು, ರಮ್ಲಾನ್ ಫಯಾಜ್ ರವರಿಗೆ ಎಡಕಾಲು ಹಾಗೂ ಎಡಕೈಗೆ ಗಾಯಗಳಾಗಿ ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 196/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೂಬಕ್ಕರ್ ಪ್ರಾಯ:47 ವರ್ಷ ತಂದೆ:ಮೂಸೆ ಕುಂಞ ವಾಸ: ಅಡ್ಕಾಡಿ ಮನೆ ಕುಟ್ರುಪ್ಪಾಡಿ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರಾದ ಅಬೂಬಕ್ಕರ್ ಪ್ರಾಯ 47 ವರ್ಷ ಎಂಬುವರು ಕೂಲಿ ಕೆಲಸ ಮಾಡಿಕೊಂಡಿದ್ದು. ದಿನಾಂಕ 26.12.2022 ರಂದು ಸಮಯ ಸುಮಾರು ಮಧ್ಯಾಹ್ನ 03.10 ಗಂಟೆಗೆ ಕಡಬ ಪೇಟೆಗೆ ಹೋಗುವರೇ ಕಡಬ ಗ್ರಾಮದ ಕಳಾರ ಎಂಬಲ್ಲಿ ಪಿರ್ಯಾದುದಾರರ ಮನೆಯ ಎದುರು ಕಡಬ–ಉಪ್ಪಿನಂಗಡಿ ರಸ್ತೆಯ ಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿರುವ ಸಮಯ ಕಡಬ ಕಡೆಯಿಂದ ಪಿರ್ಯಾದುದಾರರ ಅಣ್ಣ ಉಮ್ಮರ್(53) ತಂದೆ: ಮುಸಾಕುಂಞ ರವರು ಪಿರ್ಯಾದುದಾರರ ಮನೆಯ ಕಡೆಗೆ ಆತನ ಬಾಬ್ತು KA-21 EB-5796 ನೇಯ ಸ್ಕೂಟರನಲ್ಲಿ ಸವಾರಿ ಮಾಡಿಕೊಂಡು ಮನೆಯ ಕಡೆಗೆ ತಿರುಗಿಸುವರೇ ಇಂಡಿಕೇಟರ್ ಹಾಕಿ ನಿಧಾನವಾಗಿ ಬಲಬದಿಗೆ ತಿರುಗಿಸಿದಾಗ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ KA19 MK0827 ನೇ ಸ್ಕಾರ್ಪಿಯೋ ಕಾರಿನ ಚಾಲಕನು ರಸ್ತೆಯಲ್ಲಿ ಮತ್ತೋಂದು ಕಾರು ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ಅಜಾಗರೂಕತೆ ಮತ್ತು ತೀರ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಹೋಗಿ ರಸ್ತೆಯಲ್ಲಿ ತಿರುಗಿಸುತಿದ್ದ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಅಪಘಾತದ ರಭಸಕ್ಕೆ ಸ್ಕೂಟರ್ ಸವಾರನಾದ ಉಮ್ಮರ್ ನನ್ನು ಸ್ಕಾರ್ಪಿಯೋ ವಾಹನವು 25 ಮೀಟರ್ ನಷ್ಟು ದೂರ ಮುಂದಕ್ಕೆ ಎಳೆದುಕೊಂಡು ಹೋದ ಪರಿಣಾಮ ಸ್ಕೂಟರ್ ಸವಾರ ಉಮ್ಮರ್ ಮಣ್ಣು ರಸ್ತೆಯಲ್ಲಿ ಬಿದ್ದಿರುತ್ತಾರೆ ,ಕೂಡಲೇ ಅಲ್ಲಿಯೇ ಇದ್ದ ಪಿರ್ಯಾದುದಾರರು ಸವಾರನ ಬಳಿ ಹೋಗಿ ಉಪಚರಿಸಿ ನೋಡಲಾಗಿ ಉಮ್ಮರ್ ರವರಿಗೆ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯವಾಗಿ ಸ್ಮೃತಿ ಕಳೆದುಕೊಂಡಿರುತ್ತಾರೆ ಕೂಡಲೇ ಅಲ್ಲಿ ನೆರೆದಿದ್ದ ಸಾರ್ವಜನಿಕರ ಸಹಾಯದಿಂದ ಪಿರ್ಯಾದುದಾರರು ಕಡಬ ಸರ್ಕಾರಿ ಆಸ್ಪತ್ರೆಗೆ ಸಮಯ ಮದ್ಯಾಹ್ನ 03.20 ಗಂಟೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಉಮ್ಮರ್ ಮೃತಪಟ್ಟಿರುವುದಾಗಿ ಧೃಡಪಡಿಸಿರುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 106/2022 ಕಲಂ: ಕಲಂ:279,304(A)ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಗಾನಂದ ಕೆ,(52) ತಂದೆ: ಕೋಸಪ್ಪ ಗೌಡ ವಾಸ: ಕಡೆಪಾಲ, ,ಸುಳ್ಯ ತಾಲೂಕು ಎಂಬವರು ಸಂಪಾಜೆ ಗ್ರಾಮದ ಕಡೆಪಾಲ ಎಂಬಲ್ಲಿ ಗೂಡಂಗಡಿಯನ್ನು ಹೊಂದಿದ್ದು, ದಿನಾಂಕ 26.12.2022 ರಂದು ತಮ್ಮ ಬಾಬ್ತು ಅಂಗಡಿಯ ಎದುರು ನಿಂತುಕೊಂಡಿರುವ ಸಮಯ ಸುಮಾರು 19:00 ಗಂಟೆಗೆ ಒಬ್ಬ ಅಪರಿಚಿತ ಬಿಕ್ಷುಕ ಕಲ್ಲುಗುಂಡಿ ಕಡೆಯಿಂದ ಪಿರ್ಯಾದುದಾರರ ಬಾಬ್ತು ಅಂಗಡಿಯ ಬಳಿ ಬಂದು ನಿಂತಿರುವಾಗ ಅದೇ ಸಮಯಕ್ಕೆ ಕೆಎ 12 ಆರ್ 3135 ನೇ ಸ್ಕೂಟರ್ ಸವಾರ ವಿಕ್ರಾಂತ್ ಎಂಬಾತನು ಸುಳ್ಯ ಕಡೆಯಿಂದ ಕಲ್ಲುಗುಂಡಿ ಕಡೆಗೆ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಅಪರಿಚಿತ ಭಿಕ್ಷುಕನಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಅಪರಿಚಿತ ಭಿಕ್ಷುಕನಿಗೆ ತಲೆಗೆ ರಕ್ತಗಾಯವಾಗಿದವನ್ನು ಕೂಡಲೇ ಪಿರ್ಯಾದುದಾರರು ಮತ್ತು ಅಲ್ಲೇ ಇದ್ದ ಇತರರು ಸೇರಿ ಅಪರಿಚಿತ ವ್ಯಕ್ತಿಯನ್ನು ಆಂಬುಲೇನ್ಸ್ ವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ಸದ್ರಿ ವ್ಯಕ್ತಿಯು ಮೃತ ಪಟ್ಟಿರುವುದಾಗಿ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ ನಂ: 152/2022 ಕಲಂ: 279,304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬುಬಕ್ಕರ್ ಪ್ರಾಯ 58 ವರ್ಷ ತಂದೆ: ಫಕ್ರು ಬ್ಯಾರಿ ವಾಸ: ಕೊಳಕೆ ಮನೆ ನಗ್ರಿ ಅಂಚೆ ಸಜಿಪ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರ ಮಗನಾದ ಮಹಮ್ಮದ್ ನಿಜಾಮ್, ಪ್ರಾಯ: 19 ವರ್ಷ ಎಂಬವನು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿದ್ದು, ಪ್ರಸ್ತುತ ಕೂಲಿ ಕೆಲಸಕ್ಕೆ ಹೋಗುತ್ತಿದ್ದವನು, ದಿನಾಂಕ; 15.11.2022 ರಂದು ಆತನ ಗೆಳೆಯನಾದ ದೇರಳಕಟ್ಟೆಯ ಸಮೀರ್ ಎಂಬಾತನೊಂದಿಗೆ ಬೆಂಗಳೂರಿಗೆ ಕೆಲಸಕ್ಕೆಂದು ಹೋಗಿರುತ್ತಾನೆ. ಆ ಬಳಿಕ ಮಹಮ್ಮದ್ ನಿಜಾಮ್ ಯಾವುದೇ ರೀತಿಯಲ್ಲಿ ಸಂಪರ್ಕಕ್ಕೆ ಸಿಗದೇ ಇದ್ದು, ಆತನು ಬೆಂಗಳೂರಿಗೆ ಹೋದವನು ಎಲ್ಲಿಯೋ ಕಾಣೆಯಾಗಿದ್ದು,.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 120/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆಯತ್ನ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಿತೇಶ್ , 29 ವರ್ಷ, ತಂದೆ: ಎಂ.ಬಿ ರವಿ, ವಾಸ: ಕುಮ್ಡೇಲು ಮನೆ, ಪುದು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರನ್ನು ದಿನಾಂಕ 24.12.2022 ರಂದು ರಾತ್ರಿ 12:00 ಗಂಟೆಗೆ ಮನೆ ಸಮೀಪದ ಸುಮಂತನು ಆತನ ಮನೆ ಬಳಿಗೆ ಬರ ಮಾಡಿಸಿ ಅಲ್ಲಿದ್ದ ಲೋಕೇಶ್ ಮತ್ತು ಶ್ರವಣ್ ರವರು ಅವರ ಲವ್ ವಿಚಾರದಲ್ಲಿ ಭಾಗಿಯಾಗಬಾರದಾಗಿ ಎಚ್ಚರಿಸಿ ಕೈಯಿಂದ ಹೊಡೆದಿರುತ್ತಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡದ ನಿತೇಶನು ಮತ್ತೆ ದ್ವೇಷ ಸಾಧಿಸಬಹುದೆಂಬ ಇರಾದೆಯಿಂದ ದಿನಾಂಕ 25.12.2022 ರಂದು ರಾತ್ರಿ 10:45 ಗಂಟೆಗೆ ಮನೆಯಲ್ಲಿದ್ದ ಆತನ ಮನೆಯಲ್ಲಿದ್ದ ಪಿರ್ಯಾದಿದಾರರನ್ನು ಮನೆ ಸಮೀಪದ ಸುಮಂತನು ರಾತ್ರಿ 11:00 ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಕುಮ್ಡೇಲು ಎಂಬಲ್ಲಿರುವ ಸುಮಂತನ ಮನೆಯ ಅಂಗಳಕ್ಕೆ ಬರ ಮಾಡಿಸಿ, ಅಲ್ಲಿದ್ದ ಸುಮಂತ್, ಲೋಕೇಶ್, ಸುಜಿತ್ ಮತ್ತು ರೋಶನ್ ರವರು ಒಟ್ಟು ಸೇರಿಕೊಂಡು ಅವರ ಪೈಕಿ ಸುಮಂತ್ ಮತ್ತು ಸುಜಿತ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಬೆದರಿಸಿ ಅವರುಗಳ ಪೈಕಿ ಲೋಕೇಶ್, ರೋಶನ್ ಮತ್ತು ಸುಜಿತ್ ರವರು ಅವರ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿದಾರರ ತಲೆಗೆ, ಎಡಕಣ್ಣಿನ ಬಳಿ, ಬಲ ಕೆನ್ನೆಗೆ, ಗಲ್ಲಕ್ಕೆ, ಕೆಳತುಟಿಗೆ, ಎರಡೂ ಕಾಲಿನ ಮೊಣಗಂಟಿಗೆ, ಹೊಟ್ಟೆಯ ಎಡಬದಿಗೆ, ಬೆನ್ನಿನ ಪಕ್ಕೆಲುಬಿನ ಎಡಬದಿಗೆ ಹಾಗೂ ಬಲಕೈ ಬೆರಳುಗಳಿಗೆ ಯದ್ವಾ ತದ್ವಾ ಕೊಲೆ ಮಾಡುವ ಉದ್ದೇಶದಿಂದ ಕಡಿದಿರುವುದಲ್ಲದೇ ಸುಮಂತನು ಮರದ ದೊಣ್ಣೆಯಿಂದ ಪಿರ್ಯಾದಿದಾರರ ಮೈಮೇಲೆ ಅಲ್ಲಲ್ಲಿ ಹೊಡೆದಿರುವುದಾಗಿದೆ. ತೀವ್ರ ಗಾಯಗೊಂಡ ಪಿರ್ಯಾದಿದಾರರು ಸುಮಂತ್ ರವರ ಮನೆಯ ಅಂಗಳದಲ್ಲಿ ಬಿದ್ದು ಬೊಬ್ಬೆ ಹೊಡೆಯುತ್ತಿದ್ದಾಗ ಆರೋಪಿಗಳೆಲ್ಲರೂ ಒಟ್ಟು ಸೇರಿಕೊಂಡು ಪಿರ್ಯಾದಿದಾರರನ್ನು ಎತ್ತಿ ಪಿರ್ಯಾದಿದಾರರ ಮನೆಯ ಹಿಂಬದಿ ಜಾಗಕ್ಕೆ ಎಸೆದಿರುವುದಾಗಿದೆ. ತೀವ್ರ ಗಾಯಗೊಂಡ ಪಿರ್ಯಾದಿದಾರರನ್ನು ಆತನ ತಂದೆ ಮತ್ತು ತಾಯಿಯವರು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 99/2022 ಕಲಂ 504, 506, 324, 326,307 r/w 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳ್ಳತನ ಪ್ರಕರಣ: ೦1
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಮೀನಾಕ್ಷಿ (62) ಗಂಡ:ದಿ|| ಜನಾರ್ಧನ ಭಟ್ ವಾಸ:ಮುರ ಮನೆ ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ (62) ಎಂಬವರು ದಿನಾಂಕ:25.12.2022 ರಂದು ಗುರುವಾಯನಕೆರೆಯಲ್ಲಿರುವ ಮಗಳ ಮನೆಗೆ ಪೂಜೆ ನಿಮಿತ್ತ ಹೋಗಿ ಬರುವರೇ ಮದ್ಯಾಹ್ನ 2.30 ಗಂಟೆಗೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಮುರ ಎಂಬಲ್ಲಿರುವ ಪಿರ್ಯಾದಿದಾರರು ಮನೆಯ ಬಾಗಿಲುಗಳನ್ನು ಹಾಕಿ ಲಾಕ್ ಮಾಡಿ ಹೋಗಿದ್ದು, ಮಗಳ ಮನೆಯಿಂದ ಪೂಜೆ ಕಾರ್ಯಕ್ರಮ ಮುಗಿಸಿ ದಿನಾಂಕ:26.12.2022ರಂದು ಬೆಳಿಗ್ಗೆ ಹೊರಟು 08.30 ಗಂಟೆಗೆ ಮನೆಗೆ ಬಂದು ಮುಂದಿನ ಬಾಗಿಲ ಕೀಯನ್ನು ತೆರೆದು ಒಳಗಡೆ ಹೋದಾಗ ಚಾವಡಿಯಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಮನೆಯ ಹಿಂಬಾಗಿಲನ್ನು ನೋಡಿದಾಗ ಬಾಗಿಲು ತೆರೆದಿದ್ದು, ಬಾಗಿಲಿಗೆ ಮೇಲ್ಬಾಗದ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ತುಂಡರಿಸಿದ್ದು, ಯಾರೋ ಕಳ್ಳರು ದಿನಾಂಕ:25.12.2022 ರಂದು ಮದ್ಯಾಹ್ನ 2.30 ಗಂಟೆಯಿಂದ ತಾರೀಖು 26.12.2022 ರಂದು 08.30 ಗಂಟೆಯ ಮದ್ಯೆ ಮನೆಯ ಹಿಂಬಾಗದ ಬಾಗಿಲ ಚೀಲಕವನ್ನು ಯಾವುದೋ ಆಯುಧದಿಂದ ಮೀಟಿ ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿದೆ. ಕಳ್ಳತನ ಮಾಡಿದ ಚಿನ್ನಾಭರಣದ ಅಂದಾಜು ಮೌಲ್ಯ 72000/- ಹಾಗೂ ನಗದು ಹಣ ರೂ 32500/-, ಒಟ್ಟು ಮೌಲ್ಯ 1,04,500/- ಆಗಬಹುದು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ .ಕ್ರ 131/2022 ಕಲಂ:454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ ಪ್ರಭಾಶ್ಚಂದ್ರ ರೈ ಪ್ರಾಯ: 52 ವರ್ಷ, ವಾಸ: ಪ್ರಭಾ ನಿಲಯ, ಪಂಜ, ಕೂತ್ಕುಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕೃಷಿ ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಆಗಾಗ ಬೆಂಗಳೂರಿಗೆ ಹೋಗಿ ಬರುತ್ತಿದ್ದು, ಪಿರ್ಯಾದಿದಾರರಿಗೆ ಕೂತ್ಕುಂಜ ಗ್ರಾಮದಲ್ಲಿ ಪಿತ್ರಾರ್ಜಿತ ಆಸ್ತಿಯು ಇದ್ದು, ಪಿರ್ಯಾದಿದಾರರು ದಿನಾಂಕ:23-12-2022 ರಂದು ಸದ್ರಿ ಪಿತ್ರಾರ್ಜಿತ ಆಸ್ತಿಯ ತೋಟಕ್ಕೆ ಹೋದಾಗ ತೋಟದಲ್ಲಿರುವ ಅಡಿಕೆ ಮತ್ತು ತೆಂಗು ಕಳ್ಳತನವಾಗಿರುವ ಬಗ್ಗೆ ಗೊತ್ತಾಗಿದ್ದು, ಸುಮಾರು 5 ಗೋಣಿ ಹಣ್ಣಡಿಕೆ ಹಾಗೂ ಸುಮಾರು 100 ತೆಂಗಿನ ಕಾಯಿ ಇದರ ಅಂದಾಜು ಮೌಲ್ಯ 34,000/- ಆಗಬಹುದು. ಈ ಬಗ್ಗೆ ಕೆಲಸದವರಲ್ಲಿ ವಿಚಾರಿಸಲಾಗಿ ಪಿರ್ಯಾದಿದಾರರ ತಮ್ಮ ಕೆ ರಾಜೇಶ್ ಕುಮಾರ್ ರೈ ಎಂಬವರು ದಿನಾಂಕ:10-12-2022 ರಿಂದ 22-12-2022 ರ ಮದ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪಿರ್ಯಾದಿದಾರರು ಅವರ ತಮ್ಮನಲ್ಲಿ ವಿಚಾರಿಸಲಾಗಿ ನೀನು ಇನ್ನೊಮ್ಮೆ ಜಾಗಕ್ಕೆ ಕಾಲಿಟ್ಟರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ. ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ : 116/2022 ಕಲಂ 379,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.