ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ರಶೀದ್‌ ಪ್ರಾಯ 39 ವರ್ಷ, ತಂದೆ: ಡಿ ಆದಂ, ವಾಸ: ಬೆದ್ರೋಡಿ ವಿದ್ಯಾಪುರ ಮನೆ, ಬಜತ್ತೂರು ಗ್ರಾಮ, ವಳಾಲ್‌ ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 27-02-2022 ರಂದು 19-15 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ  ಸುರೇಶ್‌ ಎಂಬವರು KA-19-EX-5953ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ತಿರುಮಲ ಹೋಂಡಾ ಸರ್ವಿಸ್‌ ಶಾಪ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಅಬ್ದುಲ್‌ ರಶೀದ್‌ ರವರು ಸವಾರರಾಗಿ ನವಾಝ್‌ ಎಂಬವರು ಸಹಸವಾರರರಾಗಿ ಉಪ್ಪಿನಂಗಡಿ ಕಡೆಯಿಂದ ನೆಕ್ಕಿಲಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-S-2810 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಇಂಡಿಕೇಟರ್‌ ಹಾಕಿ ಸೂಚನೆ ನೀಡಿ ನಿಧಾನಿಸಿ ಹೆದ್ದಾರಿಯ ಬಲಭಾಗದಲ್ಲಿರುವ ಅಂಗಡಿಗೆ ಹೋಗಲು ಚಲಾಯಿಸಿಕೊಂಡು ಹೆದ್ದಾರಿಯ ಅಂಚಿಗೆ ತಲುಪಿದಾಗ ಮೋಟಾರು ಸೈಕಲಿನ ಹಿಂಭಾಗದ ಸಾರಿಗಾರ್ಡ್‌ ಬಳಿಗೆ ಅಪಘಾತವಾಗಿ. ಎರಡೂ ಮೋಟಾರ್‌ ಸೈಕಲ್‌ಗಳು ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿಗೆ ಗುದ್ದಿದ ನೋವು, ಎಡ ಕೈ ಬೆರಳುಗಳಗೆ ಗುದ್ದಿದ ಗಾಯಗಳಾಗಿರುತ್ತದೆ ಮತ್ತು ನವಾಝ್‌ ರವರಿಗೆ ತಲೆಗೆ ಗಾಯಗಳಾಗಿರುತ್ತದೆ. ಇಬ್ಬರನ್ನೂ ಚಿಕಿತ್ಸೆಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆತಂದಿದ್ದು ನವಾಝ್‌ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತ ನವಾಝ್‌ ರವರ ಮೃತ ದೇಹವು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಪಿರ್ಯಾದುದಾರರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ಆರೋಪಿ ಮೋಟಾರ್‌ ಸೈಕಲ್‌ ಸವಾರ ಸುರೇಶ್‌ರವರಿಗೂ ಗಾಯಗಳಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  36/2022 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಶಾಕೀರ್, ಪ್ರಾಯ:18 ವರ್ಷ,ತಂದೆ: ಅಬ್ದುಲ್ ರಜಾಕ್ ವಾಸ ನೆಹರು ನಗರ ಮನೆ ನರಿಕೊಂಬು ಗ್ರಾಮ, ಪಾಣೆಮಂಗಳೂರು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 26-02-2022 ರಂದು ಪಾಣೆಮಂಗಳೂರು ಮಾಂಡೊವಿ ಶೋ ರೂಂ ಬಳಿ ಇರುವ ಎಸ್. ಅರ್  ಬೇಕರಿಗೆ ಕೋಳಿ ಮಾಂಸ ಕೊಟ್ಟು ಅಲ್ಲಿಂದ ವಾಪಾಸು  ಅಂಗಡಿಗೆ ಬರಲು ರಸ್ತೆಯ ಎಡ ಬದಿಯಲ್ಲಿ ನಡೆದು ಕೊಂಡು ಬರುತ್ತಾ  ಸಮಯ ಸುಮಾರು 21-30 ಗಂಟೆಗೆ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ  ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮೆಲ್ಕಾರ್ ಕಡೆಯಿಂದ KA-70-H-6734  ಸ್ಕೂಟರನ್ನು ಅದರ ಸವಾರ, ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕತುನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಬಿದ್ದಿರುವುದಲ್ಲದೇ,  ಸ್ಕೂಟರ್ ಸವಾರ ನಾಝೀಮ್ ಮತ್ತು ಸಹಸವಾರ ಮೊಹಮ್ಮದ್ ರಾಝೀಕ್ ರವರು ಸ್ಕೂಟರ್ ಸಮೇತಾ ರಸ್ತೆಗೆ ಬಿದ್ದು, ಗಾಯಗೊಂಡ ಸ್ಕೂಟರ್ ಸವಾರ ನಾಝೀಮ್ ಮತ್ತು ಪಿರ್ಯಾದಿ  ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ, ಸಹಸವಾರ ಮೊಹಮ್ಮದ್ ರಾಝೀಕ್ ರವರು ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 28/2022 ಕಲಂ 279,337 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ  ಚಂದ್ರು ಬಿ ಜಿ, ತಂದೆ: ಗುಂಡಯ್ಯ, ವಾಸ: ಉಪವಲಯ ಅರಣ್ಯಾಧಿಕಾರಿ, ಸುಳ್ಯ ಘಟಕ, ದ.ಕ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರಿಗೆ ದಿನಾಂಕ: 27-02-2022 ರಂದು ಶಿವರಾತ್ರಿ ಪ್ರಯುಕ್ತ ಕಾಲ್ನಡಿಗೆ ಯಾತ್ರಾರ್ಥಿಗಳು ಅರಣ್ಯ ಪ್ರದೇಶದಲ್ಲಿ ಸಂಚರಿಸುವ ಸಮಯ ಸ್ವಚ್ಚತೆಯ ಬಗ್ಗೆ ವಿಶೇಷ ಕರ್ತವ್ಯಕ್ಕೆ ನೇಮಿಸಿದ್ದು, ಸುಳ್ಯವಲಯ ಕಛೇರಿಯಿಂದ ಇಲಾಖಾ ವಾಹನ ಕೆಎ 21 ಜಿ 0044 ನೇದರಲ್ಲಿ ಪಿರ್ಯಾದಿದಾರರು, ಉಪವಲಯ ಅರಣ್ಯಾಧಿಕಾರಿಗಳಾದ ವೀರಭದ್ರಯ್ಯ.ಹೆಚ್.ಕರಣೀಮಠ, ಚಿದಾನಂದ ಪರೀಟ, ಅರಣ್ಯ ರಕ್ಷಕರಾದ ದೀವೀಶ್.ಕೆ, ಅರಣ್ಯ ವೀಕ್ಷಕರಾದ ಸುಂದರ, ಬಾಲಕೃಷ್ಣ, ಚಾಲಕರಾದ ಪುರುಷೋತ್ತಮರವರೊಂದಿಗೆ 12:00 ಗಂಟೆಗೆ ಸುಳ್ಯದಿಂದ ಹೊರಟು ಸುಬ್ರಹ್ಮಣ್ಯಕ್ಕೆ ಬರುತ್ತಿರುವ ಸಮಯ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ತಿರುವು ರಸ್ತೆಯಲ್ಲಿ ಮದ್ಯಾಹ್ನ 12:45 ಗಂಟೆಗೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಅಂದರೆ ಸುಬ್ರಹ್ಮಣ್ಯ ಕಡೆಯಿಂದ ಮಾರುತಿ 800 ಕಾರೊಂದನ್ನು ಅದರ ಚಾಲಕನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಮಾರುತಿ ಕಾರಿನ ನಂಬ್ರ ಕೆಎ 02 ಪಿ 3601 ನೇ ಆಗಿದ್ದು, ಅದರಲ್ಲಿದ್ದ 4 ಜನರಿಗೆ ಗಾಯವಾಗಿದ್ದು,.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ  : 24-2022 ಕಲಂ: 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ರಶೀದ್ ಪ್ರಾಯ 39 ವರ್ಷ, ತಂದೆ: ಡಿ ಆದಂ, ವಾಸ: ಬೆದ್ರೋಡಿ ವಿದ್ಯಾಪುರ ಮನೆ, ಬಜತ್ತೂರು ಗ್ರಾಮ, ವಳಾಲ್ ಅಂಚೆ, ಪುತ್ತೂರು ಎಂಬವರ ದೂರಿನಂತೆ  ದಿನಾಂಕ 27-02-2022 ರಂದು 19-15 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ  ಸುರೇಶ್ ಎಂಬವರು KA-19-EX-5953ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಎಂಬಲ್ಲಿ ತಿರುಮಲ ಹೋಂಡಾ ಸರ್ವಿಸ್ ಶಾಪ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಅಬ್ದುಲ್ ರಶೀದ್ ರವರು ಸವಾರರಾಗಿ ನವಾಝ್ ಎಂಬವರು ಸಹಸವಾರರರಾಗಿ ಉಪ್ಪಿನಂಗಡಿ ಕಡೆಯಿಂದ ನೆಕ್ಕಿಲಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-S-2810 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಇಂಡಿಕೇಟರ್ ಹಾಕಿ ಸೂಚನೆ ನೀಡಿ ನಿಧಾನಿಸಿ ಹೆದ್ದಾರಿಯ ಬಲಭಾಗದಲ್ಲಿರುವ ಅಂಗಡಿಗೆ ಹೋಗಲು ಚಲಾಯಿಸಿಕೊಂಡು ಹೆದ್ದಾರಿಯ ಅಂಚಿಗೆ ತಲುಪಿದಾಗ ಮೋಟಾರು ಸೈಕಲಿನ ಹಿಂಭಾಗದ ಸಾರಿಗಾರ್ಡ್ ಬಳಿಗೆ ಅಪಘಾತವಾಗಿ. ಎರಡೂ ಮೋಟಾರ್ ಸೈಕಲ್ಗಳು ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕಾಲಿಗೆ ಗುದ್ದಿದ ನೋವು, ಎಡ ಕೈ ಬೆರಳುಗಳಗೆ ಗುದ್ದಿದ ಗಾಯಗಳಾಗಿರುತ್ತದೆ ಮತ್ತು ನವಾಝ್ ರವರಿಗೆ ತಲೆಗೆ ಗಾಯಗಳಾಗಿರುತ್ತದೆ. ಇಬ್ಬರನ್ನೂ ಚಿಕಿತ್ಸೆಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆತಂದಿದ್ದು ನವಾಝ್ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತ ನವಾಝ್ ರವರ ಮೃತ ದೇಹವು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಪಿರ್ಯಾದುದಾರರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ಆರೋಪಿ ಮೋಟಾರ್ ಸೈಕಲ್ ಸವಾರ ಸುರೇಶ್ರವರಿಗೂ ಗಾಯಗಳಾಗಿದ್ದು,.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  36/2022 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

  • ಕಳವು ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಸಿರಾಜ್ ಎಂ ಪ್ರಾಯ 36 ವರ್ಷ         ತಂದೆ: ದಿ| ಹಸನ್ ಕುಂಞ ವಾಸ: ಮಣಿಲ ಮನೆ, ಪುಣಚ ಗ್ರಾಮ  ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ: 26-02-2022 ರಂದು   ಸಮಯ ಸುಮಾರು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರ ಅತ್ತಿಗೆಯ ತಾಯಿ ಮನೆಯಾದ ಪುತ್ತೂರಿನ ಮುಕ್ವೆ ಗೆ ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿ ಹೋಗಿದ್ದು. ಸದ್ರಿ ಮನೆಯಲ್ಲಿರುವ ಸಿಸಿ ಟಿವಿಯ ಜಾಡನ್ನು ಪಿರ್ಯಾದಿದಾರರ ಅಣ್ಣ ಮಹಮ್ಮದ್ ಆಲಿಯ ಮೊಬೈಲ್ ಗೆ ಸಂಪರ್ಕ ಇರುವುದರಿಂದ  ದಿನಾಂಕ: 27-02-2022 ರಂದು ಪಿರ್ಯಾದಿದಾರರ ಅಣ್ಣ ಮಹಮ್ಮದ್ ಆಲಿ ಗೆ ಮನೆಯ ಸಿಸಿ ಟಿವಿಯ ಬಗ್ಗೆ ಸಂಶಯ ಬಂದು ಪಿರ್ಯಾದಿದಾರರಿಗೆ ಅಜ್ಜಿನಡ್ಕ ಮನೆಗೆ ಹೋಗಿ ನೋಡಿಕೊಂಡು ಬರುವರೇ ದೂರವಾಣಿ ಮೂಲಕ ತಿಳಿಸಿದ ಪ್ರಕಾರ ಪಿರ್ಯಾದಿದಾರರು ಹೊರಟು ಈ ದಿನ ಸುಮಾರು 11.30 ಗಂಟೆಗೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿಗೆ ಬಂದು ನೋಡಲಾಗಿ ಪಿರ್ಯಾದಿದಾರರ ಅಣ್ಣನ ಮನೆಯ ಹಿಂದುಗಡೆ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಒಳ ಪ್ರವೇಶಿಸಿ ಮನೆಯ ಒಳಗೆ ರೂಮಿನಲ್ಲಿ ಕಪಾಟಿನಲ್ಲಿ ಇಟ್ಟಿದ್ದ DELL ಕಂಪೆನಿಯ ಲ್ಯಾಪ್ ಟಾಪ್ ಹಾಗೂ APPLE ಕಂಪೆನಿಯ ಕೈ ಗಡಿಯಾರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಲ್ಲದೇ ಬೇರೆ ಕೋಣೆಯಲ್ಲಿದ್ದ ಗೋಡೆಗೆ ಅಳವಡಿಸಿದ ಕಪಾಟಿನ ಬಾಗಿಲನ್ನು ತೆಗೆದು ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು. ಕಳವು ಮಾಡಿದ  DELL ಕಂಪೆನಿಯ ಲ್ಯಾಪ್ ಟಾಪ್ ನ ಅಂದಾಜು ಮೌಲ್ಯ 40,000/- ರೂ ಹಾಗೂ APPLE ಕಂಪೆನಿಯ ಕೈ ಗಡಿಯಾರದ ಅಂದಾಜು ಮೌಲ್ಯ 5000/- ರೂ ಒಟ್ಟು 45,000/- ರೂ  ಆಗಬಹುದು.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 34/2022 ಕಲಂ: 454,,457,380 ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2022 06:35 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080