ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦5

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸೀತಾರಾಮ ಪ್ರಾಯ: 29 ವರ್ಷ ತಂದೆ: ದಿ|| ಸಂಕಪ್ಪ ಪೂಜಾರಿ ವಾಸ: #3-266/2 ಸುಲ್ತಾನ್ ಕಟ್ಟೆ ಮನೆ ನಾವೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-02-2023 ರಂದು ಸಮಯ ಸುಮಾರು ಸಂಜೆ 6:15 ಗಂಟೆಗೆ ಬಂಟ್ವಾಳ ತಾಲೂಕು ತುಂಬೆ ಗ್ರಾಮದ ರಾಮಲಕಟ್ಟೆ ಎಂಬಲ್ಲಿ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ KA-19-MM-4297ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಓವರ್ ಟೇಕ್ ಮಾಡಲು ಚಲಾಯಿಸಿಕೊಂಡು ಹೋಗಿ ಅದೇ ಮಾರ್ಗವಾಗಿ ಮಂಗಳೂರು ಕಡೆಗೆ ತಿಮ್ಮಪ್ಪ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-L-1684 ನೇ M80 ಸ್ಕೂಟರ್ ಬಲ ಬದಿಯ ಹ್ಯಾಂಡಲ್ ಗೆ ಕಾರಿನ ಎಡ ಬದಿ ತಾಗಿ ಅಪಘಾತಪಡಿಸಿದ್ದು ಪರಿಣಾಮ ಸ್ಕೂಟರ್ ಸವಾರ ತಿಮ್ಮಪ್ಪ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯ ನೋವುಗಳಾದವರನ್ನು ಸಾರ್ವಜನಿಕರು ಉಪಚರಿಸಿ ವಾಹನವೊಂದರಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ಗಾಯಾಳು ತಿಮ್ಮಪ್ಪ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-02-2023 ರಂದು 20:15 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 35/2023 ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ವಿನುತ್‌ ಪಿ.ಜಿ., ಪ್ರಾಯ:24 ವರ್ಷ, ತಂದೆ: ಗಂಗಾಧರ ಗೌಡ, ವಾಸ- ಪೂಂದ್ರುಕೋಡಿ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ಎಂಬವರು ದಿನಾಂಕ:- 26.02.2023ರಂದು ತನ್ನ ಮನೆಯಿಂದ  ಕಾವು ಎಂಬಲ್ಲಿಗೆ ತೆರಳುವರೇ  ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಂಟ್ರಮಜಲು ಎಂಬಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ  ವೇಳೆ  ಮಧ್ಯಾಹ್ನ ಸುಮಾರು 3.00 ಗಂಟೆಗೆ  ಫಿರ್ಯಾದುದಾರರ ತಂದೆಯಾದ ಗಂಗಾಧರ ಗೌಡರು KA21 Y 6146ನೇ ನಂಬ್ರದ ಸ್ಕೂಟರಿನಲ್ಲಿ  ಫಿರ್ಯಾದುದಾರರ ತಾಯಿ ಹೇಮಲತಾ ಎಂಬವರನ್ನು ಹಿಂಬದಿ ಸವಾರರಾಗಿ ಕುಳ್ಳಿರಿಸಿಕೊಂಡು ಗಂಗಾಧರ ಗೌಡರು ಸದ್ರಿ ಸ್ಕೂಟರನ್ನು ಸವಾರಿ ಮಾಡಿಕೊಂಡು ಮೈಸೂರು –ಮಾಣಿ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಾ ಫಿರ್ಯಾದುದಾರರು ನಿಂತಿದ್ದ ಕಂಟ್ರಮಜಲು ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬಿಳಿ ಬಣ್ಣದ ಬೆಂಝ್‌ ಕಾರೊಂದನ್ನು ಅದರ  ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಂಗಾಧರ ಗೌಡರು  ಸವಾರಿ ಮಾಡಿಕೊಂಡಿದ್ದ ಸ್ಕೂಟರನ್ನು ಓವರ್‌ಟೇಕ್‌ ಮಾಡುತ್ತಾ ಸದ್ರಿ ಸ್ಕೂಟರಿಗೆ ಢಿಕ್ಕಿಯುಂಟು ಮಾಡಿರುತ್ತಾನೆ. ಈ ಅಪಘಾತದಿಂದಾಗಿ ಫಿರ್ಯಾದುದಾರರ ತಂದೆ ಮತ್ತು ತಾಯಿಯವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿರುತ್ತಾರೆ.  ಈ ವೇಳೆ ಅಪಘಾತ ಉಂಟು ಮಾಡಿದ ಕಾರನ್ನು  ಅದರ ಚಾಲಕನು ನಿಲ್ಲಿಸದೇ ಪುತ್ತೂರು ಕಡೆಗೆ  ಪರಾರಿಯಾಗಿದ್ದು, ಸದ್ರಿ ಕಾರಿನ ನೋಂದಣಿ ಸಂಖ್ಯೆ ನೋಡಲಾಗಿ ಅದು PY 05 A 3789 ಆಗಿರುತ್ತದೆ. ಅದೇ ರೀತಿ  ಅಪಘಾತದ ವೇಳೆ ಸದ್ರಿ ಕಾರಿನ ತುಂಡಾದ ಸೈಡ್‌ ಮಿರರ್‌ ಮತ್ತು  ಫೈಬರ್‌ ಭಾಗವು ಅಪಘಾತ ಸ್ಥಳದಲ್ಲಿ ಬಿದ್ದಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR.NO 16-2023 ಕಲಂ: 279,337 ಐಪಿಸಿ ಹಾಗೂ 134(a&b) IMV act ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸಂದೇಶ್ ಆಚಾರ್ಯ , ಪ್ರಾಯ 31, ವರ್ಷ, ತಂದೆ  ದಿ ಭಾಸ್ಕರ  ಆಚಾರ್ಯ,  ವಾಸ  ಹಲಸಿನ ಕಟ್ಟೆ ಮನೆ, ಇಡ್ಕಿದು ಗ್ರಾಮ, ಬಂಟ್ವಾಳ ತಾಲೂಕು ಎಂಬವರು ಪುತ್ತೂರಿನ ಪಡೀಲ್ ನಲ್ಲಿರುವ ಜೈಮಾತಾ ಎಂಬ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 27.02.2023 ರಂದು ಕೆಲಸಕ್ಕೆ ರಜೆ ಇದ್ದುದ್ದರಿಂದ ಚಿಕ್ಕಮ್ಮನ ಯೋಗ ಕ್ಷೇಮ ವಿಚಾರಿಸಲು  ಬೆಳಿಗ್ಗೆ ಪಿರ್ಯಾದಿದಾರರು ತನ್ನ ಮನೆಯಿಂದ ಚಿಕ್ಕಮ್ಮನ ಮನೆಯಾದ ಆರ್ಯಾಪು ಗ್ರಾಮದ ದೊಡ್ಡಡ್ಕಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಚಿಕ್ಕಮ್ಮನವರು ದೊಡ್ಡಡ್ಕದಲ್ಲಿ ಕಾಣಸಿಕ್ಕಿದ್ದು, ಒಳತ್ತಡ್ಕದಲ್ಲಿ ಧರ್ಮಸ್ಥಳ ಸ್ವಸಹಾಯ ಗ್ರೂಪಿನ ಸಾಲ ಕಟ್ಟಲು ಹೋಗುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸಹ ತನ್ನ ಚಿಕ್ಕಮ್ಮ ಗಿರಿಜಾ ರವರ ಜೊತೆ ದೊಡ್ಡಡ್ಕದಿಂದ ಸಾರ್ವಜನಿಕ ಡಾಮಾರು ರಸ್ತೆಯ ಎಡ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10-50 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಚೆನ್ನಡ್ಕ ಎಂಬಲ್ಲಿಗೆ  ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಕಾರೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ  ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಚಿಕ್ಕಮ್ಮನವರಿಗೆ ಡಿಕ್ಕಿ ಪಡಿಸಿದ್ದು, ಕಾರು ಡಿಕ್ಕಿಯಾದ ಪರಿಣಾಮ ಪಿರ್ಯಾದಿದಾರರ ಚಿಕ್ಕಮ್ಮನವರು ರಸ್ತೆಗೆ ಬಿದ್ದಿದ್ದು,  ಕೂಡಲೇ ಚಿಕ್ಕಮನನ್ನು ಎಬ್ಬಿಸಿ ಕುಳ್ಳಿರಿಸಿದಾಗ ಈ ಅಪಘಾತವನ್ನು ಕಂಡು ಸಾರ್ವಜನಿಕರು ಅಲ್ಲಿಗೆ ಬಂದಿದ್ದು ಪಿರ್ಯಾದಿದಾರರು ತನ್ನ ಚಿಕ್ಕಮ್ಮ ಗಿರಿಜಾರವರನ್ನು ನೋಡಲಾಗಿ ಗಿರಿಜಾರವರಿಗೆ ಅಪಘಾತದಿಂದ ತಲೆಯ ಹಿಂಬಾಗಕ್ಕೆ ಗುದ್ದಿದ ಗಾಯ, ಮುಖದಲ್ಲಿ ರಕ್ತ  ಗಾಯ ಮತ್ತು  ಎಡ ಕೈ ಭುಜಕ್ಕೆ ಗುದ್ದಿದ ಗಾಯ ಮತ್ತು ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಅಪಘಾತ ಪಡಿಸಿದ ಕಾರನ್ನು ಅದರ ಚಾಲಕನು ಸ್ವಲ್ಪ ಮುಂದೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದು, ಸದ್ರಿ ಕಾರಿನ ನಂಬ್ರ ನೋಡಲಾಗಿ KL 58 B 6245  ನೇ ಇಂಡಿಕಾ ಕಾರು  ಆಗಿದ್ದು, ಅದರ ಚಾಲಕನ ಹೆಸರು ಕೇಳಲಾಗಿ ಅಬ್ದುಲ್ ಲತೀಫ್ ಎಂಬುದಾಗಿ ತಿಳಿಸಿದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ CR.NO 17/2023 ಕಲಂ 279, 337 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಚಿನ್‌ ಡಿ ಸಿ ಪ್ರಾಯ:27 ವರ್ಷ, ತಂದೆ: ದಿ||ಚಂದ್ರಶೇಖರ ಡಿ ಸಿ, ವಾಸ: ದೇವ ಮನೆ, ದೇವಚಳ್ಳ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ:26-02-2023 ರಂದು ತಮ್ಮ ಮನೆಯಿಂದ ಅವರ ಬಾಬ್ತು ಕೆಎ 21 ಯು 2472 ನೇ ಪಲ್ಸರ್‌ ಮೋಟಾರ್‌ ಸೈಕಲ್‌ ನಲ್ಲಿ ಯುವರಾಜ್‌ ಎಂಬವನನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಏನೆಕಲ್ಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 7.30 ಗಂಟೆಗೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ವಳಲಂಬೆ ಸಮೀಪ ಕಾಜಿಮಡ್ಕ ಎಂಬಲ್ಲಿಗೆ ತಲುಪಿದಾಗ ರಾಜ್ಯ ಹೆದ್ದಾರಿಯಲ್ಲಿ ಎದುರುಗಡೆಯಿಂದ ಅಂದರೆ ಗುತ್ತಿಗಾರು ಕಡೆಯಿಂದ ಮೋಟಾರ್‌ ಸೈಕಲ್‌ ವೊಂದನ್ನು ಅದರ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬಲಬದಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್‌ ಸೈಕಲ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೆನ್ನೆಗೆ ರಕ್ತಗಾಯ, ಬಲಕಾಲಿನ ಕೋಲುಕಾಲಿನಲ್ಲಿ ತರಚಿದ ಗಾಯವಾಗಿದ್ದು, ಹಿಂಬದಿ ಸವಾರ ಯುವರಾಜನಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ಎದ್ರಿ ಮೋಟಾರ್‌ ಸೈಕಲ್‌ ಸವಾರ ಲಿಖಿತ್‌ ನಿಗೂ ಗಾಯವಾಗಿರುತ್ತದೆ. ಬಳಿಕ ಗಾಯಾಳುಗಳನ್ನು ಖಾಸಗಿ ಆಂಬುಲೆನ್ಸ್‌ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಅಪಘಾತವೆಸಗಿದ ಮೋಟಾರ್‌ ಸೈಕಲ್‌ ನಂಬ್ರ ಕೆಎ 21 ಇಬಿ 0648 ನೇ ಪಲ್ಸರ್‌ ಮೋಟಾರ್‌ ಸೈಕಲ್‌ ಆಗಿದ್ದು, ಅದರ ಸವಾರನ ಹೆಸರು ಲಿಖಿತ್‌ ಎಂಬುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆ ಅ.ಕ್ರ ನಂಬ್ರ  : 09-2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರವೀಂದ್ರ ಗೌಡ, 48 ವರ್ಷ, ತಂದೆ: ಪುಟ್ಟಣ್ಣ ಗೌಡ, ವಾಸ: ಮೂರು ಕಲ್ಲಡ್ಕ ಮನೆ, ಬಾಳಿಲ ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-02-2023 ರಂದು 21-30 ಗಂಟೆಗೆ ಸುಳ್ಯ ತಾಲೂಕು ಬಾಳಿಲ ಗ್ರಾಮದ ಮೂರುಕಲ್ಲಡ್ಕ ಎಂಬಲ್ಲಿನ ವಾಸಿ ರವೀಂದ್ರ ಗೌಡ, 48 ವರ್ಷ, ಬಿನ್: ಪುಟ್ಟಣ್ಣ ಗೌಡ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ ಏನೆಂದರೆ ಪಿರ್ಯಾದಿದಾರರು ಈ ದಿನ ಸುಳ್ಯ ಕಡೆಯಿಂದ ಚೊಕ್ಕಾಡಿ ಕಡೆಗೆ ಬೇಂಗಮಲೆ-ಅಯ್ಯನಕಟ್ಟೆ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ನಂ KA 21 EB 2725 ನೇಯದ್ದಕ್ಕೆ ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಎಂಬಲ್ಲಿ ಅಪರಾಹ್ನ 4-00 ಗಂಟೆಗೆ ವಿರುದ್ದ ದಿಕ್ಕಿನಿಂದ ಅಂದರೆ ಚೊಕ್ಕಾಡಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರು ನಂ KA12 MA 5438 ನೇಯದ್ದು ಡಿಕ್ಕಿ ಉಂಟಾದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಯಲ್ಲಿ ಬಿದ್ದು ಬಲ ಕಾಲಿನ ಪಾದದಲ್ಲಿ ರಕ್ತಗಾಯ, ಬಲ ಭುಜಕ್ಕೆ ಗುದ್ದಿದ ಗಾಯ, ಬಲ ಕೈಗೆ ತರಚಿದ ಗಾಯಗಳುಂಟಾಗಿದ್ದು, ಗಾಯಾಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ, 09/2023 ಕಲಂ 279,337   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-02-2023 01:36 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080