ಅಪಘಾತ ಪ್ರಕರಣ: ೦5
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೆ.ಎಂ. ಹಂಝ, ಪ್ರಾಯ 40 ವರ್ಷ, ತಂದೆ: ಎಸ್ . ಮಹಮ್ಮದ್, ವಾಸ: ಸಾಲ್ಮರ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 27-03-2021 ರಂದು 11-30 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಮೋಹನ ಮರಡಿತ್ತಾಯ ಎಂಬವರು KA-21-L-6204 ನೇ ನೋಂದಣಿ ನಂಬ್ರದ ಸ್ಕೂಟರ್‌ನ್ನು ಸಾಲ್ಮರ-ಎಪಿಎಂಸಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸಾಲ್ಮರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ಎಂಬಲ್ಲಿ ರಿಕ್ಷಾ ಒಂದನ್ನು ಓವರ್‌ಟೇಕ್ ಮಾಡಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಪುತ್ತೂರು ಕಡೆಯಿಂದ ಬೆದ್ರಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-N-1334 ನೇ ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ, ಆರೋಪಿ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 53/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುರೇಶ, ಪ್ರಾಯ 42 ವರ್ಷ, ತಂದೆ: ಓಡಿಯಪ್ಪ ಪೂಜಾರಿ, ವಾಸ: ಕುಂಟ್ರಪ್ಪಾಡಿ ಮನೆ, ಕೊಡಿಪ್ಪಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 27-03-2021 ರಂದು 11-15 ಗಂಟೆಗೆ ಆರೋಪಿ ಕಾರು ಚಾಲಕ ಮಹಮ್ಮದ್ ಶರೀಫ್ ಎಂಬವರು KA-12-P-6165 ನೇ ನೋಂದಣಿ ನಂಬ್ರದ ಕಾರನ್ನು ಮಂಜಲ್ಪಡ್ಪು-ಕೊಡಿಪ್ಪಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೊಡಿಪ್ಪಾಡಿ ಕಡೆಯಿಂದ ಮಂಜಲ್ಪಡ್ಪು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೊಡಿಪ್ಪಾಡಿ ಗ್ರಾಮದ ಕುಂಟ್ರಪ್ಪಾಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡ್‌ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮಂಜಲ್ಪಡ್ಪು ಕಡೆಯಿಂದ ಕೊಡಿಪ್ಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-4418 ನೇ ನೋಂದಣಿ ನಂಬ್ರದ ಅಟೋರಿಕ್ಷಾಕ್ಕೆ ಅಪಘಾತವಾಗಿ, ಪಿರ್ಯಾದುದಾರರಿಗೆ ಹಣೆಗೆ, ಬಲಕಾಲಿನ ಮೊಣಗಂಟಿಗೆ, ಬಲಕೈಯ ಮಣಿಗಂಟಿಗೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯಗಳಾಗಿರುವುದಿಲ್ಲ. ಈ ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 54/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಜೀಜ್ (32), ತಂದೆ: ಅಬುಬ್ಬಕ್ಕರ್, ವಾಸ: ಕುಡ್ಡ ಮನೆ, ಪೆರ್ನಮಂಜ, ಪಡಂಗಡಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 27-03-2021 ರಂದು ಸಮಯ ಸುಮಾರು ಸಂಜೆ 4.45 ಗಂಟೆಗೆ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಕೆಎ 20 ಎಸ್ 3732 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಜಬೀರ್ ಎಂಬವರು ಗರ್ಡಾಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ದುಡುಕುತನದಿಂದ ರಸ್ತೆಯ ಮದ್ಯಭಾಗದಲ್ಲಿ ಸವಾರಿ ಮಾಡಿಕೊಂಡು ಹೊಗುತ್ತಿರುವಾಗ ವಿರುದ್ದ ಧಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ ಕೆಎ 19 ಎಪ್ 3393 ನೇ ಕೆಎಸ್‌ಆರ್‌ಟಿ ಬಸ್‌ನ್ನು ಅದರ ಚಾಲಕ ರಸ್ತೆಯ ಮದ್ಯೆ ಭಾಗದಲ್ಲಿ ದುಡುಕುತನದಿಂದ ಚಲಾಯಿಸಿ ಮೋಟಾರು ಸೈಕಲ್ ಸವಾರ ಸ್ಕಿಡ್ ಆಗಿ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಸುಮಾರು 20 ಅಡಿ ದೂರ ಬಸ್ಸಿನ ಬಳಿ ಜ್ಯಾರಿಗೊಂಡು ಹೋಗಿ ಬಿದ್ದು ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಗಂಭೀರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ್ಯೆ ರಸ್ತೆ ಮದ್ಯೆ ಮೃತಪಟ್ಟಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ 28/2021 ಕಲಂ 279,304(ಎ_) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿನಾಯಕ ಕೆ.ಎಸ್, ಪ್ರಾಯ 33 ವರ್ಷತಂದೆ; ಶ್ಯಾಮ್ ಕೆ.ಎಂ.ಎವಾಸ; ಶುಭಗ್ರಹ ಮನೆ, ಕದ್ರಿ ದೇವಸ್ಥಾನದ ಹತ್ತಿರ ಮಂಗಳೂರು ಎಂಬವರ ದೂರಿನಂತೆ ದಿನಾಂಕ;27-03-2021 ರಂದು ಬೆಳಿಗ್ಗೆ ತನ್ನ ಬಾಬ್ತು ಇಕೋ ಸ್ಪೋರ್ಟ್ಸ ಕಾರು ನಂಬ್ರ ಕೆಎ-19-ಎಂಜೆ-2871ನೇಯದರಲ್ಲಿ ಮಂಗಳೂರಿನಿಂದ ಮಡಿಕೇರಿ ಕಡೆಗೆ ಮದುವೆ ಆಮಂತ್ರಣ ಪತ್ರ ನೀಡಲು ಹೋಗುತ್ತಿದ್ದು ಬೆಳಿಗ್ಗೆ ಸುಮಾರು 08.00 ಗಂಟೆಗೆ ಮಾಣಿ ದಾಟಿ ಪುತ್ತೂರು ಕಡೆಗೆ ತನ್ನ ಕಾರನ್ನು ಚಲಾಯಿಸುತ್ತಾ ಹೋಗುತ್ತಿರುವಾಗ ಪೆರಾಜೆ ಮಠ ಧ್ವಾರದ ಬಳಿ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಪುತ್ತೂರು ಕಡೆಯಿಂದ ಕೆಎ-19-ಎಬಿ-3409ನೇ ಒಂದು ಆಟೋ ರಿಕ್ಷಾವನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತಪ್ಪು ಬದಿಯಿಂದ ಚಲಾಯಿಸುತ್ತಾ ಬಂದು ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಕಾರಿನ ಮುಂಭಾಗಕ್ಕೆ ರಭಸವಾಗಿ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಡಾಮಾರು ರಸ್ತೆಯಲ್ಲಿ ಮಗುಚಿ ಬಿದ್ದು ಪರಿಣಾಮ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಮೀದ್ ಮತ್ತು ಮಹಿಳೆ ಶಹಿನಾಜ್ ರವರು ಗಂಭೀರ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ವೈಧ್ಯರು ಪರೀಕ್ಷಿಸಿದ ಸಮಯ ಚಾಲಕ ಹಮೀದ್ ಅಪಘಾತದಿಂದ ಉಂಟಾದ ಗಾಯಗಳ ಪರಿಣಾಮ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 43/2021 ಕಲಂ:279,337,304(ಎ) ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವ ನಲಿಕೆ(67),ತಂದೆ: ಕಿಟ್ಟು ನಲಿಕೆ, ವಾಸ: ಕುಕ್ಕೋಟ್ಟು ಮನೆ, ಬೆಳಾಲು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 27-03-2021 ರಂದು ಕೆಎ 70 ಎಚ್ 5561 ನೇ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ದ್ವಿಚಕ್ರ ವಾಹನವನ್ನು ಗಿರೀಶರವರು ಸವಾರಿ ಮಾಡಿಕೊಂಡು ಉಜಿರೆ ಬೆಳ್ತಂಗಡಿ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 8.45 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಬೆಳ್ತಂಗಡಿ ಬಿ ಬಾಳಿಗ ಜುವೈಲರ್‌ಸ್ ಬಳಿ ತಲುಪುತ್ತಿದ್ದಂತೆ ಅಲ್ಲಿಯೇ ಗುರುವಾಯನಕೆರೆ ಕಡೆಗೆ ಮುಖ ಮಾಡಿ ನಿಂತಿದ್ದ ಕೆಎ 53 ಎಮ್ ಇ 2558 ನೇ ಕಾರನ್ನು ಅದರ ಚಾಲಕ ಯಾವೂದೇ ಸೂಚನೆಯನ್ನು ನೀಡದೇ ಒಮ್ಮೇಲೆ ದುಡುಕುತನದಿಂದ ಬಲಕ್ಕೆ ತಿರುಗಿಸಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರದಲ್ಲಿದ್ದ ಪಿರ್ಯಾದಿದಾರರು ಬಲಕಾಲಿನ ಹೆಬ್ಬೆರಳು, ಎರಡು ಕಾಲಿನ ಮೊಣಗಂಟಿಗೆ, ಬಲ ಕಣ್ಣಿನ ಬಳಿ, ತಲೆಯ ಹಿಂಬದಿ ಗುದ್ದಿದ ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 27/2021, ಕಲಂ; 279,337 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಬೆದರಿಕೆ ಪ್ರಕರಣ: ೦1
ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹಿಲರಿ ಪಾಯಸ್ (45), ತಂದೆ: ಜಾಕೋಬ್ ಪಾಯಸ್, ವಾಸ: ಹಟ್ಯಡ್ಕ ಮಜಲು ಮನೆ, ನಾರಾವಿ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 27-03-2021 ರಂದು ಬೆಳಿಗ್ಗೆ ಫಿರ್ಯಾದಿದಾರರು ತೆಂಗಿನ ತೋಟಕ್ಕೆಂದು ಹೋಗುತ್ತಾ ನಾರಾವಿ ಗ್ರಾಮದ ಹಟ್ಯಡ್ಕ ಎಂಬಲ್ಲಿಗೆ ಬೆಳಿಗ್ಗೆ 07.00 ಗಂಟೆಗೆ ತಲುಪಿದಾಗ ಫಿರ್ಯಾದಿದಾರರ ಅಣ್ಣ ಗ್ರೆಗೋರಿ ಪಾಯಸ್ ಮತ್ತು ಆತನ ಮಗ ರಾಯ್ಸನ್ ಪಾಯಸ್ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಗ್ರೆಗೋರಿ ಪಾಯಸ್ ನು ಕೊಂಕಣಿ ಭಾಷೆಯಲ್ಲಿ ಅವ್ಯಾಚ ಶಬ್ಧಗಳಿಂದ ಬೈದು ಒಂದು ಕಲ್ಲಿನಿಂದ ಫಿರ್ಯಾದಿದಾರರ ತಲೆಗೆ ಹೊಡೆದಿದ್ದು, ಫಿರ್ಯಾದಿದಾರರು ಬೊಬ್ಬೆ ಹೊಡೆದಾಗ ಅಲ್ಲಿಯೇ ತೋಟದಲ್ಲಿದ್ದ ದಿನೇಶ್, ಅಂತೋಣಿ, ವಲೇರಿಯನ್, ರೊನಾಲ್ಡ್ ಫೆರ್ನಾಂಡಿಸ್ ಓಡಿ ಬಂದಿದ್ದು, ಇದನ್ನು ನೋಡಿದ ಆರೋಪಿತರು “ನೀನು ಈಗ ಬದುಕಿದ್ದೀಯ, ಮುಂದೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಆಗ ಸ್ಥಳಕ್ಕೆ ಬಂದ ಫಿರ್ಯಾದಿದಾರರ ಮತ್ತೊಬ್ಬ ಅಣ್ಣನ ಮಗ ಲ್ಯಾನ್ಸಿ ಮನೋಜ ಹಾಗೂ ಇತರರು ಸೇರಿ ಫಿರ್ಯಾದಿದಾರರನ್ನು ಉಪಚರಿಸಿ ತಲೆಯ ಬಲಭಾಗ ಹಿಂಭಾಗದಲ್ಲಿ ರಕ್ತ ಗಾಯವಾದವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಫಿರ್ಯಾದಿದಾರರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 22-2021 ಕಲಂ:341, 504, 324, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.