ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವಪ್ಪ ಪ್ರಾಯ: 45 ವರ್ಷ ತಂದೆ: ದಿ / ಮಾದವ ವಾಸ: ಗಡಿಕಲ್ಲು ಮನೆ ಚಿಕ್ಕಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ: 27-04-2022 ರಂದು ಸಂಜೆ 05:15 ಗಂಟೆ ಸಮಯಕ್ಕೆ ತನ್ನ ತಂಗಿ ಭವಾನಿಯ ಮನೆಯಾದ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಗಡಿಕಲ್ಲು ಎಂಬಲ್ಲಿ ತಂಗಿ ಮತ್ತು ಭಾವನೊಂದಿಗೆ ಮಾತನಾಡುತ್ತಿರುವ ಸಮಯ ಪಿರ್ಯಾದಿದಾರರ  ತಮ್ಮ ಬಾಲಕೃಷ್ಣನು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ತನಗೆ ಹಣ ಕೊಡು ಎಂದು ಕೇಳಿದಾಗ? ಪಿರ್ಯಾದಿದಾರರು ತನ್ನಲ್ಲಿ ಹಣವಿಲ್ಲ ಎಂದು ಹೇಳಿದಾಗ ಈ ಮಲ್ಲ ಜನನಾ? ಎಂದು ತುಳು ಭಾಷೆಯಲ್ಲಿ ಬೈದು ಕೈಯಲ್ಲಿದ್ದ ಕತ್ತಿಯಿಂದ ಕುತ್ತಿಗೆಯ ಎಡಭಾಗಕ್ಕೆ ಹಾಗೂ   ಹಣೆಯ ಎಡ ಭಾಗಕ್ಕೆ  ಏಕಾಎಕಿಯಾಗಿ ಹಲ್ಲೆ ನಡೆಸಿ ರಕ್ತ ಗಾಯಗೊಳಿಸಿರುವುದಾಗಿದೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ:25/2022 ಕಲಂ: 504, 324 ಐ.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಶರೀಫ್  ಪ್ರಾಯ:23 ವರ್ಷ ತಂದೆ; ಸೀದಿ ಕುಂಞ ವಾಸ; ಬ್ರಾಂತಿಕೋಡಿ ಮನೆ ನೆರಿಯ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ಮಹಮ್ಮದ್ ಶರೀಫ್ ರವರು ದಿನಾಂಕ:27-04-2022 ಬೆಳಿಗ್ಗೆ 8:15 ಗಂಟೆಗೆ ತನ್ನ ಗೆಳೆಯ ನಿಐಮುದ್ದೀನ್ ಜೊತೆ ಸೆಂಟ್ರಿಂಗ್ ಕೆಲಸಕ್ಕೆ ಬ್ರಾಂತಿಕೋಡಿಯಿಂದ ಅಣಿಯೂರು ಹೋಗುವ ಸಮಯ ಬಳ್ಳಾಲ್ ಎಸ್ಟೇಟ್ ಗೇಟ್ ಬಳಿ ತಲುಪಿದಾಗ ಅಣಿಯೂರು ಕಡೆಯಿಂದ ಎರಡು ಬೈಕುಗಳಲ್ಲಿ ಅಬ್ದುಲ್ ಫತಾ, ಮಹಮ್ಮದ್ , ಹಂಝರವರು ಬಂದು ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಅಡ್ಡ ನಿಲ್ಲಿಸಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವರಲ್ಲಿ ಅಬ್ದುಲ್ ಪತಾನು ಬೈಕಿನಿಂದ ಇಳಿದು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮಹಮ್ಮದ್ ಎಂಬಾತನು ಗಾರೆ ಕೆಲಸಕ್ಕೆ ಉಪಯೋಗಿಸುತ್ತಿದ್ದ ಮಟ್ಟಕೋಲಿನಿಂದ ಪಿರ್ಯಾದುದಾರರ ಬಲಕಾಲಿಗೆ ಹೊಡೆದುದಲ್ಲದೇ ಹಂಝ ಹಾಗೂ ಅಬ್ದುಲ್ ಫತಾರು ಪಿರ್ಯಾದುದಾರರನ್ನು ಹಾಗೂ ನಿಜಾಮುದ್ದೀನ್ ರವರನ್ನು ಹಿಡಿದುಕೊಂಡು ಅವನಲ್ಲಿ ಹಂಝನು ಕೈಯಿಂದ ಪಿರ್ಯಾದಿದಾರರ ಎದೆಗೆ ಗುದ್ದಿದ್ದು ಅಬ್ದುಲ್ ಪತಾನು ನಿಜಾಮುದ್ದೀನ್ ನ ಬಲಕಾಲಿಗನ ಮೊಣಗಂಟಿಗೆ ಮಟ್ಟಕೋಲಿನಿಂದ ಹೊಡೆದಾಗ ಹಂಝಾನು ಆತನ ಕೈಯಲ್ಲಿದ್ದ ಗಾರೆ ಕೆಲಸದ ಟಾಪಿನಿಂದ ನಿಜಾಮುದ್ದೀನನ ಎಡಕೋಲು ಕೈಗೆ ಹೊಡೆದು ಗಾಯ ಗೊಳಸಿರುತ್ತಾರೆ. ಆ ಸಮಯ ಅದೇ ದಾರಿಯಲ್ಲಿ ಹರ್ಬಜ್ ಹಾಗೂ ರಮೀಜ್ ನನ್ನು ನೋಡಿದ ಆಪಾದಿತನು ಪಿರ್ಯಾದುದಾರರನ್ನು ಹಾಗೂ ಅವರ ಜೊತೆಯಿದ್ದ ನಿಜಾಮುದ್ದೀನ್ ನನ್ನು ಉದ್ದೇಶಿಸಿ ಈಗ ಬದುಕಿದ್ದಿರಾ ಇನ್ನು ಮುಂದಕ್ಕೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಅಲ್ಲಿಂದ ಗಾಯಗೊಂಡ ಪಿರ್ಯಾದುದಾರರನ್ನು ಹಾಗೂ ನಿಜಾಮುದ್ದೀನ್‌ರವರನ್ನು ಹರ್ಬಜ್ ಹಾಗೂ ರಮೀಜ್ ನು ಉಪಚರಿಸಿ ಖಾಸಗಿ ವಾಹನದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರೂ ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ .ಕ್ರ 33-2022 ಕಲಂ:341,504,323,324,506 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೀನಪ್ಪ(59 )ತಂದೆ. ಚೆನ್ನಯ್ಯ ಗೌಡ ಅರಣ್ಯ ರಕ್ಷಕ,ಕೊಣಾಜೆ ಗಸ್ತು,ಅರಣ್ಯಇಲಾಖೆ ಸುಬ್ರಹ್ಮಣ್ಯ ವಲಯ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು  ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಲಯದ ಕೊಣಾಜೆ ಗಸ್ತುವಿನಲ್ಲಿ ಅರಣ್ಯ ರಕ್ಷಕನಾಗಿ ಕೆಲಸಮಾಡಿಕೊಂಡಿದ್ದು ಅರ್ಜಿದಾರರ ಗಸ್ತು  ವ್ಯಾಪ್ತಿಗೆ ಬರುವ ಕಡಬ ತಾಲೂಕು  ಕೊಣಾಜೆ ಗ್ರಾಮದ ಉದನೆ ಗುಂಡ್ಯ ಹೊಳೆಗೆ ದಿನಾಂಕ:26-04-2022ರಂದು 17.00ಗಂಟೆಯಿಂದ ದಿನಾಂಕ: 27-04-2022ರ ಬೆಳಿಗ್ಗೆ 09.00ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಯಾವುದೋ ವಿಷ ಪದಾರ್ಥವನ್ನು ಹಾಕಿ ನೀರನ್ನು ಕಲುಷಿತಗೊಳಿಸಿರುವುದರಿಂದ  ನೀರಿನಲ್ಲಿದ್ದ ಜಲಚರಗಳಾದ ಮೀನುಗಳು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 52/2022 ಕಲಂ: 277 ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ : ದಿನಾಂಕ: 27.04.2022 ರಂದು ಕಡಬ ಠಾಣೆಯಲ್ಲಿ ಅ.ಕ್ರ 37/2022 ಕಲಂ. .498(A) 504.323.324.506.R/W 149 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ : ಮಂಜುನಾಥ ಟಿ ಪೊಲೀಸು ಉಪನಿರೀಕ್ಷಕರು (ತನಿಖೆ-1)ವಿಟ್ಲ ಪೊಲೀಸ್ ಠಾಣೆರವರು ದಿನಾಂಕ:27-04-2022 ರಂದು ಬೆಳಿಗ್ಗೆ 04.00 ಸಮಯಕ್ಕೆ ಬಂಟ್ವಾಳ ತಾಲ್ಲೂಕು ಕೇಪು ಗ್ರಾಮದ ನೀರ್ಕಜೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವ ಸಮಯ ಪಿಕಪ್ ವಾಹನವೊಂದು ಬುಳ್ಳೇರಿ ಕಟ್ಟೆ ಕಡೆಯಿಂದ ಉಕ್ಕುಡ ಕಡೆಗೆ ಬರುತ್ತಿದ್ದುದನ್ನು ನಿಲ್ಲಿಸಲು ಸೂಚಿಸಿದಾಗ ಪಿಕಪ್ ಚಾಲಕ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ಕೇಪು ಗ್ರಾಮದ ಕುಕ್ಕೆಬೆಟ್ಟು ಎಂಬಲ್ಲಿ ವಾಹನವನ್ನು ನಿಲ್ಲಿಸಿ ಪರಾರಿಯಾಗಿರುತ್ತಾನೆ. ಸದ್ರಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕೆಎ 19 ಎಎ 2571 ನೇ ಮಹೇಂದ್ರ ಬೊಲೆರೋ ಪಿಕ್ ಅಪ್ ವಾಹನದ ಬಾಡಿಗೆ ನೀಲಿ ಬಣ್ಣದ ಟರ್ಪಾಲನ್ನು ಹೊದಿಸಿ ಬಾಡಿಯಲ್ಲಿ 5 ಹೋರಿ ಕರುಗಳನ್ನು ಕಟ್ಟಿ ಹಾಕಿರುವುದು ಕಂಡು ಬಂತು. ಈ ಜಾನುವಾರುಗಳಿನ್ನು  ಎಲ್ಲಿಂದಲೋ ತೆಗೆದುಕೊಂಡು ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ದೃಢಪಟ್ಟಿರುವುದರಿಂದ ಪಂಚರ ಸಮಕ್ಷಮ 5 ಹೋರಿ ಕರುಗಳನ್ನು  ಸ್ವಾಧೀನ ಪಡಿಸಿಕೊಂಡಿದ್ದು ಇವುಗಳ ಅಂದಾಜು ಮೌಲ್ಯ ರೂಪಾಯಿ 10,000/-ಹಾಗೂ ಕೆಎ 19 ಎಎ 2571 ನೇ ಪಿಕಪ್ ವಾಹನವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ ರೂ 4,00,000/- ಆಗಬಹುದು. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ  4,10,000/- ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 63/2022 ಕಲಂ: 5,12 THE KARNATAKA PREVENTION OF SLAUGHTER AND PRESERVATION OF CATTLE ORDINANCE-2020 ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚೇತನ್ ಗೌಡ ಪ್ರಾಯ: 27 ವರ್ಷ, ತಂದೆ: ಜಿನ್ನಪ್ಪ @ ಹೊನ್ನಪ್ಪ ಗೌಡ, ವಾಸ: ಬಾನೊಟ್ಟು ಮನೆ, ಮಿತ್ತಬಾಗಿಲು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿ ದಾರರ ತಂದೆಯಾದ ಜಿನ್ನಪ್ಪ ಯಾನೆ ಹೊನ್ನಪ್ಪ ಗೌಡರು ಕೃಷಿಕರಾಗಿದ್ದು ಅವರ ಸ್ವಂತ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ:27.04.2022ರಂದು ಬೆಳಿಗ್ಗೆ 9.30 ಗಂಟೆಗೆ ತನ್ನ ಸ್ವಂತ ಜಾಗದಲ್ಲಿರುವ ತೆಂಗಿನಮರದಿಂದ ತೆಂಗಿನಕಾಯಿ ಕೀಳಲು ಮರಕ್ಕೆ ಹತ್ತಿದವರು ತೆಂಗಿನ ಕಾಯಿ ಕೀಳಿದ ಬಳಿಕ ಆಕಸ್ಮಿಕವಾಗಿ ತೆಂಗಿನಮರದಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  17/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ , ಕೆ ಶ್ರೀಲತಾ ವಾಸ: ಡಿಯೋ ಡ್ರಾಪ್ಸ್, ಗೋರಿಗುಡ್ಡೆ ಮನೆ, ಕಂಕನಾಡಿ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದುದಾರರ ಮಗ ಮನ್ವಿತ್ ರಾಜ್ (12) ವರ್ಷ ಎಂಬಾತನು ಪಿರ್ಯಾದುದಾರರ ತಾಯಿಯ ಮನೆಯಾದ ಸುಳ್ಯ ತಾಲೂಕು ಅರಂತೋಡು ಗ್ರಾಮದ ಕುಕ್ಕುಂಬಳ ಎಂಬಲ್ಲಿರುವ ಮರ್ಕಂಜ ಹೊಳೆಯಲ್ಲಿ ಆತನ ಆಣ್ಣನಾದ ಮೋಹಿತ್ ರಾಜ್  ಎಂಬಾತನೊಂದಿಗೆ ದಿನಾಂಕ 27.04.2022 ರಂದು ಸುಮಾರು 15:30 ಗಂಟೆಗೆ ಹೊಳೆಗೆ ಹೋಗಿ ಸ್ನಾನ ಮಾಡುತ್ತಿರುವ ಸಮಯ, ಸುಮಾರು 15 ಅಡಿ ಅಳವಿರುವ ನೀರಿಗೆ ಹೋಗಿ ಆತನಿಗೆ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳುಗುತ್ತಿದ್ದವನನ್ನು ಕಂಡು ಮೋಹಿತ್ ರಾಜ್ ನು  ಸಮಯ ಸುಮಾರು 16:00 ಗಂಟೆಗೆ ಬೊಬ್ಬೆ ಹೊಡೆದಾಗ  ಪಿರ್ಯಾದುದಾರರು ಮತ್ತು ನೆರೆಕೆರೆಯವರು ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮನ್ವಿತ್ ರಾಜ್ ನ್ನು ಈಜು ಬಾರದೇ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 18/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-04-2022 10:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080