ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಕ್ಷಿತ್ (22) ವರ್ಷ. ತಂದೆ: ನಾರಾಯಣ ಬಂಗೇರ.ವಾಸ: ಕೋರ್ಯ ಮನೆ, ಬಾಳ್ತಿಲ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 26-07-2022 ರಂದು ಕೆಲಸ ಮುಗಿಸಿ ಮೋಟಾರ್ ಸೈಕಲಿನಲ್ಲಿ ಬರಿಮಾರು ಕಡೆಯಿಂದ ಮನೆ ಕಡೆಗೆ ಬರುತ್ತಾ ಸಮಯ ಸುಮಾರು 18:15 ಗಂಟೆಗೆ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಪಂಜುರ್ಲಿ ಗುಡ್ಡೆ ಎಂಬಲ್ಲಿಗೆ ತಲುಪುತ್ತಿದಂತೆ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19-MG-1076  ಕಾರನ್ನು ಅದರ ಚಾಲಕ ಚೇತನ್ ಎಂಬುವರು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಹೋಗಿ ಸೂರಿಕುಮೇರು ಕಡೆಯಿಂದ KA-19-X-6024 ನೇ ಮೋಟಾರ್ ಸೈಕನ್ನು ಅದರ ಸವಾರ ಪಂಜುರ್ಲಿ ಗುಡ್ಡೆ ಕೋಸ್ಟಲ್ ಫಾರ್ಮ್ ಕಡೆಗೆ ತಿರುಗಿಸಲು ನಿಧಾನಿಸಿದಾಗ ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಸಾರ್ವಜನಿಕರೊಂದಿಗೆ ಎಬ್ಬಿಸಿ ಉಪಚರಿಸಿ ನೋಡಲಾಗಿ ಗಾಯಾಳು ಪಿರ್ಯಾದಿದಾರರಿಗೆ ಪರಿಚಯದ ಸುನೀಲ್ ಎಂಬುವವರಾಗಿದ್ದು ಅಪಘಾತದಲ್ಲಿ ಸುನೀಲ್ ರವರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತ ಗಾಯ, ಬಲಭಾಗ ಮುಖದಲ್ಲಿ ತರಚಿದ ಗಾಯ, ಬಲಬದಿಯ ಸೊಂಟಕ್ಕೆ ಗುದ್ದಿದ ನೋವಾದವರನ್ನು ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ 20:43 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 81/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮಣ್‌ (41), ತಂದೆ: ಕಿನ್ನಿ ಗೌಡ, ವಾಸ: ಗಾಣದಕೊಟ್ಟಿಗೆ ಮನೆ, ಕನ್ಯಾಡಿ-II, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ; 25-07-2022 ರಂದು ಕೆಎ 21 ಆರ್‌ 0791 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ರಮೇಶ ಎಂಬವರು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 12.30 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಶೃತಿ ಸರ್ವೀಸ್‌ ಸ್ಟೇಷನ್‌ ಪೆಟ್ರೋಲ್‌ ಪಂಪ್‌ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 70 ಇ 3260 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ವೆಂಕಪ್ಪರವರು  ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಮೇಶರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ರಮೇಶರವರು ಎದೆಗೆ, ಬಲಕಾಲಿನ ಪಾದಕ್ಕೆ ಗುದ್ದಿದ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  103/2022 ಕಲಂ: 279 337 ಭಾ ದಂ ಸಂ,ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರವಿ ಡಿ,ಎಸ್ (36) ತಂದೆ: ಶಂಕರಪ್ಪ ಗೌಡ ವಾಸ: ಎಸ್ ಎನ್ 63, ಶಿವನಿಲಯ,ಶಿವನಗರ,ಅಳಪೆ ಪಡಿಲ್ ,ಮಂಗಳೂರು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 27.07.2022 ರಂದು ಕೆಎ 19 ಡಿ 5465 ನೇ ಓಮಿನಿ ಆಂಬ್ಯುಲೇನ್ಸ್  ಚಾಲಕರಾಗಿ ಬಾಡಿಗೆ ನಿಮಿತ್ತ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸುಳ್ಯಕ್ಕೆ ನಾಯಾಣಭಟ್ ಮತ್ತು ಅವರ ಮಗಳು ರಮ್ಯಳನ್ನು ಕುಳ್ಳಿರಿಸಿಕೊಂಡು ಬರುತ್ತಿರುವರೇ, ಸಮಯ ಸುಮಾರು 20:45 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿ (ಮಾಣಿ-ಮೈಸೂರು ಹೆದ್ದಾರಿ) ತಲುಪುತ್ತಿದ್ದಂತೆ ಎದುರಿನಿಂದ ಬಂದ ಕೆಎ 19 ಎಂಕೆ 7181 ನೇದರ ಕಾರು ಚಾಲಕ ಅಜಾಗರೂಕತೆ ,ಮತ್ತು ನಿರ್ಲಕ್ಷತನದಿಂದ ಆತನ ತೀರಬಲಬದಿಗೆ  ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಆಂಬ್ಯುಲೇನ್ಸ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಎರಡು ವಾಹನಗಳು ಜಕ್ಕಂ ಆಗಿದ್ದು, ಪಿರ್ಯಾದುದಾರರಿಗೆ ಹಣೆಯ ಎಡಬದಿಯಲ್ಲಿ ರಕ್ತಗಾಯವಾಗಿದ್ದು, ಆಂಬ್ಯುಲೇನ್ಸ್ ನಲ್ಲಿದ್ದ ರಮ್ಯಳಿಗೆ ಎಡಕಾಲಿಗೆ ರಕ್ತಗಾಯಾವಾಗಿರುವುದಾಗಿ ಹಾಗೂ ನಾರಾಯಣಭಟ್ ರವರಿಗೆ ಗುದ್ದಿದ ಗಾಯವಾಗಿರುವುರುವುದವರನ್ನು ಅಲೇಯಿದ್ದ ಸ್ಥಳಿಯರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಪಿರ್ಯಾದುದಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹಾಗೂ ರಮ್ಯ ಮತ್ತು ನಾರಾಯಣ್ ಭಟ್ ರವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 86/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುಂಡಪ್ಪ ಎಸ್ ಬಿರಾದಾರ್ ಬಿನ್ ಸಿದ್ದಪ್ಪ ಬಿರಾದಾರ್ ಬಿರಾದಾರ್ ಮನೆ, ತೋಂಟಾಪುರ ಗ್ರಾಮ, ಸಿಂದಗಿ (ತಾ) ವಿಜಯಪುರ (ಜಿ). ಚಾಲಕ,  ಸಂಖ್ಯೆ-1788 ವಾಯುವ್ಯ ಕ.ರಾ.ರ.ಸಾ.ನಿ. ಶಿರಸಿ ವಿಭಾಗ, ಕಾರವಾರ ಎಂಬವರ ದೂರಿನಂತೆ ದಿನಾಂಕ: 27.07.2022 ರಂದು 15.25 ಗಂಟೆಗೆ ಬಂಟ್ವಾಳ ತಾಲೂಕು, ನಾವೂರು ಗ್ರಾಮದ, ಬಿ.ಸಿ. ರೋಡ್ – ಬೆಳ್ತಂಗಡಿ, ರಾ.ಹೆ. ರಸ್ತೆಯ, ವಗ್ಗ ಸಮೀಪದ, ಕೊಪ್ಪಳ ಎಂಬಲ್ಲಿ ಪಿರ್ಯದುದಾರರು ಬಿ.ಸಿ. ರೋಡ್ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿದ್ದ ಕೆ. ಎಸ್. ಆರ್. ಟಿ. ಸಿ. ಬಸ್ ನಂ. ಕೆಎ 31- ಎಫ್- 1462 ಕ್ಕೆ ಎದುರುಗಡೆಯಿಂದ ಅಂದರೆ ಕಾರಿಂಜ ಕ್ರಾಸ್ ಕಡೆಯಿಂದ  ಹೆಲ್ಮೆಟ್ ಧರಿಸಿಕೊಂಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಬಸ್ಸಿನ ಮುಂಭಾಗದ ಗಾಜಿಗೆ ಕಲ್ಲನ್ನು ಎಸೆದು ಗಾಜು ಜಖಂ ಗೊಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  55.-2022 ಕಲಂ    427, 34 ಐಪಿಸಿ, 2(A) Of Karnataka Prevention Of Distruction & Loss Of Property Act 1981ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ    ಶ್ರೀಧರ್ ಕೆ ಪ್ರಾಯ: 45 ವರ್ಷ ಬಿಲ್ಲೆ ಸಂಖ್ಯೆ 30895 ಪುತ್ತೂರು ವಿಭಾಗ ಧರ್ಮಸ್ಥಳ ಘಟಕ , ತಂದೆ: ಪೂವಪ್ಪ ಗೌಡ ವಾಸ: ಹರಿಹಳ ಪಲ್ಲತ್ತಡ್ಕ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶ್ರೀಧರ್ ಕೆ ಪ್ರಾಯ: 45 ವರ್ಷ ಬಿಲ್ಲೆ ಸಂಖ್ಯೆ 30895 ಪುತ್ತೂರು ವಿಭಾಗ ಧರ್ಮಸ್ಥಳ ಘಟಕ , ತಂದೆ: ಪೂವಪ್ಪ ಗೌಡ ವಾಸ: ಹರಿಹಳ ಪಲ್ಲತ್ತಡ್ಕ ಸುಳ್ಯ ತಾಲೂಕು ಎಂಬವರು  ಧರ್ಮಸ್ಥಳ ಕೆ.ಎಸ್.ಆರ್.ಟಿಸಿ ಘಟಕದಲ್ಲಿ 11 ವರ್ಷದಿಂದ ಚಾಲಕನಾಗಿ ಕೆಲಸಮಾಡಿಕೊಂಡಿದ್ದು . ದಿನಾಂಕ: 27-07-2022 ರಂದು ಬಸ್ ನಂಬ್ರ ಕೆ.ಎ 19 ಎಫ್. 3148 ನೇದರಲ್ಲಿ ಪಿರ್ಯಾದಿದಾರರು ಚಾಲಕರಾಗಿದ್ದುಕೊಂಡು, ಸ್ವರೂಪ್ ಎಂಬವರು ನಿರ್ವಾಕರಾಗಿದ್ದುಕೊಂಡು  ಬೆಳಿಗ್ಗೆ 06:30 ಗಂಟೆಗೆ ಧರ್ಮಸ್ಥಳದಿಂದ ಹೊರಟು ಪುತ್ತೂರು ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ತಲುಪಿ  ಬೆಳಿಗ್ಗೆ 08:15 ಗಂಟೆಗೆ  ಪುತ್ತೂರು ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಗಳೂರು  ಸ್ಟೇಟ್ ಬ್ಯಾಂಕ್ ಗೆ ಹೊರಟಿದ್ದು ಬೆಳಿಗ್ಗೆ 08:30 ಗಂಟೆಗೆ ಬೊಳ್ವಾರ್ ವಿಶ್ವಕರ್ಮ ಹಾಲ್ ನ ಬಳಿ ಪುತ್ತೂರು ಮಂಗಳೂರು ಮುಖ್ಯ ರಸ್ತೆಯಲ್ಲಿ ಇರುವ ಹಂಪ್ ನ ಬಳಿ ತಲುಪಿದಾಗ ಇಬ್ಬರು ಅಪರಿಚಿತ ಯುವಕರು ಮೋಟಾರು ಸೈಕಲ್ ನಲ್ಲಿ ಬಂದು ಮೋಟಾರು ಸೈಕಲ್ ನ್ನು ನಿಲ್ಲಿಸಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ ಗೆ ಎರಡು ಕಲ್ಲುಗಳನ್ನು ಬಿಸಾಡಿದ್ದು ಒಂದು ಕಲ್ಲು ಬಸ್ಸಿನ ಬಾಡಿಗೆ ಬಿದ್ದಿದ್ದು , ಇನ್ನೊಂದು ಕಲ್ಲು  ಬಸ್ಸಿನ ಎದುರುಗಡೆ ಗಾಜಿಗೆ ಬಿದ್ದು ಗಾಜು ಜಖಂಗೊಂಡು ಸುಮಾರು 19,000/- ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 65/2022 ಕಲಂ: 427 ಜೊತೆಗೆ 34 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕು| ಹರ್ಷಿತಾಪ್ರಾಯ: 23ವರ್ಷ, ತಂದೆ: ಬಾಬುಪೂಜಾರಿವಾಸ: ಕುದ್ರೆಬೆಟ್ಟುಮನೆ, ಬಾಳ್ತಿಲಗ್ರಾಮ, ಬಂಟ್ವಾಳತಾಲೂಕು ಎಂಬವರ ದೂರಿನಂತೆ ದಿನಾಂಕ: 27.07.2022 ರಂದು ಬೆಳಿಗ್ಗೆ ಫಿರ್ಯಾದಿದಾರರ ತಂದೆಯವರು ಮನೆಯಿಂದ ಹೊರಟು ಮೋಹನ್ ದಾಸ್ ಎಂಬವರ ಬಾಬ್ತು ಕುರ್ಮಾನ್ ಎಂಬಲ್ಲಿರುವ ತಾಳೆಮರಕ್ಕೆ ಕಟ್ಟಿದ ಬಿದಿರಿನ ಏಣಿಯನ್ನು ಬಿಚ್ಚುವ ಸಲುವಾಗಿ ಸುಮಾರು 10.45ಗಂಟೆಗೆ ತಾಳೆಮರಕ್ಕೆ ಹತ್ತಿ ಸುಮಾರು 20 ಅಡಿಯಷ್ಟು ಎತ್ತರಕ್ಕೆ ಏರಿ ಮೇಲಕ್ಕೆ ಏರುತ್ತಿರುವ ಸಂದರ್ಭ ಈ ಹಿಂದೆ ತಾಳೆಮರಕ್ಕೆ ಕಟ್ಟಿದ್ದ ಕಾಡುಬಳ್ಳಿಯು ಬಿಚ್ಚಿ ಏಣಿಯು ಸಡಿಲಗೊಂಡಿದ್ದು, ಏಣಿಯನ್ನು ಹಿಡಿದುಕೊಂಡಿದ್ದ ತಂದೆಯವರು ಏಣಿಸಮೇತ ನೆಲಕ್ಕೆ ಬಿದ್ದಿದ್ದು. ಸದ್ರಿ ತಾಳೆ ಮರದ ಬದಿಯಲ್ಲೇ ಇದ್ದ ನೀರು ನಿಂತಿರುವ ಹೊಂಡಕ್ಕೆ ಹೊರಳಿ ಕವುಚಿ ಬಿದ್ದಿದ್ದು, ಅದನ್ನು ನೋಡಿದ    ಮೋಹನ್ ದಾಸ್ ಮತ್ತು ಇತರರು ಕೂಡಲೇ ಸ್ಥಳಕ್ಕೆ ಹೋಗಿ ಅವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನನ್ನ ತಂದೆಯವರ ಮರಣಕ್ಕೆ ಕಾರಣ ತಂದೆಯವರು ತಾಳೆ ಮರಕ್ಕೆಹತ್ತಿದ ಕಟ್ಟಿದ ಬಿದಿರಿನ ಏಣಿಯನ್ನು ಬಿಚ್ಚುವ ಸಂದರ್ಬ ಆಯ ತಪ್ಪಿ ಆಕಸ್ಮಿಕವಾಗಿ ಏಣಿಸಮೇತ ನೆಲಕ್ಕೆ ಬಿದ್ದ ಸ್ಥಳದಲ್ಲಿದ್ದ ಪಕ್ಕದ ಹೊಂಡಕ್ಕೆ ಬಿದ್ದು ಉಸಿರುಕಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಯುಡಿಆರ್ ನಂ:30/2022 ಕಲಂ.174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸುಮತಿ ಪ್ರಾಯ: 32 ವರ್ಷ ಗಂಡ: ಆನಂದ ವಾಸ: ಪಾಲೆಂಜ ಮನೆ ನಿನ್ನಿಕಲ್ಲು ಉಜಿರೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ ಗಂಡ ಆನಂದ (40) ರವರು ಈ ದಿನ ದಿನಾಂಕ:27-07-2022 ರಂದು ಮದ್ಯಾಹ್ನ 2.30 ಗಂಟೆ ಸುಮಾರಿಗೆ  ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮ ನಿನ್ನಿಕಲ್ಲು ಪಾಲೆಂಜ ಎಂಬಲ್ಲಿಯ ಅವರ ತೋಟದಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ನೆಲದ ಮೇಲೆ   ಬಿದ್ದು ತಲೆಗೆ ಉಂಟಾದ ಗಾಯದ ಬಗ್ಗೆ  ಉಜಿರೆ ಎಸ್ ಡಿ ಎಮ್  ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಕೊಡಿಸಿದಲ್ಲಿ ಸಂಜೆ 4.42 ಗಂಟೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ:31/2022 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-07-2022 10:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080