ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುರೇಶ್ ಶೆಟ್ಟಿ, ಪ್ರಾಯ: 48 ವರ್ಷ ತಂದೆ: ದಿ|| ಅಚ್ಚಣ್ಣ ಶೆಟ್ಟಿ ವಾಸ: ನಗ್ರಿ ಗುತ್ತು, ವಿಠಲ ಶೆಟ್ಟಿ ಕಾಂಪ್ಲೆಕ್ಸ್, ಪಣೋಲಿಬೈಲ್, ಸಜಿಪ ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 27-10-2022 ರಂದು ಪಿರ್ಯಾದಿದಾರರು ಪಣೋಲಿಬೈಲ್ ವೃಷಭ ಹೋಟೇಲಿನಲ್ಲಿರುವ ಸಮಯ ಸುಮಾರು ಬೆಳಿಗ್ಗೆ 09:05 ಗಂಟೆಗೆ  ಬಂಟ್ವಾಳ ತಾಲೂಕು ಸಜಿಪ ಮೂಡ ಗ್ರಾಮದ ಪಣೋಲಿಬೈಲ್ ಎಂಬಲ್ಲಿ ಮಂಚಿ ಕಡೆಯಿಂದ  KA-70E-5100 ನೇ ಸ್ಕೂಟರನ್ನು ಅದರ ಸವಾರಿಣಿ ಉಷಾಲತಾ ಎಂಬವರು ಮಾರ್ನಬೈಲ್ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸಮಯ ಸ್ಕೂಟರಿನ ಹಿಂಬದಿಯಿಂದ ನೊಂದಣಿಯಾಗದ ಈಚರ್ ಲಾರಿ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸ್ಕೂಟರನ್ನು ಓವರ್ ಟೇಕ್ ಮಾಡಿಕೊಂಡು ಬಂದು ಸ್ಕೂಟರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸ್ಕೂಟರ್ ಸವಾರಿಣಿ ಉಷಾಲತಾ ಎಂಬವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಿದ್ದ ಪರಿಣಾಮ  ಸೊಂಟಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತದ ಸಮಯ ಈಚರ್ ಲಾರಿ ಚಾಲಕನು ಗಾಯಗೊಂಡ ಗಾಯಾಳುವನ್ನು ಚಿಕಿತ್ಸೆಗೆ ದಾಖಲಿಸದೇ ಲಾರಿ ಸಮೇತ ಪರಾರಿಯಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 130/2022 ಕಲಂ 279, 337 ಐಪಿಸಿ & 134(ಎ&ಬಿ) ಜೊತೆಗೆ 187 ಐಎಂವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಾರ್ದಿಕ್ ಎಂ, ಪ್ರಾಯ 19 ವರ್ಷ, ತಂದೆ: ಕೇಶವ, ವಾಸ: ಮಲ್ವೆಲ್ ಮನೆ, ಕೋಡಿಂಬಾಡಿ ಅಂಚೆ, ಬೆಳ್ಳಿಪ್ಪಾಡಿ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 27-10-2022 ರಂದು 14-00  ಗಂಟೆಗೆ ಆರೋಪಿ ಸ್ಕೂಟರ್ ಸವಾರ ವಿಶ್ವನಾಥ ಎಂಬವರು KA-21-Y-7678 ನೇ ನೋಂದಣಿ ನಂಬ್ರದ ಸ್ಕೂಟರನ್ನು ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಪಾಲಿಟೆಕ್ನಿಕ್ ಕಾಲೇಜ್ ನ ಕ್ಯಾಂಟೀನಿನ ಬಳಿ, ಪಾಲಿಟೆಕ್ನಿಕ್ ಕಾಲೇಜ್ ಒಳರಸ್ತೆಯಿಂದ ಕ್ಯಾಂಪಸ್ ನ ಮುಖ್ಯ ರಸ್ತೆ ಕಡೆಗೆ  ಯಾವುದೇ ಸೂಚನೆ ನೀಡದೇ ಒಳರಸ್ತೆಯಿಂದ ನೆಹರೂ ನಗರ-ಕಾಲೇಜ್ ಕ್ಯಾಂಪಸ್ ನ ಮುಖ್ಯ ಸಾರ್ವಜನಿಕ ಡಾಮಾರು ರಸ್ತೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಹಾದಿಕ್ ಎಂ ರವರು ಕಾಲೇಜ್ ಕಡೆಯಿಂದ ಬೆಳ್ಳಿಪ್ಪಾಡಿ ಮನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-1785 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಎರಡೂ ವಾಹನಗಳ ಸವಾರರು ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡ ಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿ  ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಸ್ಕೂಟರ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 164/2022 ಕಲಂ: 279, 337  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 • ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಂಜಿತ್ ಪ್ರಾಯ 34 ವರ್ಷ ತಂದೆ: ಸದಾಶಿವ ಪುಜಾರಿ ವಾಸ: ಪಂಜಿ ಮೊಗರ, ಊರುಂದಾಡಿ ಗುಡ್ಡೆ ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 15-10-2022 ರಂದು 22.45 ಗಂಟೆಗೆ  ಬೆಂಗಳೂರಿನ ಗೊರಗುಂಟೆ ಪಾಳ್ಯದಿಂದ ಮಂಗಳೂರಿಗೆ  ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಮಯ ತಾನು ಕುಳಿತ್ತಿದ್ದ ಬಸ್ಸಿನ ಸೀಟಿನ ಮೇಲ್ ಬದಿಯಲ್ಲಿ  ಕ್ಯಾರಿರ್ಯ ನಲ್ಲಿ  ಲೆನೋವಾ ಲ್ಯಾಪ್ ಟಾಪ್ ಮತ್ತು ಪಾಸ್ ಪೋರ್ಟ್ ಇದ್ದ ಬ್ಯಾಗ್ ನ್ನು ಇರಿಸಿದ್ದು, ದಿನಾಂಕ 16/10/2022 ರಂದು ಬೆಳಿಗ್ಗೆ 8.30 ಗಂಟೆಗೆ ಮಂಗಳೂರು ಪಿ ವಿ ಎಸ್ ಸರ್ಕಲ್ ಬಳಿ ನೋಡಿದಾಗ ಪಿರ್ಯಾಧಿದಾರರು ಬ್ಯಾಗ್ ನಲ್ಲಿ ಇರಿಸಿದ ಲ್ಯಾಪ್ ಟಾಪ್ ಮತ್ತು ಪಾಸ್ ಪೋರ್ಟ್ ಬ್ಯಾಗ್ ಸಹಿತ ಇಲ್ಲದೇ ಇದ್ದು ಬಸ್ಸಿನಲ್ಲಿ ಎಲ್ಲಾ ಕಡೆ ಹುಡುಕಾಡಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮೊಬೈಲ್ ನಂಬ್ರಗಳಿಗೆ ಕರೆ ಮಾಡಿ ವಿಚಾರಿಸಿದರೂ ಪತ್ತೆಯಾಗದೇ ಇದ್ದು. ಕಳುವಾದ ಲ್ಯಾಪ್ ಟಾಪ್ ಅಂದಾಜು ಬೆಲೆ ರೂ 40,000/- ಆಗಬಹುದು.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 100/2022 ಕಲಂ: 379  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

 • ವಿಟ್ಲ ಪೊಲೀಸ್ ಠಾಣೆ : ದಿನಾಂಕ; 15.10.2022 ರಂದು ಸಾಯಂಕಾಲ ಸುಮಾರು 4.00 ಗಂಟೆಯ ಸಮಯಕ್ಕೆ ಸಂತ್ರಸ್ಥ ಅಪ್ರಾಪ್ತ ಪ್ರಾಯದ ಬಾಲಕಿಯು ಶಾಲೆ ಬಿಟ್ಟು ಮನೆಗೆ ಬರುತ್ತಿರುವಾಗ ಆರೋಪಿ ಶಮೀರ್ ಎಂಬಾತನು ಲೈಂಗಿಕ ಉದ್ದೇಶದಿಂದ ಒಂದು ಮೆಮೊರಿ ಕಾರ್ಡ್ ನ್ನು ಕೊಟ್ಟು, ಅದನ್ನು ಮನೆಯಲ್ಲಿ ಹೋಗಿ ಮೊಬೈಲ್ ಮುಖಾಂತರ ನೋಡು ಎಂದು ಹೇಳಿದ್ದು. ಆಕೆಯು ಮೆಮೊರಿ ಕಾರ್ಡ್ ನ್ನು ತಂದು ಮನೆಯಲ್ಲಿ ತನ್ನ ತಾಯಿಯಲ್ಲಿ ಹೇಳಿದ್ದು. ಪ್ರಕರಣದ ಪಿರ್ಯಾದಿಯು ದಿನಾಂಕ 26.10.2022 ರಂದು ಸಂತ್ರಸ್ಥೆಯ ಮನೆಗೆ ಹೋಗಿ ಅದನ್ನು ಲ್ಯಾಪ್ ಟ್ಯಾಪ್ ಮುಖಾಂತರ ತೋರಿಸುವಂತೆ ಹೇಳಿದಾಗ. ಅದರಂತೆ ಸಂತ್ರಸ್ಥೆಯು ಅದನ್ನು ಲ್ಯಾಪ್ ಟ್ಯಾಪ್ ಮುಖಾಂತರ ಪಿರ್ಯಾದಿದಾರರಿಗೆ ಪ್ಲೇ ಮಾಡಿ ತೋರಿಸಲಾಗಿ ಅದರಲ್ಲಿ ಅಶ್ಲೀಲವಾದ ಹಲವಾರು ವಿಡಿಯೋ ಕ್ಲಿಪ್ಪಿಂಗ್ ಗಳು ಇದ್ದಿರುತ್ತದೆ. ಆರೋಪಿ ಶಮೀರ್ ನು ಈಕೆಯ ಸಹಪಾಠಿಗಳಿಗೂ ಇದೇ ರೀತಿಯಲ್ಲಿ ಅಶ್ಲೀಲ ವಿಡಿಯೋಗಳಿರುವ ಮೆಮೋರಿ ಕಾರ್ಡ್ ನ್ನು ನೀಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಕಲಂ: 11,12 ಪೋಕ್ಸೋ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವೇಣೂರು ಪೊಲೀಸ್ ಠಾಣೆ : ಉಪನಿರೀಕ್ಷಕರು ವೇಣೂರು ಪೊಲೀಸ್ ಠಾಣೆ ರವರು  ದಿನಾಂಕ 27.10.2022 ರಂದು ಬೆಳ್ತಂಗಡಿ  ತಾಲೂಕು  ಮೂಡುಕೋಡಿ  ಗ್ರಾಮದ ಕೊಪ್ಪದ ಬಾಕಿಮಾರು ಎಂಬಲ್ಲಿ ಸಾರ್ವಜನಿಕ  ಸ್ಥಳದಲ್ಲಿ  ಆರೋಪಿತರು  ಅಕ್ರಮವಾಗಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದ ಮಾಹಿತಿಯ  ಮೇರೆಗೆ ಸಿಬ್ಬಂದಿಗಳೊಂದಿಗೆ   ದಾಳಿ  ನಡೆಸಿ  6  ಜನ  ಆರೋಪಿಗಳಾದ  1) ವಿಶ್ವನಾಥ 2) ರಾಜೇಶ್ ,. 3) ಮಹಾಬಲ, 4) ಸದಾನಂದ  5) ನವೀನ 6) ಗಣೇಶ್ ರವರುಗಳನ್ನು  ವಶಕ್ಕೆ  ಪಡೆದು  ಜುಗಾರಿ ಆಟಕ್ಕೆ ಉಪಯೋಗಿಸಿದ 52  ಇಸ್ಪೀಟ್ ಎಲೆಗಳನ್ನು ನಗದು ಹಣ ಒಟ್ಟು 2,340/- ರೂ. ಗಳನ್ನು ಸ್ವಾದೀನ ಪಡಿಸಿ ವೇಣೂರು ಠಾಣಾ ಅ.ಕ್ರ ನಂಬ್ರ 66-2022 ಕಲಂ: 87  ಕೆ ಪಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪೊಲೀಸ್ ಉಪ  ನಿರೀಕ್ಷಕರು ಪುಂಜಾಲಕಟ್ಟೆ ಪೊಲೀಸ್ ಠಾಣೆ ರವರು ದಿನಾಂಕ: 27.10.2022 ರಂದು ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬಂಟ್ವಾಳ ತಾಲೂಕು ಮೂಡುಪಡುಕೋಡಿ ಗ್ರಾಮದ, ಕೊಳಲಬಾಕಿಮಾರು ಎಂಬಲ್ಲಿರುವ ಲಕ್ಷಣ ಎಂಬವರ ಬಾಬ್ತು ಗೂಡಂಗಡಿಯ ಜಗುಲಿಯಲ್ಲಿ  ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ, ದಾಳಿ ನಡೆಸಿದಾಗ, ಗೂಡಂಗಡಿಯ ಜಗುಲಿಯಲ್ಲಿ  ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಗಳು  ಮದ್ಯದ ಸಾಚೆಟ್, ನೀರಿನ ಬಾಟಲಿ ಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದು,  ಮದ್ಯ ಸೇವನೆ ಮಾಡಲು ಅನುಮಾಡಿ ಕೊಟ್ಟ ಗೂಡಂಗಡಿಯ ಮಾಲಕ ಆರೋಪಿ ಲಕ್ಷಣ ಎಂಬವರನ್ನು ವಿಚಾರಿಸಿ ಸ್ಥಳದಲ್ಲಿ ದೊರೆತ ಮದ್ಯದ ಬಾಟಲಿಗಳು, ನೀರಿನ ಬಾಟಲಿಗಳನ್ನು ವಶಕ್ಕೆ ಪಡೆದು ಪುಂಜಾಲಕಟ್ಟೆ ಠಾಣಾ ಅ.ಕ್ರ 82/2022 ಕಲಂ: 15(ಎ),32(3)  ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪದ್ಮಾವತಿ, ಪ್ರಾಯ:50 ವರ್ಷ, ಗಂಡ: ಹೊನ್ನಯ್ಯ  ವಾಸ: ಮಾಲಾಡಿ ದರ್ಖಾಸು ಮನೆ, ಬೆಳುವಾಯಿ ಗ್ರಾಮ, ಮೂಡಬಿದ್ರೆ ತಾಲೂಕು ರವರ ಗಂಡ ಹೊನ್ನಯ್ಯ (62) ಎಂಬವರು ಸುಮಾರು 12 ವರ್ಷಗಳ ಹಿಂದೆ ಮನೆಯಿಂದ ಹೋದವರು ಈ ತನಕ ವಾಪಾಸು ಮನೆಗೆ ಬಾರದೇ ಇದ್ದು, ಅವರಿಗೆ ಈ ಹಿಂದಿನಿಂದಲೂ ಉಸಿರಾಟದ ತೊಂದರೆ ಇದ್ದು, ದಿನಾಂಕ 27-10-2022 ರಂದು ನೆಲ್ಯಾಡಿಯ ಚರಣ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದವರು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ  ಅಸೌಖ್ಯದಿಂದ ಮಲಗಿದ್ದವರನ್ನು ಚಿಕಿತ್ಸೆಯ ಬಗ್ಗೆ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಬೆಳಿಗ್ಗೆ 09:15 ಗಂಟೆಯ ಸಮಯಕ್ಕೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ 09:45 ಗಂಟೆಗೆ ಮೃತಪಟ್ಟಿರುತ್ತಾರೆ ಈ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 31/2022 ಕಲಂ:174  CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರದೀಪ್ ಬಿ ಪ್ರಾಯ: 47 ವರ್ಷ ತಂದೆ: ಬಿ ಬಾಸ್ಕರ ವಾಸ: ರಾಧಾ ನಿವಾಸ ಮಯೂರ ಇನ್ ಲ್ಯಾಂಡ್ ಹತ್ತಿರ ಮುಖ್ಯ ರಸ್ತೆ  ಪುತ್ತೂರು ಕಸ್ಬಾ ಗ್ರಾಮ ಪುತ್ತೂರು ಎಂಬವರ ಸ್ನೇಹಿತರಾದ ದಿನೇಶ್ ಎನ್ ಪ್ರಾಯ 51 ವರ್ಷ ಎಂಬವರು ಪುತ್ತೂರಿನ ಮಹಾವೀರ ಆಸ್ಪತ್ರೆಯ  ಬಳಿ ಲಕ್ಷ್ಮೀ ಆಟೋ ಮೊಬೈಲ್ ಎಂಬ ಅಂಗಡಿಯನ್ನು  ಹೊಂದಿದ್ದು, ದಿನಾಂಕ: 27-10-2022 ರಂದು  ಬೆಳಿಗ್ಗೆ 11:15 ಗಂಟೆಗೆ ದಿನೇಶ್ ರವರು ಅಂಗಡಿಗೆ ಬಾರದೇ ಇದ್ದುದರಿಂದ ಪಿರ್ಯಾದಿದಾರರು  ವಾಸ್ತವ್ಯವಿದ್ದ ತೆಂಕಿಲದ ಬಾಡಿಗೆ ಕೋಣೆಗೆ ಹೋಗಿ ನೋಡಿದಾಗ ಸದ್ರಿ ಮನೆಯ ಬಾಗಲು ಒಳಗಡೆಯಿಂದ ಲಾಕ್ ಹಾಕಿದ್ದು ದಿನೇಶ್  ರವರಿಗೆ ಹೊರಗಡೆಯಿಂದ ಬಾಗಿಲು ಬಡಿದಾಗ ಬಾಗಿಲು ತೆರೆಯದೇ ಇದ್ದು , ಕೋಣೆಯ ಕಿಟಕಿಯಿಂದ ನೋಡಿದಾಗ ಒಳಗಡೆ ಹಾಲ್ ನಲ್ಲಿ ದಿನೇಶ್ ರವರು ಅಂಗಾತನೆ ಮಲಗಿಕೊಂಡಿದ್ದವರು ಕರೆದರೂ ಕೂಡ ಸ್ಪಂದಿಸದೇ ಇದ್ದಿದ್ದರಿಂದ ಸದ್ರಿ ಕೋಣೆಯ ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿ ನೋಡಿದಾಗ ದಿನೇಶ್ ರವರು ಅಸ್ವಸ್ಥರಾಗಿ ಬಿದ್ದುಕೊಂಡಿದ್ದವರನ್ನು ಮದ್ಯಾಹ್ನ 13:00 ಗಂಟೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ  ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್ ನಂಬ್ರ: 30/2022 ಕಲಂ: 174 (3)(iv)ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಫಿರ್ಯಾದಿದಾರರು ರಾಧಾಕೃಷ್ಣ, ಪ್ರಾಯ-39 ವರ್ಷ, ತಂದೆ-ಶೀನ ಪೂಜಾರಿ,  ವಾಸ- ಕರ್ಪುಡಿಕಾನ   ಮನೆ, ಪಡುವನ್ನೂರು  ಗ್ರಾಮ  ಪುತ್ತೂರು ತಾಲೂಕು ಎಂಬವರ ತಾಯಿಯಾದ  ಚೆನ್ನಮ್ಮ (ಪ್ರಾಯ 82 ವರ್ಷ)  ಎಂಬವರು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಅರ್ತ್ಯಡ್ಕ ಎಂಬಲ್ಲಿ  ಫಿರ್ಯಾದುದಾರರ ತಮ್ಮನಾದ ಯೋಗೀಶ ಎಂಬವನ ಜೊತೆಯಲ್ಲಿ ವಾಸವಾಗಿದ್ದರು. ದಿನಾಂಕ:- 27.10.2022ರಂದು ಬೆಳಿಗ್ಗೆ ಸುಮಾರು 9.10 ಗಂಟೆಗೆ  ಫಿರ್ಯಾದುದಾರರ ಅಣ್ಣ ರಾಜೇಂದ್ರ ಎಂಬವನು ಫಿರ್ಯಾದುದಾರರ ಮೊಬೈಲಿಗೆ ಕರೆ ಮಾಡಿ ಸದ್ರಿಯವರ  ತಾಯಿಯಾದ ಚೆನ್ನಮ್ಮರವರು  ಅರ್ತ್ಯಡ್ಕ ಎಂಬಲ್ಲಿ  ಯೋಗೀಶ ಎಂಬವನ ಮನೆಯ ಅಡ್ಡಕ್ಕೆ  ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಯೋಗೀಶನ ಹೆಂಡತಿಯಾದ ರತಿಕುಮಾರಿ ಎಂಬವರು ತಿಳಿಸಿರುವುದಾಗಿ ಫಿರ್ಯಾದುದಾರರಿಗೆ ಹೇಳಿರುತ್ತಾರೆ. ಅದರಂತೆ ಫಿರ್ಯಾದುದಾರರು ಅರ್ತ್ಯಡ್ಕ ಎಂಬಲ್ಲಿರುವ ತನ್ನ ತಮ್ಮನಾದ ಯೋಗೀಶ ಎಂಬವನ ಮನೆಗೆ ತೆರಳಿ ನೋಡಿದಾಗ  ಫಿರ್ಯಾದುದಾರರ ತಾಯಿಯಾದ ಚೆನ್ನಮ್ಮರವರನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ, ನೆಲದ ಮೇಲೆ ಮಲಗಿಸಿರುವುದು ಕಂಡು ಬಂದಿರುತ್ತದೆ. ಆ ವೇಳೆ ಫಿರ್ಯಾದುದಾರರು ತನ್ನ  ತಮ್ಮ ಯೋಗೀಶನ ಹೆಂಡತಿಯಾದ ರತಿಕುಮಾರಿ ಎಂಬವರಲ್ಲಿ ವಿಚಾರಿಸಲಾಗಿ ಸದ್ರಿ ರತಿಕುಮಾರಿಯು ಬೆಳಿಗ್ಗೆ ಸುಮಾರು 8.35 ಗಂಟೆಗೆ ತನ್ನ ಮಕ್ಕಳನ್ನು ಶಾಲಾ ಬಸ್ಗೆ ಬಿಟ್ಟು ಬರುವುದಕ್ಕಾಗಿ ತನ್ನ ಮನೆಯಿಂದ ಹೊರಟಾಗ ಚೆನ್ನಮ್ಮರವರು  ಮನೆಯಲ್ಲಿದ್ದು,  ಬಳಿಕ  ಬೆಳಿಗ್ಗೆ ಸುಮಾರು 9.00 ಗಂಟೆಗೆ ರತಿಕುಮಾರಿಯು ವಾಪಾಸು ತನ್ನ ಮನೆಗೆ ಬಂದಾಗ ಚೆನ್ನಮ್ಮರವರು ಯೋಗೀಶನ ಮನೆಯ ಅಡ್ಡಕ್ಕೆ  ನೈಲಾನ್ ಹಗ್ಗವನ್ನು ಕಟ್ಟಿ ಸದ್ರಿ ಹಗ್ಗದ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ತನ್ನ ಕುತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದ್ದು, ಆವೇಳೆ ರತಿಕುಮಾರಿ ಮತ್ತು  ಪಕ್ಕದ ಮನೆಯ ಮಾಲಿಂಗರವರು  ಚೆನ್ನಮ್ಮರವರನ್ನು ನೇಣು ಕುಣಿಕೆಯಿಂದ ಕೆಳಗಿಳಿಸಿ, ನೆಲದ ಮೇಲೆ ಮಲಗಿಸಿರುವುದಾಗಿ ರತಿಕುಮಾರಿ ಫಿರ್ಯಾದುದಾರರಲ್ಲಿ ತಿಳಿಸಿರುತ್ತಾರೆ. ಕೂಡಲೇ ಫಿರ್ಯಾದುದಾರರು ಮತ್ತು ಫಿರ್ಯಾದುದಾರರ ತಮ್ಮ ಯೋಗೀಶ ಎಂಬವರು ವಾಹನವೊಂದರಲ್ಲಿ ಚೆನ್ನಮ್ಮರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು, ಸದ್ರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.10 ಗಂಟೆಗೆ ಚೆನ್ನಮ್ಮರವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸದ್ರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯು ಡಿ ಆರ್  ನಂಬ್ರ 29/2022 ಕಲಂ:174  ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 28-10-2022 02:36 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080