ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪದ್ಮನಾಭ, ಪ್ರಾಯ 27 ವರ್ಷ, ತಂದೆ: ಸೇಸಪ್ಪ ಗೌಡ, ವಾಸ: ಡೆಂಬಲೆ ಮನೆ, ಬಜತ್ತೂರು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 27-11-2022 ರಂದು 09:40 ಗಂಟೆಗೆ ಆರೋಪಿ  ಅಟೋರಿಕ್ಷಾ ಚಾಲಕ ಹಾರೂನ್‌  ಎಂಬವರು  KA-21-C-0157 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಯಾವುದೇ ಸೂಚನೆ ನೀಡದೇ, ಇಂಡಿಕೇಟರ್‌ ಹಾಕದೇ ಹೆದ್ದಾರಿಯ ಎಡಬದಿಯ ರಸ್ತೆಯ ಕಡೆಗೆ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸವಾರರಾಗಿ ಮಂಗಳೂರು ಕಡೆಯಿಂದ  ಬಜತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-8753 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಟೋರಿಕ್ಷಾ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್‌ ಸೈಕಲಿನೊಂದಿಗೆ ರಸ್ತೆ ಬದಿ ನಿಂತಿದ್ದ ಪಾದಾಚಾರಿ ಇಬ್ರಾಹಿಂ ರವರ ಮೇಲೆ ಬಿದ್ದು, ಪಿರ್ಯಾದುದಾರರಿಗೆ ಎಡಕಾಲಿನ ಮಣಿಗಂಟಿಗೆ ಹಾಗೂ ಎಡಕಾಲಿನ ತೊಡೆಗೆ ಗುದ್ದಿದ ಮತ್ತು ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರಿಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಪಡೆದುಕೊಂಡು ಬಿಡುಗಡೆಗೊಂಡಿರುವುದಾಗಿದೆ. ಪಾದಾಚಾರಿ ಮತ್ತು ಅಟೋರಿಕ್ಷಾ ಚಾಲಕರಿಗೂ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 180/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಯತ್ನ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಸಫಿಯಾ ಪ್ರಾಯ 45 ವರ್ಷ ಗಂಡ:ಅಬ್ದುಲ್‌ ಸತ್ತಾರ ವಾಸ:ಅಂಬೊಟ್ಟು ಮನೆ,ಇಳಂತಿಲ ಗ್ರಾಮ ಬೆಳ್ತಂಗಡಿ ಬಂಟ್ವಾಳ  ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿ ಶ್ರೀಮತಿ ಸಫಿಯಾ (45) ಗಂಡ:ಅಬ್ದುಲ್‌ ಸತ್ತಾರ ವಾಸ:ಅಂಬೊಟ್ಟು ಮನೆ, ಇಳಂತಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರು ಸುಮಾರು 05 ತಿಂಗಳಿನಿಂದ ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ಎನ್‌ ಸಿ ರೋಡ್‌ ಎಂಬಲ್ಲಿರುವ ಮಹಮ್ಮದ್‌ ಹನೀಫ್‌ರವರ ಬಾಬ್ತು ಆರ್‌ಸಿಸಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದು ದಿನಾಂಕ:26-11-2022 ರಂದು ರಾತ್ರಿ 8.30 ಗಂಟೆಗೆ ಪಿರ್ಯಾಧಿ ಹಾಗೂ ಮಕ್ಕಳು ಬಾಡಿಗೆ ವಾಸದ ಮನೆಯ ಬಾಗಿಲನ್ನು ಭದ್ರಪಡಿಸಿ ಬೊಳಂತೂರು ಗ್ರಾಮದ ಬಂಗಾರಕೋಡಿಯ ಬಳಿ ಇರುವ ಅಶ್‌-ಹರಿಯಾ ಮಸೀದಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ಬಳಿಕ ಅವರ ಅಣ್ಣ ಮನೆಯಲ್ಲಿ ಉಳಕೊಂಡು ದಿನಾಂಕ:27-11-2022 ರಂದು ಬೆಳಿಗ್ಗೆ 09.00 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಹಿಂಬಾಗಿಲಿನ ಬೀಗವು ಹಾಗೆಯ ಇರುವಂತೆ ಚೀಲಕವನ್ನು ಯಾರೋ ಕಳ್ಳರೂ ಯಾವುದೋ ಆಯುಧದಿಂದ ಮೀಟಿ ಬಾಗಿಲನ್ನು ತೆರೆದು ಮನೆಯ ಒಳಗಡೆ ಪ್ರವೇಶಿಸಿ 2 ಬೆಡ್‌ ರೂಮ್‌ಗಳಲ್ಲಿರುವ ಗೋದ್ರೇಜಗಳನ್ನು ತೆರೆದು ವಸ್ತುಗಳು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 183/2022  ಕಲಂ:454,457,511 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿರಣ್ ಕುಮಾರ್.ಪಿ , ಪ್ರಾಯ: 31 ವರ್ಷ, ತಂದೆ: ವಸಂತ ಪಿ ಎಮ್, ವಾಸ: ಪುರ್ಲುಮಕ್ಕಿ ಮನೆ, ಗುತ್ತಿಗಾರು   ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ: 26-11-2022 ರಂದು ಸಾಯಂಕಾಲ 5:30 ಗಂಟೆಗೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ಮನೆ ಎಂಬಲ್ಲಿ ಪಿರ್ಯಾದಿದಾರರೊಂದಿಗೆ  ಗೋಪಾಲಕೃಷ್ಣ, ಸುಂದರ ಪಿ ಎಂ ಮತ್ತು ಮುರಳಿ ಎಂಬವರು ಜಾಗದ ತಕರಾರಿನ ಬಗ್ಗೆ ಮಾತಿಗೆ ಮಾತಾಗಿ ಗೋಪಾಲಕೃಷ್ಣರವರು ಅಡಿಕೆ ಸಲಾಖೆಯಿಂದ ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಎಡ ಕೈ ಮುಂಗೈಗೆ ಹೊಡೆದು, ದೂಡಿದ ಹಾಕಿದ ಪರಿಣಾಮ ಬಲ ಕಾಲಿನ ಮಂಡಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿದ್ದು, ನಂತರ ಸುಂದರ ಪಿ ಎಂ ಮತ್ತು ಮುರಳಿರವರು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿದ್ದು, ಆ ಸಮಯ ಪಿರ್ಯಾದಿದಾರರ ತಂದೆ ವಸಂತ ಪಿ ಎಂ ರವರು ತಡೆಯಲು ಬಂದಾಗ ಅವರಿಗೂ ಹಲ್ಲೆ ಮಾಡಿ ದೂಡಿ ಹಾಕಿದ ಪರಿಣಾಮ ಬಲಕಾಲಿನ ಪಾದಕ್ಕೆ ನೋವಾಗಿದ್ದು, ಅಲ್ಲದೇ ಪಿರ್ಯಾದಿದಾರರ ಭಾವ ಕಿಶೋರ್ ಕುಮಾರ್ ತಡೆಯಲು ಬಂದಾಗ ಅವರಿಗೂ ಮುಖಕ್ಕೆ ಗುದ್ದಿ ತುಟಿಯ ಮೇಲ್ಭಾಗ ಮತ್ತು ಕೆಳಭಾಗ ರಕ್ತಗಾಯ ಮಾಡಿರುವುದಾಗಿದೆ.ಬಳಿಕ ತಮಗಾದ ಗಾಯದ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ  ಪೊಲೀಸ್ ಠಾಣೆ ಅ.ಕ್ರ   ನಂಬ್ರ  : 106/2022 ಕಲಂ   , 324 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಹೈಬ್ ಸಿನಾನ್, 19 ವರ್ಷ, ತಂದೆ: ಮಹಮ್ಮದ್ ಶಾಫಿ, ವಾಸ: ಮದಕ ಮನೆ, ತುಂಬೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 26-11-2022 ರಂದು ಬಂಟ್ವಾಳ ತಾಲೂಕು ತುಂಬೆ ಗ್ರಾಮದ ತುಂಬೆ ಎಂಬಲ್ಲಿರುವ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಕಂಪೌಂಡು ಒಳಗಡೆ ಇರುವ ಜಂಶೀರ್ ರವರ ಬಾಬ್ತು ಫಾಸ್ಟ್ ಫುಡ್  ಹೋಟೇಲಿಗೆ  ಸಮಯ ಸುಮಾರು 21:00 ಗಂಟೆಗೆ ಬಂದು ಆಹಾರ ಸೇವಿಸಿ ವಾಪಾಸು ಸುಮಾರು 21:30 ಗಂಟೆಗೆ ಹೊರಟು ಗೇಟಿನ ಬಳಿ ಬರುತ್ತಿದ್ದಂತೆ ಕಂಪೌಂಡ್ ಒಳಗೆ ಶೊಹೇಬ್ ಅಕ್ತರ್ ಎಂಬವನು ಬಂದಾಗ ಪಿರ್ಯಾದಿದಾರರು ಆತನ ಮುಖವನ್ನು ನೋಡಿದಾಗ ಆತನು ಏಕಾಏಕಿಯಾಗಿ ಅವ್ಯಾಚವಾಗಿ ಬೈದು ಆತನ ಕೈಯಲ್ಲಿದ್ದ ಒಡೆದ ಬಾಟಲಿಯಿಂದ ಪಿರ್ಯಾದಿದಾರರ ಕುತ್ತಿಗೆಯ ಎಡಭಾಗಕ್ಕೆ ಹೊಡೆದಾಗ ಪಿರ್ಯಾದಿದಾರರು ನೋವಿನಿಂದ ಬಗ್ಗಿದಾಗ ತಲೆಯ ಎಡಭಾಗಕ್ಕೆ ಅದೇ ಬಾಟಲಿಯಿಂದ ಹೊಡೆದಿದ್ದು ಪಿರ್ಯಾದಿದಾರರು ಕೆಳಗೆ ಬಿದ್ದಾಗ ಎಡಭುಜಕ್ಕೆ, ಬಲಭುಜಕ್ಕೆ, ಕುತ್ತಿಗೆಯ ಬಲಭಾಗ, ಬೆನ್ನಿಗೆ, ಹೊಟ್ಟೆಗೆ ಗೀರಿದ ಪರಿಣಾಮ ರಕ್ತ ಸ್ರಾವ ಗೊಂಡಿದ್ದು ಆರೋಪಿಯು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿದ್ದು, ಪಿರ್ಯಾದಿದಾರರನ್ನು ಜಂಶೀರ್ ರವರು ಅಲ್ಲಿಯೇ ಹತ್ತಿರದಲ್ಲಿದ್ದ  ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು,  ಅಷ್ಟರಲ್ಲಿ ಗಲಾಟೆ ವಿಚಾರ ತಿಳಿದು ಆಸ್ಪತ್ರೆಗೆ ಬಂದ ಪಿರ್ಯಾದಿದಾರರ ಚಿಕ್ಕಪ್ಪ ಮತ್ತು ತಂದೆ ದೇರಳಕಟ್ಟೆ ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 87/2022 ಕಲಂ 504, 324,506,307 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮುರಳಿಧರ , ತಂದೆ: ಸುಂದರ ಪಿ ಎಮ್, ಪ್ರಾಯ: 37 ವರ್ಷ, ವಾಸ: ಪುರ್ಲುಮಕ್ಕಿ ಮನೆ, ಗುತ್ತಿಗಾರು   ಗ್ರಾಮ, ಸುಳ್ಯ ಎಂಬವರ ದೂರಿನಂತೆ ದಿನಾಂಕ: 26-11-2022 ರಂದು ಸಾಯಂಕಾಲ 5:30 ಗಂಟೆಗೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪುರ್ಲುಮಕ್ಕಿ ಮನೆ ಎಂಬಲ್ಲಿ ಪಿರ್ಯಾದಿದಾರರನ್ನು ಕಿಶೋರ್ ಕುಮಾರ್, ಕಿರಣ್ ಕುಮಾರ್, ಸುದೀರ್ ಮತ್ತು ವಸಂತ ಎಂಬವರು ಜಾಗದ ತಕರಾರಿನ ಮಾತುಕತೆಗೆ ಕರೆದ ಸಮಯ ಕಿಶೋರ್ ಮತ್ತು ಕಿರಣ್ ನು ಏಕಾಏಕಿ ಪಿರ್ಯಾದಿದಾರರ ಮೇಲೆ ಅಡಿಕೆ ಸಲಾಖೆಯಿಂದ ತಲೆಯ ಹಿಂಭಾಗಕ್ಕೆ, ಬಲಕಾಲಿಗೆ, ಮೊಣಕಾಲಿಗೆ ಮತ್ತು ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿ ಗಾಯವಾಗಿದ್ದು, ಆ ಸಮಯ ಪಿರ್ಯಾದಿದಾರರ ಚಿಕ್ಕಪ್ಪ ಗೋಪಾಲಕೃಷ್ಣರವರು ತಡೆಯಲು ಬಂದಾಗ ಅವರಿಗೆ ವಸಂತ ಮತ್ತು ಕಿರಣ್ ರವರು ದೊಣ್ಣೆ ಮತ್ತು ಕಲ್ಲಿನಿಂದ ಅವರ ಬೆನ್ನಿಗೆ ಹೊಡೆದು ಗುದ್ದಿದ ಗಾಯವಾಗಿದ್ದು, ಅಲ್ಲದೇ ಪಿರ್ಯಾದಿದಾರರ ತಾಯಿ ಜಯಮ್ಮ ರವರು ತಡೆಯಲು ಬಂದಾಗ ಅವರಿಗೂ ಸುಧೀರ್ ಎಂಬಾತನು ಅವರ ಕಾಲಿಗೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿ ರಕ್ತಗಾಯ ಮಾಡಿರುವುದಾಗಿದೆ.ಬಳಿಕ ತಮಗಾದ ಗಾಯದ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.ಈ ಬಗ್ಗೆ ಸುಬ್ರಮಣ್ಯ  ಪೊಲೀಸ್ ಠಾಣೆ ಅ.ಕ್ರ   ನಂಬ್ರ  : 107/2022 ಕಲಂ   , 324 ,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ  ಚಿದಾನಂದ , ತಂದೆ: ದೇರಣ್ಣ ಗೌಡ, ಪ್ರಾಯ: 46 ವರ್ಷ, ವಾಸ:  ಸಹಾಯಕ ಇಂಜಿನಿಯರ್, ಕಾರ್ಯ ಮತ್ತು ಪಾಲನಾ ಶಾಖೆ, ಮೆಸ್ಕಾಂ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕಾರ್ಯ ಮತ್ತು ಪಾಲನಾ ಶಾಖೆ ಮೆಸ್ಕಾಂ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಕಡಬ ತಾಲೂಕು ಸುಬ್ರಹ್ಮಣ್ಯ ಉಪವಿಭಾಗದ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಎಂಬಲ್ಲಿ ದಿನಾಂಕ: 26-11-2022 ರಂದು ಮದ್ಯಾಹ್ನ ಸುಮಾರು 1:30 ಗಂಟೆಗೆ ಕೆಎ 21 ಝೆಡ್ 3461 ನೇ ಮಾರುತಿ ವ್ಯಾಗನರ್ ವಾಹನವು ಅಜಾಗರೂಕತೆಯಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬವು ಹಾನಿಯಾಗಿದ್ದು, ಅಂದಾಜು ಮೌಲ್ಯ ರೂ 35498.39/- ರಷ್ಟು ಮೆಸ್ಕಾಂ ಇಲಾಖೆಗೆ ನಷ್ಟವುಂಟಾಗಿದ್ದು, ಇದರಿಂದ ಕುಲ್ಕುಂದ ಮತ್ತು ಕೈಕಂಬ ವ್ಯಾಪ್ತಿಯಲ್ಲಿ ವಿದ್ಯುತ್ ಅಡಚಣೆಯಾಗಿರುತ್ತದೆ. ಈ ಬಗ್ಗೆ ಸುಬ್ರಮಣ್ಯ  ಪೊಲೀಸ್ ಠಾಣೆ ಅ.ಕ್ರ   ನಂಬ್ರ  : 108/2022 ಕಲಂ   , 279,427 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವಕಿ (69) ಗಂಡ: ದಿ| ಸೊಂಪ ಪೂಜಾರಿ ವಾಸ: ನೆಟ್ಲ ಪಿಲಿಂಜ ಮನೆ, ಗೋಳ್ತಮಜಲು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ಮೂರನೇ ಮಗ ದಾಮೋದರ ನ ಹೆಂಡತಿ ಯಶೋಧರವರು ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಗೆ ಹೋಗಿ ಅಲ್ಲಿಯೇ ವಾಸವಾಗಿರುವುದಾಗಿದೆ. ಆಕೆಯ ಮಕ್ಕಳನ್ನು ಕರೆದುಕೊಂಡು ಹೋಗಿರುವುದರಿಂದ ಪಿರ್ಯಾದಿದಾರರ ಮಗ ದಾಮೋದರ ಬೇಸರಗೊಂಡಿದ್ದರು. ದಾಮೋದರರವರು ಮಕ್ಕಳನ್ನು ನೋಡಲು ಶಾಲೆಗೆ ಹೋದಾಗ ಮಕ್ಕಳು ಮಾತನಾಡಲು ನಿರಾಸ್ತಕಿ ತೋರಿರುತ್ತಾರೆ. ಇದರಿಂದ ವ್ಯಥೆಯಲ್ಲಿದ್ದರು. ಹೀಗಿರುತ್ತಾ ದಿನಾಂಕ:27-11-2022 ರಂದು ಬೆಳಿಗ್ಗೆ 7.30 ದಾಮೋದರನು ಕೆಲಸಕ್ಕೆಂದು ಹೋಗಿದ್ದು, ನಂತರ ಬೆಳಿಗ್ಗೆ 9.00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ತಂಗಿ ಮನೆಗೆ ಹೋಗಿ ಸಂಜೆ 3.30 ಗಂಟೆಗೆ ಮನೆಗೆ ವಾಪಾಸು ಬಂದಾಗ ಮನೆಯ ಬಾಗಿಲು ಹಾಕಿದ್ದು, ಬಾಗಿಲು ತೆಗೆದು ನೋಡಿದಾಗ ದಾಮೋದರನು ಆತನು ಮಲಗುವ ಕೋಣೆಯಲ್ಲಿ ನೈಲಾನ್ ಹಗ್ಗವನ್ನು ಕೋಣೆಯ ಅಡ್ಡಕ್ಕೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದನು. ಪಿರ್ಯಾದಿದಾರರ ಮಗ ಮೃತ ದಾಮೋದರನು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 3.30 ಗಂಟೆಯ ಮಧ್ಯಾವಧಿಯ್ಲಲಿ ತನ್ನ ಮಕ್ಕಳು ತನ್ನೊಂದಿಗೆ ಇರದೇ ಇರುವ ವ್ಯಥೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 43-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಂದರ ಭಟ್‌  ಈ ಎಸ್‌ ಪ್ರಾಯ: 74 ವರ್ಷ ತಂದೆ: ದಿ ಶ್ಯಾಮ್‌ ಭಟ್‌ ವಾಸ: ಎದುರ್ಕಳ ಮನೆ ಕೆದಿಲ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರ ಮೊದಲನೇ ಮಗ ಪ್ರಶಾಂತ್‌ ಕುಮಾರ್‌ ಈ ಎಸ್‌ ಎಂಬಾತನು ಪಿರ್ಯಾದಿದಾರರ ಜೊತೆ ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 27-11-2022 ರಂದು ಪಿರ್ಯಾದಿದಾರರ ತೋಟದಲ್ಲಿ ಅಡಿಕೆ ತೆಗೆದಿದ್ದು ತೆಗೆದ ಅಡಿಕೆಯನ್ನು ಪಿರ್ಯಾದಿದಾರರ ಮಗ ಪ್ರಶಾಂತ್‌ ಕುಮಾರ್‌ ಈ ಎಸ್‌ ನು ಮನೆಗೆ ತಂದು ಹಾಕುತ್ತಿದ್ದನು. ಮದ್ಯಾಹ್ನ ಸುಮಾರು 12:30 ಗಂಟೆಗೆ  ಪ್ರಶಾಂತ್‌ನು   ತೋಟದಿಂದ ಅಡಿಕೆಯನ್ನು ತಂದು ಅಂಗಳದಲ್ಲಿ ಹಾಕಿ ತನಗೆ ಏನೂ ಉಷಾರಿಲ್ಲ ಎಂದು ಹೇಳಿ ಮನೆಯಲ್ಲಿ ಮಲಗಿ ಸಂಕಟಪಡತೊಡಗಿದನು. ಕೂಡಲೇ ಪಿರ್ಯಾದಿದಾರರು ನೆರೆಯ ಗಿರೀಶ್‌ ರವರೊಂದಿಗೆ ಮಗನನ್ನು ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಕೂಡಲೇ ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದಂತೆ ಪಿರ್ಯಾದಿದಾರರು ಪ್ರಶಾಂತ್‌ ಕುಮಾರ್‌  ನನ್ನು 14:00 ಗಂಟೆಗೆ  ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 35/2022 ಕಲಂ: 174  ಸಿ .ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-11-2022 10:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080