ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಯ್ಯಣ್ಣ ಪ್ರಾಯ 45 ವರ್ಷ ತಂದೆ: ಮಲ್ಲಯ್ಯ ವಾಸ: ತುರ್ವಿಹಾಳ, ಸಿಂಧನೂರು ತಾಲೂಕು ರಾಯಚೂರು ಜಿಲ್ಲೆ. ಎಂಬವರ ದೂರಿನಂತೆ ಪಿರ್ಯಾದಿದಾರರು ಸಿಂಧನೂರು ಎಕ್ಸಾಲೆಂಟ್‌ ಇಂಡಿಪೆಂಡೆಂಟ್‌  ಪಿ ಯು ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದು ದಿನಾಂಕ: 27-12-2022 ರಂದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರೊಂದಿಗೆ ಶೈಕ್ಷಣಿಕ ಪ್ರವಾಸದ ನಿಮಿತ್ತ ಕೆಎ 25 D 3852ನೇ ಟೂರಿಸ್ಟ್‌ ಬಸ್ಸಿನಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಹೊರಟು ಬಸ್ಸನ್ನು ಅದರ ಚಾಲಕ ಅಭಿಷೇಕ್‌ ರವರು ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 12.45 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿಗೆ ತಲುಪುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಕೆಎ 21 F 0099 ನೇ KSRTC ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂ ಆಗಿ ಪಿರ್ಯಾಧಿದಾರರ ಬಸ್ಸಿನಲ್ಲಿದ್ದ ಉಪನ್ಯಾಸಕರಾದ ಶರಣಬಸಪ್ಪ ರವರಿಗೆ ಕೈಗೆ ಮತ್ತು ಕಾಲಿಗೆ, ಜಮೀಲ ಅಹ್ಮದ್‌ ರವರಿಗೆ ಕೈ, ಕಾಲಿಗೆ ಗುದ್ದಿದ ಗಾಯ, ಹಾಗೂ ವಿದ್ಯಾರ್ಥಿಗಳಾದ ರಮೇಶ, ಆಕಾಶ್‌, ವೆಂಕಟೇಶ, ರಾಘವೇಂದ್ರ, ಕೃಷ್ಣಮೂರ್ತಿ, ರಾಹುಲ, ಸುರೇಶ ಸೊಲಂಗಿ, ಅಮರೇಶ ಗೌಡ, ಮಂಜುನಾಥ, ಭೂಮಿಕಾ, ಕಲ್ಪನಾ, ಮೌನೇಶ, ಅಯ್ಯಮ್ಮ, ನಾಗವೇಣಿ, ಶರಣಮ್ಮ, ನಾಗರಾಜ, ಕಾವೇರಿ, ಸುಸ್ಮಿತಾ, ಹನುಮಮ್ಮ ರವರುಗಳಿಗೆ ಮೈ, ಕೈ, ಕಾಲುಗಳಿಗೆ, ಮುಖಕ್ಕೆ ಗುದ್ದಿದ ಗಾಯ, ಹಾಗೂ ಪಿರ್ಯಾದಿದಾರರ ಬಸ್ಸು ಚಾಲಕ ಅಭಿಷೇಕ್‌ ರವರಿಗೆ ತಲೆಗೆ, ಮೈ ಕೈಗೆ, ಹೊಟ್ಟೆ ತೀವ್ರ ಗಾಯ,  ಅಡುಗೆ ಭಟ್ಟ ದುರ್ಗೇಶ ರವರಿಗೆ ಕಾಲಿಗೆ, ಮೈಕೈಗಳಿಗೆ ತೀವ್ರ ಗಾಯವಾಗಿರುತ್ತದೆ. ಗಾಯಾಳುಗಳೆಲ್ಲಾರನ್ನು ಅಂಬುಲೆನ್ಸ್‌ ಗಳಲ್ಲಿ ಚಿಕಿತ್ಸೆ ಬಗ್ಗೆ ಉಜಿರೆ, ಪುತ್ತೂರು ಕಡೆಗಳ ಆಸ್ಪತ್ರೆಗೆ  ಕರೆದುಕೊಂಡು ಹೋಗಿರುತ್ತಾರೆ. ಅಪಘಾತ ನಡೆಸಿದ KSRTC ಬಸ್ಸಿನಲ್ಲಿದ್ದ ಬಸ್ಸು ಚಾಲಕ ಮಲ್ಲಿಕಾರ್ಜುನ ನಾಯ್ಕರ್, ಮತ್ತು ಇತರ ಸಹ ಪ್ರಯಾಣಿಕರಿಗೆ ಮೈ ಕೈ ಕಾಲುಗಳಿಗೆ ಗುದ್ದಿದ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ವಿವಿಧ ಕಡೆಯ ಆಸ್ಪತ್ರೆ ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 171/2022 ಕಲಂ; 279, 337, 338 ಭಾದಂಸಂ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಜಿತ್‌ ರೈ ಹೆಚ್‌, ಪ್ರಾಯ 36 ವರ್ಷ, ತಂದೆ: ಬಾಲಕೃಷ್ಣ ರೈ, ವಾಸ: ಹೊಸಮನೆ ಮನೆ, ಕೈಕಾರ ಅಂಚೆ, ಒಳಮೊಗರು ಗ್ರಾಮ, ಪುತ್ತೂರು ತಾಲೂಕು.ಎಂಬವರ ದೂರಿನಂತೆ ದಿನಾಂಕ 27-12-2022 ರಂದು 15:00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಅಬ್ದುಲ್‌ ನಾಸಿರ್‌ ಎಂಬವರು  KA-21-Y-0852 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು  ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬನ್ನೂರು ಕಡೆಯಿಂದ ಬೊಳುವಾರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಹಾರಾಡಿ ಎಂಬಲ್ಲಿ ಮೋತಿ ಮಹಲ್‌ ಹೊಟೇಲ್‌ ಬಳಿ ಸವಾರನ ತೀರಾ ಬಲಭಾಗಕ್ಕೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಬೊಳುವಾರು ಕಡೆಯಿಂದ ಬನ್ನೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-Z-1919 ನೇ ನೋಂದಣಿ ನಂಬ್ರದ ಕಾರಿಗೆ ಮೋಟಾರ್‌ ಸೈಕಲ್‌ ಅಪಘಾತವಾಗಿ ಕಾರಿನ ಬಲಭಾಗದ ಎದುರಿನ ಡೋರ್‌, ಹಿಂಬದಿಯ ಡೋರ್‌ ಮತ್ತು ಲೈಟ್‌ ಜಖಂಗೊಂಡಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 197/2022 ಕಲಂ: 279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನರಸಿಂಹ ರೈ ಪ್ರಾಯ:73ವರ್ಷ.  ತಂದೆ: ಲೋಕಯ್ಯ ರೈ. ವಾಸ: ಬೋಳಂತೂರು ಗುತ್ತು ಮನೆ, ಬೋಳಂತೂರು,ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:25.12.2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:26.12.2022 ರಂದು ಬೆಳಿಗ್ಗೆ 7:30ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾಧಿದಾರರ ಬಾಬ್ತು ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ಬೊಳಂತೂರು ಗುತ್ತು ಎಂಬಲ್ಲಿರುವ ಮನೆಯ ಅಡಿಕೆ ತೋಟದಲ್ಲಿರುವ ಅಡಿಕೆ ಮರಗಳಿಂದ ಅಡಿಕೆ ಗೊನೆಗಳನ್ನು ಕೀಳಿ ಅದರಲ್ಲಿರುವ ಹಣ್ಣು ಅಡಿಕೆಗಳನ್ನು ಕಿತ್ತುಕೊಂಡು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾಧಿದಾರರ ತೋಟದ ಅಡಿಕೆ ಮರಗಳಿಂದ ಸುಮಾರು 20,000 ದಿಂದ 25,000 ಹಣ್ಣು ಅಡಿಕೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಮೌಲ್ಯ 58,000/- ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 204/2022  ಕಲಂ: 379  ಬಾಧಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕೊಲೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶೀಲಾವತಿ (41) ಗಂಡ:ಜನಾರ್ಧನ ಗೌಡ ವಾಸ:ದಂಡುಗ ಮನೆ ಮೊಗ್ರು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 26.12.2022 ರಂದು ಸಂಜೆ 4.00 ಗಂಟೆಗೆ ಚಂದಪ್ಪ ಪೂಜಾರಿ ಎಂಬುವರ ಮಗ ಮಹೇಶ ಪೂಜಾರಿ  ಎಂಬವನು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ಗಂಡ ಜನಾರ್ದನ ಗೌಡರನ್ನು ಮನೆಯಿಂದ ಕರೆದುಕೊಂಡು ಹೋಗಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಕೊಲೆ ಮಾಡಿ ಸಂಜೆ 7.00 ಗಂಟೆಗೆ ವಾಪಾಸು ಪಿರ್ಯಾದಿದಾರರ ಮನೆಗೆ ಬಂದು ನಿಮ್ಮ ಗಂಡ ಜನಾರ್ದನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನಾಳೆ ನಿನ್ನ ಗಂಡನ ಹೆಣ ನೀರಿನಲ್ಲಿ ತೇಲಿಬರಬಹುದು .ಎಂದು ಉದ್ದಟತನದಿಂದ ತಿಳಿಸಿ ಕೂಡಲೇ ಮನೆಯಿಂದ ನಿರ್ಗಮಿಸಿ ಪದ್ಮುಂಜದ ದುರ್ಗಾ ಬಾರಿನಲ್ಲಿ ಮದ್ಯ ಸೇವಿಸಿ ಆತನ ಮನೆಗೆ ಹೋಗಿರುತ್ತಾನೆ. ಪಿರ್ಯಾದಿಯ ಗಂಡನ ತಮ್ಮಂದಿರು ಆರೋಪಿಯ ಮನೆಗೆ ಹೋದಾಗ ಆತನು ಕೇಕೆ ಹಾಕಿ ಸಂಭ್ರಮಿಸುತ್ತಿದ್ದ.ಅವರು ಹೋಗುವುದನ್ನು ಕಂಡು ಅಲ್ಲಿಂದ ಆತನು ತಪ್ಪಿಸಿಕೊಳ್ಳುಲು ಪ್ರಯತ್ನಿಸಿದಾಗ ಅವನನ್ನು ಬಿಗಿಯಾಗಿ ಹಿಡಿದುಕೊಂಡು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದ ಸಂದರ್ಭ ಆರೋಪಿ ಮಹೇಶ್ ಪೂಜಾರಿ ತಪ್ಪಿಸಿಕೊಂಡು ಹೋಗುವ ಆತುರದಲ್ಲಿ ಅಲ್ಲಿಯೇ ಇದ್ದ ಕಲ್ಲಿನ ಮೇಲೆ ಬಿದ್ದು  ಅವನಿಗೆ ಗಾಯವಾಗಿರುತ್ತದೆ. ದಿನಾಂಕ:27.12.2022 ರ ಬೆಳಿಗ್ಗೆ 10.18 ಗಂಟೆಗೆ ಸ್ಥಳಿಯ ಈಜುಗಾರರು ಮತ್ತು ಆಗ್ನಿಶಾಮಕ ದಳ  ಸಹಾಯದಿಂದ ಜನಾರ್ದನ ಗೌಡರ ಮೃತದೇಹವನ್ನು ಮೇಲಕ್ಕೆತ್ತುವಾಗ ಅವರ ಕೈಗಳನ್ನು ಬಟ್ಟೆಯಿಂದ ಕಟ್ಟಿದ ರೀತಿಯಲ್ಲಿ ಕಂಡು ಬಂದಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ  ಅ .ಕ್ರ 132/2022 ಕಲಂ: 302 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಶ್ರಫ್ ಡಿ,ಎಂ (40) ತಂದೆ: ಕೆ, ಎಚ್ ಪೋಡಿಯಪ್ಪ ವಾಸ: ಪೈಚಾರ್ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪೈಚಾರ್ ಎಂಬಲ್ಲಿರುವ ತಮ್ಮ ಮನೆಯಲ್ಲಿರುವ ಸಮಯ ಪಿರ್ಯಾದುದಾರರ ಹೆಂಡತಿಯ ತಂಗಿ ಸಂಶೀನಾಳ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೇ ಇದ್ದು, ಪಿರ್ಯಾದುದಾರರು ಸುಮಾರು 2 ವರ್ಷಗಳಿಂದ ಸಂಶೀನಾಳ ಸಂಸಾರ ಸರಿಯಾಗಬೇಕೆಂದು ಮಾತುಕತೆ ನಡೆಸುತ್ತಿದ್ದು, ಇದೇ ವಿಚಾರವಾಗಿ ಪಿರ್ಯಾದುದಾರರ ಹೆಂಡತಿಯ ಸಂಬಂಧಿಕರಾದ ಜಾಫರ್ ಮತ್ತು ಫೈಜಲ್ ಎಂಬವರು ದಿನಾಂಕ 26.12.2022 ರಂದು ಸಮಯ ಸುಮಾರು 20:30 ಗಂಟೆಗೆ ಪಿರ್ಯಾದುದಾರರ ಮನೆಗೆ ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದುದಾರರಿಗೆ ಹಲ್ಲೆ ಮಾಡಲು ಬಂದಾಗ ಪಿರ್ಯಾದುದಾರರು ತನ್ನ ಎಡ ಕೈಯನ್ನು ಅಡ್ಡ ಗಟ್ಟಿದಾಗ ಆಗ ಎಡಕೈ ಗೆ ಚೂರಿಯಿಂದ ಹಲ್ಲೆ ಮಾಡಿದ್ದು, ಇನ್ನೂ ಮುಂದಕ್ಕೆ ಸಂಶೀನಾಳ ವಿಚಾರಕ್ಕೆ ಬಂದರೆ ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ನಂತರ ಅಲ್ಲಿಂದ ಚೂರಿ ಸಮೇತ ಪರಾಗಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ    ಅ,ಕ್ರ   ನಂ: 153/2022 ಕಲಂ:324,504,506, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಕ್ಷಿತ್ ಪ್ರಾಯ: 23 ವರ್ಷ ತಂದೆ: ಉಮೇಶ್ ಪೂಜಾರಿ ವಾಸ: ನಂದರಬೆಟ್ಟು ಮನೆ, ಬಿ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಪಾರ್ಸೆಲ್ ಸರ್ವಿಸ್ ಉದ್ಯೋಗವನ್ನು ಮಾಡಿಕೊಂಡಿದ್ದು, ದಿನಾಂಕ:27-12-2022 ರಂದು ಸಂಜೆ 4.30 ಗಂಟೆಯ ಸಮಯಕ್ಕೆ ಪಾರ್ಸೆಲ್ ನೀಡಲು ಸ್ನೇಹಿತನಾದ ಶರಣ್ ನೊಂದಿಗೆ ಬಿ ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿಗೆ ಹೋಗಿ ವಾಹನವನ್ನು ನಿಲ್ಲಿಸಿ ಪಾರ್ಸೆಲ್ ನ್ನು ನೀಡಲು ಹೋದಾಗ ಅಲ್ಲಿಗೆ ಬಂದ ಇಕ್ಬಾಲ್ ಎಂಬ ವ್ಯಕ್ತಿಯು ಬಂದು ಕಪ್ಪು ಬಣ್ಣದ ಆಕ್ಟೀವಾ ಸ್ಕೂಟರ್ ನ್ನು ಅಡ್ಡವಾಗಿ ನಿಲ್ಲಿಸಿ ಅವ್ಯಾಚವಾಗಿ ಬೈದು, ಧರ್ಮ ನಿಂದನೆ ಮಾಡಿ, ಜೀವ ಬೆದರಿಕೆ ಕೂಡ ಹಾಕಿರುತ್ತಾನೆ. ಅಲ್ಲದೇ ಪಿರ್ಯಾದಿದಾರರ ಮೈಗೆ ಕೈ ಹಾಕಿ ದೂಡಿ ಕೈಯಿಂದ ಹಲ್ಲೆ ಮಾಡಿರುತ್ತಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:121/2022 ಕಲಂ: 341, 504, 298, 506, 323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 27.12.2022 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲಂ: 447, 504, 506, 323, 354, R/W 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ: 27.12.2022 ರಂದು ಸುಳ್ಯ ಪೊಲೀಸ್‌ ಠಾಣೆಯಲ್ಲಿ  ಕಲಂ: 323. 504. 506 R/W 149  ಐಪಿಸಿ ಮತ್ತು ಕಲಂ: 3(1) (s) SC/ST Act 2015ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕುಸುಮಾಧರ ಎಸ್ ಟಿ , ಪ್ರಾಯ : 39 ವರ್ಷ ತಂದೆ : ತಿಮ್ಮಪ್ಪ ಗೌಡ , ವಾಸ : ವಳಿಯಾರು ಮನೆ , ಮುರುಳ್ಯ ಗ್ರಾಮ , ಸುಳ್ಯ ಎಂಬವರ ದೂರಿನಂತೆ ದಿನಾಂಕ 27.12.2022 ರಂದು ಸಂಜೆ 07:00 . ಗಂಟೆಗೆ ಪಿರ್ಯಾದಿದಾರರು ಅವರ ಪತ್ನಿ ಪೂಜಾ , ಅವರ ಮಕ್ಕಳು ಮತ್ತು ಅಣ್ಣನ ಮಕ್ಕಳ ಜೊತೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಪುಣ್ಚತ್ತಾರು   ಬೀಜತ್ತಡ್ಕ ಎಂಬಲ್ಲಿ ರಸ್ತೆ ಬದಿ ನಿಂತುಕೊಂಡು ಸ್ನೇಹಿತ ಅಭಿಲಾಷ ಎಂಬುವರ ಜೊತೆ ಮಾತನಾಡುತ್ತಿರುವ ವೇಳೆ ಪರಿಚಯದ ಅರುಣ್ ರೈ ಬಲ್ಕಾಡಿ  ಬಿನ್ ತಿಮ್ಮಪ್ಪ ರೈ ಎಂಬುವರು ಅವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಬಂದು ಪಿರ್ಯಾದುದಾರರ ಬಾಬು ತೂಫಾನ್ ವಾಹನಕ್ಕೆ ಅಡ್ಡಲಾಗಿ ನಿಲ್ಲಿಸಿ ಪಿರ್ಯಾದಿದಾರರನ್ನು ಉದ್ದೇಷಿಸಿ ಅವಾಚ್ಯ ಶಬ್ದಗಳಿಂದ ಬೈದು ಅತನ ಕೈಯಲ್ಲಿದ್ದ ಹೆಲ್ಮಟ್ ನಿಂದ ಪಿರ್ಯಾದುದಾರರ ಕೈಗೆ ಹೊಡೆದು ಆ ಬಳಿಕ ಅದೇ ಹೆಲ್ಮೆಟ್ ನಿಂದ ಪಿರ್ಯಾದಿದಾರರ ಬಾಬ್ತು ವಾಹನ ನಂಬ್ರ KA 16 B 7898 n ವೀವ್ ಮಿರರ್ ಗೆ ಹೊಡೆದು ಸ್ಥಳದಿಂದ ಹೋಗಿದ್ದು , ಹೆಲ್ಮಟ್ ನಿಂದ ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿದಾರರ ಕೈಗೆ ಹಾಗೂ ಮಡಿಲಲ್ಲಿ ಕುಳಿತುಕೊಂಡ ಮಗುವಿನ ತಲೆಗೆ ನೋವು ಉಂಟಾಗಿದ್ದು , ವಾಹನದ ವೀವ್ ಮಿರರ್ ಹಾನಿಯಗಿ 2000 ರೂ . ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ 106/2022 ಕಲಂ 504. 324. 427  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ Dr, ವಿಸಾಕ್ ಜಿ, ಪನಿಕರ್ (27) ತಂದೆ: ಗಿನಚಂದ್ರ ಪಣಿಕರ್ ವಾಸ: 3 ನೇ ವರ್ಷದ ಪದವಿ ವಿದ್ಯಾರ್ಥಿ, ಕೆ.ವಿ.ಜಿ ಡೆಂಟಲ್ ಕಾಲೇಜ್, ಕುಂಜಿಭಾಗ್, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ಕೆ ವಿ ಜಿ ಡೆಂಟಲ್‌‌ ಕಾಲೇಜಿನ 3ನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು ದಿನಾಂಕ.21.12.2022ರಂದು 22:30  ಗಂಟೆಗೆ ಸ್ನೇಹಿತ ಝೈದ್ದಿನ್‌ ಹಜೀಲ್‌‌ ನನ್ನು ಸ್ಪಂದನ ಪಿ ಜಿ ಕಡೆಗೆ ಡ್ರಾಪ್ ಮಾಡಲು ಹೋಗುತ್ತಿರುವಾಗ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕುರುಂಜಿಭಾಗ್ ಕೆ.ವಿ.ಜಿ. ಐಪಿಎಸ್ ಸ್ಕೂಲ್ ನ ಹತ್ತಿರ ತಲುಪುತ್ತಿದ್ದಂತೆ ಇನ್ನೋವಾ ಕಾರೊಂದು ಪಿರ್ಯಾದುದಾರರನ್ನು ಬೆನ್ನಟ್ಟಿ ಅದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಹರೀಶ್‌‌, ಪಲ್ಲವಿ ಹಾಗೂ ಪಲ್ಲವಿ ಸಹೋದರ ಮತ್ತು ಅಪರಿಚಿತ ವ್ಯಕ್ತಿಯೊಬ್ಬ ಪಿರ್ಯಾದುದಾರರ ಬಳಿಗೆ ಬಂದು ಪಿರ್ಯಾದುದಾರರ ಕೊರಳ ಪಟ್ಟಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾಕ್‌‌ ಲಿವರ್‌‌ನಿಂದ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ    ಅ,ಕ್ರ   ನಂ: 155/2022 ಕಲಂ: 324,504 R/W 34  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-12-2022 11:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080