ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇಮ್ರಾನ್, 34 ವರ್ಷ ತಂದೆ: ದಿ|| ಎಂ.ಜಿ.ಬದ್ರುದ್ದೀನ್ ವಾಸ: D.No 7-50, ಫಾತಿಮಾ ಕಾಟೇಜ್, 7ನೇ ಬ್ಲಾಕ್, ಕೃಷ್ಣಾಪುರ ಸುರತ್ಕಲ್, ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 27-05-2022 ರಂದು ಯಾಕುಬ್ ರವರ ಬಾಬ್ತು KA-19-HJ-8227 ನೇ ಸ್ಕೂಟರಿನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮಂಗಳೂರಿಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 07:00 ಗಂಟೆಗೆ ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ಮಜಲೋಡಿ ಎಂಬಲ್ಲಿಗೆ ತಲುಪಿದಾಗ ಸ್ಕೂಟರನ್ನು ಸವಾರ ಯಾಕುಬ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು ಆಗಿದ್ದವರು ಚಿಕಿತ್ಸೆಯ ಬಗ್ಗೆ ಮಂಗಳೂರು ಕೊಲಸೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 61/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿನೇಶ್ ಕೆ ಪ್ರಾಯ40 ವಷ ತಂದೆ: ಎಂ ಕೆ ಗುರುವಪ್ಪ ವಾಸ:  ಶಾಖಾಧಿಕಾರಿಗಳು ಮೆಸ್ಕಾಂ ಮಾಣಿ ಶಾಖೆ ಮತ್ತು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಮಾಣಿ ಶಾಖಾ ವ್ಯಾಪ್ತಿಯ ಮಾಣಿ ಮೆಸ್ಕಾಂನಲ್ಲಿ ಶಾಖಾಧಿಕಾರಿಗಳಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 27.05.2021 ರಂದು ಸಮಯ ಸುಮಾರು ಸಂಜೆ 17.00 ಗಂಟೆಗೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎ 19 ಎಬಿ 3361 ನೇ ಕಂಟೈನರ್ ಲಾರಿಯನ್ನು ಅದರ ಚಾಲಕ ಮಂಗಳೂರಿನಿಂದ ಬೆಂಗಳೂರು ಕಡೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಾಲಹಿಸಿಕೊಂಡು ಬಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಪಳಿಕೆ ಎಂಬಲ್ಲಿ ರಸ್ತೆಯ ಬದಿಯಲ್ಲಿರು ವಿದ್ಯುತ್ ಕಂಬಗಳಿಗೆ ಡಿಕ್ಕಿಯನುಂಟು ಮಾಡಿ ವಿದ್ಯುತ್ ಕಂಬಗಳ ಮೇಲೆ ಮಗುಚಿ ಬಿದ್ದಿರುವ ವಿಷಯ ತಿಳಿದ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕಂಟೈನರ್ ಲಾರಿಯೊಂದು 33 ಕೆವಿ ವಿದ್ಯುತ್ ಕಂಬಕ್ಕೆ ಹಾಗೂ 11 ಕೆವಿ ವಿದ್ಯುತ್ ಕಂಬಕ್ಕೆ ಒಟ್ಟು ಎರಡು ವಿದ್ಯುತ್  ಕಂಬಗಳ ಮೇಲೆ ಬಿದ್ದು ಸುಮಾರು 75.000 ಸಾವಿರ ನಷ್ಠ ಉಂಟಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 82/2022  ಕಲಂ: 279,ಐಪಿಸಿ ಮತ್ತು ಕಲಂ 2(ಎ) ಕೆ.ಪಿ.ಡಿ.ಎಲ್ ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವರಾಮಪ್ರಾಯ 35 ವರ್ಷ ತಂದೆ:ಕೃಷ್ಣಶೆಟ್ಟಿ ವಾಸ:ಅರ್ಕಮನೆ ಕೊಡಿಪ್ಪಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ: 27.05.2022 ರಂದು ರಾತ್ರಿ ಸುಮಾರು 10.15 ಗಂಟೆಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಮಾಣಿ ಕಡೆಯಿಂದ ಕಬಕ ಕಡೆಗೆ ಕಿಶೋರ್ ಕುಮಾರ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬುಲ್ಲೆಟ್ ಬೈಕ್ ನಂಬ್ರ KA-21-W-5656 ನೇಯದಕ್ಕೆ ಡಿಕ್ಕಿ ಹೊಡೆದು ಕಿಶೋರ್ ಕುಮಾರ್ ರವರು ರಸ್ತೆಗೆ ಬಿದ್ದ ಪರಿಣಾಮದಿಂದ ತಲೆಗೆ ತೀವ್ರ ತರಹದ ಗುದ್ದಿದ  ಹಾಗೂ ರಕ್ತ ಗಾಯ ಉಂಟಾಗಿದ್ದವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದವರನ್ನು ಪಿರ್ಯಾದಿದಾರರು ವಿಷಯ ತಿಳಿದು ಮಹಾವೀರ ಆಸ್ಪತ್ರೆಗೆ ಬಂದು ಕಿಶೋರ್ ಕುಮಾರ್‌ರವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಗಾಯಾಳು ಕಿಶೋರ್ ಕುಮಾರ್ ರವರನ್ನು ತೀವ್ರ ನಿಗಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದು, ಕಿಶೋರ್ ಕುಮಾರ್ ರವರು ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಈ ದಿನ ದಿನಾಂಕ: 28-05-2022 ರಂದು 11.00 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 83/2022 ಕಲಂ:279 ,304ಎ ಬಾಧಂಸಂ  ಮತ್ತು ಕಲಂ 134 (ಎ)(ಬಿ)&187   ಐಎಮ್ ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜುಬೈರ್ ಪ್ರಾಯ: 36 ವರ್ಷ ತಂದೆ: ಮಹಮ್ಮದ್ ವಾಸ: ಪಾಲತ್ತಡಿ ಮನೆ ರಾಮಕುಂಜ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:27.05.2022 ರಂದು ಪಿರ್ಯಾದುದಾರರು ಎಂದಿನಂತೆ ಸರ್ವೀಸ್ ಸ್ಟೇಷನ್‌ನಲ್ಲಿ ಕೆಲಸ ಮುಗಿಸಿ  ತನ್ನ ಹೆಂಡತಿ ಮಕ್ಕಳೊಂದಿಗೆ ಆತೂರಿನ ಪಾಲೆತ್ತಡಿ ಎಂಬಲ್ಲಿರುವ ತನ್ನ ತಂದೆಯ ಮನೆಗೆ ಹೋಗಿ ರಾತ್ರಿ ಸಮಯ 09.30 ಗಂಟೆಗೆ ಮನೆಯಲ್ಲಿ ತಂದೆ-ತಾಯಿಯೊಂದಿಗೆ ಮಾತನಾಡುತ್ತಿರುವಾಗ ಪಿರ್ಯಾದುದಾರರ ತಂದೆಯ ಮೊದಲನೇ ಹೆಂಡತಿಯ ಮಗನಾದ ಆರೋಪಿತನಾದ ನಸೀಬ್‌  “ನೀನು ಯಾಕೆ ವಿದೇಶದಲ್ಲಿರುವ ಅಣ್ಣ ಅನ್ಸರ್ ನೊಂದಿಗೆ ಮಾತನಾಡುತ್ತಿಲ್ಲ ಎಂದು ಹೇಳಿ ನಂತರ ವಿಡಿಯೋ ಕರೆ ಮಾಡಿ ಮಾತನಾಡುವಂತೆ ಮೊಬೈಲ್‌ ನೀಡಿದಾಗ ವಿದೇಶದಲ್ಲಿದ್ದ ಅನ್ಸರ್ ಎಂಬಾತನು ಏಕಾಏಕಿ ಪಿರ್ಯಾದಿ ತಂದೆಗೆ ಅವಾಚ್ಯವಾಗಿ ಬೈದು ನಿಂದಿಸಿದಾಗ ಪಿರ್ಯಾದುದಾರರು ಮಾತನಾಡದೇ ಮೊಬೈಲ್‌ನ್ನು ನಸೀಬ್‌ಗೆ ನೀಡಿದ್ದು ಆ ಸಮಯದಲ್ಲಿ ನಸೀಬ್‌ ಮನೆಯ ಒಳಗೆ ಹೋಗಿ ಅಡುಗೆ ಮನೆಯಿಂದ ಕತ್ತಿಗಳನ್ನು ತೆಗೆದುಕೊಂಡು ಬಂದು ಪಿರ್ಯಾದುದಾರರಿಗೆ ಬಲಕೈಯಲ್ಲಿದ್ದ ಕತ್ತಿಯಿಂದ ಹಲ್ಲೆ ಮಾಡಿ ನಂತರ ಎಡಗೈಯಲ್ಲಿದ್ದ ಚೂರಿಯಿಂದಲೂ ಹಲ್ಲೆಗೆ ಮಾಡಿದ ಪರಿಣಾಮ ಪಿರ್ಯಾದುದಾರರ ಕುತ್ತಿಗೆಗೆ ಗೀರಿದ ಗಾಯ ಹಾಗೂ ಹೊಟ್ಟೆಯ ಎಡಬಾಗಕ್ಕೆ ರಕ್ತಗಾಯವಾಗಿರುತ್ತದೆ ಅಲ್ಲದೆ ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಬಟ್ಟೆಯನ್ನು ಹರಿದು ಅಲ್ಲಿಯೇ ಇದ್ದ ಪರೋಟ ಮಾಡುವ ತವಾದಿಂದ ತಲೆಗೆ ಗುದ್ದಿ ಗಾಯಗೊಳಿಸಿರುತ್ತಾನೆ.ಈ ಸಮಯ ಅಲ್ಲಿಯೇ ಇದ್ದ ಪಿರ್ಯಾದುದಾರರ ಪತ್ನಿ,ತಾಯಿ ಹಾಗೂ ತಂದೆಯವರು ರಕ್ಷಣೆಗೆ ಬಂದಿದ್ದು ತಾಯಿಯನ್ನು ಸಹ ಆರೋಪಿತನ ನಸೀಬ್‌ ದೂಡಿ ಹಾಕಿ ಅವರಿಗೂ ಕತ್ತಿಯಿಂದ ಹಲ್ಲೆಗೆ ಯತ್ನಿಸಿರುತ್ತಾನೆ ಅವರಿಗೆ ಬಲಕೈ ಅಂಗೈಗೆ ರಕ್ತಗಾಯವಾಗಿರುತ್ತದೆ. ನಂತರ ಅವ್ಯಾಚ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿ ಮನೆಯ ಹೊರಗೆ ಹೋಗಿ ಆತನು ಬಂದಿದ್ದ ಕಾರಿನಿಂದ ಪಿರ್ಯಾದುದಾರರ ಕಾರಿನ ಹಿಂದುಗಡೆಗೆ ಗುದ್ದಿ ಜಖಂಗೊಳಿಸಿರುತ್ತಾನೆ. ಈ ವಿಚಾರ ತಿಳಿದು ಚಿಕ್ಕಪ್ಪನ ಮಗ ಅಬ್ದುಲ್‌ ಶರೀಫ್ ಮತ್ತು ನನ್ನ ಗೆಳೆಯ ಶಾಹುಲ್‌ ಹಮೀದ್ ರವರು ಪುತ್ತುರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 50/2022 ಕಲಂ: 504,324,323,341,506,427 R/W 34 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-05-2022 10:07 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080