ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂ.ಬಿ. ಇಬ್ರಾಹಿಂ, 43 ವರ್ಷ, ತಂದೆ: ಬಿ. ಮಹಮ್ಮದ್‌, ವಾಸ: 1-119 ಬಿ (4), ಬಾಳಿಯೂರು ಕಾಂಪ್ಲೆಕ್ಸ್‌, ಉಪ್ಪಿನಂಗಡಿ, ಫ್ಲಾಟ್‌ ನಂ:  824, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 27-06-2022 ರಂದು 22-45 ಗಂಟೆಗೆ ಆರೋಪಿ ಬುಲೆಟ್‌ ಮೋಟಾರ್‌ ಸೈಕಲ್‌ ಸವಾರ ಮಹಮ್ಮದ್‌ ಅನ್ಸಾರ್‌ ಎಂಬವರು KA-21-V-5999 ನೇ ನೋಂದಣಿ ನಂಬ್ರದ ಬುಲೆಟ್‌ ಮೋಟಾರ್‌ ಸೈಕಲನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಉಪ್ಪಿನಂಗಡಿ ಅಟೋರಿಕ್ಷಾ ನಿಲ್ದಾಣದ ಬಳಿ ರಸ್ತೆಯ  ಎಡಬದಿಯಲ್ಲಿ ನಿಂತುಕೊಂಡಿದ್ದ ಸುಮಾರು 60 ವರ್ಷ ಪ್ರಾಯದ ಅಪರಿಚಿತ ಪಾದಾಚಾರಿಗೆ ಬುಲೆಟ್‌ ಮೋಟಾರ್‌ ಸೈಕಲ್‌ ಅಪಘಾತವಾಗಿ, ಅವರು ರಸ್ತೆಗೆ ಬಿದ್ದು, ತಲೆಗೆ, ಬಲಕೈಗೆ, ಹಣೆಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  119/2022  ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉದಯ,  ಪ್ರಾಯ: 32 ವರ್ಷ, ತಂದೆ: ಕೃಷ್ಣ ಮಣಿಯಾಣಿ, ವಾಸ: ಹಳೆಗೇಟು ಬೆಟ್ಟಂಪಾಡಿ ಮನೆ, ಸುಳ್ಯ ಕಸಬಾ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಉದಯರವರ ಅಜ್ಜಿ ದುಗ್ಗಮ್ಮ (68) ರವರು ದಿನಾಂಕ: 27.06.2022 ರಂದು ಸಮಯ ಸುಮಾರು 17:45 ಗಂಟೆಯಿಂದ 18:00 ಗಂಟೆಯ ನಡುವೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಓಡಬಾಯಿ ಎಂಬಲ್ಲಿ ಮಾಣಿ - ಮೈಸೂರು ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಸ್ಕೂಟರೊಂದು ಅಪಘಾತ ಉಂಟು ಮಾಡಿರುವ ವಿಚಾರ ತಿಳಿದು ಪಿರ್ಯಾದಿದಾರರು ಅಲ್ಲಿಗೆ ಹೋದಾಗ ದುಗ್ಗಮ್ಮರವರನ್ನು ಸಾರ್ವಜನಿಕರು ಉಪಚರಿಸುತ್ತಿದ್ದು ನೋಡಲಾಗಿ ದುಗ್ಗಮ್ಮರವರ ತಲೆಯ ಮಧ್ಯಭಾಗಕ್ಕೆ, ಎಡಕೋಲುಕಾಲಿಗೆ, ಬಲಕೈಗೆ ರಕ್ತಗಾಯ, ಮುಖಕ್ಕೆ ತರಚಿದ ಗಾಯವಾಗಿದ್ದಲ್ಲದೇ ಎದೆಗೆ ಗುದ್ದಿದ ನೋವಾಗಿದ್ದು, ಪಿರ್ಯಾದಿದಾರರು ಸಾರ್ವಜನಿಕರಲ್ಲಿ ವಿಚಾರಿಸಲಾಗಿ ದುಗ್ಗಮ್ಮರವರು ರಸ್ತೆಯ ಇನ್ನೊಂದು  ಬದಿಗೆ ಹೋಗಲು ಢಾಮಾರು ರಸ್ತೆಯನ್ನು ದಾಟುತ್ತಾ ರಸ್ತೆಯ ಇನ್ನೊಂದು ಅಂಚಿಗೆ ತಲುಪುತ್ತಿದ್ದಂತೆ ಸುಳ್ಯ ಕಡೆಯಿಂದ KA21EA6768 ನೇ ಸ್ಕೂಟರ್‌ ಸವಾರ ಪ್ರಸನ್ನ ಕುಮಾರ್‌ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆತನ ಬಲಬದಿಗೆ ಸವಾರಿ ಮಾಡಿ ದುಗ್ಗಮ್ಮರವರಿಗೆ ಅಪಘಾತ ಉಂಟು ಮಾಡಿರುವುದಾಗಿ ತಿಳಿಸಿದ್ದು, ಅಪಘಾತ ಉಂಟುಮಡಿದ ಸ್ಕೂಟರ್‌ ಸ್ಥಳದಲ್ಲೇ ಇದ್ದು, ಅದರ ಭಾಗಗಳು ಜಖಂಗೊಂಡಿದ್ದು, ಸವಾರ ಪ್ರಸನ್ನ ಕುಮಾರ್‌ರವರಿಗೂ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರು ಆಟೋರಿಕ್ಷಾವೊಂದರಲ್ಲಿ ದುಗ್ಗಮ್ಮರವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು, ಅದರಂತೆ ಮಂಗಳೂರಿಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 77/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಸವರಾಜ್ ದುತ್ತರಿಗಿ ಪ್ರಾಯ 46 ವರ್ಷ ತಂದೆ:ಚಂದ್ರಶೇಖರ ದುತ್ತರಿಗಿ ವಾಸ:ಕಮ್ಮತಗಿ ಗ್ರಾಮ ಹುನಗುಂದ ತಾಲೂಕು ಬಾಗಲಕೋಟೆ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಬಸವರಾಜ್ ದುತ್ತರಿಗಿ (46) ರವರು ಕ ರಾ ರ ಸಾ ಸಂ ಯ ಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿದ್ದು ದಿನಾಂಕ 27.06.2022 ರಂದು  ಬಸ್ ನಂಬ್ರ KA18F0918 ನೇ ದರಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿ  ಬೆಂಗಳೂರು ನಿಂದ ಸುಬ್ರಹ್ಮಣ್ಯ ಕ್ಕೆ ಬಂದು ಅಲ್ಲಿಂದ  ದಿನಾಂಕ  28.06.2022 ರಂದು ಬೆಳಿಗ್ಗೆ 08.00 ಗಂಟೆಗೆ  ಹೊರಟು ಬೆಂಗಳೂರುಗೆ ಹೋಗುವರೇ ಗುಂಡ್ಯ ಕ್ಕೆ ಬಂದು ನಂತರ ರಾ ಹೆ 75 ರ ಮಂಗಳೂರು- ಬೆಂಗಳೂರು ರಸ್ತೆಯ ಎಡ ಬದಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 09.15 ಗಂಟೆಗೆ  ಕಡಬ ತಾಲೂಕು ಶಿರಾಡಿ ಗ್ರಾಮದ ಬರ್ಚನಹಳ್ಳ ಎಂಬಲ್ಲಿಗೆ ತಲುಪಿದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಗೂಡ್ಸ್ ಲಾರಿ ನಂಬ್ರ ನಂಬ್ರ KA 52 A 4142 ನೇ ದರ ಚಾಲಕ ನಿರ್ಲಕ್ಷತನ ಮತ್ತು ಅಜಾಗರೂಕತೆಯಿಂದ ರಸ್ತೆಯ ತಪ್ಪು ಬದಿಯಾದ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದ್ದು ಬಸ್ ನಲ್ಲಿದ್ದ ಪ್ರಯಾಣಿಕ ಶ್ರೀಕಾಂತ ರವರಿಗೆ ಕಣ್ಣಿಗೆ ಮತ್ತು ಕಾಲಿಗೆ ಗಾಯ ಉಂಟಾಗಿದ್ದು  .ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 75/2022 ಕಲಂ:279.337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನ ಕುಮಾರ್ ರೈ  ಪ್ರಾಯ- 44 ವರ್ಷ ತಂದೆ- ಸುಂದರ ರೈ ವಾಸ-ಪನಡ್ಕ ಮನೆ,  ಕೈಕಾರ ಅಂಚೆ, ಒಳಮೊಗ್ರು   ಗ್ರಾಮ,  ಪುತ್ತೂರು ಎಂಬವರ ದೂರಿನಂತೆ ದಿನಾಂಕ:- 27.06.2022ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಫಿರ್ಯಾದುದಾರರು ಪನಡ್ಕದಲ್ಲಿರುವ ತನ್ನ ಮನೆಯ ಹಟ್ಟಿಯಲ್ಲಿರುವ  ಸಮಯ ಫಿರ್ಯಾದುದಾರರ ಹೆಂಡತಿ ನಿಮಿತಾ ರೈಯು ಜೋರಾಗಿ ಬೊಬ್ಬೆ ಹಾಕುತ್ತಿರುವುದನ್ನು ಕೇಳಿ ಫಿರ್ಯಾದುದಾರರು ತನ್ನ ಮನೆಯೊಳಗೆ ಹೋದಾಗ  ಫಿರ್ಯಾದುದಾರರ ಮನೆಯೊಳಗೆ  ಸುಮಂಗಲಾ ಶೆಣೈಯವರು ಫಿರ್ಯಾಧಿದಾರರ ಪತ್ನಿ ನಿಮಿತಾ ರೈ ಎಂಬವಳನ್ನು  ನೆಲಕ್ಕೆ ದೂಡಿ ಹಾಕಿ ಮುಖಕ್ಕೆ ಕೈಯಿಂದ ಗುದ್ದುತ್ತಿರುವುದನ್ನು ನೋಡಿ ಫಿರ್ಯಾಧುದಾರರು ತಡೆಯಲು ಹೋದಾಗ ಸುಮಂಗಲಾ ಶೆಣೈಯು   ಬಿಸಿಯಾಗಿದ್ದ ವಿದ್ಯುತ್ ಇಸ್ತ್ರಿ ಪೆಟ್ಟಿಗೆಯನ್ನು  ಫಿರ್ಯಾದುದಾರರ ಎದೆಯ ಭಾಗದಲ್ಲಿ ಇಟ್ಟಿದ್ದು,  ಇದರಿಂದಾಗಿ ಫಿರ್ಯಾದುದಾರರಿಗೆ ಸುಟ್ಟ ಗಾಯವಾಗಿರುತ್ತದೆ.  ಬಳಿಕ ನಿಮಿತಾ ರೈಯು ಸುಮಂಗಲಾ ಶೆಣೈಯ ಕೈಯಿಂದ ಇಸ್ತ್ರಿ ಪೆಟ್ಟಿಗೆಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದಾಗ ಬಿಸಿಯಾಗಿದ್ದ  ಇಸ್ತ್ರಿ ಪೆಟ್ಟಿಗೆಯು ಸುಮಂಗಲಾ ಶೆಣೈಯವರಿಗೆ ಕೂಡಾ ತಾಗಿರುತ್ತದೆ.  ಬಳಿಕ ಸುಮಂಗಲಾ ಶೆಣೈಯು ಫಿರ್ಯಾದುದಾರರನ್ನು ಉದ್ದೇಶಿಸಿ, ಅವ್ಯಾಚ ಶಬ್ಧಗಳಿಂದ ಬೈದು  ಈ ಸಲ ನಿಮ್ಮನ್ನು  ಬಿಟ್ಟಿದ್ದೇನೆ. ಮುಂದಕ್ಕೆ ನನ್ನ ತಂಟೆಗೆ ಬಂದಲ್ಲಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾಳೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ : 74/2022  ಕಲo: 448,323,324, 504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪುರಂದರ ಶೆಟ್ಟಿ , ಪ್ರಾಯ: 53 ವರ್ಷ, ತಂದೆ: ದಿ. ನೋಣಯ್ಯಾ ಶೆಟ್ಟಿ ,ವಾಸ: ಮಾತೃಛಾಯಾ ಮನೆ ನೈನಾಡು ಅಂಚೆ ಪಿಲಾತಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 27.06.2022 ರಂದು ಸಮಯ ಸುಮಾರು 12.00 ಗಂಟೆಗೆ ತಮ್ಮ ತೋಟದಲ್ಲಿ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿ ತನ್ನ ಮಗನೋಂದಿಗೆ ಕೆಲಸಮಾಡುತ್ತಿರುವ ಸಮಯ ಪಿರ್ಯಾದಿದಾರರ ನೆರೆಕೆರೆಯವರಾದ ಸದಾನಂದ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಹಾಗೂ ಅವರ ಜೊತೆ ಬಂದಿದ್ದ ಸವಣಾಲು ನಿವಾಸಿಗಳಾದ  ರವಿ, ಚಿದಾನಂದ, ಮೋಹನ್, ಚಿದಾನಂದ ಎಂಬುವರುಗಳು  ಸೇರಿಕೊಂಡು ಪಿರ್ಯಾದಿದಾರ ಬಾಬ್ತು ಜಮೀನಿಗೆ ಹಾಕಿದ ಬೇಲಿಯನ್ನು ಕಿತ್ತು ಹಾಕಲು ಪ್ರಾರಂಭಿಸಿದಾಗ ಆಕ್ಷೇಪಿಸಿದಕ್ಕೆ ಚಿದಾನಂದ ಎಂಬುವರು ಪಿರ್ಯಾದಿಯನ್ನು ದೂಡಿ ಹಾಕಿದ್ದು ಅಲ್ಲದೆ ರವಿ ಎಂಬಾತನು ಮರದ ಕೋಲಿನಿಂದ ಎಡಕಾಲಿನ ಮೋಣಕಾಲಿನ ಗಂಟಿಗೆ ಹೋಡೆದ್ದು ನೋವುಂಟು ಮಾಡಿರುತ್ತಾರೆ ಈ ಸಮಯ ಜೋರಾಗಿ ಬೊಬ್ಬೆ ಹಾಕಿದಾಗ ಪಿರ್ಯಾದಿದಾರರ ಪತ್ನಿ ಪ್ರೇಮಲತಾ ಎಂಬುವರು ಘಟನಾ ಸ್ಥಳಕ್ಕೆ ಬಂದಿದ್ದು ಆರೋಪಿಗಳೆಲ್ಲರು ಪಿರ್ಯಾದಿ ಹಾಗೂ ಪಿರ್ಯಾದಿದಾರರ ಪತ್ನಿಯನ್ನು ಉದ್ದೇಶೀಸಿ ಅವಾಚ್ಯ ಶಬ್ದಗಳಿಂದ ಬೈದು , ಜಮೀನಿನ ವಿಚಾರಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 42/2022 ಕಲಂ: ಕಲಂ: 143,147, 323,324 ,504,506 ಜೊತೆಗೆ 149 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ: 28.06.2022 ರಂದು ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 78/2022 ಕಲಂ: 376, 506  ಐಪಿಸಿ & 4, 6 POCSO Act. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-06-2022 11:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080