ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜು (49) ವರ್ಷ.ತಂದೆ: ದಿ|| ಜೋಗಿ ವಾಸ: ಮದ್ವ ದರ್ಖಾಸು ಮನೆ, ಕಾವಳಪಡೂರು ಗ್ರಾಮ, ಕಾರಿಂಜ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ 28-07-2022 ರಂದು ಅಗತ್ಯ ಕೆಲಸದ ನಿಮಿತ್ತ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿಗೆ ತಲುಪಿ ಮನೆಗೆ ಹೋಗುವರೇ ಮಂಗಳೂರು-ಕಡೂರು ಸಾರ್ವಜನಿಕ ಡಾಮಾರು ರಸ್ತೆ ದಾಟುತ್ತಿದ್ದ ಸಮಯ ಸುಮಾರು 13:30 ಗಂಟೆಗೆ ಬಿ.ಸಿರೋಡ್ ಕಡೆಯಿಂದ KA-70-J-0605 ನೇ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಮೋಟಾರ್ ಸೈಕಲ್ ಸವಾರರು ಕೂಡಾ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದರು. ಪರಿಣಾಮ ಪಿರ್ಯಾದಿದಾರರ ಎಡಕೋಲು ಕಾಲಿಗೆ ರಕ್ತಗಾಯ, ಬಲಭಾಗ ಸೊಂಟಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 82/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಗನ್ನಾಥ ರೈ (48) ತಂದೆ:ದಿ|| ನಾರಾಯಣ ರೈ ವಾಸ:ನೆಕ್ಕಿತಡ್ಕ್ ಮನೆ 102ನೇ ನೆಕ್ಕಿಲಾಡಿ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 28-07-2022 ರಂದು ಬೆಳಿಗ್ಗೆ ಮನೆಯಿಂದ ಬಾಡಿಗೆ ನೆಲೆಯಲ್ಲಿ ಗುಂಡ್ಯಕ್ಕೆ ಹೋಗಿದ್ದು, ಬೆಳಿಗ್ಗೆ ಸುಮಾರು 08.00 ಗಂಟೆಯ ಸಮಯಕ್ಕೆ ಮೋಟಾರು ಸೈಕಲ್ ನಂ: ಕೆ.ಎ-21-ಇಎ-0351 ನೇದರಲ್ಲಿ ಕರ್ತವ್ಯದ ನಿಮಿತ್ತ ಸಕಲೇಶಪುರ ಕಡೆಗೆ ಹೋಗುತ್ತಿದ್ದಂತೆ  ಕಡಬ ತಾಲೂಕು, ಶಿರಾಡಿ ಗ್ರಾಮದ ಗುಂಡ್ಯ ಪೇಟೆಗೆ ತಲುಪುತ್ತಿದ್ದಂತೆ ಕಾರು ನಂಬ್ರ: ಕೆ.ಎ-02 ಎಂ.ಎಂ-3322 ನೇ ಕಾರನ್ನು ಅದರ ಚಾಲಕನು ರಸ್ತೆಯಲ್ಲಿ ನಿಲ್ಲಿಸಿ ನಿರ್ಲಕ್ಷತನ ಹಾಗೂ ಅಜಾಗರುಕತೆಯಿಂದ ಹಿಂದುಗಡೆಯಿಂದ ಬರುವ ಯಾವುದೇ ವಾಹನವನ್ನು ಲೆಕ್ಕಿಸದೇ ಏಕಾಏಕಿಯಾಗಿ ಯಾವುದೇ ಮುನ್ಸೂಚನೆ ನೀಡದೇ  ಕಾರಿನ ಡೋರನ್ನು  ತರೆದ ಪರಿಣಾಮ ಮೋಟಾರು ವಾಹನ ಸವಾರನು ಕಾರಿನ ಡೋರಿಗೆ  ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿರುತ್ತಾರೆ.ನಾನು ಕೂಡಲೇ ಹೋಗಿ ನೋಡಲಾಗಿ ಕಾಲಿಗೆ,ಬಲ ಕೈಗೆ ಹಾಗೂ ಮುಖಕ್ಕೆ ರಕ್ತಗಾಯವಾಗಿರುತ್ತದೆ. ಗಾಯಾಳನ್ನು  ಉಪಚರಿಸಿ ಬಳಿಕ ಚಿಕಿತ್ಸೆಯ ಬಗ್ಗೆ 108 ಆಂಬ್ಯುಲೆನ್ಸ್ ನಲ್ಲಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೇಲ್ದರ್ಜೆಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಕೂಡಲೇ ಖಾಸಗಿ ವಾಹನದಲ್ಲಿ ಪುತ್ತೂರು ಹಿತ ಆಸ್ಪತ್ರೆಗೆ ಕರದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 82/2022 ಕಲಂ: 279,337  ಭಾದಂಸಂ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅನ್ನಮ್ಮ ಪ್ರಾನ್ಸಿಸ್ (57)ಗಂಡ- ಪ್ರಾನ್ಸಿಸ್ ವಿಳಾಸ- ಮಿಯಲಾಜೆ ಮನೆ, ಬಜಿರೆ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 28.07.2022 ರಂದು ಮದ್ಯಾಹ್ನ ಸುಮಾರು 1.15 ಗಂಟೆಗೆ ಪಿರ್ಯಾದಿದಾರರು  ಅವರಿಗೆ  ಸೇರಿದ ರಬ್ಬರ್ ತೋಟದಲ್ಲಿದ್ದ ಪೊದರುಗಳನ್ನು ಕಡಿಯುತ್ತಿದ್ದ ಸಮಯ ನೆರೆಮನೆಯ  ಜಲಜ ಮತ್ತು ಅವಳ ಸೊಸೆ ಶೋಭಾರವರು ಬಂದು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತುಕೊಂಡು ಅವ್ಯಾಚವಾಗಿ ಬೈದು, ನಮಗೆ  ಸೇರಿದ ಜಮೀನಿನ ಪೊದರನ್ನು ನೀನು ಯಾಕೆ ಕಡಿಯುತ್ತಿದ್ದಿ ಎಂದು ಹೇಳಿ ಇಬ್ಬರು ಅಲ್ಲೇ ಇದ್ದ ತುಂಡು ಕಲ್ಲನ್ನು ತೆಗೆದು ಬಿಸಾಡಿದ್ದು ಅದು ಪಿರ್ಯಾದಿದಾರರ  ತಲೆಗೆ ಬಿದ್ದು  ರಕ್ತಗಾಯವಾಗಿದ್ದು ಪಿರ್ಯಾದಿದಾರರಿಗೆ ಅವರ ಮಗ ರಾಜುರವರು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಕೊಡಿಸಿ ದೂರು ನೀಡಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ:46-2022 ಕಲಂ:504, ,324  ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯರಾಮ ರೈ ಬಿ ಎಸ್‌ (48)ತಂದೆ: ಸುಬ್ಬಣ್ಣ ರೈ ಬಿ ಕೆ , ಮೂಡಬೈಲ್‌ ಮನೆ, ಪುಣಚ ಗ್ರಾಮ, ಬಂಟ್ವಾಳ ತಾಲೂಕು  ಚಾಲಕ ಬಿಲ್ಲೆ ಸಂಖ್ಯೆ 4090, ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಕ.ರಾ.ರ.ಸಾ.ನಿಗಮ ಪುತ್ತೂರು ಘಟಕದಲ್ಲಿ ಬಸ್‌ ಚಾಲಕರಾಗಿದ್ದು, ದಿನಾಂಕ 27.07.2022 ರಂದು ಬೆಳಿಗ್ಗೆ  ಸುಮಾರು 11:೦೦ ಗಂಟೆಗೆ ಮಾರ್ಗ ಅನುಸೂಚಿ ಸಂಖ್ಯೆ 64/65 ನೇ ದರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಂಬ್ರ. ಕೆಎ 19 ಎಫ್‌ 3083 ನೇ ಬಸ್‌ ನಲ್ಲಿ ಪಿರ್ಯಾದಿದಾರರು ಚಾಲಕರಾಗಿ ಹಾಗೂ ಹೆಚ್‌.ಬಿ ಪ್ರಸನ್ನ ಎಂಬವರು ನಿರ್ವಾಹಕರಾಗಿ ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೊರಟು ಪುತ್ತೂರು-ಕಾಣಿಯೂರು ಮಾರ್ಗವಾಗಿ ಹೂಗುತ್ತಾ ಸಮಯ ಸುಮಾರು 12:30 ಗಂಟೆಗೆ ನಿಂತಿಕಲ್ಲು ಜಂಕ್ಷನ್‌ ಗೆ ತಲುಪಿದಾಗ ಯಾರೋ ಕಿಡಿಕೇಡಿಗಳು ಸದ್ರಿ ಬಸ್‌ನ ಹಿಂಬದಿಯಿಂದ ಕಲ್ಲು ಹೊಡೆದ ಪರಿಣಾಮ ಬಸ್‌ ನ ಹಿಂಭಾಗದ ಗಾಜು ಹೊಡೆದು ಸಂಸ್ಥೆಗೆ ರೂ.8000/-ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 66/2022 ಕಲಂ 427 ಐಪಿಸಿ  ಮತ್ತು ಕಲಂ:2(ಎ)ಕೆಪಿಡಿಎಲ್‌ ಪಿ ಆಕ್ಟ್‌ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹನುಮಂತ ಪ್ರಾಯ 35 ವರ್ಷ ತಂದೆ: ದಿ. ರಾಮಪ್ಪ ವಾಸ: ಕೊದ್ದಿಲ್ ನೀಮಗಾಪೂರ ತಾಲೂಕು ಕುಕುನೂರು ಕೊಪ್ಪಳ ಎಂಬವರ ದೂರಿನಂತೆ ಫಿರ್ಯಾದಿದಾರರ ಅಣ್ಣನ ಮಗನಾದ ಹನುಮಂತಪ್ಪ ಬಿ ಮೂಡ ಗ್ರಾಮದ ಬಿ ಸಿ ರೋಡಿನಲ್ಲಿ ಸಮೀರ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 27-07-2022 ರಂದು ಸಂಜೆ 6.30 ಗಂಟೆಗೆ ಸಮೀರ ಎಂಬುವನು ಫಿರ್ಯಾದಿದಾರರಿಗೆ ಕರೆ ಮಾಡಿ ಹನುಮಂತನಿಗೆ ಜ್ವರವಿದ್ದು ಆಸ್ವತ್ರೆಗೆ ದಾಖಲಿಸಿದ್ದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಮಂಗಳೂರಿಗೆ ಬರುತ್ತೀರುವ ಸಮಯ ರಾತ್ರಿ 11.00 ಗಂಟೆಗೆ ಸಮೀರನು ಕರೆ ಮಾಡಿ     ಹನುಮಂತ ಕೊಡ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ವತ್ರಯಲ್ಲಿಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾಧಿದಾರರು ಆಸ್ವತ್ರೆಗೆ ಹೋಗಿ ಮೃತದೇಹವನ್ನು ನೋಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 31/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-07-2022 10:06 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080