ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲೀಲಾವತಿ ಪ್ರಾಯ 72 ವರ್ಷ ಗಂಡ: ದಿ| ಪೂವಪ್ಪ ಶೆಟ್ಟಿ ವಾಸ: ಪರಕೆ ಮನೆ, ಕೌಕ್ರಾಡಿ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 28-09-2022 ರಂದು ಅವರ ತಮ್ಮ ಪೂವಪ್ಪ ಶೆಟ್ಟಿಯವರ ಬಾಬ್ತು ಕೆಎ 19 MA 9633 ನೇ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಕಾರನ್ನು ಪೂವಪ್ಪ ಶೆಟ್ಟಿಯವರು ಚಲಾಯಿಸಿಕೊಂಡು ಗುರುವಾಯನಕೆರೆ-ಮೂಡಬಿದ್ರೆ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12.00 ಗಂಟೆಗೆ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಅಚ್ಚಿನ್‌ ತಿರುವು ಬಳಿ ತಲುಪುತ್ತಿದ್ದಂತೆ  ಕಾರನ್ನು ಚಾಲಕ  ಪೂವಪ್ಪ ಶೆಟ್ಟಿಯವರು ದುಡುಕುತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಧರೆಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಆಗಿ ಕಾರಿನಲ್ಲಿದ್ದ ಪಿರ್ಯಾಧಿದಾರರಿಗೆ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 115/2022 ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೇವಪ್ಪಗೌಡ ಪ್ರಾಯ: 45 ವರ್ಷ ತಂದೆ: ದಿ| ಕೊರಗಪ್ಪಗೌಡ  ವಾಸ; ನೀರಳಿಕೆ ಮನೆ , ನೆರಿಯ ಗ್ರಾಮ ಮತ್ತು ಅಂಚೆ  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಉಮಾ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 27.09.2022 ರಂದು ರಾತ್ರಿ 07.30 ಗಂಟೆಗೆ  ಪಿರ್ಯಾದಿದಾರರು ಮತ್ತು ಅರ್ಚಕರು ದೇವಸ್ಥಾನದ ಬಾಗಿಲು ಮುಚ್ಚಿ ಬೀಗ ಹಾಕಿ ಹೋಗಿದ್ದು, ದಿನಾಂಕ 28.09.2022 ರಂದು ಬೆಳಿಗ್ಗೆ 06.00 ಗಂಟೆಗೆ ದೇವಸ್ಥಾನಕ್ಕೆ ಬಂದು ಮುಖ್ಯ ದ್ವಾರದ ಬೀಗ ತೆಗೆದು ಒಳಗಡೆ ಬಂದು ನೋಡಿದಾಗ ದೇವಸ್ಥಾನದ ಗರ್ಭ ಗುಡಿ, ಆಫೀಸ್‌ ಕೊಠಡಿ, ದಾಸ್ತಾನು ಕೊಠಡಿಗಳ ಬಾಗಿಲ ಬೀಗವನ್ನು ಮುರಿದು ಕಳ್ಳತನವಾಗಿರುವುದು ಕಂಡುಬಂದಿದ್ದು, ದೇವಸ್ಥಾನದ ಉತ್ತರ ದಿಕ್ಕಿನ ಬಾಗಿಲಿನ ಚಿಲಕ ಒಳಗಡೆಯಿಂದ ತೆಗೆದಿರುವದು ಕಂಡು ಬಂದಿದ್ದು, ಗರ್ಭ ಗುಡಿಯಲ್ಲಿದ್ದ ಕಾಣಿಕೆ ಹುಂಡಿಯನ್ನು ಮುರಿದು ಅದರಲ್ಲಿದ್ದ ನಗದು ಮತ್ತು ಟೇಬಲ್‌ ನ ಡ್ರಾವರ್‌ ನಲ್ಲಿದ್ದ ನಗದು 5800/- ರೂ ಗಳನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ .ಕ್ರ 68-2022  ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಕಾಣೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೋಹನ ಶೆಟ್ಟಿಗಾರ ಪ್ರಾಯ:28 ವರ್ಷ ತಂದೆ ಶೇಖರ ಶೆಟ್ಟಿಗಾರ ವಾಸ; ಸಂಬೋಳ್ಯ ಮನೆ ಓಡಿಲ್ನಾಳ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಪಿರ್ಯಾದುದಾರರ ತಂದೆ ಶೇಖರ ಶೆಟ್ಟಿಗಾರ (53) ಎಂಬವರು  ದಿನಾಂಕ;21-09-2022 ರಂದು ಬೆಳಿಗ್ಗೆ 09.00 ಗಂಟೆಗೆ  ಬೆಳ್ತಂಗಡಿ ಕಡೆ ಹೋಗುವುದಾಗಿ  ಮನೆಯಲ್ಲಿ ಹೇಳಿ ಹೋದವರು ಸಂಜೆಯದರೂ ಮನೆಗೆ ಬಾರದೇ ಇದ್ದು   ಸಂಬಂಧಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಈ ಮೊದಲು ಕೂಡಾ  ಪಿರ್ಯಾದುದಾರರ ತಂದೆ ಮನೆಯಿಂದ ಹೋದವರು 2-3 ದಿನಗಳ ನಂತರ ಮನೆಗೆ ಬರುತ್ತಿದ್ದು  ಅದೇ ರೀತಿಯಾಗಿ ಮನೆಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದು  ಸದರಿ ದಿನಾಂಕದ ವರೆಗೆ ಕೂಡಾ  ಮನೆಗೆ ಬಾರದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 59/2022 ಕಲಂ; ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಲ್ ಹತ್ ಡಿ.ಕೆ (29) ತಂದೆ:ಅಬ್ಬುಲ್ಲಾ ವಾಸ:ದೆಂತಾರು ಮನೆ ಕರಾಯ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 28.09.2022 ರಂದು ಕೆಎ-13-ಎನ್-919ನೇ ಇನ್ನೋವಾ ಕಾರಿನಲ್ಲಿ ವಳಾಲಿನಿಂದ ಪಿರ್ಯಾದಿ ಇನ್ನೋವಾ ಕಾರಿ ಚಾಲಕರಾಗಿ ರಫೀಕ್ ಎನ್, ಆಶೀಕ್ ಎಂಬವರ ಜೊತೆಯಲ್ಲಿ ಕುಳ್ಳಿರಿಸಿಕೊಂಡು ಕರಾಯ ಕಡೆಗೆ ರಾ ಹೆ 75 ರಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಮದ್ಯಾಹ್ನ ಸುಮಾರು 2.15 ಗಂಟೆಗೆ ಪುತ್ತೂರು ತಾಲೂಕು, ಉಪ್ಪಿನಂಗಡಿ ಗ್ರಾಮದ, ಸುಬ್ರಹ್ಮಣ್ಯ ಕ್ರಾಸ್ ಬಳಿ ತಲುಪಿದಾಗ ರಸ್ತೆಬಳಿಯಲ್ಲಿ ನಿಂತಿದ್ದ ಕೆಎ-01-ಎಂಎನ್-0825ನೇ ಆಲ್ಟೋ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಕಾರನ್ನು ರಸ್ತೆಗೆ ಅಡ್ಡಗಟ್ಟಿ ನಿಲ್ಲಿಸಿದಾಗ ಪಿರ್ಯಾದಿಯು ಕಾರಿನಲ್ಲಿ ಕುಳಿತಲ್ಲಿಗೆ ಪರಿಚಯದ ಉಬೈದ್ ಕುಪ್ಪೆಟ್ಟಿ ಎಂಬಾತನು ಬಂದು ಕುತ್ತಿಗೆಗೆ ಕೈ ಹಾಕಿ ಕಾರಿನಿಂದ ಎಳೆದು ಬ್ಯಾರಿ ಭಾಷೆಯಲ್ಲಿ  ಅವಾಚ್ಯವಾಗಿ ಬೈದು ಕೈಯಿಂದ ಕೆನ್ನೆಗೆ ಹೊಡೆದಾಗ ಕಾರಿನಲ್ಲಿದ್ದ ಸಿದ್ದಿಕ್ ಕರುವೇಲು, ಅನ್ಸಾರ್ ಕೆಮ್ಮಾರ್ ಮತ್ತು ಆಸೀಫ್ ಭಟ್ಕಳ ಎಲ್ಲರೂ ಸೇರಿ ಬಂದು ಪಿರ್ಯಾದಿಯನ್ನು ದೂಡಿ ಹಾಕಿ ಎಲ್ಲರೂ ಕಾಲಿನಿಂದ ಹೊಟ್ಟೆಗೆ ತುಳಿದು, ಕಲ್ಲುಗಳಿಂದ ಪಿರ್ಯಾದಿಯ ಇನ್ನೋವಾ ಕಾರಿನ ಎದುರು ಮತ್ತು ಹಿಂಬದಿ ಗ್ಲಾಸ್ ಹುಡಿ ಮಾಡಿ ಸುಮಾರು ರೂ 20,000/- ನಷ್ಟ ಮಾಡಿದ್ದು, ಬಿಡಿಸಲು ಬಂದ ರಫೀಕ್ ಎನ್ ಮತ್ತು ಆಶೀಕ್ ಎಂಬವರನ್ನು ಮತ್ತು ಪಿರ್ಯಾದಿಯನ್ನು ಉದ್ದೇಶಿಸಿ 4 ಆರೋಪಿಗಳು ಈ ಸಾರಿ ಬದುಕಿದ್ದೀರಾ ಮುಂದಕ್ಕೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಆಲ್ಟೋ ಕಾರಿನಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 102/2022 ಕಲಂ:341,504,323,427,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೋಕ್ಷಿತ್ ಇ. 24 ವರ್ಷ, ಬಿನ್: ಗುಣಪಾಲ, ವಾಸ: ಇಡ್ಯಾಡಿ ಮನೆ ಸವಣೂರು ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 28-09-2022 ರಂದು 11-50 ಗಂಟೆಗೆ ಕಡಬ ತಾಲೂಕು ಸವಣೂರು ಗ್ರಾಮದ ಸವಣೂರು ಎಂಬಲ್ಲಿ ಗ್ರಾಮಪಂಚಾಯತ್ ಬಾಬ್ತು ಕಟ್ಟಡದಲ್ಲಿರುವ ಈ ಪ್ರಕರಣದ ಪಿರ್ಯಾದಿದಾರರ ಬಾಬ್ತು ಪದ್ಮಶ್ರೀ ಬೇಕರಿ ಮತ್ತು ಕೋಲ್ಡ್ ಹೌಸ್ ಅಂಗಡಿಯ ಬಳಿ ಆರೋಪಿಗಳಾದ 1) ಪೂವಣಿ ಗೌಡ, 2) ಪ್ರಸಾದ್, 3) ಬಾಲಕೃಷ್ಣ ಗೌಡ, 4) ಭರತ್ ಎಂಬವರು ಅಟೋ ರಿಕ್ಷಾದಲ್ಲಿ ಬಂದು ಅವರ ಪೈಕಿ ಪ್ರಸಾದ್ ಎಂಬಾತನು ಆತನ ಕೈಯಲ್ಲಿದ್ದ ತಲವಾರಿನಿಂದ ಅಂಗಡಿಯ ಗಾಜಿನ ಶೋಕೇಸ್ ಗೆ ಹೊಡೆದು ಹಾನಿ ಮಾಡಿ ನಿನ್ನನ್ನು ಮತ್ತು ನಿನ್ನ ತಂದೆಯನ್ನು ಈ ದಿನ ಸಂಜೆಯ ಒಳಗೆ ಕಡಿದು ಕೊಲ್ಲುತ್ತೇನೆ ಎಂದು ಬೆದರಿಕೆ ಒಡ್ಡಿದ್ದಲ್ಲದೇ, ಈ ಬಗ್ಗೆ ಪಿರ್ಯಾದಿದಾರರು ಪ್ರಶ್ನಿಸಿದಾಗ ಬಾಲಕೃಷ್ಣನು ನಿನ್ನ ಅಂಗಡಿ ಹುಡಿಮಾಡುವುದಲ್ಲ, ಅಂಗಡಿಗೆ ಬೆಂಕಿ ಹಾಕುತ್ತೇವೆ ಎಂದು ಬೆದರಿಸಿದ್ದು, ಆ ವೇಳೆ ಉಳಿದವರು ಅವ್ಯಾಚ ಶಬ್ದಗಳಿಂದ ಬೈದು, ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿ ಅವರು ಬಂದ ಅಟೋ ರಿಕ್ಷಾದಲ್ಲಿ ಹೋಗಿರುತ್ತಾರೆ. ಈ ಘಟನೆಯಿಂದ ಶೋಕೇಸ್ ಹುಡಿಯಾಗಿ ಸುಮಾರು 1,50,000/- ರೂಪಾಯಿ ನಷ್ಟ ಉಂಟಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ.  ಅ.ಕ್ರ 78/2022 ಕಲಂ 427, 504, 506 ಜೊತೆಗೆ 34 ಐಪಿಸಿ ಮತ್ತು ಕಲಂ 2(A) KPDLP Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-09-2022 11:10 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080