ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಪ್ರಕಾಶ್‌‌ ಕೆ,ಎಸ್‌ ಪ್ರಾಯ 27 ವರ್ಷ ತಂದೆ:ದಿ|| ನಾಗೇಶ್‌‌ ಮಲೆಕುಡಿಯ ವಾಸ:ಕತ್ತಿಮಜಲು ಮನೆ,  ಐನಕಿದು ಗ್ರಾಮ, ಕಡಬ ತಾಲೂಕು, ದ,ಕ ಜಿಲ್ಲೆ  ಎಂಬವರ ದೂರಿನಂತೆ ದಿನಾಂಕ 26-10-2022  ರಂದು ಪಿರ್ಯಾದಿದಾರರು ಸುಬ್ರಹ್ಮಣ್ಯ ಪೇಟೆಯಿಂದ  ರಮೇಶ್‌ ಕೆ. ಹೆಚ್‌  ಎಂಬವರ  ಅಟೋ ರಿಕ್ಷಾ  ಕೆಎ 21 ಎ 5691  ನೇದರಲ್ಲಿ  ತನ್ನ ಮನೆಗೆ  ಸುಬ್ರಹ್ಮಣ್ಯ – ಹರಿಹರ ಪಲ್ಲತ್ತಡ್ಕ  ಡಾಮಾರು ರಸ್ತೆಯಲ್ಲಿ  ಹೋಗುತ್ತಿರುವಾಗ ಸಂಜೆ  4-00 ಗಂಟೆಗೆ  ಕೆದಿಲ- ಐನೆಕಿದು ರಸ್ತೆಯಲ್ಲಿ  ಅಟೋ ಚಾಲಕನು  ಅಟೋ ರಿಕ್ಷಾವನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು  ಹೋಗುತ್ತಿರುವಾಗ ರಸ್ತೆಯ ಬಲಗಡೆಯ ಕಾಡಿನಿಂದ  ಎಕಾಎಕಿ ದೊಡ್ಡ ಕಡವೆಯೊಂದು ಅಡ್ಡ ಬಂದು ಅಟೋ ರಕ್ಷಾಕ್ಕೆ ಡಿಕ್ಕಿ  ಹೊಡೆದ  ಪರಿಣಾಮ ರಿಕ್ಷಾ ಉರುಳಿ ರಸ್ತೆಗೆ ಬಿದ್ದಿದ್ದು  ಅದರ ಅಡಿಯಲ್ಲಿ ಪಿರ್ಯಾದಿದಾರರು ಬಿದ್ದಿದರಿಂದ  ಅವರ ಬಲ ಬದಿಯ ಸೊಂಟ ಬಲಗಾಲು, ಎಡ ಗೈಯ ಭುಜ,  ಜಖಂ ಗೊಂಡಿದ್ದು ಬಳಿಕ ಗಾಯಾಳುವನ್ನು   ರಿಕ್ಷಾ ಚಾಲಕ ಹಾಗೂ ಇತರರು  ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ  ಕರೆದುಕೊಂಡು ಹೋಗಿ  ದಾಖಲಿಸಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ,ಕ್ರ 99/2022 ಕಲಂ:279,338 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರತ್ನಾಕರ ಕೋಟ್ಯಾನ್(56)  ತಂದೆ: ದಿ.ನೊಣಯ್ಯ ಪೂಜಾರಿ, ವಾಸ:, ಕೋಡಿಬೆಟ್ಟು ಮನೆ, ಬಡಗಬೆಳ್ಳೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಮೂರು ವರ್ಷಗಳಿಂದ ಬಡಗಬೆಳ್ಳೂರು ದೀಪಕ್ ಬಾರ್ ನಲ್ಲಿ ಮೆನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದೀಪಕ್ ಬಾರ್ ನ ಕ್ಯಾಬೀನ್ ಹೊರಗಡೆ ಸುಮಾರು 1 ವಾರದ ಹಿಂದೆ ಟೇಬಲ್ ಇಟ್ಟಿದ್ದು, ಇದನ್ನು ಕಂಡ ಬಾರ್ ನ ಮಾಲಕರು ಟೇಬಲನ್ನು ತೆಗೆಯಲು ಹೇಳಿದ್ದು, ಆರೋಪಿಗಳಾದ ತೇಜಾಕ್ಷ, ವಿಜೇತ ಮತ್ತು ಹರೀಶ್ ರವರು ಹೆಚ್ಚಾಗಿ ಇದೇ ಟೇಬಲ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದು, ಸದ್ರಿ ಟೇಬಲನ್ನು ಪಿರ್ಯಾದುದಾರರೇ ಹೇಳಿ ತೆಗಿಸಿದ್ದೆಂದು ಮೂರೂ ಜನರು ಪಿರ್ಯಾದುದಾರರ ಮೇಲೆ ಕೋಪದಿಂದಿದ್ದು, ಟೇಬಲನ್ನು ಅಲ್ಲೇ ಇಡಬೇಕೆಂದು ಪಿರ್ಯಾದುದಾರರಲ್ಲಿ ತಿಳಿಸಿದ್ದು ಆಗ ಪಿರ್ಯಾದುದಾರರು ಬಾರ್ ನ ಮಾಲಕರಲ್ಲಿ ತಿಳಿಸಿದಾಗ ಹೊರಗಡೆ ಟೇಬಲ್ ಇಡುವುದು ಬೇಡ ಎಂದು ತಿಳಿಸಿದ ಪ್ರಕಾರ ಹೊರಗಡೆ ಇಟ್ಟಿರುವುದಿಲ್ಲ.  ದಿನಾಂಕ: 27.10.2022 ರಂದು ರಾತ್ರಿ 8.30 ಗಂಟೆಗೆ ಆರೋಪಿಗಳು ಮದ್ಯ ಸೇವನೆ ಮಾಡಲು ಬಾರ್ ಗೆ ಬಂದಿದ್ದು, ಪಿರ್ಯಾದುದಾರರು ಬಾರ್ ನ ಪಕ್ಕದ ಮನೆಯಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ರಾತ್ರಿ 9 ಗಂಟೆಗೆ ಹೋಗಿ, 9.30 ಗಂಟೆಗೆ ವಾಪಾಸು ಬಾರ್ ಗೆ ಬಂದಿದ್ದು, ಆಗ ಆರೋಪಿಗಳಾದ  ವಿಜೇತ್, ತೇಜಾಕ್ಷ ಮತ್ತು ಹರೀಶರವರು  ಬಾರ್ ನ ಹೊರಗೆ ಜಗಲಿಯಲ್ಲಿ ನಿಂತುಕೊಂಡಿದ್ದು ಪಿರ್ಯಾದುದಾರರನ್ನು  ನೋಡಿದ ಕೂಡಲೇ ವಿಜೇತನು ಪಿರ್ಯಾದುದಾರರನ್ನು ಉದ್ದೇಶಿಸಿ ʼಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ, ಕೆನ್ನೆಗೆ ಹೊಡೆದಿದ್ದು, ಆಗ ತೇಜಾಕ್ಷ ಪಕ್ಕದ ಅಂಗಡಿಯ ಹೊರಗಡೆ ಇಟ್ಟಿದ್ದ  ಖಾಲಿ ಸೋಡಾ ಬಾಟಲಿಯನ್ನು ತೆಗೆದುಕೊಂಡು ಬಂದು ಪಿರ್ಯಾದುದಾರರ ತಲೆಗೆ ಹೊಡೆದನು.  ಹರೀಶ ಮತ್ತು ವಿಜೇತರು ಪಿರ್ಯಾದುದಾರರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು, ಅವರು ಮೂವರೂ ಪಿರ್ಯಾದುದಾರನ್ನು ಉದ್ದೇಶಿಸಿ ʼ ನೀನು ಜೀವ ಸಹಿತ ಉಳಿಯಬಾರದು, ನಿನ್ನನ್ನು ಇವತ್ತೇ ಮುಗಿಸಿಬಿಡುತ್ತೇವೆ ಎಂದು ಬೈಯುತ್ತಾ ಕೆನ್ನೆಗೆ ಹೊಡೆಯುತ್ತಾ ದೂಡಿಕೊಂಡು ಹೋಗಿ ನೆಲಕ್ಕೆ ಬೀಳಿಸಿ, ಕಾಲಿನಿಂದ ತುಳಿದಾಗ ಪಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದಿದ್ದು , ಆಗ ಬಾರ್ ನಲ್ಲಿದ್ದ ಕೆಲಸದವರು ಬಂದಾಗ  ಪಿರ್ಯಾದುದಾರರನ್ನು ಬಿಟ್ಟು ಹೋಗಿರುತ್ತಾರೆ. ನಂತರ ಪಿರ್ಯಾದುದಾರರನ್ನು ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪಿರ್ಯಾದುದಾರರಿಗೆ ನೋವು ಜಾಸ್ತಿಯಾದ ಕಾರಣ ಮರುದಿನ ಬೆಳಿಗ್ಗೆ ಬಂಟ್ವಾಳ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಆರೋಪಿಗಳಾದ ವಿಜೇತ, ತೇಜಾಕ್ಷ, ಹರೀಶರವರು ಈ ಹಿಂದೆ ಕೂಡಾ ಬಾರ್ ನಲ್ಲಿ ಜಗಳ ಮಾಡಿದ್ದು  ಈ ಬಗ್ಗೆ  ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  80/2022 .ಕಲಂ  504, 323, 324, 307 ಜೊತೆಗೆ 34 ಭಾ.ದ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 4

 

  • ವೇಣೂರು ಪೊಲೀಸ್ ಠಾಣೆ : ದಿನಾಂಕ 28.10.2022 ರಂದು 15:50 ಗಂಟೆಗೆ ಬೆಳ್ತಂಗಡಿ  ತಾಲೂಕು  ಬಜಿರೆ    ಗ್ರಾಮದ  ಬಜಿರೆ  ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿರುವ  ಬಗ್ಗೆ ಖಚಿತ  ಮಾಹಿತಿಯ  ಮೇರೆಗೆ ಶ್ರೀಮತಿ ಸೌಮ್ಯ ಜೆ ಪೊಲೀಸ್ ಉಪನಿರೀಕ್ಷಕರು ವೇಣೂರು ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಆರೋಪಿಗಳಾದ  1)ಆನಂದ   ಪೂಜಾರಿ  2) ಶೇಖರ ರವರನ್ನು  ವಶಕ್ಕೆ   ಪಡೆದು  ಆರೋಪಿತರು  ಮದ್ಯ  ಸೇವನೆಗೆ  ಉಪಯೋಗಿಸಿದ  MYSORE LANCER WHISKY  ಎಂದು ಲೇಬಲ್ ಇರುವ ಮಧ್ಯ ತುಂಬಿದ  ಟೆಟ್ರೋ ಪ್ಯಾಕೇಟ್ಗಳನ್ನು ಸ್ವಾಧೀನ ಸ್ವಾಧೀನಪಡಿಸಿಕೊಂಡಿದ್ದು. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 67-2022 ಕಲಂ: 15(ಎ), 32 (3) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಆಂಜನೇಯ ರೆಡ್ಡಿ ಜಿ.ವಿ ಪೊಲೀಸ್ ಉಪ ನಿರೀಕ್ಷಕರು ಕಡಬ ಪೊಲೀಸ್ ಠಾಣಾ ರವರು ದಿನಾಂಕ:28.10.2022 ರಂದು ಬೆಳಗ್ಗೆ ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಜಂಕ್ಷನ್ನಲ್ಲಿ ವ್ಯಕ್ತಿಯೋರ್ವನು ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಸಮಯ 10.30 ಗಂಟೆಗೆ ಸ್ಥಳಕ್ಕೆ ಹೋದಾಗ ಮರ್ಧಾಳ ಮಸೀದಿಯ ಎದುರು ಆಟೋರಿಕ್ಷಾ ನಿಲ್ದಾಣದ ಬಳಿ ಆರೋಪಿತನು ರಸ್ತೆ ಬದಿಯಲ್ಲಿ ತೂರಾಡುತಿದ್ದು ಮೇಲ್ನೋಟಕ್ಕೆ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ನಂತರ ಸದ್ರಿ ಆರೋಪಿತನನ್ನು ವಿಚಾರಿಸಿದಾಗ ಸದ್ರಿ ಆರೋಪಿತನು ತಾನು ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ನಲ್ಲಿ ತುಂಬಿಸಿ ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಂತೆ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ಆತನನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಕಳುಹಿಸಿಕೊಟ್ಟಿದ್ದು ಆಸ್ಪತ್ರೆ ವೈದ್ಯಾಧಿಕಾರಿಯವರು ಮಹಮ್ಮದ್ ಶಾಫಿ  ಎಂಬಾತನನ್ನು ವೈದ್ಯಕೀಯ ಪರೀಕ್ಷೇಗೆ ಒಳಪಡಿಸಿ ಸದ್ರಿ ಆಸಾಮಿಯು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುತ್ತಾರೆ ಆರೋಪಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿತನ ವಿರುದ್ದ ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ 90/2022 ಕಲಂ: 27 (b) NDPS ACT-1985 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ: 28-10-2022 ರಂದು ಬೆಳಿಗ್ಗೆ 08.30 ಗಂಟೆಗೆ ಕಡಬ ತಾಲೂಕು ಕೊಣಾಜೆ ಗ್ರಾಮ ಉದನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಬಾಟ್ಲಿಗಳನ್ನು ಸಂಗ್ರಹಿಸಿಟ್ಟು ಸಾರ್ವಜನಿಕರಿಗೆ ಹಣಕ್ಕಾಗಿ ಕುಡಿಯಲು ನೀಡುತ್ತಿದ್ದಾರೆ. ಎಂಬುದಾಗಿ ನೀಡಿದ ಮಾಹಿತಿಯಂತೆ ರಾಜೇಶ್.ಕೆ.ವಿ. ಪೊಲೀಸ್ ಉಪನಿರೀಕ್ಷಕರು  ಸಿಬ್ಭಂದಿಗಳ ಜೊತೆಯಲ್ಲಿ 09.30 ಗಂಟೆಗೆ ಉದನೆ ಎಂಬಲ್ಲಿಗೆ ತಲುಪಿ ಓರ್ವ ವ್ಯಕ್ತಿ ಪಿರ್ಯಾದುದಾರರನ್ನು ಕಂಡು ಗಲಿಬಿಲಿಗೊಂಡು ಓಡಿ ಪರಾರಿಯಾಗಲು ಪ್ರಯತ್ನಿಸಿದ ಸಂಜೀವ ಪೂಜಾರಿ ಎಂಬವರನ್ನು ಹಿಡಿದುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಗಿರಾಕಿಗಳಿಗೆ ಮದ್ಯ ಮಾರಾಟ ಮಾಡಿ ಸೇವನೆ ಅವಕಾಶ ಮಾಡಿಕೊಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 115/2022 ಕಲಂ:15 (ಎ),32 (3)  ಕೆ.ಇ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ರಾಮಕೃಷ್ಣ, ಪೊಲೀಸ್ ಉಪ-ನಿರೀಕ್ಷಕರು(ತನಿಖೆ),  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆರವರು ದಿನಾಂಕ:-28.10.2022ರಂದು ಇಲಾಖಾ ಜೀಪಿನಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ 17.30 ಗಂಟೆಗೆ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ಸಾರ್ವಜನಿಕ ಪ್ರಯಾಣಿಕರ  ತಂಗುದಾಣದಲ್ಲಿ  ಕೆಲವು ಜನರು  ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿರುವುದಾಗಿ  ಖಚಿತ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ 17.45 ಗಂಟೆಗೆ ತಲುಪಿದಾಗ ರೆಂಜ ಸಾರ್ವಜನಿಕ ಪ್ರಯಾಣಿಕರ ತಂಗುದಾಣದ ಒಳಗೆ ಕೆಲವು ವ್ಯಕ್ತಿಗಳು  ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಫಿರ್ಯಾದುದಾರರು ಜೀಪನ್ನು ನಿಲ್ಲಿಸಿದಾಗ ಸದ್ರಿ ವ್ಯಕ್ತಿಗಳು ಓಡಲು ಪ್ರಯತ್ನಿಸಿದ್ದು, ಸದ್ರಿಯವರನ್ನು ಸುತ್ತುವರಿದು ಹಿಡಿದುಕೊಂಡಿದ್ದು, ಸದ್ರಿ ಆರೋಪಿಗಳ ಹೆಸರು ವಿಳಾಸ ಕೇಳಲಾಗಿ (1)ಸುನಿಲ್, ಪ್ರಾಯ 22 ವರ್ಷ,  ತಂದೆ: ವಿಶ್ವನಾಥ ನಾಯ್ಕ  ವಾಸ: ರಂಗಯ್ಯಕಟ್ಟೆ, ಉಪ್ಪಳಿಗೆ   ಮನೆ,  ಬೆಟ್ಟಂಪಾಡಿ ಗ್ರಾಮ ಪುತ್ತೂರು ತಾಲೂಕು, (2) ಭಾಸ್ಕರ, ಪ್ರಾಯ 30 ವರ್ಷ,  ತಂದೆ: ಕುಡುಪ,   ವಾಸ: ಮರಿಕೆ ಮನೆ ಆರ್ಯಾಪು ಗ್ರಾಮ ಪುತ್ತೂರು ತಾಲೂಕು, (3) ಪ್ರಶಾಂತ ಸಿ.ಹೆಚ್. ಪ್ರಾಯ 26 ವರ್ಷ,  ತಂದೆ: ನಾರಾಯಣ ಆಚಾರ್ಯ,   ವಾಸ: ಚೆಲ್ಲಿಯಡ್ಕ ಮನೆ ಬೆಟ್ಟಂಪಾಡಿ ಗ್ರಾಮ ಪುತ್ತೂರು ತಾಲೂಕು, (4) ಧನಂಜಯ, ಪ್ರಾಯ 19 ವರ್ಷ,  ತಂದೆ: ರಾಮ ಮುಗೇರ,  ವಾಸ: ಇರ್ದೆ   ಮನೆ ಇರ್ದೆ  ಗ್ರಾಮ ಪುತ್ತೂರು ತಾಲೂಕು (5) ರಂಜಿತ್, ಪ್ರಾಯ 24 ವರ್ಷ,  ತಂದೆ: ಭಟ್ಯ   ವಾಸ: ಕುದ್ಕಲ್ಲು ಮನೆ, ಉಪ್ಪಳಿಗೆ    ಒಳಮೊಗ್ರು  ಗ್ರಾಮ ಪುತ್ತೂರು ತಾಲೂಕು,  ಎಂಬುದಾಗಿ ತಿಳಿಸಿರುತ್ತಾರೆ ಹಾಗೂ ಮದ್ಯ ಸ್ವಾಧೀನಪಡಿಸಿಕೊಂಡಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ : 98/2022  ಕಲo:15(A), 32(3) KE Act ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-10-2022 12:11 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080