ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಶಾಕೀರ್ ಪ್ರಾಯ:22 ವರ್ಷ ತಂದೆ: ಸುಲೈಮಾನ್ 1-20(A), ಬೊಳಿಮಾರು ಮನೆ, ಕಾವಳಪಡೂರು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 24-11-2022 ರಂದು ಪಿರ್ಯಾದಿದಾರರು KA-19-ED-5319 ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಅವರ ತಂದೆ ಸವಾರನಾಗಿ ಮೂಡಬಿದ್ರೆ ಕಡೆಯಿಂದ ಮನೆ ಕಡೆಗೆ ಬರುತ್ತಾ ಸಮಯ ಸುಮಾರು  ರಾತ್ರಿ 19:00 ಗಂಟೆಗೆ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಸಂಗಬೆಟ್ಟು ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲ್ ನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 150/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುನೀಲ್‌ ಪ್ರಾಯ 25 ವರ್ಷ ತಂದೆ: ಕೃಷ್ಣ ದೇವಾಡಿಗ ವಾಸ: ಭ್ರಾಮರಿ ನಿಲಯ, ಹೆರ್ಮುಂದೆ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 28-11-2022 ರಂದು ಕೆಎ 19 AB 0545 ನೇ ಟೂರಿಸ್ಟ್‌ ಕಾರಿನಲ್ಲಿ ಬಾಡಿಗೆಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಧರ್ಮಸ್ಥಳ ಕಡೆಯಿಂದ ಮುಂಡಾಜೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 8.00 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಪುಂಡಾಜೆ ಭಾಗ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಮುಂಡಾಜೆ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 41 MD 5603 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಬಲಬದಿ ಮಿರರ್‌, ಬಲಬದಿಯ ಎರಡು ಬಾಗಿಲು ಜಖಂ ಆಗಿರುತ್ತದೆ..ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 150/2022 ಕಲಂ; 279,  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಧನುಷ್‌ ಎ, ಪ್ರಾಯ 18 ವರ್ಷ, ತಂದೆ: ಆನಂದ ಸಪಲ್ಯ, ವಾಸ: ಶೇವಿರೆ ಮನೆ, ನೆಹರುನಗರ ಅಂಚೆ, ಕಬಕ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 27-11-2022 ರಂದು 21:30 ಗಂಟೆಗೆ ಆರೋಪಿ  ಕಾರು ಚಾಲಕ ಸುಮಿತ್‌ ಜೈನ್‌ ಎಂಬವರು  KA-20-P-2271 ನೇ ನೋಂದಣಿ ನಂಬ್ರದ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಎಂಬಲ್ಲಿ ಕಲ್ಲೇಗ ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನವೋಂದನ್ನು ಓವರ್‌ ಟೇಕ್‌ ಮಾಡಿ ಹೆದ್ದಾರಿಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಧನುಷ್‌ ಎ ರವರು ಸಹಸವಾರರಾಗಿ ಗಗನ್‌ ದೀಪ್‌ ರವರು ಸವಾರರಾಗಿ ನೆಹರೂನಗರ ಕಡೆಯಿಂದ ಕನ್ಯಾನ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-3167ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸವಾರ ಗಗನ್‌ ದೀಪ ರವರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲ ಕೈಗೆ, ಬಲ ಕಾಲಿನ ಮೊಣಗಂಟಿಗೆ ಗುದ್ದಿದ ರಕ್ತಗಾಯ, ತಲೆಯ ಎಡಭಾಗದ ಹಣೆಯ ಭಾಗಕ್ಕೆ ತರಚಿದ ರಕ್ತಗಾಯ ಮತ್ತು ಸವಾರ ಗಗನ್‌ ದೀಪ್‌ ರವರಿಗೆ ಬಲ ಕೈಗೆ ಗುದ್ದಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 181/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕು|| ನಿಜ್ಬಾ, 17 ವರ್ಷ, ತಂದೆ: ದಿ|| ಸಿರಾಜ್, ವಾಸ: ಶಾಂತಿನಗರ ಮನೆ, ಸವಣೂರು ಗ್ರಾಮ, ಕಡಬ ತಾಲೂಕು. ಎಂಬವರ ದೂರಿನಂತೆ ದಿನಾಂಕ 27-11-2022 ರಂದು ರಾತ್ರಿ ಕಡಬ ತಾಲೂಕು ಸವಣೂರು ಗ್ರಾಮದ ಪಣೆಮಜಲು ಮಸೀದಿಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಸೀದಿಯಿಂದ ಮಾಂತೂರು ಶಾಂತಿನಗರ ಎಂಬಲ್ಲಿನ ಮನೆಗೆ ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಎಡ ಬದಿ ಮಣ್ಣು ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕು|| ನಿಜ್ಬಾ ಎಂಬವರಿಗೆ ರಾತ್ರಿ 9-20 ಗಂಟೆಗೆ ಪಣೆಮಜಲು ಎಂಬಲ್ಲಿ ಹಿಂದಿನಿಂದ ಅಂದರೆ ಪುತ್ತೂರು ಕಡೆಯಿಂದ ಸವಣೂರು ಕಡೆಗೆ ನೀಲಿ ಬಣ್ಣದ ಕಾರೊಂದನ್ನು ಅದರ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನ ದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ನಿಜ್ಬಾಳು ಮುಗ್ಗರಿಸಿ ಮಣ್ಣು ಕಚ್ಚಾ ರಸ್ತೆಯಲ್ಲಿ ಬಿದ್ದು ಹಣೆಯ ಎಡಬದಿ ಗುದ್ದಿದ ಗಾಯ, ಮೂಗಿನ ಎಡ ಬದಿ ರಕ್ತಗಾಯ, ಕುತ್ತಿಗೆಯ ಎಡ ಬದಿ ತರಚಿದ ಗಾಯ, ಬಲಕಾಲಿನ ಪಾದದಲ್ಲಿ ಗುದ್ದಿದ ಗಾಯ, ಬಲ ಕಾಲಿನ ಹೆಬ್ಬೆರಳಿನಲ್ಲಿ ರಕ್ತಗಾಯ ಉಂಟಾಗಿದ್ದು, ಗಾಯಳು ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಅಪಘಾತದ ಬಳಿಕ ಕಾರು ಚಾಲಕರು ಅಪಘಾತದ ವಿಚಾರ ತಿಳಿದೂ, ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಕ್ರಮ ಕೈಗೊಳ್ಳದೇ, ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ನೀಡದೇ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ CR NO: 95/2022 ಕಲಂ 279,337 ಐಪಿಸಿ ಕಲಂ 134(ಎ) &(ಬಿ) ಐಎಂವಿ ಆಕ್ಟ್.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ದರೋಡೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ: ಶ್ರೀಮತಿ ಕಮಲಅಡ್ಕಾರ್ (64)ಗಂಡ.ಲೇಟ್ ಶಿವರಾಯ ಅಡ್ಕಾರ್ ವಾಸ.4-205 ವೈಲ್ಡ್ ಕೆಫೆ ಬಳಿ ಬೈತಡ್ಕ ಮನೆ ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಪೋನ್‌  ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 28.11.2022 ರಂದು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ತಮ್ಮ ಮನೆಯಲ್ಲಿರುವ ಸಮಯ ಸುಮಾರು 09:45 ಗಂಟೆಗೆ ಮೋಟಾರ್ ಸೈಕಲ್ ನಲ್ಲಿ ಒಬ್ಬ ವ್ಯಕ್ತಿ  ಪಿರ್ಯಾದುದಾರರ  ಮನೆಯ ಅಂಗಳಕ್ಕೆ ಬಂದು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಇಲ್ಲಿ ಕೆ ಟಿ ರಾಜ ಎಂಬವರ ಮನೆ ಎಲ್ಲಿ ಎಂದು ಪಿರ್ಯಾದುದಾರರನ್ನು ವಿಚಾರಿಸಿದನು.ಅದಕ್ಕೆ ಪಿರ್ಯಾದುದಾರರ ನನಗೆ ಗೊತ್ತಿಲ್ಲ ಎಂದಾಗ  ನಾನು ಸ್ವಲ್ಪ ಇಲ್ಲೆ ಕುಳಿತು ನನ್ನನ್ನು ಇಲ್ಲಿಗೆ ಬರಲು ಹೇಳಿರುವ ವ್ಯಕ್ತಿ ಬರುವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ನಂತರ ಕುಡಿಯಲು ನೀರು ಕೊಡಿ ಎಂದು ಪಿರ್ಯಾದುದಾರರನ್ನು ಕೇಳಿದಾಗ   ಪಿರ್ಯಾದುದಾರರು  ಮನೆಯ ಒಳಗಿನಿಂದ ನೀರು ತೆಗೆದುಕೊಂಡು ಬರಲು ಒಳಗೆ ಹೋಗುವಾಗ ಅವರ ಹಿಂದೆ ಮನೆಯ ಒಳಗೆ ಆ ವ್ಯಕ್ತಿಯು ಹೋಗಿ  ಪಿರ್ಯಾದುದಾರರ ಕುತ್ತಿಗೆಯನ್ನು ಬಿಗಿಯಾಗಿ ಹಿಂದಿನಿಂದ ಎರಡು ಕೈಗಳಿಂದ ಹಿಡಿದು ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಹೇಳಿ ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೀಳಲು ಪ್ರಯತ್ನಿಸಿ .ಆ ಸಮಯ ಪಿರ್ಯಾದುದಾರರು  ಬೊಬ್ಬೆ ಹಾಕುತ ತನ್ನ  ಚಿನ್ನದ ಸರವನ್ನು ಎರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಅರ್ಧ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯು  ಕಿತ್ತುಕೊಂಡು ಪಿರ್ಯಾದುದಾರರನ್ನು  ನೆಲಕ್ಕೆ ದೂಡಿ ಪಿರ್ಯಾದುದಾರರ  ಬೊಬ್ಬೆ ಹಾಕುತ್ತಿದ್ದರಿಂದ ಆತನು  ಕಿತ್ತುಕೊಂಡ ಚಿನ್ನ ಸರ ಸಮೇತ ನಿಲ್ಲಿಸಿದ್ದ ಮೋಟಾರ್ ಸೈಕಲ್ ಬಳಿ ಹೋಗಿ ಮೋಟಾರ್ ಸೈಕಲ್ ಸ್ಟಾರ್ಟ್ ಮಾಡಿಕೊಂಡು ಆತನು ಜಾಲ್ಸೂರು ಕಡೆಗೆ ಪರಾರಿಯಾಗಿರುತ್ತಾನೆ.ಆತನಿಗೆ ಸುಮಾರು 26-30 ವರ್ಷ ವಯಸ್ಸಾಗಿದ್ದು ಎಣ್ಣೆ ಕಪ್ಪು ಮೈ ಬಣ್ಣದ ಸಾಧಾರಣ ಮೈಕ್ಕಟಿನ  ಸುಮಾರು 5.4 ಅಡಿ ಎತ್ತರದ ವ್ಯಕ್ತಿಯಾಗಿರುತ್ತಾನೆ.ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಕೆಂಪು ಬಣ್ಣದ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾನೆ.ಆತನ ಮೋಟಾರ್ ಸೈಕಲ್ ನಂಬರ್ ನ್ನು ನೋಡಲು ಸಾದ್ಯವಾಗಿರುವುದಿಲ್ಲ.ಮೋಟಾರ್ ಸೈಕಲ್ ಕಪ್ಪು ಬಣ್ಣದಾಗಿರುತ್ತದೆ..ಚಿನ್ನದ ಸರವು ಒಟ್ಟು 26 ಗ್ರಾಮ್ ಇದ್ದು ಅದರಲ್ಲಿ 13 ಗ್ರಾಮ್ ನಷ್ಟು ಚಿನ್ನದ ಸರವನ್ನು ಕಳ್ಳನು ಕಿತ್ತುಕೊಂಡು ಹೋಗಿರುವುದಾಗಿರುತ್ತಾನೆ. ಕಳ್ಳನು ಪಿರ್ಯಾದುದಾರರಿಂದ  ಕಿತ್ತುಕೊಂಡು ಹೋಗಿರುವ ಚಿನ್ನದ ಅಂದಾಜು ಮೌಲ್ಯ 45 ಸಾವಿರ ರೂಪಾಯಿ ಆಗಬಹುದು. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ  ಅ,ಕ್ರ  ನಂ: 141/2022  ಕಲಂ: 454,392,506  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹೇಮಾವತಿ  ಪ್ರಾಯ: 56 ವರ್ಷ ಗಂಡ:  ಸುಧಾಕರ್‌  ವಾಸ: ಹೇಮಾದ್ರಿ ನಿಲಯ ಮನೆ, ಅಸೈಗೋಳಿ  ಕೋಣಾಜೆ  ಗ್ರಾಮ, ಉಳ್ಳಾಲ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮೃತ ಎ ಸುಧಾಕರ್‌ ಪ್ರಾಯ: 69 ವರ್ಷ ಎಂಬವರು ಹಿಂದೆ ಕೆನರಾ ಕಾಲೇಜಿನ  ಗುಮಾಸ್ತ ಕೆಲಸ ಮಾಡಿಕೊಂಡಿದ್ದು ಬಂಟ್ವಾಳದ ನಾವೂರಿನಲ್ಲಿರುವ ತನ್ನ ಬಾಬ್ತು ಅಡಿಕೆ ತೋಟಕ್ಕೆ ಆಗಾಗ ಹೋಗಿಬರುತ್ತಿದ್ದವರು ದಿನಾಂಕ: 22/11/2022  ರಂದು ಬಂಟ್ವಾಳಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ಮನಗೆ ಬಾರದೇ ಇದ್ದು ಈ ಹಿಂದೆ ಕೂಡಾ ಬಂಟ್ವಾಳಕ್ಕೆ 4-5 ದಿವಸ ಬಿಟ್ಟು ಮನೆಗೆ ಬರುತ್ತಿದ್ದರು. ದಿನಾಂಕ: 27-11-2022 ರಂದು ಪಿರ್ಯಾದಿದಾರರ ಮಗನಿಗೆ ಕೊಣಾಜೆ ಮಾಜಿ ಅಧ್ಯಕ್ಷರಾದ ಶೌಕತ್‌ ಅಲಿಯವರು ದೂರವಾಣಿ ಕರೆ ಮಾಡಿ ನಿಮ್ಮ ತಂದೆಯವರು ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂದು ಕೊಣಾಜೆ ಪೊಲೀಸ್‌ ಠಾಣೆಯಿಂದ ಮಾಹಿತಿ ನಿಡಿರುತ್ತಾರೆ ಎಂಬದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಹೋದಾಗ ಪಿರ್ಯಾದಿದಾರರ ಗಂಡ ಎ ಸುಧಾಕರ್‌  ತೀವ್ರ ಅಸ್ವಸ್ಥರಾದಂತೆ ಕಂಡು ಬಂದಿದ್ದು ವಿಚಾರಿಸಲಾಗಿ ಗಂಡನವರು ಬಂಟ್ವಾಳಕ್ಕೆ ಹೋದವರು ಅಲ್ಲಿಂದ ಧರ್ಮಸ್ತಳಕ್ಕೆ ದೇವರ ದರ್ಶನಕ್ಕೆ ಹೋಗಿದ್ದು ಅಸೌಖ್ಯದಿಂದ ಕುಸಿದು ಬಿದ್ದವರನ್ನು  108 ಅಂಬ್ಯುಲೆನ್ಸ್‌  ನಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದಾಗಿರುತ್ತದೆ. ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:28-11-2022 ರಂದು ರಾತ್ರಿ 12:03 ಗಂಟೆಗೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ  ಪೊಲೀಸ್‌ ಠಾಣೆ 69/2022 ಕಲಂ: 174 ಸಿ ಆರ್‌ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-11-2022 11:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080