ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶ್ವಿನಿ. ಪಿ, ಪ್ರಾಯ 38 ವರ್ಷ, ಗಂಡ. ಡಾ. ಪ್ರಶಾಂತ್‌ ಬಿ ಎನ್‌ ವಾಸ: ಶ್ರೀದಾಮ ನಿಲಯ, ಕಟ್ಟತ್ತಾರು ರಸ್ತೆ, ತೆಂಕಿಲ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 29-04-2022 ರಂದು 16-30  ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಮಹಮ್ಮದ್‌ ಅನಾಸ್‌ ಎಂಬವರು KA-19-EM-9607ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಳುವಾರು ಕಡೆಯಿಂದ ಸಂಪ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ತೆಂಕಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರದ ಅಶ್ವಿನಿ ಪಿ ರವರು ಚಾಲಕರಾಗಿ ಪುತ್ತೂರು ಪೇಟೆ ಕಡೆಯಿಂದ ತೆಂಕಿಲ ಕಡೆಗೆ ಚಲಾಯಿಸಿಕೊಂಡು ಹೋಗಿ ಕಾರಿನ ಇಂಡಿಕೇಟರ್‌ ಹಾಕಿ ಒಳ ರಸ್ತೆಗೆ ಚಲಾಯಿಸಿದ ka-70-M-1671ನೇ ನೋಂದಣಿ ನಂಬ್ರದ ಕಾರಿನ ಹಿಂದಿನ ಡೋರ್‌ ಬಳಿ ಅಪಘಾತವಾಗಿ, ಆರೋಪಿ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಅಲ್ಲಿ ಸೇರಿದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎರಡೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  83/2022  ಕಲಂ: 279,  337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಹಮ್ಮದ್ ಫಯಾಜ್ ಕರ್ಮಲ (33) ತಂದೆ: ಯೂಸುಫ್ ವಾಸ: ಪುಣ್ಯ ಕುಮಾರ ರಸ್ತೆ ನೆಹರೂ ನಗರ ಅಂಚೆ ಕಬಕ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರಾದ ಅಹಮ್ಮದ್ ಫಯಾಜ್ ಕರ್ಮಲ ಎಂಬವರು ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ರಂಜಾನ್ ಹಬ್ಬದ ಪ್ರಯುಕ್ತ ಊರಿಗೆ ಬಂದಿರುವುದಾಗಿದೆ. ದಿನಾಂಕ: 29.04.2022 ರಂದು ಸಂಜೆ 4.30 ಗಂಟೆಗೆ ಫಿರ್ಯಾದುದಾರರು ಅವರ ತಮ್ಮ ಹಿಲಾಲ್ ರವರೊಂದಿಗೆ ಪೇಟೆಗೆ ಬಂದು ನಂತರ ವಾಪಾಸು ಮನೆಗೆ ಹೋಗಿರುವುದಾಗಿದೆ. ಸದ್ರಿ ಸಮಯ ಫಿರ್ಯಾದಿದಾರರ ಮನೆ ಅಂಗಳಕ್ಕೆ ಕೆಎ 19 ಎಂಎ 5606 ನೇದರಲ್ಲಿ ಸಂಪ್ಯ ನಿವಾಸಿ ಮುಸ್ತಾಫ ಹಾಗೂ ಸಮದ್ ನೆಕ್ಕರೆ ಎಂಬವರು ಫಿರ್ಯಾದಿದಾರರ ಬಳಿ ಬಂದು “ನನ್ನ ಪರಿಚಯ ಇದೆಯಾ ನನ್ನ ಹೆಸರು ಸಮದ್ ಎಂದು ನೀನು ನನಗೆ ದುಡ್ಡು ನೀಡಬೇಕು ಇಲ್ಲವಾದಲ್ಲಿ ನಿನ್ನನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು, ಅವಾಚ್ಯ ಶಬ್ದಗಳಿಂದ ಬೈದು ನಂತರ ಕಾರಿನಿಂದ ಕಬ್ಬಿಣದ ರಾಡ್ ತೆಗೆದು ಹೊಡೆಯಲು ಬಂದಿದ್ದು, ಫಿರ್ಯಾದಿದಾರರು ತಡೆದಾಗ ಬಲಕೈಗೆ ಸ್ವಲ್ಪ ತಾಗಿರುತ್ತದೆ. ಸಮದ್ ನೆಕ್ಕರೆ ಮತ್ತು ಮುಸ್ತಾಫರವರು ಕೈಯಿಂದ ಫಿರ್ಯಾದಿದಾರರ ಎಡ ಕೈಗೆ, ಬೆನ್ನಿಗೆ ಹೊಡೆದಿದ್ದು, ನಂತರ ಫಿರ್ಯಾದಿದಾರರಿಗೆ ಮತ್ತು ಸಮದ್ ಇಬ್ಬರಿಗೆ ಜಗಳವಾಗಿ ಫಿರ್ಯಾದಿದಾರರ ಬಲ ಕೈಯನ್ನು ತಿರುಚಿದಾಗ ಫಿರ್ಯಾದಿದಾರರು ಬೊಬ್ಬೆ ಹೊಡೆದಿದ್ದು, ಬೊಬ್ಬೆಯನ್ನು ಕೇಳಿ ಫಿರ್ಯಾದಿದಾರರ ಮನೆಯಲ್ಲಿದ್ದವರು  ಬರುವುದನ್ನು  ನೋಡಿ ಆರೋಪಿಗಳಿಬ್ಬರು ಅಲ್ಲಿಂದ ಹೋಗಿರುತ್ತಾರೆ. ಮುಸ್ತಾಫ ಮತ್ತು ಸಮದ್ ಎಂಬವರು ನಡೆಸಿದ ಹಲ್ಲೆಯಿಂದ ಫಿರ್ಯಾದಿದಾರರ ಬಲಕೈಗೆ ನೋವಾಗಿದ್ದು, ಹಿಲಾಲ್ ಮತ್ತು ಅಬ್ದುಲ್ ಖಾದರ್ ಎಂಬವರು ಫಿರ್ಯಾದಿದಾರರ ಬಾಬ್ತು ಕಾರಿನಲ್ಲಿ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ:     26/2022 ಕಲಂ: 447,504,323,324,506 ಜೊ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಸುಳ್ಯ ಪೊಲೀಸ್ ಠಾಣೆ : ದಿನಾಂಕ: 29.04.2022 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 46/2022 ಕಲಂ: 406, 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶ್ವೇತಾ  ಎಂ ಗಣೇಶ್ ,    .ಪ್ರಾಯ: 37 ವರ್ಷ, ಗಂಡ  :ದಾಮೋದರ ಗೌಡ, ವಾಸ :ನಂಬ್ರ 739, 30 ನೇ ಕ್ರಾಸ್, 29 ನೇ ಮೈನ್, ಪಿ. ಪಿಲೇ ಔಟ್, ಉತ್ತರ ಹಳ್ಳಿ, ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 20/04/2022 ರಂದು ಗಂಡ ಮತ್ತು ಮಕ್ಕಳೊಂದಿಗೆ ಬೆಂಗಳೂರಿನಿಂದ ಗಂಡನ ಮನೆಯಾದ ಕಡಬ ತಾಲೂಕು ಕಾಣಿಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿ ಕುಟುಂಬದ ಕಾರ್ಯಕ್ರಮಕ್ಕೆ ಬಂದಿದ್ದು, ನಿನ್ನೆ ದಿನಾಂಕ 28.04.2022 ರಂದು ಬೆಳಿಗ್ಗೆ ಕುಟುಂಬದ ತರವಾಡು ಮನೆಗೆ ತಮ್ಮ  ಬಾಬ್ತು ಕಾರ್ ನಂಬ್ರ KA  03 NJ 2102 ನೇದರಲ್ಲಿ ಗಂಡ ದಾಮೋದರ ಹಾಗೂ ಅತ್ತೆ ಗಿರಿಜಾ ಅವರೊಂದಿಗೆ ತೆರಳಿ ರುತ್ತಾರೆ. ತರವಾಡು ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಹೊರಟು ಗಂಡ ದಾಮೋದರವರು ಕಾರು ಚಲಾಯಿಸುತ್ತಿದ್ದು,  ಸಮಯ ಸುಮಾರು 06:00 ಗಂಟೆಗೆ ಮನೆಯಾದ ಕಟ್ಟತ್ತಾರು ಎಂಬಲ್ಲಿಗೆ ತಲುಪಿ ಕಾರನ್ನು ಗಂಡ ಪಾರ್ಕಿಂಗ್ ಮಾಡುತ್ತಿದ್ದ  ವೇಳೆ ಯಾವುದು ನಾಯಿಯೊಂದು ಒಮ್ಮೆಲೆ  ಕಾರಿನ ಎದುರು ಅಡ್ಡ ಬಂದಿದ್ದು ಗಂಡನು ಕಾರನ್ನು ನಿರ್ಲಕ್ಷತನದಿಂದ  ಚಲಾಯಿಸಿದ  ಪರಿಣಾಮ ಕಾರು ನಿಯಂತ್ರಣ ತಪ್ಪಿ ಮನೆಯಂಗಳದ ಎದುರಿನ ಇಳಿಜಾರು ಪ್ರದೇಶಕ್ಕೆ ಮುಗಿಚಿ ಬಿದ್ದಿರುತ್ತದೆ. ಕೂಡಲೇ ಮನೆಯ ಆಸುಪಾಸಿನ ಮನೆಯವರು ಬಂದು ಕಾರಿನಲ್ಲಿದ್ದ ಪಿರ್ಯಾದಿದಾರರನ್ನು,  ಗಂಡ ಮತ್ತು ಅತ್ತೆ ಅವರನ್ನು ಕಾರಿನಿಂದ  ಹೊರತೆಗೆದು ಆರೈಕೆ ಮಾಡಿ ನೋಡಲಾಗಿ ಪಿರ್ಯಾದಿ ದಾರರಿಗೆ ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿದ್ದು ಅತ್ತೆ ಗಿರಿಜಾ ಅವರಿಗೆ ಬೆನ್ನಿಗೆ ಗುದ್ದಿದ ಗಾಯವಾಗಿದ್ದು, ಕಾರು ಚಲಾಯಿಸುತ್ತಿದ್ದ ಗಂಡ ದಾಮೋದರವರಿಗೆ ಸಣ್ಣಪುಟ್ಟ ಗಾಯವಾಗುತ್ತದೆ. ಸದ್ರಿ ಗಾಯದ ಚಿಕಿತ್ಸೆ ಬಗ್ಗೆ ಸ್ಥಳೀಯ ಕಾಣಿಯೂರಿನ ಕ್ಲಿನಿಕ್ಕಿಗೆ ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದೆ ಮೇರೆಗೆ ನಮ್ಮನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿನ ವೈದ್ಯರು ಪರೀಕ್ಷಿಸಿ ಫಿರ್ಯಾದಿದಾರರನ್ನು ಹೊರರೋಗಿಯಾಗಿ ಅತ್ತೆ ಗಿರಿಜಾ ರವರನ್ನು ಒಳರೋಗಿ ಯನ್ನಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅಪರಾಧ ಕ್ರಮಾ0ಕ :34/2022 ಕಲಂ :sec 337,338,  IPCಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಭಾಗಿರತಿ ಕಾಡಬೆಟ್ಟು ಗ್ರಾಮ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರ ಗಂಡ  ತೆಂಗಿನ ಕಾಯಿ ಕೀಳುವ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 28.04.2022 ರಂದು ಸಂಜೆ 07.00 ಗಂಟೆಗೆ ಪಿರ್ಯಾದಿದಾರರ ಮನೆಯ ಅಂಗಳದಲ್ಲಿ ಇರುವ  ತೆಂಗಿನ ಮರದಲ್ಲಿ ಕಾಯಿ ಕೀಳಲು ಹೋಗಿದ್ದು  ತೆಂಗಿನ ಕಾಯಿ ಕೀಳುವ ಸಮಯ  ಆಕಸ್ಮಿಕವಾಗಿ  ಕೈ ಜಾರಿ ಸುಮಾರು 40 ಅಡಿ ಎತ್ತರದಿಂದ  ಬಿದ್ದಿದ್ದನ್ನು  ಪಿರ್ಯಾದಿದಾರರು  ನೋಡಿ ಕೂಡಲೆ  ಬೊಬ್ಬೆ ಹಾಕಿರುತ್ತಾರೆ.  ಆಗ ಪಿರ್ಯಾದಿದಾರರ ಮೈದುನ ಮತ್ತು ನೆರೆಯ ಪ್ರಮೊದ್ ಎಂಬುವವರು ಬಂದು ಪಿರ್ಯಾದಿದಾರರ ಗಂಡನನ್ನು ಉಪಚರಿಸಿದ್ದು ಕೂಡಲೇ ಪ್ರಮೋದ್ ಎಂಬುವವರು ಆಟೋ ರಿಕ್ಷಾವನ್ನು  ಬರಮಾಡಿಕೊಂಡು ಪಿರ್ಯಾದಿದಾರರ ಗಂಡ ಲೋಕೇಶ್ ರವರನ್ನು  ಕರೆದುಕೊಂಡು ಹೋಗಿ ಮಂಗಳೂರಿನ  ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಿರುತ್ತಾರೆ. ಪಿರ್ಯಾದಿದಾರರು ದಿನಾಂಕ 29.04.2022 ರಂದು ಬೆಳಿಗ್ಗೆ  ಆಸ್ಪತ್ರೆಗೆ  ಹೋಗಿದ್ದು ಆಸ್ಪತ್ರೆಯಲ್ಲಿ  ಚಿಕಿತ್ಸೆ ಯಲ್ಲಿ ಇದ್ದ ಗಂಡ ಲೊಕೇಶ್ ರವರಿಗೆ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ 29.04.2022 ರಂದು  ಬೆಳಿಗ್ಗೆ 07.37 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ 24-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-04-2022 11:43 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080