ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸೋಮನಾಥ ಪ್ರಭು (46) ತಂದೆ: ಎಮ್‌ ನರಸಿಂಹ ಪ್ರಭು ವಾಸ: ಪ್ರಭು ಕಾಂಪೌಂಡ್‌ ಲಾಯಿಲ, ಲಾಯಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:28-05-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು KA70 E 6377 ನೇ ದ್ವಿ ಚಕ್ರ ವಾಹನವನ್ನು ಬೆಳ್ತಂಗಡಿ  ಕಡೆಯಿಂದ ಲಾಯಿಲ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಶ್ರಮಿಕ ಕಛೇರಿ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ  ಅಂದರೆ ಬೆಳ್ತಂಗಡಿ  ಕಡೆಯಿಂದ ಲಾಯಿಲ ಕಡೆಗೆ KA 05 KW 4894 ನೇ ಮೋಟಾರ್‌ ಸೈಕಲ್‌ ಅನ್ನು ಅದರ ಸವಾರ ನಿತೀನ್‌ ಎಂಬವರು  ದುಡುಕತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ನಿತೀನ್‌ ಎಂಬವರು  ವಾಹನದೊಂದಿಗೆ ರಸ್ತೆಗೆ ಬಿದ್ದರು. ಪರಿಣಾಮ ಪಿರ್ಯಾದಿದಾರರಿಗೆ ಎಡಕೈ ಮುಂಗೈ ಗೆ, ಎಡಕಾಲಿನ ಪಾದದ ಬೆರಳಿಗೆ , ಸೊಂಟಕ್ಕೆ ಗುದ್ದಿದ ತರಚಿದ ಗಾಯವಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಮತ್ತು ನಿತೀನ್‌ ಎಂಬವರಿಗೆ ಬಲ ಕೋಲು ಕಾಲಿಗೆ, ಬಲ ಕೈಯ ಮದ್ಯದ ಬೆರಳಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಅತ್ತಾವರ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 78/2022 ಕಲಂ: 279,337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ಲಾ (54) ತಂದೆ: ಅಹಮ್ಮದ್‌ ಬ್ಯಾರಿ ವಾಸ: ಕೋರ್ಟ್‌ ರಸ್ತೆ ಸಂಜಯ ನಗರ ಬೆಳ್ತಂಗಡಿ ಕಸಬಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:29-05-2022 ರಂದು KA 21 S 5708 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ತೋನ್ಸಾ ಸೆರಾವೋ ಎಂಬವರು ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 9:30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಹಳೆಕೋಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ KA 51 MH 5126 ನೇ ಕಾರನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನವನ್ನು ರಭಸದಿಂದ ಹಿಂದಿಕ್ಕುವಾಗ ಕಾರಿನ ಮುಂಬಾಗದ ಎಡಬದಿ  ದ್ವಿ ಚಕ್ರ ವಾಹನದ ಹ್ಯಾಂಡಲ್‌ ಗೆ ಢಿಕ್ಕಿ  ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರ ತೋನ್ಸಾ ಸೆರಾವೋ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ, ಬಲಕಣ್ಣಿನ ಬಳಿ ಗುದ್ದಿದ ರಕ್ತಗಾಯವಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 79/2022 ಕಲಂ: 279,337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಟಿ. ಸಂತೋಷ್ ಪೂಜಾರಿ, 34 ವರ್ಷ ತಂದೆ: ವೆಂಕಪ್ಪ ಪೂಜಾರಿ ವಾಸ: ತಲೆಂಬಿಲ ಮನೆ, ಅಮ್ಟಾಡಿ ಗ್ರಾಮ, ಮೊಡಂಕಾಪು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 28-05-2022 ರಂದು ಸಮಯ ಸುಮಾರು 17.00 ಗಂಟೆಗೆ ಪಿರ್ಯಾದಿದಾರರ ತಂದೆಯಾದ ವೆಂಕಪ್ಪ ಪೂಜಾರಿಯವರು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಕೈಕಂಬ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಿ ಸಿ ರೋಡು ಕಡೆಯಿಂದ KA-19ES-8337 ನೇ ಮೋಟಾರ್ ಸೈಕಲನ್ನು ಅದರ ಸವಾರ ಅಬಿಷೇಕ್ ರವರು ಲೋಹಿತ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ವೆಂಕಪ್ಪ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ವೆಂಕಪ್ಪ ಪೂಜಾರಿಯವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯಗೊಂಡವರು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 62/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಟಿ ಪ್ರಾಯ 47 ವರ್ಷ ತಂದೆ: ಟಿ ಎ ಖಾದರ್ ವಾಸ: ಅಮ್ಮೆಮಾರ್ ಮನೆ ಪುದು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಮಗಳಾದ ಮುನೀಝ್ ಬಾನು ಪ್ರಾಯ 21 ವರ್ಷ ಇವಳನ್ನು ಕೆ ಸಿ ರೋಡ ನಿವಾಸಿಯಾದ ಇಬ್ರಾಹಿಂ ತೌಷೀಕ್ ಕೆ ಯೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ದಿನಾಂಕ: 29-05-2022 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾಧಿದಾರರು ಪಡೀಲ್ ನಲ್ಲಿ ಇರುವಾಗ ಅಜೀಜ್ ಕರೆ ಮಾಡಿ ಮುನೀಝ್ ಬಾನು ಬೆಳಿಗ್ಗೆ 8.45 ಸಮಯಕ್ಕೆ ಕೆ ಸಿ ರೋಡಿನ ಗಂಡನ ಮನೆಯಲ್ಲಿ ಬಾವಿಯಿಂದ ನೀರು ಸೇದುವ ಸಮಯ ಕಾಲು ಜಾರಿ ಆಯತಪ್ಪಿ ನೀರಿಗೆ ಬಿದ್ದವಳನ್ನು ನೆರೆಕರೆಯವರು ನೀರಿನಿಂದ ಮೇಲೆತ್ತಿ ಕಲ್ಲಡ್ಕ ಆಸ್ವತ್ರೆಗೆ ಕೊಂಡು ಹೋಗಿರುವುದಾಗಿ ತಿಳಿಸಿದ್ದು. ಕೂಡಲೇ ಪಿರ್ಯಾಧಿದಾರರು ಮನೆಗೆ ಬರುವ ಸಮಯ ಮಗನಾದ ಮಹಮ್ಮದ್ ಮುಖೀರನು ಕರೆ ಮಾಡಿ ತಂಗಿ ಮುನೀಝ್ ಬಾನು ಆಸ್ವತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾನೆ. ಗಂಡನ ಮನೆಯಲ್ಲಿ ಎಂದಿನಂತೆ ಕುಡಿಯುವ ಸಲುವಾಗಿ ಮನೆಯ ವಠಾರದಲ್ಲಿರುವ ಬಾವಿಯಿಂದ ನೀರು ಸೇದುವ ಸಮಯ ಆಯತಪ್ಪಿ ಬಾವಿಗೆ ಬಿದ್ದು ಮುಳುಗಿದವಳನ್ನು ಮೇಲೆತ್ತಿ ಕಲ್ಲಡ್ಕ ದ ಪುಪ್ಪುರಾಜ್ ಆಸ್ವತ್ರೆಗೆ ಕರೆ ತಂದಲ್ಲಿ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 23-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-05-2022 11:00 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080