ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೊಹಮ್ಮದ್ ಇಮ್ತಿಯಾಜ್ (42) ವರ್ಷ.ತಂದೆ: ಹುಸೈನಬ್ಬ ವಾಸ: ಕಂಚಿನಡ್ಕ ಮನೆ, ಸಜಿಪನಡು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 27-07-2022 ರಂದು ಪತ್ತುಮುಡಿ ಎಂಬಲ್ಲಿ ಅಗತ್ಯ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ಹೋಗುವರೇ ಪಿರ್ಯಾದಿದಾರರ ನೊಂದಣಿಯಾಗದ ಬೈಕಿನಲ್ಲಿ ಕಲಂದರ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡಿದ್ದ ಸಮಯ ಸುಮಾರು 17:30 ಗಂಟೆಗೆ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಕುಕ್ಕಾಜೆ ಕಡೆಯಿಂದ KA-19-EH-2225 ನೇ ಸ್ಕೂಟರನ್ನು ಅದರ ಸವಾರ ಮಮ್ತಾಜ್ ಆಲಿ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿನ ಹಿಂಬದಿಯಲ್ಲಿ ಕುಳಿತಿದ್ದ ಕಲಂದರ್ ರವರಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ  ಪರಿಣಾಮ ಸ್ಕೂಟರ್ ಸವಾರನಿಗೆ ಕೈ ಕಾಲುಗಳಲ್ಲಿ ತರಚಿದ ಗಾಯ, ಹಿಂಬದಿ ಕುತ್ತಿಗೆ ಮತ್ತು ಹಿಂಬದಿ ತಲೆಯಲ್ಲಿ ಗುದ್ದಿದ ನೋವಾಗಿದ್ದು ಸಹಸವಾರ ಕಲಂದರ್ ರವರ ಬಲಕಾಲಿಗೆ ತರಚಿದ ಗಾಯಗೊಂಡವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಸ್ಕೂಟರ್ ಸವಾರ ಮಮ್ತಾಜ್ ಆಲಿರವರು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 83/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶರಣಪ್ಪ ಭಂಗಿ (30) ತಂದೆ: ದೇವೆಂದ್ರಪ್ಪ ವಾಸ: ಅಡರಗಟ್ಟಿ ಗ್ರಾಮ, ಶಿರಹಟ್ಟಿ ತಾಲೂಕು,ಗದಗ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದುದಾರರು ಈ ದಿನ ದಿನಾಂಕ 29.07.2022 ರಂದು ಕೆಎ 21 ಎಕ್ಸ್ 6189 ನೇ ಬೈಕ್ ನ್ನು ಪಿರ್ಯಾದುದಾರರು ಸವಾರಿ ಮಾಡುತ್ತಾ ಸಹ ಸವಾರ ಹಮೀದ್ ಎಂಬಾತನನ್ನು ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ಸುಳ್ಯದ ಪೈಚಾರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿರುವರೇ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕಂದಡ್ಕ ಸೇತುವೆ ಬಳಿಯಲ್ಲಿ ತಲುಪುತ್ತಿದಂತೆ ಎದುರಿನಿಂದ ಬಂದ ಅಂದರೆ ಸುಬ್ರಹ್ಮಣ್ಯ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಅಶೋಕ ಲೈಲ್ಯಾಂಡ್ ಪಿಕಪ್ ಕೆಎ 13 ಡಿ 0956 ನೇದರ ಚಾಲಕ ವೆಂಕಟೇಶ್ ಎಂಬಾತನು  ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆತನ ತೀರಾ ಬಲಬದಿಗೆ ಪಿಕಪ್ ನ್ನು ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಸಹ ಸವಾರ  ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಸಹ ಸವಾರನಿಗೆ ಯಾವುದೇ ಗಾಯವಾಗಿರದೇ, ಪಿರ್ಯಾದುದಾರರಿಗೆ ಬಲಕೈ ಮೊನಗಂಟಿಗೆ,ಬಲಕೈ ಭುಜಕ್ಕೆ,ಬಲಕಾಲಿಗೆ ರಕ್ತಗಾಯ ಮತ್ತು ಶರೀರದ ಇತರ ಭಾಗಗಳಿಗೆ ತರಚಿದ ಗಾಯವಾಗಿದ್ದವನನ್ನು, ಅಲೇ ಇದ್ದ ಸ್ಥಳಿಯರು ಉಪಚರಿಸಿ ಆಟೋ ರಿಕ್ಷಾವೊಂದರಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ , ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 87/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವ ಕೆ ಪ್ರಾಯ: 29 ವರ್ಷ, (ತಂದೆ: ಕೆಂಚಪ್ಪ ಗೌಡ) ಆಹಾರ ನಿರೀಕ್ಷಕರು, ತಾಲೂಕು ಕಛೇರಿ ಬೆಳ್ತಂಗಡಿ, ಎಂಬವರ ದೂರಿನಂತೆ ದಿನಾಂಕ: 29.07.2022 ರಂದು ಪಿರ್ಯಾದಿದಾರರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್‌ ಬೆಳ್ತಂಗಡಿ, ಗ್ರಾಮ ಸಹಾಯಕರು ಸೋಣಂದೂರು ರವರೊಂದಿಗೆ ಮದ್ಯಾಹ್ನ 12.00 ಗಂಟೆಗೆ ಬೆಳ್ತಂಗಡಿ ತಾಲೂಕು ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ಬಸ್‌ಸ್ಟಾಂಡ್‌ ಪಕ್ಕ ಇರುವ ಸದಾಶಿವ ಸ್ಟೋರ್‌ ಗೆ ಅಂಟಿಕೊಂಡಿರುವ ಗೋವಿಂದ ಸದನದ ಮಾಲಿಕರಾದ ಸದಾಶಿವ ಶೆಣೈ ಮನೆಗೆ ಅಂಟಿಕೊಂಡಿರುವ ಕೋಣೆಯಲ್ಲಿ ಹಾಗೂ ಇದೇ ಮನೆಯ ಆವರಣದಲ್ಲಿ ನಿಂತಿದ್ದ ASHOK LEYLAND  ಕಂಪೆನಿಯ BADA DOSTHI  ವಾಹನವನ್ನು ಪರಿಶೀಲಿಸಿದಾಗ ವಾಹನದಲ್ಲಿ ಹಾಗೂ ಕಟ್ಟಡ ಕೋಣೆಯಲ್ಲಿ ಪ್ಲಾಸ್ಟಿಕ್‌ ಗೋಣಿಗಳಲ್ಲಿ ಅಕ್ಕಿ ಇದ್ದು ಈ ಅಕ್ಕಿಯನ್ನು ಪರಿಶೀಲಿಸಿದಾಗ ಸದ್ರಿ ಅಕ್ಕಿಯು 2022 ರ ಜುಲೈ ಮಾಹೆಯ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಿಗೆ ನೀಡಿರುವ ಅಕ್ಕಿಯ ಹೋಲಿಕೆ ಇರುವುದು ಕಂಡು ಬಂದಿದ್ದು ಈ ಬಗ್ಗೆ ಸದಾಶಿವ ಸ್ಟೋರ್‌ನಲ್ಲಿದ್ದ ಸದಾಶಿವ ಶೆಣೈ ತಂದೆ: ಗೋವಿಂದ ಶೆಣೈ ಎಂಬವರನ್ನು ವಿಚಾರಿಸಿದಾಗ ವಿನಾಯಕ ರೈಸ್‌ ಮಿಲ್‌ ನ ಕೆಲಸದ ವ್ಯಕ್ತಿ ಎಂದು ಹೇಳಿರುವ ವ್ಯಕ್ತಿಯು ತನ್ನ ಕೊಠಡಿಯನ್ನು ಬಾಡಿಗೆ ಪಡೆದಿದ್ದು, ಅದರಲ್ಲಿ ಅಕ್ಕಿಯನ್ನು ಶೇಖರಿಸಿಟ್ಟಿದ್ದು, ಇದು ಯಾವ ಮೂಲದಿಂದ ಬಂದಿದೆ ಎಂಬುದಾಗಿ ತಿಳಿದಿಲ್ಲ ಹಾಗೂ ಆ ವ್ಯಕ್ತಿ ವಾಹನಕ್ಕೆ ಅಕ್ಕಿಯನ್ನು ಕ್ರಾಸಿಂಗ್‌ ಮಾಡಿರುವುದಾಗಿ ಹೇಳಿಕೆ ನೀಡಿರುತ್ತಾರೆ. ಸದ್ರಿ ವಾಹನದಲ್ಲಿ 46 ಪ್ಲಾಸ್ಟಿಕ್‌ ಚೀಲದಲ್ಲಿ ಬಾಯಿ ಕಟ್ಟಿದ ಸ್ಥಿತಿಯಲ್ಲಿ ತಲಾ 50 ಕೆಜಿ ಯಂತೆ 23 ಕ್ವಿಂಟಾಲ್‌ ಅಕ್ಕಿ ಹಾಗೂ ಕೊಠಡಿಯ ಒಳಗೆ 29 ಪ್ಲಾಸ್ಟಿಕ್‌ ಚೀಲದಲ್ಲಿ ಬಾಯಿ ಕಟ್ಟಿದ ಸ್ಥಿತಿಯಲ್ಲಿ ತಲಾ 50 ಕೆಜಿಯಂತೆ 14.5 ಕ್ವಿಂಟಾಲ್‌ ಒಟ್ಟು 37.5 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು ಸದ್ರಿ ಪತ್ತೆಯಾದ ಅಕ್ಕಿಯ ಅಂದಾಜು ಮೌಲ್ಯ 56,250/- ರೂಪಾಯಿ ಆಗಬಹುದು. ಹಾಗೂ ಸಾಗಾಟಕ್ಕೆ  ಬಳಸಿದ   ವಾಹನದ ಅಂದಾಜು ಮೌಲ್ಯ 3,50,000/- ರೂ ಮೌಲ್ಯ ಆಗಬಹುದು. ಅಲ್ಲದೆ ಅಕ್ಕಿಯನ್ನು ತೂಕ ಮಾಡಲು ತೂಕದ ಯಂತ್ರವಿದ್ದು ಇದರ ಅಂದಾಜು ಮೌಲ್ಯ ರೂ 5000/- ಆಗಬಹುದು.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ CR NO 55/2022 ಕಲಂ: 3, 7 ಅವಶ್ಯಕ ವಸ್ತುಗಳ ಕಾಯ್ದೆ ಜೊತೆಗೆ   34 ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೂಸ ಅಹಮ್ಮದ್ ಕುಂಞ, ವಾಸ: ತಿಬಲೆಪದವು ಮನೆ, ಅಸೈಗೋಳಿ ಅಂಚೆ, ನಾಟೇಕಲ್ ಕೋಣಾಜೆ, ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಸುಮಾರು 25 ವರ್ಷದಿಂದ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಗ್ರಾಮ ಪಂಚಾಯತಿಗೆ ಸಂಬಂದಿಸಿದ ಕಟ್ಟಡವೊಂದರಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 28-07-2022 ರಂದು ಮದ್ಯಾಹ್ನ 2:30 ಗಂಟೆಗೆ ಎಂದಿನಂತೆ ಅವರ ಬಾಭ್ತು ಸ್ಕೂಟಿಯನ್ನು ಅವರ ಅಂಗಡಿಯ ಹತ್ತಿರ ನಿಲ್ಲಿಸಿ ರೂಮಿಗೆ ಊಟ ಮಾಡಲು ಹೋದಾಗ ಗುತ್ತಿಗಾರು ಪೇಟೆಯಲ್ಲಿ ಗಲಾಟೆ ನಡೆಯುತ್ತಿರುವುದಾಗಿ ಪೋನ್ ಬಂದ ಮೇರೆಗೆ ಕೂಡಲೇ ಪಿರ್ಯಾದಿದಾರರು ಅಂಗಡಿಯ ಹತ್ತಿರ ಹೋದಾಗ ಸುಮಾರು 10-20 ಜನರು ಅವರ ಅಂಗಡಿಯ ಬಳಿ ಬಂದಿದ್ದು, ಆಗ ಪಿರ್ಯಾದಿದಾರರು ಅವರ ಸ್ಕೂಟಿಯನ್ನು ಅಲ್ಲೇ ಬಿಟ್ಟು ಮನೆಗೆ ಹೋದಾಗ ಸುಮಾರು ಸಂಜೆ 5:00 ಗಂಟೆಯಷ್ಟರಲ್ಲಿ ಅವರ ಪರಿಚಯದ ಕೆ.ಹೆಚ್.ಅಬ್ದುಲ್ಲಾ ಎಂಬವರು ಪಿರ್ಯಾದಿದಾರರಿಗೆ ಕರೆ ಮಾಡಿ ಸ್ಕೂಟಿಯನ್ನು ಯಾರೋ ಕಿಡಿಗೇಡಿಗಳು ಸುಟ್ಟು ಹಾಕಿರುವುದಾಗಿ ತಿಳಿಸಿದ್ದು, ಕೂಡಲೇ  ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಅವರ ಬಾಭ್ತು ಸ್ಕೂಟಿಯನ್ನು ಗುತ್ತಿಗಾರಿನ ಕೆಳಗಿನ ಪೇಟೆಯಲ್ಲಿ ಸುಟ್ಟು ಹಾಕಿದ್ದು, ಅಲ್ಲದೇ ಅಂಗಡಿಯಲ್ಲಿದ್ದ ಸಾಮಾಗ್ರಿಗಳನ್ನು ಕೂಡ ಹೊರಗೆ ಬಿಸಾಡಿದ್ದು, ಸುಮಾರು 50,000/- ದಷ್ಟು ನಷ್ಟವುಂಟಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ  ನಂಬ್ರ  76-2022 ಕಲಂ  143,146,147,427 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಇಬ್ರಾಹಿಂ ಕಲೀಲ್‌  ಮಂಜನಾಡಿ ಗ್ರಾಮ  ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಅಡಿಕೆ  ವ್ಯಾಪಾರ  ಕೆಲಸ ಮಾಡಿಕೊಂಡಿದ್ದು, ಸುಮಾರು  20 ವರ್ಷದಿಂದ  ಕಡಬ ತಾಲೂಕು ಎನೆಕಲ್ಲಿನ ಪುಂಡಿ ಗದ್ದೆ ಎಂಬಲ್ಲಿ ರಾಜೀವಿ ಪರಮಲೆ ಎಂಬವರಿಗೆ ಸೇರಿದ ಕಟ್ಟಡದಲ್ಲಿ  ದಿನಸಿ  ಅಂಗಡಿಯನ್ನು  ಮತ್ತು  ಬಿ ಖಾದರ್‌ ರವರು ಅಡಿಕೆ  ವ್ಯಾಪಾರ ಮಾಡಿಕೊಂಡಿರುವುದಾಗಿದೆ.  ದಿನಾಂಕ  28-07-2022 ರಂದು   ಸಂಜೆ  5-00  ಗಂಟೆಗೆ ಪಿರ್ಯಾದಿದಾರರು ಮತ್ತು ಬಿ ಖಾದರ್ ರವರು ಅಂಗಡಿಯಲ್ಲಿ ಇರುವಾಗ ಸುಮಾರು 10-20 ಜನರು ಅಂಗಡಿಯೊಳಗೆ ಬಂದು ಅಂಗಡಿಯಲ್ಲಿದ್ದ ಸಾಮಾನುಗಳನ್ನು ಬಿಸಾಡಿ  ಚೆಲ್ಲಾಪಿಲ್ಲಿ  ಮಾಡಿ ಹೋಗಿದ್ದು,  ಅಂಗಡಿಯಲ್ಲಿದ್ದ  ಪ್ರೀಜ್‌, ಮತ್ತು ಸೋಕೇಶ್‌ , ಕ್ಯಾಶ್‌  ಕೌಂಟರ್‌    ದಿನಸಿ  ಸಾಮಾನುಗಳನ್ನು   ಪುಡಿ ಪುಡಿ  ಮಾಡಿದ್ದು, ಅಂದಾಜು ಸುಮಾರು 50,000/- ರೂ ನಷ್ಟ ಉಂಟಾಗಿರುತ್ತದೆ. ಹಾಗೂ ಬಿ.ಖಾದರ್‌ ಅಂಗಡಿಯೊಳಗಿದ್ದ ಅಡಿಕೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ  ಮಳೆಯ ನೀರಿಗೆ  ಹಾಕಿದ್ದು, ಮತ್ತೆ  ಅಂಗಡಿಯೊಳಗಿದ್ದ  ಟೇಬಲ್‌,  ಪ್ಯಾನ್‌ ,ಸ್ಳೆಲ್‌ ,  ಅಂಗಡಿಯ ಶೇಟರ್‌ , ಅಂಗಡಿಯ ಶೀಟ್‌ ಗಳನ್ನು ಹುಡಿ ಮಾಡಿದ್ದು, ಅಂಗಡಿಯ ಬಳಿ  ಇದ್ದ  ಜೀಪಿನ ಟಯರ್‌ ಗಳನ್ನು ಕಡಿದು ಹಾಕಿದ್ದು,   ಇದರಿಂದ  ಬಿ. ಖಾದರ್‌  ರವರಿಗೆ  ಸುಮಾರು 1 ಲಕ್ಷದಷ್ಟು   ನಷ್ಟ ಉಂಟಾಗಿರುತ್ತದೆ.  ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ  ನಂಬ್ರ  77-2022 ಕಲಂ  143,146,147,447,427 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಾ||ನಿಂಗಯ್ಯ, ಕಾರ್ಯನಿರ್ವಹಣಾಧಿಕಾರಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮ, ಕಡಬ ತಾಲೂಕು   ಎಂಬವರ ದೂರಿನಂತೆ ದಿನಾಂಕ: 29-07-2022 ರಂದು ಬೆಳಿಗ್ಗೆ  ಸುಮಾರು 6:00 ಗಂಟೆಗೆ ಶ್ರೀ ದೇವಳಕ್ಕೆ ಸಂಬಂದಿಸಿದ ಉತ್ತರಾಧಿ ಮಠದ ಬಳಿ ಸುಮಾರು 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆಯಾಗಿರುತ್ತದೆ.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್     ನಂಬ್ರ  : 13/2022 ಕಲಂ 174 ಸಿಆರ್ ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-07-2022 10:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080