ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಗೀತಾ (26) ಗಂಡ: ಶರಣ್ ವಾಸ: ಕಾಪಿಕಾಡು ಮನೆ ಮಾಣಿ ಗ್ರಾಮ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ: 28.09.2022 ರಂದು ತನ್ನ ಗಂಡ ಶರತ್‌,ಮೈದುನ ವಿಲಾಸ್‌ ಹಾಗೂ ಅವರ ಪತ್ರಿ ಶರಣ್ಯ ರವರೊಂದಿಗೆ ಮಾವನ  ಬಾಬ್ತು ಕೆಎ 19 ಎಮ್‌  ಹೆಚ್‌ 3616   ನಂಬ್ರ ಕಾರಿನಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪನ್ನು ಮನೆ ಕಡೆ ಬರುತ್ತಾ ಕಾರನ್ನು ಗಂಡ ಶರತ್‌ ರವರು ಚಲಾಯಿಸುತ್ತಿದ್ದು ಸಮಯ ಸುಮಾರು ಸಂಜೆ 4.30 ಗಂಟೆಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಎಂಬಲ್ಲಿಗೆ ತಲುಪಿದಾಗ ಕಾರನ್ನು ಗಂಡ ಶರತ್‌ ರವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಾಲಾಯಿಸಿದ ಪರಿಣಾಮ ಕಾರು ರಸ್ತೆಯ ಎಡ ಬದಿಯ ಮೋರಿಗೆ ಡಿಕ್ಕಿ ಹೊಡೆದು ಅಪಘಾತ ವಾಗಿರುತ್ತದೆ ಪರಿಣಾಮ ಪಿರ್ಯಾದಿದಾರರ ಎಡ ಕೆನ್ನಗೆ ಗುದ್ದಿದ ನೋವು,ಚಾಲಕ ಶರತ್‌ ರವರ ಹಣೆಗೆ ತರಚಿದ ಗಾಯ ಮೈದುನ ವಿಲಾಸ್‌ ರವರ ಬಲ ಕಣ್ಣಿನ ಬಳಿ ರಕ್ತ ಗಾಯ, ತೋಡಿಗೆ ಗುದ್ದಿದ ನೋವಾಗಿರುತ್ತದೆ, ಶರಣ್ಯರವರ ಕುತ್ತಿಗೆ ಹಾಗೂ ಸೊಂಟದ ಬಲ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ, ಗಾಯ ಗೊಂಡ ನಮ್ಮನ್ನು ಅಲ್ಲಿ ಸೇರಿದ ಸಾರ್ವಜನಿಕರು ವಾಹನವೊಂದರಲ್ಲಿ ತುಂಬೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಅಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ತೇಜಶ್ವಿನಿ ಆಸ್ಪತ್ರೆಗೆ ಹೋದಾಗ ಮೈದುನ ವಿಲಾಸ್‌ ಮತ್ತು ಅವರ ಪತ್ನಿ ಶರಣ್ಯ ರವರನ್ನು  ಒಳರೋಗಿಯಾಗಿ ಹಾಗೂ ತನಗೆ ಮತ್ತು ತನ್ನ ಗಂಡ ಶರತ್‌ ರವರಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 152/2022  ಕಲಂ: 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶ್ವಿನ್‌, ಪ್ರಾಯ 30 ವರ್ಷ, ತಂದೆ: ಹರೀಶ್‌, ವಾಸ: ಅಶ್ವಿತ ನಿಲಯ, ರಕ್ತೇಶ್ವರಿ ವಠಾರ, ಲಿಂಗದಗುಡ್ಡೆ, ಕಬಕ ಗ್ರಾಮ, ನೆಹರೂನಗರ ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 29-09-2022 ರಂದು 03.00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ನಿತಿನ್‌ ಕುಮಾರ್‌ ಎಂಬವರು  KA-21-EC-3607 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪಡೀಲ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಮೋಟಾರ್‌ ಸೈಕಲ್‌ ನಿತಿನ್‌ ಕುಮಾರ್‌ ನ ಹತೋಟಿ ತಪ್ಪಿ ಸ್ಕಿಡ್ಡಾಗಿ ರಸ್ತೆಯ ಬದಿಯ ಚರಂಡಿಗೆ ಬಿದ್ದು, ತಲೆಯ ಒಳಭಾಗಕ್ಕೆ ಗಾಯಗಳಾದವರನ್ನು ಚಿಕಿತ್ಸೆ ಬಗ್ಗೆ  ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 150/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್‌ ಕುಂಞ, ಪ್ರಾಯ 32 ವರ್ಷ  ತಂದೆ ಅಬ್ದುಲ್‌ ರಹಿಮಾನ್‌ ವಾಸ ಅರಂಬೂರು ಮನೆ, ಆಲೆಟ್ಟಿ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 27.09.2022 ರಂದು 15:45 ಗಂಟೆಗೆ ತನ್ನ ಅಂಗಡಿಯಲ್ಲಿ ಹೊರಗಡೆ ನಿಂತುಕೊಂಡಿರುವ ಸಮಯ ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸ್ಖೂಟರ್‌ ನಂಬ್ರ ಕೆಎ-21-ವೈ-7772 ನೇದನ್ನು ಅದರ ಸವಾರರು ಚಲಾಯಿಸಿಕೊಂಡು ಬಂದು ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು ಶಾಲೆ ಬಳಿ ಎದುರು ರಸ್ತೆಯ ಬಲಬದಿಗೆ ಹೋಗಲು ಸ್ಕೂಟರ್‌ನ ಇಂಡಿಕೇಟರ್‌ ಹಾಕಿ ಬಲಬದಿಗೆ ತಿರುಗಿಸುತ್ತಿರುವ ಸಮಯ ಸುಳ್ಯ ಕಡೆಯಿಂದ ಒಂದು ಸ್ಕೂಟರನ್ನು ಅದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಲಬದಿಗೆ ಸ್ಕೂಟರನ್ನು ತಿರುಗಿಸುತ್ತಿದ್ದ ಸ್ಕೂಟರ್‌ನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಸ್ಕೂಟರ್‌ ಸವಾರರು ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತಕ್ಕೊಳಗಾದ ಸ್ಕೂಟರ್‌ ಸವಾರರು ಪರಿಚಯದ ಪಾಲಡ್ಕ ನಿವಾಸಿ ಕೇಶವ ಎಂಬವರಾಗಿದ್ದು ಅವರ ಎಡಕಾಲಿನ ಮೊಣಕಾಲಿಗೆ ಗುದ್ದಿದ ಗಾಯವಾಗಿದ್ದು, ಅಪಘಾತ ಉಂಟು ಮಾಡಿದ ಸ್ಕೂಅರ್ ಸವಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಕೂಡಲೇ ಪಿರ್ಯಾದಿದಾರರು ಮತ್ತು ಅಪಘಾತ ಪಡಿಸಿದ ಸ್ಕೂಟರ್‌ ಸವಾರರು ಒಂದು ಅಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಅ.ಕ್ರ 111/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಕ ರಝಾಕ್‌ ಪ್ರಾಯ:49 ತಂದೆ:ಮಹಮ್ಮದ ಸಾಹೇಬ್‌  ವಾಸ:ಉಜುರುಪಾದೆ  ಮನೆ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:28.09.2022 ರಂದು ತನ್ನ  ಮೋಟಾರ್‌ ಸೈಕಲ್‌ನಲ್ಲಿ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿರುವಾಗ ಕಡಬ ಗ್ರಾಮದ ಅನುಗ್ರಹ ಹಾಲ್‌ ಬಳಿ ಸಮಯ 08.45 ಗಂಟೆಗೆ ತಲುಪಿದಾಗ ಪಿರ್ಯಾದುದಾರರ  ಎದುರುಗಡೆಯಿಂದ ಹೋಗುತಿದ್ದ KA-21 EC-3833 ನೇ ಮೊಟಾರ್‌ ಸೈಕಲ್‌ಗೆ ಕಡಬ ಕಡೆಯಿಂದ ಬರುತಿದ್ದ  KA-21 W-6391 ನೇ ಮೋಟಾರ್‌ ಸೈಕಲ್‌ ಸವಾರನಾದ ಆರೋಪಿತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮೋಟಾರ್‌ ಸೈಕಲ್ ಚಲಾಯಿಸಿಕೊಂಡು ಬಂದು ಅಪಘಾತವನ್ನುಂಟು ಮಾಡಿರುತ್ತಾನೆ ಅಪಘಾತದಲ್ಲಿ  ಪಿರ್ಯಾದುದಾರರ ಪರಿಚಯದ KA-21 EC-3833ನೇ ಮೋಟಾರ್ ಸೈಕಲ್‌ ಸವಾರ ಹನೀಫ್‌ ಬಲಬುಜಕ್ಕೆ ಗುದ್ದಿದ ಗಾಯವಾಗಿರುತ್ತದೆ ಸಹ ಸವಾರೆ ಆಯಿಷತ್ ನೈಪಾನ್‌ ರವರಿಗೆ ಬಲಬುಜಕ್ಕೆ ಮತ್ತು ಕೈಕಾಲುಗಳಿಗೆ ತಲೆಗೆ  ಗಾಯವಾಗಿರುತ್ತದೆ. ಅಪಘಾತವನ್ನುಂಟು ಮಾಡಿದ ಆರೋಪಿತನಿಗೆ  ಸಣ್ಣಪುಟ್ಟಗಾಯವಾಗಿರುತ್ತದೆ ಹಾಗೂ ಆತತನ ಹಿಂಬದಿ ಸವಾರ ಅತ್ತಾವುಲ್ಲಾ ಅನ್ಸಾರಿ ಎಂಬಾತನಿಗೆ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ ಗಾಯಾಳುಗಳನ್ನು ಪಿರ್ಯಾದುದಾರರು ಮತ್ತು ಸಾರ್ವಜನಿಕರಾದ ಅಬ್ದುಲ್‌ ಖಾದರ್ ಮತ್ತು ಮಹಮ್ಮದ್ ರಫೀಕ್ ರವರು ಉಪಚರಿಸಿ ಎಲ್ಲಾ ಗಾಯಾಳುಗಳನ್ನು ಆಟೋರಿಕ್ಷಾದಲ್ಲಿ ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ತಿಳಿಸಿದಂತೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗಾಯಾಳುಗಳನ್ನು ಓಳರೋಗಿಯಾಗಿ ದಾಖಲು ಮಾಡಿರುತ್ತಾರೆ.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 83/2022 ಕಲಂ: ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸತೀಶ್ ಶೆಟ್ಟಿ ಪ್ರಾಯ 39 ವರ್ಷ ವಾಸ:ಹೆನ್ನಾಳ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಹಿರೇಬಂಡಾಡಿ ಗ್ರಾಮ ಪಂಚಾಯತ್‌ ಸದಸ್ಯರಾಗಿದ್ದು, ದಿನಾಂಕ  29.09.2022 ರಂದು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ಹಿರೇಬಂಡಾಡಿ ಗ್ರಾಮ ಪಂಚಾಯತ್‌ನಲ್ಲಿ  ನಡೆದ ಸಾಮಾನ್ಯ ಸಭೆಗೆ ಹೋಗಿ ಸಭೆ ಮುಗಿಸಿ ಮಧ್ಯಾಹ್ನ 12:30 ಗಂಟೆಗೆ ಹೊರಗೆ ಬರುವಾಗ ಪಂಚಾಯತು ಆವರಣದ  ಒಳಗೆ ಆರೋಪಿ ನೋಣಯ್ಯ ನು ಪಿರ್ಯಾದಿದಾರರ ಹಿಂದಿನಿಂದ ಬಂದು ಆತನ ಕೈಯಿಂದ ಪಿರ್ಯಾದಿದಾರರ ಬಲ ಬದಿ ಬೆನ್ನಿಗೆ ಹೊಡೆದನು.ಆಗ ಪಿರ್ಯಾದಿದಾರರು ತಿರುಗಿ ನೋಡಿದಾಗ ಆರೋಪಿ ನೋಣಯ್ಯನು ಆತನ ಕೈಯಲ್ಲಿದ್ದ ಕಲ್ಲಿನಿಂದ ಪಿರ್ಯಾದಿದಾರರ ಬಲ ಕಣ್ಣಿಗೆ ಹೊಡೆದನು. ಅಲ್ಲಿಯೇ ಇದ್ದ ಪರಿಚಯದ ಸೌಕತ್ತಾಲಿ ಪಂಚಾಯತ್‌ ಸದಸ್ಯರು ಪಿರ್ಯಾದಿದಾರರ ಬಳಿಗೆ ಬಂದು ಕೈಯಿಂದ ಶರೀರದ ಅಲ್ಲಲ್ಲಿಗೆ ಗುದ್ದಿದ್ದರು. ಈ ತಕ್ಷೀರನ್ನು ಕಂಡು ಅಲ್ಲೇ ಇದ್ದ  ಗೀತಾ ದಾಸರ ಮೂಲೆ, ಉಪಾಧ್ಯಕ್ಷರು ಭವಾನಿ, ಸವೀತ ಹರೀಶ ಬರುವುದನ್ನು ಕಂಡು ಪಿರ್ಯಾದಿದಾರರಿಗೆ ಹಲ್ಲೆ ನಡೆಸುವುದನ್ನು ಬಿಟ್ಟು ಕಲ್ಲನ್ನು ಬಿಸಾಡಿ ಓಡಿ ಹೋದರು. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 104/2022 ಕಲಂ:323,324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನೋಣಯ್ಯ ಕೆ (47) ತಂದೆ:ದಿ|| ಪದ್ಮಯ್ಯ ಗೌಡ ವಾಸ:ಕುಬಳ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಪತ್ನಿ ಪಂಚಾಯತ್ ಕಛೇರಿಯಲ್ಲಿ ಡಾಟ ಎಂಟ್ರಿ ಮಾಡುವ ಕೆಲಸ ಮಾಡಿಕೊಂಡಿದ್ದು, ಮನೆ ತೆರಿಗೆ ರಶೀದಿಯನ್ನು ಪತ್ನಿಯಿಂದ ಪಡೆದುಕೊಳ್ಳುವರೇ ದಿನಾಂಕ: 29-09-2022 ರಂದು 12.30 ಗಂಟೆಯ ಸಮಯಕ್ಕೆ ಹೋಗಿದ್ದು,  ಪಿರ್ಯಾದುದಾರರು  ಪಂಚಾಯತ್ ಕಛೇರಿಯ ಗೇಟಿನ ಬಳಿ ತಲುಪಿದಾಗ ಪರಿಚಯದ ಸತೀಶ್ ಶೆಟ್ಟಿ ಪಂಚಾಯತ್ ಕಛೇರಿಯ ಒಳಗಡೆಯಿಂದ ಹೊರಗೆ ಬಂದು ಪಿರ್ಯಾದಿದಾರರಲ್ಲಿ ನಿನ್ನ ಪತ್ನಿ ಮತ್ತು ಪಂಚಾಯತ್ ಅಧ್ಯಕ್ಷರು ನನ್ನ ವಿರುದ್ದ ಪೊಲೀಸ್ ಠಾಣೆಗೆ ಕೊಟ್ಟಿದ್ದಿಯಾ ಎಂದು ಕೇಳಿ ಪಿರ್ಯಾದುದಾರರ ಶರ್ಟ್ ಕಾಲರಿಗೆ ಕೈ ಹಾಕಿ ಶರ್ಟು ಹರಿದು ಆತನ ಕೈಯಲ್ಲಿದ್ದ  ಕಬ್ಬಿಣದ ರಾಡ್ ನಿಂದ ಪಿರ್ಯಾದುದಾರರ ತಲೆಯ ಬಲಬದಿಗೆ ಎಡಬದಿ ಎದೆಗೆ ಹೊಡೆದು ಕಾಲಿಗೆ ತುಳಿದನು. ಆಗ ನಮ್ಮೊಳಗೆ ಉರುಡಾಟ ಆಯಿತು. ಈ ಘಟನೆಯನ್ನು ಕಂಡು ಸೌಕತ್ ಆಲಿ,ಹೇಮಂತ್, ನಿತಿನ್, ಸದಾನಂದ ಎಂಬವರು ಅಲ್ಲಿಗೆ ಬರುವುದನ್ನು ಕಂಡು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಕಬ್ಬಿಣದ ರಾಡನ್ನು ಅಲ್ಲೆ ಬಿಸಾಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಈ ಘಟನೆಯು ನಡೆಯುವಾಗ 1.00 ಗಂಟೆಯಾಗಬಹುದು. ಆರೋಪಿ ಹಾಗೂ ಹಲ್ಲೆಗೆ ಬಳಸಿದ ಕಬ್ಬಿಣದ ರಾನ್ನು ಮುಂದಕ್ಕೆ ನೋಡಿದರೇ ಗುರುತಿಸಬಲ್ಲೆನು. ಹಲ್ಲೆಯಿಂದ ಉಂಟಾದ ನೋವಿಗೆ ಚಿಕಿತ್ಸೆಯ ಬಗ್ಗೆ ಅಲ್ಲೆ ಇದ್ದ ಒಂದು ಅಟೋ ರಿಕ್ಷಾದಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಬಂದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 103/2022 ಕಲಂ:504, 324, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ  ಕಸ್ತೂರಿ  ಅಡಂತ್ಯಾಯ ಪ್ರಾಯ(58)ಗಂಡ:ರಾಮಕೃಷ್ಣ ಅಡಂತ್ಯಾಯ ವಾಸ:ಶ್ರೀನಿವಾಸ ಮನೆ, ಪಳನೀರ್‌ ಮಾಣಿಲ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿರವರು ದಿನಾಂಕ: 28.09.2022 ರಂದು ಸಮಯ ಸುಮಾರು ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು   ಮಾಣಿಲ ಗ್ರಾಮದ ಪಳನೀರ್‌ ಎಂಬಲ್ಲಿರುವ ಅಡಿಕೆ ತೋಟಕ್ಕೆ ಹೋಗುವ ಸಂದರ್ಭದಲ್ಲಿ ಆಪಾದಿತರುಗಳಾದ ಗೋಪಾಲಕೃಷ್ಣ, ವಿಜಯ, ಅಶ್ವಿನ್‌, ವಿನಯ, ಹರೀಶ್‌, ಜಯರಾಜ್, ಜಯಪ್ರಕಾಶ್‌ ಮತ್ತು ಇತರ ಆರೋಪಿಗಳು ಜಮೀನು ವಿಚಾರದಲ್ಲಿ ಅಕ್ರಮ ಕೂಟ ಸೇರಿಕೊಂಡು ಕೈಯಲ್ಲಿ ಮಾರಕ ಆಯುಧವಾದ ಕತ್ತಿ  ಹಿಡಿದುಕೊಂಡು ಪಿರ್ಯಾಧಿಯ ತೋಟದ ಪಕ್ಕದ ಜಮೀನಿನಲ್ಲಿ ಬಂದು ಸಮಾನದ್ದೇಶದಿಂದ ಅವಾಚ್ಯ ಶಬ್ದಗಳಿಂದ ಗೋಪಾಲಕೃಷ್ಣನು ಎಲ್ಲಿ ನಿನ್ನ ಗಂಡ ನಮಗೆ ಈ ಜಮೀನು ಬಿಟ್ಟು ಕೊಡದೇ ಇದ್ದರೆ  ಕಡಿದು ಕೊಲ್ಲುತ್ತೇನೆ, ವಿನಯ ಮತ್ತು ಹರೀಶ್‌ ಕೈಯಲ್ಲಿರುವ ಕತ್ತಿಯನ್ನು ತೋರಿಸಿ ನಿನ್ನ ಮಗ ಈ ದಾರಿಯಲ್ಲಿ ಹಾಲುಕೊಂಡು ಹೋಗುವಾಗ ಆತನನ್ನು ನೋಡಿಕೊಳ್ಳುತ್ತೇವೆ. ತುಳು ಬಾಷೆಯಲ್ಲಿ ಅಶ್ವಿನ್‌, ಪಿರ್ಯಾಧಿಯ ಗಂಡ ಮತ್ತು ಮಗನನ್ನು  ಉದ್ದೇಶಿಸಿ ಅವಾಚ್ಯಗಳಿಂದ ಬೈದರು. ಜಯರಾಜ್‌ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ  ಜೋರು ಬೈದಾಗ ಶಬ್ದ ಕೇಳಿ ಮನೆಯಿಂದ ಘಟನಾ ಸ್ಥಳಕ್ಕೆ ಪಿರ್ಯಾಧಿಯ ಗಂಡ ಬಂದಾಗ ಆರೋಪಿಯಾದ ಜಯಪ್ರಕಾಶ್‌, ಪಿರ್ಯಾಧಿಯ ಗಂಡನನ್ನು ಉದ್ದೇಶಿಸಿ  ನಾಯಿ ನಿನ್ನ ಸ್ವಾಧೀನದಲ್ಲಿರುವ ಜಮೀನನ್ನು ನಮ್ಮ  ಹೆಸರಿಗೆ ಮಾಡಿಕೊಡದಿದ್ದರೆ  ನಿನ್ನನ್ನು ಮತ್ತು ನಿನ್ನ  ಮಗನನ್ನು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದು  ಆಗ  ಜೀವ ಭಯದಿಂದ ಪಿರ್ಯಾಧಿ ಮತ್ತು ಅವರ ಗಂಡ  ಜೋರು  ಬೊಬ್ಬೆ ಹಾಕಿದಾಗ ಆರೋಪಿಗಳು ಪಿರ್ಯಾಧಿ ಹಾಗೂ ಅವರ ಗಂಡನನ್ನು ಉದ್ದೇಶಿಸಿ ಈ ದಿನ ನಿಮ್ಮನ್ನು ಸುಮ್ಮನೆ ಬಿಡುತ್ತೇವೆ,  ಜಾಗವನ್ನು  ನಮ್ಮ ಹೆಸರಿಗೆ ಬಿಟ್ಟುಕೊಡದೇ ಹೋದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ  ಒಡ್ಡಿರುವುದಾಗಿದೆ.  ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 153/2022  ಕಲಂ: 143,147,148,504,506, ಜೊತೆಗೆ 149 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ:29-09-2022  ರಂದು ಪ್ರೋ. ಪಿಎಸ್ಐ ಮುರಳಿಧರ ನಾಯ್ಕ, ಬೆಳ್ತಂಗಡಿ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯ ದಲ್ಲಿ ರುವ ಸಮಯ  ಬೆಳಿಗ್ಗೆ 9.00 ಗಂಟೆಯ ವೇಳೆಗೆ  ಬೆಳ್ತಂಗಡಿ ಪೇಟೆಯ  ಬಳಿಯಲ್ಲಿ ಕರ್ತವ್ಯದಲ್ಲಿರುವಾಗ  ಸವಣಾಲು ಕಡೆಯಿಂದ  ಒಂದು ಪಿಕಪ್ ವಾಹನದಲ್ಲಿ  ದನವೊಂದನ್ನು ತುಂಬಿಸಿ ಮಾಂಸಕ್ಕಾಗಿ ವಧೆಮಾಡಲು ಸಾಗಾಟಮಾಡುತ್ತಿದ್ದು  ಚರ್ಚ್ ರೋಡ್  ಕಡೆಗೆ ಬರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ  ಸವಣಾಲು ಕಡೆಯಿಂದ ಬರುತ್ತಿದ್ದ ವಾಹನವನ್ನು  ಮೇಲಂತಬೆಟ್ಟು ಕ್ರಾಸ್ ಬಳಿ ಸಿಬ್ಬಂದಿಗಳ ಸಹಾಯ ದಿಂದ ನಿಲ್ಲಿಸಿದಾಗ ಸದ್ರಿವಾಹನದಲ್ಲಿ ಒಂದು ದನವಿದ್ದು ಸದ್ರಿ ದನವನ್ನು ವಧೆಮಾಡಿ  ಮಾಂಸಮಾಡಿ  ಮಾರಾಟ  ಮಾಡಲು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಚಾಲಕನನ್ನು ವಿಚಾರಿಸಲಾಗಿ ಕೆಎ 19 ಬಿ 4254  ನೋಂದಾಣಿ ಸಂಖ್ಯೆಯ ಮಹೀಂದ್ರ ಪಿಕಫ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರನ್ನು ಸಾಗಿಸುವುದು ಕಂಡು ಬಂದಿದ್ದು, ಆರೋಪಿಗಳಿಂದ ಒಂದು ದನವನ್ನು ಹಾಗೂ ಅದನ್ನು ಸಾಗಿಸಲು ಉಪಯೋಗಿಸಿದ ಕೆಎ 19 ಬಿ 4254  ನೋಂದಾಣಿ ಸಂಖ್ಯೆಯ ಮಹೀಂದ್ರ ಪಿಕಫ್  ವಾಹನವನ್ನು ಹಾಗೂ ಆರೋಪಿ  ಸುಂದರ ಮೂಲ್ಯ  ನನ್ನು  ವಶಕ್ಕೆ ಪಡೆದುಕೊಂಡಿದ್ದು, ಸ್ವಾಧೀನ ಪಡಿಸಿ ಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 1,60,000/- ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ ಕ್ರ 60/2022 ಕಲಂ: 4,5,7,8 ಮತ್ತು 12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ  2020ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-09-2022 03:17 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080