ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 03

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಝುಬೈರ್ ಪ್ರಾಯ(41) ತಂದೆ: ಅಬ್ದುಲ್‌ ಹಮೀದ್ ವಾಸ: 3-28/1 ಉಪ್ಪುಗುಡ್ಡೆ ಮನೆ, ನರಿಕೊಂಬು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 28-10-2022  ರಂದು ಅಗತ್ಯ ಕೆಲಸದ ನಿಮಿತ್ತ ಮಾಣಿಗೆ ಹೋಗಿ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ಮುಂದಿನಿಂದ ಅಂದರೆ ಮಾಣಿ ಕಡೆಯಿಂದ  ಸ್ಕೂಟರನ್ನು ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ಸ್ಕಿಡ್ ಆಗಿ ಸ್ಕೂಟರ್ ಸವಾರ ಮತ್ತು ಸಹ ಸವಾರ  ಸ್ಕೂಟರ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಸವಾರ ಮಹಮ್ಮದ್ ರಿಜ್ವಾನ್ ನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸಹಸವಾರ ಅಬ್ದುಲ್ ಖಾದರ್ ನಿಗೆ  ತಲೆಯ ಹಿಂಬದಿಗೆ ಗುದ್ದಿದ ಗಾಯವಾಗಿದ್ದು ಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಸೋರುತ್ತಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಸಾರ್ವಜನಿಕರು ವಾಹನವೊಂದರಲ್ಲಿ  ಹೈಲಾಂಡ್  ಆಸ್ಪತ್ರೆಗೆ  ಕಳುಹಿಸಿಲಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯರು   ಪರೀಕ್ಷಿಸಿ ಸವಾರನಿಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿ, ಸಹಸವಾರನನ್ನು ಒಳರೋಗಿಯಾಗಿ ದಾಖಲಿಸಿಕೊಂಡರು, ಸಹಸವಾರ ಅಬ್ದುಲ್ ಖಾದರ್ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 28.10.2022 ರಂದು ರಾತ್ರಿ ಮೃತಪಟ್ಟಿರುವುದಾಗಿ  ವೈದ್ಯರು ತಿಳಿಸಿದರು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 131/2022 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಾಸಿರುದ್ದೀನ್, ಪ್ರಾಯ: 30ತಂದೆ: ಹಮ್ಮದ್ ಬ್ಯಾರಿ ವಾಸ: 1-209 ಮುಡಾಯಿಕೋಡಿ ಮನೆ ಕೊಡೆಂಜಿ ಗುಡ್ಡೆ, ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 28-10-2022 ಪಿರ್ಯಾದಿದಾರರು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಬಿ.ಸಿ.ರೋಡ್ ಗೆ ಹೋಗಿ ವಾಪಾಸ್ಸು ಮನೆ ಕಡೆಗೆ ಬರುತ್ತಾ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ, ಕುಟ್ಟಿಕಲ ಎಂಬಲ್ಲಿಗೆ ತಲುಪಿದಾಗ ಫಿರ್ಯಾದಿದಾರರ ಎದುರಿನಿಂದ ಹೋಗುತ್ತಿದ್ದ KA 19 ML 4434 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪೊಳಲಿ ಕಡೆಯಿಂದ ಬರುತ್ತಿದ್ದ KA 20 X 1894 ನೇ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ಮೋಟಾರ್ ಸೈಕಲ್ ಸವಾರ ಅಬ್ದುಲ್ ರಹಿಮಾನ್ ರವರು ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟು, ಕೋಲುಕಾಲು, ಪಾದದ ಮೊಣಗಂಟಿಗೆ ಗುದ್ದಿದ ರಕ್ತಗಾಯಗೊಂಡವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ  ಪೊಲೀಸ್ ಠಾಣೆ ಅ.ಕ್ರ : 132/2022ಕಲಂ :  279, 337, IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೀನಾಕ್ಷಿ,  ಪ್ರಾಯ 62 ವರ್ಷ, ಗಂಡ: ಮಂಜುನಾಥ, ವಾಸ: 26ಬಿ, ಚಂದನ ಲಕ್ಷ್ಮಿ ಪ್ರಸನ್ನ ಲೇಔಟ್, ಕೆಮ್ಮಿಂಜೆ ಗ್ರಾಮ, ದರ್ಬೆ ಅಂಚೆ, ಪುತ್ತೂರು ತಾಲೂಕು. ಎಂಬವರ ದೂರಿನಂತೆ  ದಿನಾಂಕ 27-10-2022 ರಂದು 20-40 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಮಂಜುನಾಥ ಎಂಬವರು KA-01-JC-7586ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಪಿರ್ಯಾದುದಾರರಾದ ಮೀನಾಕ್ಷಿ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಜೇಶ್ವರ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕೆಮ್ಮಿಂಜೆ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕಾವೇರಿಕಟ್ಟೆ ಬಳಿ, ನಾಯಿಯೊಂದು ಅಡ್ಡಲಾಗಿ ಬರುವುದನ್ನು ಕಂಡು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಪಿರ್ಯಾದುದಾರರು ಹಾಗೂ ಆರೋಪಿ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬೆನ್ನಿಗೆ, ಕುತ್ತಿಗೆಗೆ, ಎಡ ಕೈಗೆ ಗುದ್ದಿದ ಒಳನೋವಾಗಿ ಚಿಕಿತ್ಸೆ ಬಗ್ಗೆ  ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ 165/2022 ಕಲಂ: 279, 337  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಸುಬ್ರಹ್ಮಣ್ಯ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಧರಣೇಂದ್ರ ಕುಮಾರ್ ಜಿ ಸಿ, ಪ್ರಾಯ: 33 ವರ್ಷ, ತಂದೆ: ಚಂದ್ರಶೇಖರಯ್ಯ   ವಾಸ: ಗುಡ್ಡೇನಹಳ್ಳಿ ಗ್ರಾಮ, ನಿಡುವಣಿ ಅಂಚೆ,   ಹೊಳೆನರಸಿಪುರ ತಾಲೂಕು, ಹಾಸನ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ:15-10-2022 ರಂದು ಮದ್ಯಾಹ್ನ 2:00 ಗಂಟೆಗೆ ಮನೆಯಿಂದ ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆ ಮಾಡಿಸುವ ಸಲುವಾಗಿ ಅವರ ಬಾಬ್ತು ಕೆಎ 13 ವೈ 4984 ನೇ ಬಜಾಜ್ ಡಿಸ್ಕವರಿ ನೇದರಲ್ಲಿ  ಅವರ ಪರಿಚಯದ ದಿಲೀಪ್ ಎಂಬಾತನೊಂದಿಗೆ ಹೊರಟು ಅದೇ ದಿನ ರಾತ್ರಿ 8:10 ಗಂಟೆಗೆ ಸುಬ್ರಹ್ಮಣ್ಯ ತಲುಪಿ ಸುಬ್ರಹ್ಮಣ್ಯ ಗ್ರಾಮದ ಸ್ಕಂದ ವಸತಿ ಗೃಹದ ಎದುರುಗಡೆ ಬೈಕ್ ನ್ನು ಪಾರ್ಕ್ ಮಾಡಿ ಸುಮಾರು ರಾತ್ರಿ 8:30 ಗಂಟೆಗೆ ಅಲ್ಲೇ ಇರುವ ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ  ಸುಮಾರು 9:15 ಗಂಟೆಗೆ ಬೈಕ್ ಪಾರ್ಕ್ ಮಾಡಿದಲ್ಲಿಗೆ ಬಂದಾಗ ಬೈಕ್ ಇಲ್ಲದೇ ಇದ್ದು, ಎಲ್ಲಾ ಕಡೆ ಹುಡುಕಿದರೂ ಬೈಕ್ ಪತ್ತೆ ಆಗಿರುವುದಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ ಅ.ಕ್ರ ನಂಬ್ರ : 100-2022 ಕಲಂ  379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು ಕಡಬ ಪೊಲೀಸ್ ಠಾಣಾ ರವರು ದಿನಾಂಕ:29.10.2022 ರಂದು ಠಾಣೆಯಲ್ಲಿರುವ ಸಮಯ ಕಡಬ ತಾಲೂಕು ಕಡಬ ಗ್ರಾಮದ ಕಳಾರ ಮಸೀದಿ ಎದುರು ಇರುವ ದಿನಸಿ ಅಂಗಡಿ ಬಳಿ ಆರೋಪಿತನು ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ತೆರಳಿದಾಗ ಸದರಿ ಸ್ಥಳದ ಬಳಿ ಆರೋಪಿತನು ರಸ್ತೆ ಬದಿಯಲ್ಲಿ ತೂರಾಡುತಿದ್ದು ಮೇಲ್ನೋಟಕ್ಕೆ ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದು ನಂತರ ಸದ್ರಿ ಆರೋಪಿತನನ್ನು ವಿಚಾರಿಸಿದಾಗ ಸದ್ರಿ ಆರೋಪಿತನು ತಾನು ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ನಲ್ಲಿ ತುಂಬಿಸಿ ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಂತೆ ವಶಕ್ಕೆ ಪಡೆದು ಆತನನ್ನು ವೈದ್ಯಕೀಯ ಪರೀಕ್ಷೇಗಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಠಾಣಾ ಸಿಬ್ಬಂದಿಗಳೊಂದಿಗೆ ಕಳುಹಿಸಿಕೊಟ್ಟಿದ್ದು, ಸದ್ರಿ ಆಸಾಮಿಯು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದ್ಯಾಧೀಕಾರಿಯು ದೃಡಪತ್ರ ನೀಡಿರುತ್ತಾರೆ ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 91/2022 ಕಲಂ: 27 (b) NDPS ACT-1985ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರಂಜಿತ, ಪ್ರಾಯ: 26 ವರ್ಷ, ಗಂಡ: ಅರುಣ್ ಕುಮಾರ್, ವಾಸ: ಬಸ್ತಿಕಾಡು ಮನೆ, ಕೂತ್ಕುಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡನ ತಂಗಿ ತುಮಕೂರು ಜಿಲ್ಲೆ ಶಿರ ತಾಲೂಕಿನ ಮಣಿಕಂಠ ಎಂಬಾತನನ್ನು ಸುಮಾರು ಒಂದು ವರ್ಷದ ಹಿಂದೆ 2 ನೇ ವಿವಾಹವಾಗಿದ್ದು  ಸುಮಾರು 2 ತಿಂಗಳು ಗಂಡನೊಂದಿಗೆ ಇದ್ದು, ನಂತರ ಆಕೆಗೆ ಅಸೌಖ್ಯ ಇದ್ದುದರಿಂದ ತಾಯಿ ಮನೆಗೆ ಬಂದಿದ್ದು, ಆಕೆಯು ಗರ್ಭವತಿಯಾಗಿದ್ದು, ಆಗ ಪವಿತ್ರಾಳು ನನಗೆ ಹೆಣ್ಣು ಮಗುವೆಂದರೆ ತುಂಬಾ ಇಷ್ಟ, ಗಂಡು ಮಕ್ಕಳು ಸರಿಯಾಗಿ ತಂದೆ ತಾಯಿಯನ್ನು ನೋಡಿಕೊಳ್ಳುವುದಿಲ್ಲ, ನನಗೆ ಹೆಣ್ಣು ಮಗುವೇ ಆಗುತ್ತದೆ. ಎಂದು ಹೇಳುತ್ತಿದ್ದು ಪವಿತ್ರಾಳಿಗೆ ಆರೋಗ್ಯದಲ್ಲಿ ಆಗಾಗ ಎರುಪೇರು ಆಗುತ್ತಿರುವುದರಿಂದ  ಅವಳನ್ನು  ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ  ಒಂದು ತಿಂಗಳ ಹಿಂದೆ  ದಾಖಲಿಸಿಸಿದ್ದು,  ದಿನಾಂಕ 19-10-2022  ಪವಿತ್ರಾಳು ಗಂಡು ಮಗುವಿಗೆ  ಜನ್ಮ  ನೀಡಿದ್ದು, ಅವಳು ಮಗುವಿಗೆ  ಸರಿಯಾಗಿ  ಹಾಲು ನೀಡದೇ ಒತ್ತಾಯಕ್ಕೆ ನೀಡುತ್ತಿದ್ದಳು. ದಿನಾಂಕ 29-10-2022 ರಂದು ಬೆಳಿಗ್ಗೆ  ಪವಿತ್ರಾಳು ಈ ಗಂಡು ಮಗು ನನಗೆ ಇಷ್ಟವಿಲ್ಲದಿದ್ದರು ಹುಟ್ಟಿರುತ್ತದೆ. ಈ ಗಂಡು ಮಗು ನನಗೆ  ಬೇಡ ಎಂದು ಹೇಳಿದ್ದು, ಮನೆಯಲ್ಲಿ ರೂಮ್ ನ ಒಳಗಡೆ ಮಲಗಿದ್ದಳು. ಸಂಜೆ  ಸುಮಾರು 3-15 ಗಂಟೆಯ ಸಮಯಕ್ಕೆ ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ಪಿರ್ಯಾದಿದಾರರು ಅಂಗಳದಲ್ಲಿ ನಿಂತು ನೋಡಿಕೊಂಡಿದ್ದು, ಆಗ ಅವಳು ನನಗೆ ಇಷ್ಟವಿಲ್ಲದ ಈ ಮಗು ಬೇಡ  ಇದನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಎದುರಿನ ಬಾವಿಗೆ ಎಸೆದಿರುತ್ತಾಳೆ. ನಂತರ  ಆಕೆಯು ರೂಮಿನ ಒಳಗಡೆ ಓಡಿ  ಹೋಗಿದ್ದು, ಕೂಡಲೇ   ಪಿರ್ಯಾದಿದಾರರು ಗಂಡನಿಗೆ ದೂರವಾಣಿ  ಕರೆ ಮಾಡಿದ್ದು ಅವರು ಮತ್ತು ಅವರ ಸ್ನೇಹಿತರಾದ ಪ್ರಕಾಶ್ , ಚೇತನ್ , ಮತ್ತು ಇತರರೊಂದಿಗೆ ಬಂದು  ಪ್ರಕಾಶನು ಬಾವಿಗೆ ಇಳಿದು, ಮಗುವನ್ನು ತೆಗೆದು ಮೇಲಕ್ಕೆ ಎತ್ತಿ ತಂದು ಒಂದು ಕಾರಿನಲ್ಲಿ  ಪಂಜ ಸರಕಾರಿ ಆಸ್ಪತ್ರಗೆ ಕರೆದುಕೊಂಡು  ಹೋದಲ್ಲಿ ಅಲ್ಲಿಯ ವೈದ್ಯಾಧಿಕಾರಿಯವರು ಪರೀಕ್ಷಿಸಿ ಸಂಜೆ ಸುಮಾರು 4-15 ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸುಬ್ರಹ್ಮಣ್ಯ  ಪೊಲೀಸ್ ಠಾಣೆ   ಅ.ಕ್ರ ನಂಬ್ರ 101/2022 ಕಲಂ 302 ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರ ಪಿ. ಪ್ರಾಯ:25  ವರ್ಷ.ತಂದೆ:  ಬಾಲು ಪೂಜಾರಿ .ವಾಸ:  ಪಡಿಬಾಗಿಲು ಮನೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆ ಬಾಲು ಪೂಜಾರಿ ಪ್ರಾಯ 60 ವರ್ಷ ಎಂಬವರು  ಹಲವಾರು ವರ್ಷಗಳಿಂದ ಕೆಲಸವೂ ಇಲ್ಲದೇ ಮನೆಯಲ್ಲಿಯೇ ಉಳಕೊಂಡು ಖಿನ್ನತೆಗೆ ಒಳಗಾದವರಂತೆ ಇದ್ದವರು, ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ:29.10.2022 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿರುವ ಪಿರ್ಯಾಧಿದಾರರ ಮನೆಯ ಕೆಳಭಾಗದಲ್ಲಿರುವ ಕಾಡಿನಲ್ಲಿರುವ ಮರಕ್ಕೆ ಪಂಚೆಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ಕುನಿಕೆಯನ್ನಾಗಿಸಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 43/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 31-10-2022 02:58 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080