ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿ.ಎ. ಅಬೂಬಕ್ಕರ ಪ್ರಾಯ 52 ವರ್ಷ ತಂದೆ:ದಿ. ಹಾಮದ್‌ ಕುಂಞ ವಾಸ:223-ಬಿ, ಪುಳಿಂಪಾಡಿ ಬಾಯಿತ್ತಾರ್‌ ಮನೆ, ಬಾರ್ಯ ಅಂಚೆ & ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 29-01-2023 ರಂದು 12:30 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಉಸ್ಮಾನ್ ಎಂಬವರು KA-21-S-3825 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ದುಲೈಖಾರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪೆದಮಲೆ-ಬಾಜಾರು ಸಾರ್ವಜನಿಕ ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಸರಳಿಕಟ್ಟೆ  ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಸರಳಿಕಟ್ಟೆ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ರಸ್ತೆ ಹಂಪ್ ನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ,  ಒಂದು ಬದಿಗೆ ಕಾಲು ಹಾಕಿ ಕುಳಿತ್ತಿದ್ದ ದುಲೈಖಾರವರು  ರಸ್ತೆಗೆ ಬಿದ್ದು, ತಲೆಯ ಒಳಭಾಗಕ್ಕೆ ಗಾಯವಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಹೈ ಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿರ್ಯಾದುದಾರರು ಗಾಯಾಳುವಿನ ಆರೈಕೆಯಲ್ಲಿದ್ದು, ಈ ದಿನ ಬಂದು ದೂರು ನೀಡುತ್ತಿರುವುದಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 17/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಜೀತ್‌ ಕುಮಾರ್‌ ಕೆ.ಆರ್‌ ಪ್ರಾಯ 23 ವರ್ಷ ತಂದೆ: ರಮೇಶ್‌ ನಾಯ್ಕ ವಾಸ: ಚೆಳ್ಳಂಗಾಯ ಮನೆ, ಮೆಲ್‌ಚೆಂಬು ಅಂಚೆ & ಗ್ರಾಮ, ಬಾಳೆಂಬಿ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 30-01-2023 ರಂದು 17:00 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಖಾಸಿಂ ಎಂಬವರು KA-21-B-5743 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಪುತ್ತೂರು-ಸುಬ್ರಮಣ್ಯ ದ್ವಿಪಥ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮರೀಲ್  ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮರೀಲ್ ಕ್ಯಾಂಪ್ಕೊ ಪ್ಯಾಕ್ಟರಿ ಬಳಿ ಯಾವುದೇ ಸೂಚನೆಯನ್ನು ನೀಡದೆ ಮತ್ತು ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಏಕಾಏಕಿಯಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯು ಟರ್ನ್ ಮಾಡಿದ ಪರಿಣಾಮ, ಪಿರ್ಯಾದುದಾರರಾದ ಅಜಿತ್ ಕುಮಾರ್ ಕೆ.ಆರ್‌ ರವರು ಸವಾರರಾಗಿ ಮರೀಲ್ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ಚಲಾಯಿಕೊಂಡು ಹೋಗುತ್ತಿದ್ದ KA-12-U-6009 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಟೋರಿಕ್ಷಾ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು ಮುಖದ ಬಲಭಾಗದ ಕಣ್ಣಿನ ಬಳಿ ರಕ್ತಗಾಯ, ಬಲಕೋಲು ಕೈಗೆ, ಬಲ ಕೋಲು ಕಾಲಿಗೆ ಗುದ್ದಿದ ಒಳನೋವು ಇರುವ ಗಾಯಗಳಾಗಿ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಆರೋಪಿ ಅಟೋರಿಕ್ಷಾ ಚಾಲಕರಿಗೂ ಗಾಯಗಳಾಗಿದ್ದು ಪುತ್ತೂರು ಹಿತ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಗೆ ಕರೆದುಕೊಂಡು ಹೋಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 18/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮೇಶ್‌ ಕುಲಾಲ್‌, ಪ್ರಾಯ: 35 ವರ್ಷ, ತಂದೆ:  ಬಾಬು ಮೂಲ್ಯ, ವಾಸ: ಸೋಣಂದೂರು ಮನೆ ಮತ್ತು ಗ್ರಾಮ, ಮಾಲಾಡಿ ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 30.01.2023 ರಂದು ಬೆಳಿಗ್ಗೆ 11:00 ಗಂಟೆಗೆ ಫಿರ್ಯಾಧಿದಾರರಾದ ಉಮೇಶ್‌ ಕುಲಾಲ್‌ ಎಂಬವರು ತನ್ನ ಮನೆ ಮುಂದೆ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಕೊಲ್ಪೆದಬೈಲು ಕಡೆಯಿಂದ ಗರ್ಡಾಡಿ ಕಡೆಗೆ ಹಾದು ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆಟೋ ರಿಕ್ಷಾ KA-70-2693 ನೇದನ್ನು ಅದರ ಚಾಲಕ ದಯಾನಂದ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ, ಬನತ್ತಡಿ ಎಂಬಲ್ಲಿ ತಿರುವು ರಸ್ತೆಯ ಬಳಿ ಆಟೋ ರಿಕ್ಷಾ ನಿಯಂತಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಮಗು ರಸ್ತೆಗೆ ಎಸೆಯಲ್ಪಟ್ಟಿದ್ದಲ್ಲದೆ, ಆಟೋ ರಿಕ್ಷಾದೊಳಗಿದ್ದವರು ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದಾಗ ಫಿರ್ಯಾಧಿದಾರರು ಹಾಗೂ ಇತರರು ಅಲ್ಲಿಗೆ ಹೋಗಿ ಎಲ್ಲರನ್ನು ಉಪಚರಿಸಿ ಆರೈಕೆ ಮಾಡಿದ್ದು, ಅಪಘಾತದಿಂದ ಶ್ರೀಮತಿ ಗೀತಾ ಎಂಬವರ ಹಣೆಗೆ ಮತ್ತು ಎಡಕೈಗೆ ತರಚಿದ ಗಾಯ, ಶ್ರೀಮತಿ ರತ್ನ ಎಂಬವರ ಕಾಲಿಗೆ ತರಚಿದ ಗಾಯ, ಆಟೋ ಚಾಲಕ ದಯಾನಂದ ಎಂಬವರ ಹಣೆಗೆ, ತುಟಿಗೆ, ಕೈಗೆ ಗಾಯವಾಗಿದ್ದಲ್ಲದೆ ರಸ್ತೆಗೆ ಎಸೆಯಲ್ಪಟ್ಟ ಮಗುವಿಗೆ ಮೇಲ್ನೋಟಕ್ಕೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿರುವುದಿಲ್ಲ ಆದರೆ ಮಗು ಪ್ರಜ್ಞಾಹೀನವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅಪಘಾತದ ವಿಷಯ ತಿಳಿದು ಆಸ್ಪತ್ತೆಗೆ ಬಂದಿದ್ದ  ಗಾಯಾಳು ಶ್ರೀಮತಿ ಗೀತಾ ರವರ ಗಂಡ ಸಂತೋಷ್‌ ರವರು ಗಾಯಾಳುಗಳನ್ನು ಅಂಬ್ಯುಲೆನ್ಸ್‌ ವೊಂದರಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 09/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀನಿವಾಸನ ಪ್ರಾಯ 50 ವರ್ಷ ತಂದೆ:ಸುಬ್ರಮಣಿಯಂ ವಾಸ:ಚೆಂಗೊತ್ತೂರು ,ಪೊನ್ನೆಲ್‌ ಪಂಚಾಯತ್‌ ,ಕಾಸರಗೂಡು ಎಂಬವರ ದೂರಿನಂತೆ ದಿನಾಂಕ:29-01-2023 ರಂದು ಕೆಎಲ್-55-ಎಡಿ-8304ನೇ ಲಾರಿಯನ್ನು ಉಪ್ಪಳ ಕಡೆಯಿಂದ ಪರೋಡಿ ಕಡೆಗೆ ಮಣ್ಣಿನ ಲೋಡಿಗಾಗಿ ಪಾದೆಕಲ್ಲು-ಪರೋಡಿ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸಂಜೆ 17.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿಗೆ ತಲುಪಿದಾಗ ಪರೋಡಿ ಕಡೆಯಿಂದ ಪಾದೆಕಲ್ಲು ಕಡೆಗೆ ಮಣ್ಣು ತುಂಬಿಕೊಂಡು ಬರುತ್ತಿದ್ದ ಎಪಿ-39-ಟಿ-9459 ಲಾರಿಯನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಅದರ ಎದುರು ಹೋಗುತ್ತಿದ್ದ ಎಪಿ-39-ಟಿ-6217ನೇ ಲಾರಿಗೆ ಯಾವುದೇ ಸೂಚನೆ ನೀಡದೇ ಓವರ್ ಟೇಕ್ ಮಾಡಲು ಪ್ರಯತ್ನಿಸಿ ಡಿಕ್ಕಿಯನುಂಟು ಮಾಡಿದಲ್ಲದೇ  ಎದುರಿನಿಂದ ಅಂದರೆ ಪಾದೆಕಲ್ಲು ಕಡೆಯಿಂದ ಪರೋಡಿ ಕಡೆಗೆ ಬರುತ್ತಿದ್ದ ಪಿರ್ಯಾದಿಯ ಬಾಬ್ತು ಲಾರಿಗೆ ಎದುರಿನಿಂದ ಡಿಕ್ಕಿಯನ್ನುಂಟು ಮಾಡಿರುವುದಾಗಿದೆ, ಈ ಅಪಘಾತ ಪರಿಣಾಮ ಪಿರ್ಯಾದಿಯ ಬಾಬ್ತು ಲಾರಿಯ ಎದುರಿನ ಭಾಗ ಹಾಗೂ ಎಡಭಾಗ ಮೊದಲು ಅಪಘಾತಗೊಂಡ ಲಾರಿಯ ಎದುರು ಭಾಗ ಹಾಗೂ ಅಪಾಘತಪಡಿಸಿದ ಲಾರಿಯ ಎದುರು ಭಾಗ ಸಂಪೂರ್ಣ ಜಖಂಗೊಂಡಿರುವುದಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 15/2023  ಕಲಂ: 279, ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಕ್ರಪಾಣಿ ಎ.ವಿ  ಪ್ರಾಯ 52 ವರ್ಷ ತಂದೆ: ವೀರಪ್ಪ ಗೌಡ   ವಾಸ: ಬಾಕಿಲ ಮನೆ ಆಲಂಕಾರು, ಆಲಂಕಾರು ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ಸರಕಾರಿ ಪ್ರೌಢ ಶಾಲೆ ವಳಾಲು, ಬಜತ್ತೂರು ಎಂಬಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಒದಗಿಸಲಾದ ಕಂಪ್ಯೂಟರ್ ಗೆ ಸಂಬಂಧಿತ 16 ಹಳೆಯ ಬ್ಯಾಟರಿಗಳನ್ನು ಕಳಚಿ ಪ್ರತ್ಯೇಖವಾದ ಒಂದು ಕೊಠಡಿಯಲ್ಲಿರಿಸಿ ಬಾಗಿಲು ಮುಚ್ಚಿ ಬೀಗ ಹಾಕಿ ಭದ್ರಪಡಿಸುತ್ತಿದ್ದು, ದಿನಾಂಕ 27-01-2023 ರಂದು ಸಂಜೆ 4.20 ಗಂಟೆ ವೇಳೆಗೆ ಸದ್ರಿ ಬ್ಯಾಟರಿಗಳನ್ನು ಇರಿಸಿದ ಕೊಠಡಿ ಹಾಗೂ ಶಾಲಾ ಕೊಠಡಿಗಳಿಗೆ ಬಾಗಿಲು ಮುಚ್ಚಿ ಬೀಗ ಹಾಕಿ ಭದ್ರಪಡಿಸಿ ಹೋಗಿದ್ದು, ದಿನಾಂಕ 30-01-2023 ರಂದು ಬೆಳಿಗ್ಗೆ 10.30 ಗಂಟೆ ವೇಳೆಗೆ ಬ್ಯಾಟರಿಗಳನ್ನು ಇರಿಸಿದ ಕೊಠಡಿಗೆ ಅಗತ್ಯ ಕೆಲಸ ನಿಮಿತ್ತ ಬಾಗಿಲು ತೆರೆಯಲೆಂದು ಹೋದಾಗ ಬಾಗಿಲಿಗೆ ಹಾಕಿದ್ದ ಬೀಗ ತೆರೆದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಬಾಗಿಲು ತೆರೆದು ಒಳ ಹೋಗಿ ನೋಡಲಾಗಿ ಒಳಗೆ ಇರಿಸಿದ್ದ  16 ಬ್ಯಾಟರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ.  ಕಳವಾದ 16 ಬ್ಯಾಟರಿಗಳ ಅಂದಾಜು ಮೌಲ್ಯ 20,000/- ರೂ ಆಗಬಹುದು. ಸದ್ರಿ ಬ್ಯಾಟರಿಗಳನ್ನು ದಿನಾಂಕ: 27.01.2023 ರಂದು ಸಂಜೆ 4.20 ಗಂಟೆಯಿಂದ ದಿನಾಂಕ: 30.01.2023 ರಂದು ಬೆಳಿಗ್ಗೆ 10.30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ    ಅ.ಕ್ರ 09/2023 ಕಲಂ: 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಾಗರ್‌ (23) ತಂದೆ: ದಿ.ಶಂಕರ್‌ ವಾಸ: ಕೋಡಿಕಲ್‌ ರಸ್ತೆ ಬಾಪೂಜಿ ನಗರ ಮನೆ 17 ನೇ ವಾರ್ಡ್‌ ಮಂಗಳೂರು ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ: 28.01.2023 ರಂದು ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ಬಂದಿದ್ದು, ದಿನಾಂಕ: 29.01.2023 ರಂದು ಮಧ್ಯಾಹ್ನ 3.00 ಗಂಟೆಗೆ ಕಂಬಳ ಗದ್ದೆಯಲ್ಲಿರುವ ಸಮಯ ತನ್ನ ಪ್ರಿಯತಮೆ ಕಂಬಳ ಗದ್ದೆಯಲ್ಲಿದ್ದು, ಅವಳಲ್ಲಿ ಮಾತನಾಡುತ್ತಿರುವಾಗ ಆ ಸಮಯ ಕೌಶಿಕ್‌ ಎಂಬಾತನು ಫಿರ್ಯಾದಿದಾರರ ಬಳಿ ಬಂದು ಫಿರ್ಯಾದಿದಾರರ ಬಳಿ “ನೀನು ಯಾರು? ಎಲ್ಲಿಯವಾ? ನಿನಗೂ ಆಕೆಗೂ ಏನು ಸಂಬಂಧ? ಎಂದು ಕೇಳಿದನು. ಆಗ ಫಿರ್ಯಾದಿದಾರರು ಆಕೆ ತನ್ನ ಪ್ರಿಯತಮೆ ಎಂದು ತಿಳಿಸಿರುತ್ತಾರೆ. ಅವರು ಫಿರ್ಯಾದಿದಾರರನ್ನು ಮತ್ತು ಅವರ ಜೊತೆಯಲ್ಲಿದ್ದ ದುರ್ಗಾ ಪ್ರಸಾದ್‌ ರವರನ್ನು  ಪಕ್ಕಕ್ಕೆ ಕರೆದುಕೊಂಡು ಹೋಗಿ ತಾನು ಸದರಿ ಹುಡುಗಿಯನ್ನು ಪ್ರೀತಿಸುತ್ತಿದ್ದು ನೀನು ಯಾಕೆ ಅವಳನ್ನು ಲವ್‌ ಮಾಡುತ್ತೀ? ಎಂದು ಹೇಳಿ ಫಿರ್ಯಾದಿದಾರರನ್ನು ಮತ್ತು ದುರ್ಗಾ ಪ್ರಸಾದ್‌ ರವರನ್ನು ಏಳ್ಮುಡಿ ಅಕ್ಷಯ ಚಿಕನ್‌ ಸೆಂಟರ್‌ ಬಳಿ ಬರುವಂತೆ ತಿಳಿಸಿದಂತೆ ಫಿರ್ಯಾದಿದಾರರು ಮತ್ತು ದುರ್ಗಾಪ್ರಸಾದ್‌ ರವರು ಜೊತೆಯಲ್ಲಿ ಅಲ್ಲಿಗೆ ಹೋಗಿದ್ದು. ಅಲ್ಲಿ ಕೌಶಿಕ್‌ ನೊಂದಿಗೆ ಇತರ 6-7 ಜನ ಸೇರಿ ಅವರು ಫಿರ್ಯಾದಿದಾರರಲ್ಲಿ ಇಲ್ಲಿ ಸರಿಯಾಗಿ ಮಾತನಾಡಲು ಆಗುವುದಿಲ್ಲ. ಜನರು ಇಲ್ಲದ ಸ್ಥಳಕ್ಕೆ ಹೋಗುವ ಎಂದು ತಿಳಿಸಿದ ಪ್ರಕಾರ ಅವರ ಜೊತೆ ಕಾರು ಮತ್ತು ಮೋ.ಸೈಕಲ್‌ ನಲ್ಲಿ ಬಲ್ನಾಡ್‌ ಎಂಬಲ್ಲಿಯ ನಿರ್ಜನ ಪ್ರದೇಶಕ್ಕೆ ಹೋಗಿ  ಅಲ್ಲಿ ಕೌಶಿಕ್‌ ಹಾಗೂ ಇತರ 6-7 ಜನರು ಫಿರ್ಯಾದಿದಾರರಿಗೆ ಹಾಗೂ ದುರ್ಗಾ ಪ್ರಸಾದ್‌ ರವರಿಗೆ ಕೈಯಿಂದ ಹಾಗೂ ಕೈಗಳಲ್ಲಿ ಧರಿಸಿದ್ದ ಬಳೆಗಳಿಂದ ಹಲ್ಲೆ ನಡೆಸಿ ಸದ್ರಿ ಹುಡುಗಿಯನ್ನು ಲವ್‌ ಮಾಡಬಾರೆಂದು ಬೆದರಿಸಿ ಆ ಸಮಯ ಬಿಡಿಸಲು ಬಂದ ದುರ್ಗಾ ಪ್ರಸಾದ್‌ ರವರಿಗೂ ಹಲ್ಲೆ ನಡೆಸಿದರು. ಆ ಸಮಯ ಫಿರ್ಯಾದಿದಾರರು ಮತ್ತು ದುರ್ಗಾ ಪ್ರಸಾದ್‌ ರವರು ಜೋರಾಗಿ ಬೊಬ್ಬೆ ಹೊಡೆದಾಗ ನೆರೆಕರೆಯವರು ಓಡಿ ಬರುವುದನ್ನು ಕಂಡು ಫಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿರುತ್ತಾರೆ. ಆರೋಪಿತರ ಹಲ್ಲೆಯಿಂದ ಫಿರ್ಯಾದಿದಾರರ ಎಡ ಬದಿಯ ತಲೆ, ಬಲ ಪಕ್ಕೆಲುಬಿಗೆ, ಎಡಕೈಯ ರಟ್ಟೆಗೆ ನೋವಾಗಿದ್ದು, ದುರ್ಗಾ ಪ್ರಸಾದ್‌ ರವರಿಗೆ ಗದ್ದ ಭಾಗ,ಕುತ್ತಿಗೆಯ ಭಾಗ ಹಾಗೂ ಎಡ ಕಾಲಿಗೆ ನೋವು ಆಗಿರುತ್ತದೆ. ಈ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು,.ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ  ಅ.ಕ್ರ:05/2023 ಕಲಂ:  143,147,323,324,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶೈಲಜಾ  ಪ್ರಾಯ: 30 ವರ್ಷ,  ತಂದೆ: ವಿನೋದ್‌ ಮಾಥ್ಯೂ ವರ್ಗೀಸ್‌ ವಾಸ: ನೆಲ್ಲಿಕಲ್‌ ಮನೆ, ಪಡ್ಡಡ್ಕ, ಕೊಕ್ಕಡ ಗ್ರಾಮ ನೆಲ್ಯಾಡಿ ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ  ವಿನೋದ್‌ ಮಾಥ್ಯೂ ವರ್ಗೀಸ್‌ ನು ಸ್ವಂತ ಲಾರಿ ಇಟ್ಟುಕೊಂಡು ಅದರಲ್ಲಿ ಕೆಲಸಮಾಡಿಕೊಂಡಿದ್ದರು ಅಲ್ಲದೇ ಸಕ್ಕರೆ ಖಾಯಿಲೆ(ಮಧುಮೇಹ) ಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಮಧುಮೇಹ ಖಾಯಿಲೆಯು ತುಂಬಾ ಜಾಸ್ತಿಯಾಗಿದ್ದು ಪಿರ್ಯಾದಿದಾರರ ಗಂಡನಿಗೆ ಕೆಲಸಕ್ಕೆ ಸರಿಯಾಗಿ ಹೋಗಲು ಆಗದೇ ಇದ್ದು ಇವರು ಲಾರಿಗೆ ತೆಗೆದ ಸಾಲವನ್ನು ಕಟ್ಟಲು ಸಾಧ್ಯವಾಗದ ಕಾರಣ ತುಂಬಾ ಬೇಸರದಿಂದ ಇದ್ದರು. ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತಿದ್ದು ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ: 11-01-2023 ರಂದು ರಾತ್ರಿ 9.00 ಗಂಟೆಯ ವೇಳೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಪಡ್ಡಡ್ಕದಲ್ಲಿ  ರಬ್ಬರ್‌ ಶೀಟ್‌ ಮಾಡಲು ರಬ್ಬರ್‌ ಹಾಲಿಗೆ ಹಾಕುವ ಆ್ಯಸಿಡ್‌ನ್ನು ಕುಡಿದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಜ್ಯೋತಿ ಕೆ.ಎಂ.ಸಿ ಆಸ್ಪತ್ರೆಗೆ  ದಾಖಲಿಸಿದ್ದು  ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 30-01-2023 ರಂದು ಬೆಳಿಗ್ಗೆ 01.00 ಗಂಟೆಗೆ ಮೃತಪಟ್ಟ ಬಗ್ಗೆ ವೈದ್ಯರು ಖಚಿತ ಪಡಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ   UDR NO 09/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಚಂದ್ರಾವತಿ,  ಪ್ರಾಯ 55 ವರ್ಷ, ಗಂಡ: ವಾಸಪ್ಪ ಗೌಡ ವಾಸ: ಕೇಂಕನಾಜೆ ಮನೆ, ಧರ್ಮಸ್ಥಳ ಗ್ರಾಮ,ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಸುಮಾರು 65 ವರ್ಷ ಪ್ರಾಯದ ವಾಸಪ್ಪ ಗೌಡ ಎಂಬವರು ಧರ್ಮಸ್ಥಳದ ಅನ್ನ ಪೂರ್ಣ ಛತ್ರದಲ್ಲಿ ಕೆಲಸಮಾಡಿಕೊಂಡಿದ್ದು ಸುಮಾರು 3 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಹೊಂದಿ ಬಳಿಕ ಮನೆಯಲ್ಲೆ ಇದ್ದು ಮನೆಯ ಆಡುಗಳನ್ನು ಮೇಯಿಸುವುದರ ಜೊತೆಗೆ ಮನೆ ಕೆಲಸಗಳನ್ನು ಮಾಡುತ್ತಿದ್ದರು.  ನಿವೃತ್ತಿಯ ಬಳಿಕ ಅವರು ಸ್ವಲ್ಪ ಮಟ್ಟಿಗೆ ಮಾನಸಿಕ ಬೇಸರದಿಂದ ಇದ್ದಂತೆ ಕಂಡು ಬರುತ್ತಿದ್ದರು. ದಿನಾಂಕ; 30.01.2023 ರಂದು ಎಂದಿನಂತೆ ಬೆಳಿಗ್ಗೆ ಮನೆಯಿಂದ  ಆಡುಗಳನ್ನು ಮೇಯಿಸಲು ಹೋದವರು ಮನೆಗೆ ಬಂದು ಬಳಿಕ ಮಧ್ಯಾಹ್ನ 2.30 ಗಂಟೆಯ ಬಳಿಕ  ಪುನಹ ಗುಡ್ಡೆಗೆಂದು ಹೋದವರು ನೇತ್ರಾವತಿ ನದಿಕಡೆಗೆ ಹೋಗುವ ದಾರಿಯ ಅವೆಕ್ಕಿ ಎಂಬಲ್ಲಿ ಮರದ ಕೊಂಬೆಗೆ ಅಂಗವಸ್ತ್ರದಿಂದ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿ ಮೃತಪಟ್ಟದ್ದಾಗಿರುತ್ತದೆ.ಈ ಬಗ್ಗೆ ಧರ್ಮಸ್ಥಳ   UDR NO 10/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-01-2023 11:12 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080