Feedback / Suggestions

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಬಿಫಾತುಮ್ಮ ಪ್ರಾಯ 75 ಗಂಡ:ಅಬೂಬಕ್ಕರ್ವಾಸ:ಲೊರೆಟ್ಟೊಪದವು ಮನೆಬ-ಕಸಬಾ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 29-08-2022 ರಂದು ತನ್ನ ತಮ್ಮನ ಹೆಂಡತಿ ಹಾಗೂ ಮೊಮ್ಮಗ ರವರೊಂದಿಗೆ ಅವರ ಅಳಿಯ ರವರ ಬಾಬ್ತು KA 19 D 3605 ನೇ ಆಟೋ ರಿಕ್ಷಾ ದಲ್ಲಿ ಮನೆಯಿಂದ ಹೊರಟು ಸಜೀಪದಲ್ಲಿರುವ ಸಂಭಂದಿಕರ ಮನೆಗೆ   ಹೋಗಿ ವಾಪಾಸು ಮನೆಗೆ ಬರುತ್ತಾ ಸಮಯ ಸುಮಾರು 17:45 ಗಂಟೆಗೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿಗೆ ತಲುಪಿದಾಗ ರಸ್ತೆಗೆ ನಾಯಿಯೊಂದು ಅಡ್ಡ ಬಂದಿದ್ದು ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದವನು ಒಮ್ಮೆಲೆ ಬ್ರೇಕ್ ಹಾಕಿದಾಗ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವು ಬಲ ಭಾಗಕ್ಕೆ ಮಗುಚಿ ಬಿದ್ದು ಅಪಘಾತವಾಗಿದ್ದು, ಪರಿಣಾಮ ಅಪಘಾತದಲ್ಲಿ  ಫಿರ್ಯಾದಿದಾರರ ಎಡ ಕೋಲು ಕೈಗೆ, ಬಲ ಭುಜದ ತೋಳಿಗೆ ಗುದ್ದಿದ ಗಾಯವಾಗಿದ್ದು ಫಿರ್ಯಾದಿದಾರರ ತಮ್ಮನ ಹೆಂಡತಿ  ರವರಿಗೆ ಬಲ ಭುಜದ ತೋಳಿಗೆ ಗುದ್ದಿದ ಗಾಯವಾಗಿದ್ದು ಅಯಾನ್ ರವರಿಗೆ ಬಲ ತೊಡೆಗೆ ತರಚಿದ ಗಾಯವಾಗಿದ್ದು ರಿಕ್ಷಾ ಚಾಲಕ ಮಹಮ್ಮದ್ ಹನೀಫ್ ರವರಿಗೆ ತಲೆಯ ಬಲ ಭಾಗಕ್ಕೆ ಗುದ್ದಿದ ಗಾಯವಾಗಿದ್ದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಫಿರ್ಯಾದಿದಾರರು ಮತ್ತು ತಮ್ಮನ ಹೆಂಡತಿ ಬಿಫಾತುಮ್ಮ ರವರು ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು ಅಯಾನ್ ಮತ್ತು ಚಾಲಕ ಮಹಮ್ಮದ್ ಹನೀಫ್ ರವರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 97/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುತ್ತು ಸಾಹೇಬ್  ಪ್ರಾಯ: 60 ವರ್ಷ, ತಂದೆ:ದಿ|| ಬಾಬು ಸಾಹೇಬ್ ವಾಸ: ನೆಲ್ಲಿಕಟ್ಟೆ  ಮನೆ, ಐವತ್ತೋಕ್ಲು  ಗ್ರಾಮ ಎಂಬವರ ದೂರಿನಂತೆ, ಸುಳ್ಯ  ತಾಲೂಕು   ಐವತ್ತೋಕ್ಲು ಗ್ರಾಮದ ಪಂಜ ಪೇಟೆಯಲ್ಲಿ ಶೂ ಬಜಾರ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು. ಪಿರ್ಯಾದುದಾರರು ದಿನಾಂಕ:30-08-2022 ರಂದು ಎಂದಿನಂತೆ  ಅಂಗಡಿ ವ್ಯಾಪಾರಕ್ಕಾಗಿ ಅವರ ಬಾಬ್ತು ಸುಜುಕಿ ಆಕ್ಸಸ್-125  ಕಂಪನಿಯ ಮೋಟಾರು ಸೈಕಲ್ ನಂಬ್ರ ಕೆಎ 21 ವೈ 3354 ನೇದರಲ್ಲಿ ಬಂದಿದ್ದು ಮೋಟಾರ್ ಸೈಕಲ್ ನ್ನು ಅವರ ಅಂಗಡಿ ಬಳಿ ನಿಲ್ಲಿಸಿ ಅಂಗಡಿ ಒಳಗೆ ವ್ಯಾಪಾರಕ್ಕಾಗಿ ಹೋಗಿರುತ್ತಾರೆ. ಪಿರ್ಯಾದುದಾರರು ಸಂಜೆ 06:00 ಗಂಟೆಗೆ ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೊರಡಲು ಸ್ಕೂಟಿ ನಿಲ್ಲಿಸಿದಲ್ಲಿಗೆ ಬಂದು ನೋಡಿದಾಗ ಸದ್ರಿ ಮೋಟಾರು ಸ್ಕೂಟಿ ನಂಬ್ರ ಕೆಎ 21 ವೈ 3354 ನೇದು ಕಾಣೆಯಾಗಿರುತ್ತದೆ. ಸುಜುಕಿ  ಸ್ಕೂಟಿಯನ್ನು ಪಂಜದಲ್ಲಿ ಎಲ್ಲಾ ಕಡೆ ಹುಡುಕಾಡಿದರು  ಈ ತನಕ ಮೋಟಾರ್ ಸ್ಕೂಟಿ ಪತ್ತೆ ಆಗಿರುವುದಿಲ್ಲ,  ಸದ್ರಿ ಸ್ಕೂಟಿಯನ್ನು ಸಮಯ ಸುಮಾರು ಮದ್ಯಾಹ್ನ 01:00 ಗಂಟೆಯಿಂದ ಸಂಜೆ ಸುಮಾರು 06:00 ಗಂಟೆಯ ಮದ್ಯೆ ಯಾರೋ ಕಳ್ಳರು  ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ : 85/2022 ಕಲಂ-379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 31-08-2022 12:16 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080