ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 01

 

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಾಕ್ಸನ್‌ ಚೆರಿಯನ್ ಪ್ರಾಯ:38 ತಂದೆ: ಎಮ್‌ ಎಮ್‌ ಚೆರಿಯನ್ ವಾಸ:ಮಣಿಮಲ ಮನೆ ಕುಟ್ರುಪಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:30.10.2022 ರಂದು ಖಾಸಗಿ ಕೆಲಸದ ನಿಮಿತ್ತ ಬಿಳಿನೆಲೆ ಗ್ರಾಮದ ಕೈಕಂಬ ಎಂಬಲ್ಲಿಗೆ ಬೆಳಗ್ಗೆ ಹೋಗಿ ವಾಪಾಸ್ಸು ಮನೆ ಕಡೆಗೆ ಬರುವಾಗ  ತನ್ನ  ಮೋಟಾರ್‌ ಸೈಕಲ್‌‌ನಲ್ಲಿ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿರುವಾಗ ಕಡಬ ತಾಲೂಕು ಬಿಳಿನೆಲೆ ಗ್ರಾಮದ CPCRI ಬಳಿ ಕಿದು ಎಂಬಲ್ಲಿಗೆ ಸಮಯ ಬೆಳಗ್ಗೆ 08.30 ಗಂಟೆಗೆ ತಲುಪಿದಾಗ ಅದೇ ಸಮಯಕ್ಕೆ ಪಿರ್ಯಾದುದಾರರ ಎದುರು ಹೋಗುತಿದ್ದ KA-12 N-8977 ನೇ ಜೀಪು ವಾಹನಕ್ಕೆ  ಎದುರಿನಿಂದ ಬರುತಿದ್ದ KA-06 Z-1149 ನೇ ಕಾರು ವಾಹನದ ಚಾಲಕನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಜೀಪು ವಾಹನಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಜೀಪು ವಾಹನದಲ್ಲಿದ್ದ ಲಿನಿ ಜೋಸೇಫ್‌, ಸನಲ್‌ ,ಜೋಸೇಫ್‌ ಕುರಿಯನ್‌ ಎಂಬವರಿಗೆ  ಗಾಯಗಳಾಗಿದ್ದು ಲಿನಿಜೋಸೇಫ್‌ ರವರಿಗೆ ಮುಖದ ಬಲಬಾಗಕ್ಕೆ ಹಾಗೂ ಹಣೆಗೆ ಹಾಗೂ ಸನಲ್‌ ಎಂಬವರಿಗೆ ಬಲ ಕೈಗೆ ಹಾಗೂ ತಲೆ ಹಿಂಬಾಗಕ್ಕೆ ಹಾಗೂ ಜೋಸೇಫ್‌ ಕುರಿಯನ್‌ ಎಂಬವರಿಗೆ ತಲೆಗೆ, ಕೈಕಾಲುಗಳಿಗೆ ಹಾಗೂ ಎದೆ ಹಾಗೂ ಸೊಂಟಕ್ಕೆ ಗುದ್ದಿದ ಗಾಯವಾಗಿರುವುದಾಗಿರುತ್ತದೆ. ಗಾಯಾಳುಗಳನ್ನು ಸುಳ್ಯ ಕೆ.ವಿ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 94/2022 ಕಲಂ: ಕಲಂ:279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 01

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯೋಗೀಶ್ ಕೆ. , ಪ್ರಾಯ: 39 ವರ್ಷ, ತಂದೆ: ದಿ/ ಶೀನ ಗೌಡ,ವಾಸ: ಕಂರ್ಬಿತ್ತಿಲು ಮನೆ, ಕಲ್ಮಂಜ ಗ್ರಾಮ,ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 29.10.2022 ರಂದು ರಾತ್ರಿ ಪಿರ್ಯಾದಿದಾರರ ಅಣ್ಣ ಉದಯ ರವರು ಊಟ ಮಾಡಿ ಮನೆಯಲ್ಲಿದ್ದು, ಪಿರ್ಯಾದಿದಾರರು ರಾತ್ರಿ ಸುಮಾರು 9.30 ಗಂಟೆಗೆ ರಬ್ಬರ್ ಟ್ಯಾಪಿಂಗ್ ಬಗ್ಗೆ ತೆರಳಿದ್ದು, ಪಿರ್ಯಾದಿದಾರರ  ಅಣ್ಣ ಉದಯರವರು ಮನೆಯಲ್ಲಿಯೇ ಇದ್ದರು. ಪಿರ್ಯಾದಿದಾರರು  ರಬ್ಬರ್ ಟ್ಯಾಪಿಂಗ್ ಮುಗಿಸಿ ರಾತ್ರಿ 2 ಗಂಟೆಗೆ ಬಂದು ಮನೆಯಲ್ಲಿ ಮಲಗಿದ್ದವನು ಬೆಳಿಗ್ಗೆ ಎದ್ದು 7 ಗಂಟೆಗೆ ರಬ್ಬರ್ ಮರದ ಹಾಲು ತೆಗೆಯಲು ಹೋಗಿದ್ದು, ಆ ಸಮಯ ಪಿರ್ಯಾದಿದಾರರ ಅಣ್ಣ ಮನೆಯಲ್ಲಿ ಇಲ್ಲದೇ ಇದ್ದು, ಪಿರ್ಯಾದಿದಾರರು ಅಣ್ಣ ಉದಯರವರು ಅವರ ಬಾಬ್ತು ತೋಟಕ್ಕೆ ಹೋಗುತ್ತಿದ್ದುದ್ದರಿಂದ ತೋಟಕ್ಕೆ ಹೋಗಿರಬಹುದೆಂದು ಭಾವಿಸಿದ್ದರು. ಪಿರ್ಯಾದಿದಾರರು ತೋಟದಲ್ಲಿ ರಬ್ಬರ್  ಹಾಲು ತೆಗೆಯುತ್ತಿದ್ದ ಸಮಯ ಪಿರ್ಯಾದಿದಾರರ ಹೆಂಡತಿ ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಉದಯರವರು ಮನೆಗೆ ಬಾರದೇ ಇರುವ ಬಗ್ಗೆ ವಿಚಾರ ತಿಳಿಸಿದ್ದು, ಪಿರ್ಯಾದಿದಾರರು ಕೆಲಸ ಮುಗಿಸಿ ಸುಮಾರು 12.00 ಗಂಟೆಗೆ ಮನೆಗೆ ಬಂದು ಬಳಿಕ ನೆರೆಕೆರೆಯಲ್ಲಿರುವ ಸಂಬಂದಿಕರ ಮನೆಗೆ ದೂರವಾಣಿ ಕರೆ ಮಾಡಿ ಉದಯರವರ ಬಗ್ಗೆ ವಿಚಾರಿಸಲಾಗಿ ಪತ್ತೆಯಾಗದೇ ಇದ್ದು, ಬಳಿಕ ಪಿರ್ಯಾದಿದಾರರು ಹಾಗೂ ಅವರ ಸಂಬಂದಿಕರು ತೋಟದಲ್ಲಿ ಹುಡುಕುತ್ತಿರುವ ಸಮಯ ಸುಮಾರು ಮದ್ಯಾಹ್ನ  2.30 ಗಂಟೆಗೆ  ಪಿರ್ಯಾದಿದಾರರ ಸಂಬಂದಿ ಅಶೋಕ್ ಎಂಬವರು ಪಿರ್ಯಾದಿದಾರರನ್ನು ಕರೆದು ಶಿವಪ್ಪ ಎಂಬವರ ಬಾಬ್ತು ಪಾಳು ಬಿದ್ದ ಗದ್ದೆಯಲ್ಲಿ  ಕವುಚಿ ಬಿದ್ದ ಸ್ಥಿತಿಯಲ್ಲಿದ್ದ ಪಿರ್ಯಾದಿದಾರರ ಅಣ್ಣ ಉದಯರವರನ್ನು ತೋರಿಸಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಇತರರು ಸೇರಿ ಉದಯರವರನ್ನು  ಮೇಲಕ್ಕೆ ಎತ್ತಿ ತೋಟದಲ್ಲಿ ಮಲಗಿಸಿ ಆರೈಕೆ ಮಾಡಿ ನೋಡಲಾಗಿ ಮೃತ ಉದಯರವರ ಎರಡೂ ಕೋಲು ಕಾಲಿನ ಬಳಿ ವಿದ್ಯುತ್ ಶಾಕ್ ಹೊಡೆದು ಗಾಯವಾಗಿ ಮೃತಪಟ್ಟಿರುವುದು ಕಂಡು ಬರುತ್ತಿದ್ದು,, ಪಿರ್ಯಾದಿದಾರರ ಸಂಬಂದಿ. ಹರೀಶ್ ಮತ್ತು ಇತರರು ಸೇರಿ ಕೃಷಿ ರಕ್ಷಣೆಗೆಂದು ಕಾಡು ಪ್ರಾಣಿಗಳು ಬಾರದಂತೆ ತಡೆಯಲು ವಯರ್ (ತಂತಿ) ಗೆ ಹರೀಶ್ ರವರ ಬಾಬ್ತು ಅಡಿಕೆ ತೋಟದ ಪಂಪ್ ಶೆಡ್ ನಲ್ಲಿರುವ ಪಂಪ್ ನಿಂದ ವಿದ್ಯುತ್ ನ್ನು ಯಾವುದೇ ಅನುಮತಿ ಪಡೆಯದೇ ವಯರ್ ಗೆ ಸಂಪರ್ಕ ಕೊಟ್ಟು ಮಾನವ ಜೀವಕ್ಕೆ ಅಪಾಯವುಂಟಾಗುವ ವಿಚಾರ ತಿಳಿದಿದ್ದರೂ ಕೂಡಾ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ತೋಟಕ್ಕೆ ಹೋಗುವ ದಾರಿಯ ಬದಿಯಲ್ಲಿ ವಯರ್ ಗೆ ವಿದ್ಯುತ್ ಸಂಪರ್ಕ ನೀಡಿ ಪಿರ್ಯಾದಿದಾರರ  ಅಣ್ಣ ಅವರ  ಬಾಬ್ತು  ತೋಟಕ್ಕೆ ನಡೆದುಕೊಂಡು ಹೋಗುವ  ಸಮಯ ವಿದ್ಯುತ್ ಶಾಕ್ ಹೊಡೆದು  ಮೃತಪಟ್ಟಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಅ.ಕ್ರ 76/2022 ಕಲಂ: 304 (A)ಐ ಪಿ ಸಿ  139 ಎಲೆಕ್ಟ್ರಸಿಟಿ ಆಕ್ಟ್ ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-10-2022 03:02 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080