ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಾಹಿದಾ ಪ್ರಾಯ (35) ತಂದೆ: ಗಂಡ: ಶೇಖ್‌ ಅಕ್ಮನ್ ,ವಾಸ:ಜನತಾ ಕಾಲೊನಿ ಬೆದ್ರಬೆಟ್ಟು, ಇಂದಬೆಟ್ಟು ಗ್ರಾಮ, ಬಂಗಾಡಿ ಅಂಚೆ,ಬೆಳ್ತಂಗಡಿ ತಾಲೂಕು.ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:29-12-2022 ರಂದು ಲಾಯಿಲ ದಿಂದ ಮನೆಗೆ ಹೋಗುವರೇ ಕೆಎ 21 ಬಿ 5322  ನೇ ಆಟೋರಿಕ್ಷಾದಲ್ಲಿ  ಪ್ರಯಾಣಿಕರಾಗಿ ತನ್ನ ತಾಯಿ ಸಫಿಯಾ,ಹಾಗೂ ಮಕ್ಕಳಾದ ಫರಹಾನ್‌, ರಿಯಾನ್‌ ಎಂಬುವರೊಂದಿಗೆ ಹೊಗುತ್ತಿರುವ ಸಮಯ ಸುಮಾರು ಸಂಜೆ:7.25 ಗಂಟೆಗೆ ಬೆಳ್ತಂಗಡಿ ತಾಲೂಕು,ಇಂದಬೆಟ್ಟು ಗ್ರಾಮದ ವೇಚೆಲಾರು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ರಸ್ತೆಯ ಎಡಬದಿಯಲ್ಲಿರುವ ಚರಂಡಿಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ ಮಣಿಗಂಟಿಗೆ ಗುದ್ದಿದಗಾಯ,ಆಟೋರಿಕ್ಷಾ ಚಾಲಕ ದಿನೇಶ್‌ ಗೌಡರವರಿಗೆ ಬಲಕೈ ಭುಜಕ್ಕೆ ಗುದ್ದಿದ ಗಾಯವಾಗಿ  ಗಾಯಾಳುಗಳ ಪೈಕಿ ಪಿರ್ಯಾದುದಾರರು ಉಜಿರೆ ಎಸ್‌ ಡಿ ಎಮ್‌ ಆಸ್ಪತ್ರೆಯಲ್ಲಿ ಹಾಗೂ ಆಟೋರಿಕ್ಷಾ ಚಾಲಕ ದಿನೇಶ ಗೌಡರವರು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 173/2022 ಕಲಂ; 279,  337, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉದಯ್‌ ಜಿ (26), ತಂದೆ: ಗೋವಿಂದ ರಾಜು, ವಾಸ: 69/ಎಫ್‌, 2ನೇ ಮುಖ್ಯ ರಸ್ತೆ, 2ನೇ ಅಡ್ಡರಸ್ತೆ, 3ನೇ ಬ್ಲಾಕ್‌, 3ನೇ ಸ್ಟೇಜ್‌, ಬಸವೇಶ್ವರ ನಗರ, ಬೆಂಗಳೂರು. ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 30-12-2022 ರಂದು ತನ್ನ ಬಾಬ್ತು ಕೆಎ 04 ಎಮ್‌ವೈ 9679 ನೇ ಕಾರಿನಲ್ಲಿ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 10.00 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ಸ್ವಸ್ತೀಕ್‌ ಎಂಟರ್‌ಪ್ರೈಸಸ್‌ ಅಂಗಡಿಯ ಎದುರುಗಡೆ ತಿರುವಿನಲ್ಲಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ಧಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಕೆಎ 19 ಎಚ್‌ಕೆ 2688 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದನು ಪರಿಣಾಮ ಮೋಟಾರು ಸೈಕಲ್‌ ಸವಾರ ಮೋಟಾರು ಸೈಕಲ್‌ ಸಮೇತಾ ರಸ್ತೆಗೆ ಬಿದ್ದು ಮೋಟಾರು ಸೈಕಲ್‌ ಸವಾರ ನಿತೇಶ್‌ರವರಿಗೆ ಬಲಕಾಲು ಮತ್ತು ಬಲ ಕೈಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತೆಗೆ  ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 174/2022 ಕಲಂ; 279,  337, ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಐವನ್ ತೊರಸ್ ಪ್ರಾಯ: 49 ವರ್ಷ  ಬಿನ್ ಅಲೆಕ್ಸ್ ತೋರಸ್ ವಾಸ: ಬೋಳಂಗಡಿ ಮನೆ,  ಪಾಣೆಮಂಗಳೂರು ಗ್ರಾಮ,  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಳಂಗಡಿ ಎಂಬಲ್ಲಿ ವಾಸವಾಗಿದ್ದು. ಮನೆಯ ಸುತ್ತಮುತ್ತಲಿನಲ್ಲಿ ಅಡಿಕೆ ಕೃಷಿ ಇದ್ದು, ಕೊಯ್ದ ಅಡಿಕೆ ಫಸಲನ್ನು ತೋಟದ ಬದಿಯಲ್ಲಿರುವ ಅಂಗಳದಲ್ಲಿ ಒಣಗಲು ಹಾಕಿರುತ್ತಾರೆ. ದಿನಾಂಕ: 24-12-2022 ರಂದು ರಾತ್ರಿ 19.00 ಗಂಟೆಗೆ ಚರ್ಚ್ಗೆ ಕುಟುಂಬ ಸಮೇತ ಪೂಜೆಗೆ ಹೋಗಿದ್ದು,  ಸದ್ರಿ ದಿನ ಸಂಜೆ 18.30 ಗಂಟೆಗೆ ಅಂಗಳದಲ್ಲಿ ಅಡಿಕೆ ಇರುವುದನ್ನು ನೋಡಿರುತ್ತಾರೆ.  ದಿನಾಂಕ: 29-12-2022 ರಂದು ಸಂಜೆ 18.00 ಗಂಟೆಗೆ ಒಣಗಲು ಹಾಕಿರುವ ಅಡಿಕೆಯನ್ನು ನೋಡಲು ಹೋದಾಗ ಒಂದು ಬದಿಯಿಂದ ಒಣಗಲು ಹಾಕಿದ ಅಡಿಕೆಗಳನ್ನು ಸವರಿರುವುದು ಕಂಡು ಬಂದಿರುತ್ತದೆ. ಸುಮಾರು 100 ರಿಂದ 120 ಕೆ.ಜಿ. ಅಡಿಕೆ ಕಾಣೆಯಾಗಿರುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ: 24-12-2022 ರಂದು ಸಂಜೆ 18.30 ಗಂಟೆಯಿಂದ ದಿನಾಂಕ: 29-12-2022 ರಂದು ಸಂಜೆ 18.00 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರ ತೋಟದ ಬದಿಯಲ್ಲಿರುವ ಅಂಗಳದಲ್ಲಿ ಒಣ ಹಾಕಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರಿಂದ ಸುಮಾರು ಅಂದಾಜು ಮೌಲ್ಯ 8000/- ರೂ ಆಗಿದ್ದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ: 124/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಭಾರತಿ (60) ಗಂಡ:ದಿ||ಗೋಪಾಲ ಶೆಟ್ಟಿ ವಾಸ:ಕಟ್ಟತ್ತಿಲ ಮನೆ, ಸಾಲೆತ್ತೂರು ಅಂಚೆ ಕೊಳ್ನಾಡು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಮಗ ವಸಂತ ರೈ ಪ್ರಾಯ(52) ವರ್ಷ ಎಂಬಾತನು ವಿಪರೀತ ಮದ್ಯ ಸೇವನೆ ಚಟವನ್ನು ಹೊಂದಿದ್ದು. ಸೊಂಟ ನೋವು ಸಮಸ್ಯೆ ಇದ್ದ ಕಾರಣ ಔಷದೋಪಚಾರ ಮಾಡಿದರು ಕಡಿಮೆಯಾಗದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದು, ದಿನಾಂಕ:29-12-2022 ರಾತ್ರಿ 22.00 ಗಂಟೆಯಿಂದ ದಿನಾಂಕ:30-12-2022 ರ ಬೆಳಿಗ್ಗೆ 09.00 ಗಂಟೆಯ ನಡುವಿನ ಅವಧಿಯಲ್ಲಿ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕಟ್ಟತ್ತಿಲ ಎಂಬಲ್ಲಿರುವ ಮಹಮ್ಮದ್‌ರವರ ರಬ್ಬರ್‌ ತೋಟದಲ್ಲಿ ರಬ್ಬರ್‌ ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 51/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಪ್ರಭಾ ಪ್ರಾಯ: 54 ವರ್ಷ ಗಂಡ: ವಿಜಯನ್‌ @ ಬಿಜು ಬೊಳಿಯಾರು ಮನೆ,ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ವಿಜಯನ್‌ @ ಬಿಜು ಎಂಬವರು ದಿನಾಂಕ: 23-12-2022 ರಂದು ಸಮಯ ಸುಮಾರು ಮದ್ಯಾಹ್ನ 1:30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮನೆಯಿಂದ ಹೋದವರು 3:00 ಗಂಟೆಯಾದರೂ ಮನೆಗೆ ವಾಪಸ್ಸು ಬಾರದೇ ಇದ್ದು ಸುತ್ತ ಮುತ್ತ ಹುಡುಕಾಡಿದಲ್ಲಿ ಎಲ್ಲಿಯೂ ಕಾಣದೇ ಇದ್ದು ಪಿರ್ಯಾದಿದಾರರು  ಕೂಡಲೇ ಮನೆಯ ಬಳಿ  ಇರುವ  ತಮ್ಮನವರಲ್ಲಿ ವಿಚಾರವನ್ನು ತಿಳಿಸಿ ನಂತರ ಎಲ್ಲಾ ಕಡೆ  ಹುಡುಕಾಡಿದರೂ ಪತ್ತೆಯಾಗದೇ ಇದ್ದು ಈ  ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಹೋಗಿ ಪಿರ್ಯಾದಿದಾರರ ಗಂಡ ಕಾಣೆಯಾದ ಬಗ್ಗೆ ದೂರನ್ನು ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.   ದಿನಾಂಕ: 30-12-2022 ರಂದು ಸಮಯ ಸುಮಾರು 08:30 ಗಂಟೆಗೆ ಸಂತೋಷ್‌  ಕುಮಾರ್‌ ಎಂಬವರು ಪಿರ್ಯಾದಿದಾರರ  ಮನೆಗೆ ಬಂದು ಧರ್ಮಸ್ಥಳದವರ ಬಾಬ್ತು ಬೋಳಿಯಾರು ಎಂಬಲ್ಲಿರುವ ಕಾಡು ಜಾಗದಲ್ಲಿ ಯಾರೋ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ತಿಳಿಸಿದ್ದು ಅನುಮಾನಗೊಂಡು ಅಲ್ಲಿಗೆ ಹೋಗಿ ನೋಡಲಾಗಿ ಸದ್ರಿ ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು ಮೃತದೇಹವು ಪಿರ್ಯಾದಿದಾರರ ಗಂಡನದೇ ಆಗಿರುತ್ತದೆ. ಸದ್ರಿ ಪಿರ್ಯಾದಿದಾರರ ಗಂಡನು  ಒಂದು ಕಾಡು ಮರದ ರೆಂಬೆಗೆ ಪಂಚೆಯಿಂದ ಒಂದು ತುದಿಯನ್ನು ಕುತ್ತಿಗೆಗೆ ಮತ್ತೊಂದು ತುದಿಯನ್ನು ಮರದ ರೆಂಬೆಗೆ ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 74/2022 ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 31-12-2022 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080